600 Pakistan Soldiers Entered India: ಭಾರತದಲ್ಲಿ ನುಗ್ಗಿದ ಕಮಾಂಡೊ ತರಬೇತಿ ಪಡೆದ 600 ಪಾಕಿಸ್ತಾನಿ ಸೈನಿಕರು !

ಭಾರತ-ಪಾಕಿಸ್ತಾನ ಪುನಃ ಯುದ್ಧ ಆಗುವ ಸಾಧ್ಯತೆ

ಪಾಕಿಸ್ತಾನಿ ಸೈನಿಕರು

ನವ ದೆಹಲಿ – ಪಾಕಿಸ್ತಾನದ ಸುಮಾರು 600 ತರಬೇತಿ ಪಡೆದ ಕಮಾಂಡೋಗಳು ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ ಪ್ರದೇಶಕ್ಕೆ ನುಸುಳಿದ್ದಾರೆ. ಇದರಿಂದ ಭಾರತ-ಪಾಕಿಸ್ತಾನದ ನಡುವೆ ಪುನಃ ಕಾರ್ಗಿಲ್ ಮಾದರಿಯ ಯುದ್ಧವನ್ನು ನಡೆಯುವ ಸಾಧ್ಯತೆಯಿದೆಯೆಂದು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಕಾರ್ಯಕರ್ತ ಡಾ. ಅಮ್ಜದ್ ಅಯೂಬ್ ಮಿರ್ಜಾ ದಾವೆ ಮಾಡಿದ್ದಾರೆ.

ಅಮ್ಜದ್ ಮಿರ್ಜಾ ಇವರು,

1. ಪಾಕಿಸ್ತಾನಿ ಸೇನೆಯ ಎಸ್.ಎಸ್.ಜಿ. ಯ ಜನರಲ್ ಕಮಾಂಡಿಂಗ್ ಆಫೀಸರ್ ಮೇಜರ್ ಜನರಲ್ ಆದಿಲ್ ರೆಹಮಾನಿ, ಭಾರತದ ಜಮ್ಮು ಪ್ರದೇಶದಲ್ಲಿ ದಾಳಿ ಮಾಡುವ ಸಿದ್ಧತೆಯಲ್ಲಿದ್ದಾರೆ. 600 ಸೈನಿಕರೊಂದಿಗೆ ಕುಪ್ವಾರ ಮತ್ತು ಇತರ ಪ್ರದೇಶಗಳಲ್ಲಿ ಸ್ಥಳೀಯ ಜಿಹಾದಿಗಳು ಸಕ್ರಿಯರಾಗಿದ್ದಾರೆ. ಅವರಿಂದ ಎಸ್.ಎಸ್.ಜಿ.ಯ ಸೈನಿಕರಿಗೆ ಭಾರತೀಯ ಭೂಪ್ರದೇಶದೊಳಗೆ ನುಸುಳಲು ಸಹಾಯ ಮಾಡಲಾಗುತ್ತಿದೆ. ಪಾಕಿಸ್ತಾನದ ಲೆಫ್ಟಿನೆಂಟ್ ಕರ್ನಲ್ ಶಾಹಿದ್ ಸಲೀಂ ಜಿಂಜುವಾ ಪಾಕಿಸ್ತಾನಿ ಸೈನಿಕರನ್ನು ಮುನ್ನಡೆಸುತ್ತಿದ್ದಾರೆ. ಕರ್ನಲ್ ಶಾಹಿದ್ ಭಾರತೀಯ ಸೇನೆಯ ’15 ಕಾರ್ಪ್ಸ್’ನ ಗಮನವನ್ನು ವಿಚಲಿತಗೊಳಿಸುವ ಪ್ರಯತ್ನಿಸುತ್ತಿದ್ದಾರೆ.

2. ಎಸ್.ಎಸ್.ಜಿ.ಯ 2 ತುಕಡಿಗಳು (1 ಸಾವಿರ 200 ಸೈನಿಕರು) ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮುಜಫರಾಬಾದ್‌ನಲ್ಲಿ ಸಿದ್ಧರಾಗಿದ್ದಾರೆ. ಈ 2 ತುಕುಡಿಗಳು ಜಮ್ಮು-ಕಾಶ್ಮೀರದ ಮೂಲಕ ಭಾರತದೊಳಗೆ ನುಸುಳಲು ಸಜ್ಜುಗೊಳಿಸಲಾಗಿದೆ.

3. ಈ ಮೊದಲು 40 ರಿಂದ 60 ಭಯೋತ್ಪಾದಕರು ದಟ್ಟಾರಣ್ಯ ಮತ್ತು ಗುಡ್ಡಗಾಡು ಪ್ರದೇಶದಿಂದ ಜಮ್ಮುನಲ್ಲಿ ನುಗ್ಗಿದ್ದಾರೆ, ಎಂದು ನಮಗೆ ಅನಿಸುತ್ತಿತ್ತು; ಆದರೆ ಲೆಫ್ಟಿನೆಂಟ್ ಜನರಲ್ ಶಾಹಿದ್ ಜಿಂಜುವಾ ನೇತೃತ್ವದಲ್ಲಿ 500 ರಿಂದ 600 ಸೈನಿಕರ ಒಂದು ತುಕಡಿ ಈ ಮೊದಲೇ ಜಮ್ಮು ಮತ್ತು ಕಾಶ್ಮೀರದ ನಡುವೆ ನುಸುಳಿದೆ ಎಂದು ತಿಳಿದುಬಂದಿದೆ. ಈ ಸೈನಿಕರಿಂದ ಭಾರತೀಯ ಸೇನೆಯ ಮೇಲೆ ದಾಳಿ ನಡೆಸಲಾಗುತ್ತಿದೆ.

ಸಂಪಾದಕೀಯ ನಿಲುವು

ಭಾರತ ಎಲ್ಲಿಯವರೆಗೆ ಇಸ್ರೈಲನಂತೆ ಆಕ್ರಮಣಕಾರಿ ನಿಲುವನ್ನು ತೆಗೆದುಕೊಂಡು ಪಾಕಿಸ್ತಾನದಲ್ಲಿ ನುಗ್ಗಿ ಕ್ರಮವನ್ನು ತೆಗೆದುಕೊಳ್ಳುವುದಿಲ್ಲವೋ, ಅಲ್ಲಿಯವರೆಗೆ ಕಾಶ್ಮೀರದಲ್ಲಿ ಇದೇ ರೀತಿ ಮುಂದುವರಿಯುತ್ತಿರುತ್ತದೆ !