TamilNadu Leaders Murder : ತಮಿಳುನಾಡಿನಲ್ಲಿ 24 ಗಂಟೆಯಲ್ಲಿ ಮೂವರು ನಾಯಕರ ಹತ್ಯೆ!

ಮೂವರು ವಿವಿಧ ರಾಜಕೀಯ ಪಕ್ಷಗಳ ನಾಯಕರ ಹತ್ಯೆ

ಚೆನ್ನೈ – ತಮಿಳುನಾಡಿನಲ್ಲಿ 24 ಗಂಟೆಗಿಂತ ಕಡಿಮೆ ಅವಧಿಯಲ್ಲಿ ಮೂವರು ವಿವಿಧ ರಾಜಕೀಯ ಪಕ್ಷಗಳ ನಾಯಕರನ್ನು ಹತ್ಯೆ ಮಾಡಲಾಗಿದೆ. ಈ ಹತ್ಯೆಯನ್ನು ಖಂಡಿಸಿ ಪ್ರತಿಪಕ್ಷಗಳು ರಾಜ್ಯ ಸರಕಾರದ ಮೇಲೆ ಮುಗಿಬಿದ್ದಿವೆ. ತಮಿಳುನಾಡಿನಲ್ಲಿ ಅರಾಜಕತೆಯ ವಾತಾವರಣವಿದ್ದು, ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಅಸಮರ್ಥರಾಗಿದ್ದಾರೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿವೆ. ಆಡಳಿತಾರೂಢ ಡಿಎಂಕೆಯ ಸಮರ್ಥಕರು ಅರಾಜಕತೆಯನ್ನು ಹರಡುತ್ತಿದ್ದು, ಸರಕಾರದ ಒತ್ತಡದಿಂದಾಗಿ ಪೊಲೀಸರು ಅವರ ಮೇಲೆ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂದು ಅಣ್ಣಾಡಿಎಂಕೆ ಪಕ್ಷ ಆರೋಪಿಸಿದೆ.

ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್

1. ಅಣ್ಣಾ ಡಿಎಂಕೆ ಪಕ್ಷದ ವಕ್ತಾರೆ ಕೋವೈ ಸತ್ಯಂ ಅವರು ಪ್ರಸಾರ ಮಾಡಿದ ಒಂದು ಪ್ರಕಟಣೆಯ ಪ್ರಕಾರ ತಮಿಳುನಾಡಿನಲ್ಲಿ 24 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಅಣ್ಣಾಡಿಎಂಕೆ, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಒಬ್ಬೊಬ್ಬ ನಾಯಕರನ್ನು ಹತ್ಯೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

2. ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ ಮಾತನಾಡಿ, ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ. ಜುಲೈ ಆರಂಭದಲ್ಲಿ, ಬಹುಜನ ಸಮಾಜ ಪಕ್ಷದ ದಲಿತ ನಾಯಕ ಆರ್ಮ್‌ಸ್ಟ್ರಾಂಗ್ ಅವರನ್ನು ಅಮಾನುಷವಾಗಿ ಕೊಲೆ ಮಾಡಲಾಗಿತ್ತು. ಈಗ ಸತತ ಮೂರು ಕೊಲೆಗಳು ನಡೆದಿವೆ. ಇದರಿಂದ ಮುಖ್ಯಮಂತ್ರಿ ಸ್ಟಾಲಿನ್ ಅವರು ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆವನ್ನು ನಿಯಂತ್ರಿಸುವಲ್ಲಿ ವಿಫಲರಾಗಿರುವುದು ಕಂಡು ಬರುತ್ತಿದೆ ಎಂದು ಟೀಕಿಸಿದ್ದಾರೆ.

ಸಂಪಾದಕೀಯ ನಿಲುವು

ತೃಣಮೂಲ ಕಾಂಗ್ರೆಸ್ಸಿನ ಬಂಗಾಳದಲ್ಲಿ ಯಾವ ರೀತಿ ವಿರೋಧಿಗಳನ್ನು ಹೆಕ್ಕಿ ಹೆಕ್ಕಿ ಹತ್ಯೆ ಮಾಡಲಾಗುತ್ತಿದೆಯೋ, ಅದೇ ಪರಿಸ್ಥಿತಿ ಈಗ ಡಿಎಂಕೆ ಸರ್ಕಾರದ ತಮಿಳುನಾಡಿನಲ್ಲಿ ನಿರ್ಮಾಣವಾಗಿದೆ. ಇದು ಕಾನೂನು-ಸುವ್ಯವಸ್ಥೆಗೆ ಆತಂಕವನ್ನುಂಟು ಮಾಡಿದೆ !