ಇಂದಿನ ವರೆಗೆ ಅನೇಕ ಬಾರಿ ನಾವು ರಾಜಕೀಯ ಮಾಡಲು ಪ್ರಮಾಣವಚನ ಸ್ವೀಕರಿಸುವುದನ್ನು ನೋಡಿದ್ದೇವೆ; ಆದರೆ ಇತ್ತೀಚಿನ ೧-೨ ತಿಂಗಳಲ್ಲಿ ದೇಶದಲ್ಲಿ ಪ್ರಮಾಣ ವಚನದ ರಾಜಕಾರಣವಾಗುತ್ತಿರುವುದು ನೋಡಲು ಸಿಗುತ್ತಿದೆ. ೧೮ ನೇ ಲೋಕಸಭೆಗೆ ಹೊಸದಾಗಿ ಆಯ್ಕೆಯಾಗಿರುವ ಸಂಸದರಿಂದ ಹಿಡಿದು, ರಾಜ್ಯ ವಿಧಾನಸಭೆಗಳ ಶಾಸಕರ ವರೆಗೂ ಪ್ರಮಾಣ ವಚನದ ನಾಟಕ ಪ್ರಾರಂಭವಾಗಿದೆ. ಜಾರ್ಖಂಡ್ ರಾಜ್ಯದ ಆಡಳಿತಾರೂಢ ಪಕ್ಷ `ಜಾರ್ಖಂಡ್ ಮುಕ್ತಿ ಮೋರ್ಚಾ’ದ ಶಾಸಕ ಹಫೀಜುಲ್ ಹಸನ್ ಅವರು ಇತ್ತೀಚೆಗೆ ತೆಗೆದುಕೊಂಡ ಪ್ರಮಾಣವಚನ ವಿವಾದದ ಸುಳಿಯಲ್ಲಿ ಸಿಲುಕಿದೆ; ಏಕೆಂದರೆ ಅವರು ತಮ್ಮ ಪ್ರಮಾಣ ವಚನದ ಪ್ರಾರಂಭದಲ್ಲಿ ಕುರಾನಿನ ಮೊದಲ ಆಯತಗಳನ್ನು ಪಠಿಸಿದರು. ನಿಜವಾಗಿ ಹೇಳಬೇಕೆಂದರೆ ಪ್ರಮಾಣ ವಚನದ ರಾಜಕಾರಣವನ್ನು ಎಂ.ಐ.ಎ. ಪಕ್ಷದ ಅಧ್ಯಕ್ಷರಾಗಿರುವ ಅಸಾದುದ್ದೀನ್ ಓವೈಸಿಯವರು ಪ್ರಾರಂಭಿಸಿದರು. ಸಂಸತ್ತಿನಲ್ಲಿ ಪ್ರಮಾಣ ವಚನವನ್ನು ಸ್ವೀಕರಿಸುವಾಗ ‘ಜೈ ಪ್ಯಾಲೆಸ್ಟೆನ್’ ಎಂದು ಸಂವಿಧಾನವಿರೋಧಿ ಘೋಷಣೆ ಕೂಗಿದರು ಮತ್ತು ಅಲ್ಲಿಂದ ವಿವಾದ ಮೊಳಕೆಯೊಡೆಯಿತು. ಓವೈಸಿ ವಿರುದ್ಧ ರಾಷ್ಟ್ರಪತಿಗಳಿಗೆ ದೂರು ನೀಡಿದ್ದರೂ, ಇದುವರೆಗೂ ಅವರ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಂಡಿಲ್ಲ. ತದ್ವಿರುದ್ಧ ಈ ಘೋಷಣೆಯ ಬಗ್ಗೆ ಭಾಜಪ ಸಂಸದರು ಆಕ್ಷೇಪಿಸಿದಾಗ, ಓವೈಸಿಯವರು, “ನಾನು ಯಾವುದೇ ತಪ್ಪು ಮಾತನಾಡಿಲ್ಲ, ಹೀಗಿರುವಾಗ ನನ್ನ ವಾಕ್ಯ ಸಂವಿಧಾನವಿರೋಧಿ ಹೇಗಾಗುವುದು ? ನಾನು ಮಾತನಾಡಿರುವುದು ತಪ್ಪೆಂದು ಸಂವಿಧಾನದ ಯಾವ ನಿಬಂಧನೆಯಲ್ಲಿ ಬರೆಯ ಲಾಗಿದೆಯೆಂದು ತೋರಿಸಿ’ ಎಂದು ಹೇಳಿದರು. ಇದನ್ನೇ ಹುಂಬತನವೆಂದು ಹೇಳುತ್ತಾರೆ. ಅದೇ ಉದ್ಧಟತನವನ್ನು ಝಾರ್ಖಂಡದಲ್ಲಿ ಹಸನ್ ತೋರಿಸಿದರು. ಹಸನ ಓವೈಸಿಯವರಿ ಗಿಂತ ಎರಡು ಹೆಜ್ಜೆ ಮುಂದೆ ಹೋಗಿ ಪ್ರಮಾಣ ವಚನವನ್ನು ತೆಗೆದುಕೊಳ್ಳುವಾಗ ಉರ್ದು ಮಿಶ್ರಿತ ಪದಗಳನ್ನು ಸಾಕಷ್ಟು ಬಳಸಿದರು. ಈ ಪ್ರಮಾಣ ವಚನವನ್ನು ಕೇಳಿದಾಗ ‘ನಾನು ಹಿಂದೂಸ್ಥಾನದಲ್ಲಿ ಶಾಸಕರ ಪ್ರಮಾಣವಚನವನ್ನು ಕೇಳುತ್ತಿದ್ದೇವೆಯೋ ಅಥವಾ ಪಾಕಿಸ್ತಾನದಲ್ಲಿಯೋ ?’ ಎಂಬ ಪ್ರಶ್ನೆ ಯಾರಿಗಾದರೂ ಉದ್ಭವಿಸಬಹುದು. ಚುನಾಯಿತ ಜನಪ್ರತಿನಿಧಿಗಳು ಹೇಗೆ ಪ್ರಮಾಣ ವಚನ ಸ್ವೀಕರಿಸಬೇಕು?, ಎನ್ನುವುದು ಸಂವಿಧಾನ ನಿರ್ಧರಿಸಿದೆ. ಅದರ ರಚನೆಯನ್ನು ದೃಢೀಕರಿಸಲಾಗಿದೆ. ಹೀಗಿರುವಾಗ ಯಾವ ಜನಪ್ರತಿನಿಧಿ ಸಂವಿಧಾನ ನಿರ್ಧರಿಸಿರುವಂತೆ ಪ್ರಮಾಣವಚನವನ್ನು ತೆಗೆದುಕೊಳ್ಳುವುದಿಲ್ಲವೋ, ಅವರು ಸಂವಿಧಾನಕ್ಕೆ ಹೇಗೆ ನಿಷ್ಠರಾಗಿರುತ್ತಾರೆ ? ಪ್ರಮಾಣವಚನದಲ್ಲಿ ಈ ರೀತಿ ಉರ್ದು ಶಬ್ದವನ್ನು ಉದ್ದೇಶಪೂರ್ವಕವಾಗಿ ತುರುಕಿ ಹಸನ ಏನನ್ನು ಸಾಧಿಸಲು ಪ್ರಯತ್ನಿಸುತ್ತಿದ್ದಾರೆ ? ಮತ್ತು ಏತಕ್ಕಾಗಿ ? ಈ ಎಲ್ಲ ಕೃತ್ಯಗಳು ರಾಜ್ಯಪಾಲರ ಮುಂದೆ ನಡೆದಿತ್ತು. ಅವರೂ ಇದರ ಬಗ್ಗೆ ಯಾವುದೇ ಆಕ್ಷೇಪ ವ್ಯಕ್ತಪಡಿಸಿಲ್ಲ. ಇಂತಹುದರ ವಿರುದ್ಧ ಆಯಾ ಸಮಯದಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ. ಅಂದು ಸಂಸತ್ತಿನಲ್ಲಿ ಓವೈಸಿ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಿದ್ದರೆ, ಇಂದು ಹಸನ ಇಂತಹ ಪ್ರಮಾಣ ವಚನ ಸ್ವೀಕರಿಸುವ ಧೈರ್ಯ ಮಾಡುತ್ತಿರಲಿಲ್ಲ. ಹಸನ್ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆ ಬಹುತೇಕ ಇಲ್ಲ. ಆದುದರಿಂದ ಇನ್ನುಮುಂದೆ ಇಂತಹ ಪ್ರಮಾಣ ವಚನ ಸ್ವೀಕರಿಸುವ ಪರಿಪಾಠವಾಗುವುದು ಮತ್ತು ಹಾಗೆ ನಡೆದರೆ ಇದಕ್ಕಿಂತ ಇನ್ನೊಂದು ದೊಡ್ಡ ರೀತಿಯಲ್ಲಿ ಸಂವಿಧಾನವನ್ನು ಹೊಸಕಿ ಹಾಕಿದ ಪ್ರಸಂಗ ಇನ್ನೊಂದಿರಲಿಕ್ಕಿಲ್ಲ. `ಜನಪ್ರತಿನಿಧಿಗಳು ರಾಷ್ಟ್ರಪತಿಗಳು ಅಥವಾ ರಾಜ್ಯಪಾಲರ ಮುಂದೆಯೇ ಸಂವಿಧಾನ ವನ್ನು ಹೊಸಕಿ ಹಾಕುತ್ತಿದ್ದು ನಾಗರಿಕರೊಂದಿಗೆ ಅವರು ಹೇಗೆ ವರ್ತಿಸುತ್ತಿರಬಹುದು ?’ ಎನ್ನುವುದರ ವಿಚಾರವನ್ನೇ ಮಾಡದಿರುವುದು ಸೂಕ್ತವೆನಿಸುತ್ತದೆ.
ಶಾಸಕ ಹಸನರಿಗೆ ಸಂಬಂಧಿಸಿದವಾದ ಇಷ್ಟಕ್ಕೆ ನಿಲ್ಲುವುದಿಲ್ಲ. ಬದಲಾಗಿ ಪ್ರಮಾಣ ವಚನ ಸಮಾರಂಭದ ಬಳಿಕ ಸಾಮೂಹಿಕ ರಾಷ್ಟ್ರಗೀತೆ ಪ್ರಾರಂಭವಾಗಿದ್ದಾಗ, ಹಸನ ತಮ್ಮ ಕುತ್ತಿಗೆಯಲ್ಲಿನ ಸ್ಕಾರ್ಫ ಸರಿಪಡಿಸುತ್ತಿರುವ ವಿಡಿಯೋ ಎಲ್ಲೆಡೆ ಪ್ರಸಾರವಾಗಿದೆ. ರಾಷ್ಟ್ರಗೀತೆಯ ಈ ಅಪಮಾನದ ವಿಷಯದಲ್ಲಿ ಅವರಿಗೆ ಸ್ವಲ್ಪವೂ ಪಶ್ಚಾತ್ತಾಪ, ವಿಷಾದವಿರಲಿಲ್ಲ, ರಾಷ್ಟçಗೀತೆಯ ಪರ್ಯಾಯದಲ್ಲಿ ರಾಷ್ಟ್ರದ ಅಪಮಾನ ಮಾಡುವವರ ಮನಸ್ಸಿನಲ್ಲಿ ರಾಷ್ಟ್ರದ ವಿಷಯದಲ್ಲಿ ಪ್ರೀತಿಯಿರುವುದೇ ? ಇಂತಹ ಜನಪ್ರತಿನಿಧಿಗಳು ಜನತೆಯಲ್ಲಿ ಎಂತಹ ದೇಶಭಕ್ತಿಯನ್ನು ಮೂಡಿಸುವರು? ತದ್ವಿರುದ್ಧ ಇಂತಹವರಿಂದ ದೇಶಭಕ್ತರಿಗೆ ತೊಂದರೆ ನೀಡುವ ಕೃತ್ಯಗಳು ನಡೆಯುವ ಸಾಧ್ಯತೆ ಅಧಿಕವಾಗಿದೆ. ದುರ್ದೈವವೆಂದರೆ ಇಂತಹವರನ್ನು ಪ್ರಜಾಪ್ರಭುತ್ವದಲ್ಲಿ `ಜನಪ್ರತಿನಿಧಿ’ಗಳೆಂದು ಜನತೆ ತಲೆಯ ಮೇಲೆ ಕುಳ್ಳಿರಿಸಿಕೊಂಡಿದ್ದಾರೆ. ನಮ್ಮಲ್ಲಿ ಕೆಲವರು ಈ ರೀತಿ ರಾಷ್ಟ್ರವನ್ನು ಅವಮಾನಿಸುತ್ತಾರೆ, ಕೆಲವರು ಬಹಿರಂಗವಾಗಿ ಪಾಕಿಸ್ತಾನದ ಪರವಾಗಿ ಮಾತನಾಡುತ್ತಾರೆ, ಕೆಲವರು ಪಾಕಿಸ್ತಾನ ಧ್ವಜವನ್ನು ಹಾರಿಸುತ್ತಾರೆ, ಕೆಲವರು ಪ್ಯಾಲೆಸ್ಟೆನ್‌ಪರ ಜಯಘೋಷ ಕೂಗುತ್ತಾರೆ; ಆದರೆ ಇಂತಹವರ ವಿರುದ್ಧ ಯಾವುದೇ ಕ್ರಮವಾಗುತ್ತಿಲ್ಲ, ಸರಕಾರಕ್ಕೇ ಏನೂ ಅನಿಸದೇ ಇರುವಾಗ, ಅಲ್ಲಿ ಇದಕ್ಕಿಂತ ಮತ್ತಿನ್ನೇನು ನಡೆಯುತ್ತದೆ ? ಹಸನರ ಸಂದರ್ಭದಲ್ಲಿ ಮಾತನಾಡುವುದಾದರೆ, ಒಂದೆಡೆ ಅವರು ಕಾನೂನುಬಾಹಿರವಾಗಿ ಕುರಾನ ಆಯತಗಳನ್ನು ಪಠಿಸುತ್ತಾರೆ. ಇನ್ನೊಂದೆಡೆ ತಕ್ಷಣವೇ ರಾಷ್ಟ್ರಗೀತೆಯ ಅವಮಾನ ಮಾಡುತ್ತಾರೆ. ಇದರಿಂದ ಜನಪ್ರತಿನಿಧಿಗಳಾಗಿ ಅವರ ಕಾರ್ಯವೈಖರಿಯ ಮತ್ತು ಮಾರ್ಗ ಸ್ಪಷ್ಟವಾಗಿ ಗೋಚರಿಸುತ್ತದೆ.
ಕಾಲಕ್ಕೆ ತಕ್ಕಂತೆ ಸುಧಾರಣೆ ಅಗತ್ಯ !
‘ಪ್ರಮಾಣವಚನ’ ಎಂಬ ಶಬ್ದವು ತುಂಬಾ ದೊಡ್ಡದಾಗಿದೆ. ಅದರ ಜವಾಬ್ದಾರಿ ಅದಕ್ಕಿಂತ ದೊಡ್ಡದಿದೆ. ಒಳ್ಳೆಯ ವಿಷಯಗಳನ್ನು ಪೂರ್ಣಗೊಳಿಸಲು ನಿರಂತರವಾಗಿ ಕರ್ತವ್ಯನಿಷ್ಠರಾಗಿ ಉಳಿಯುವುದಾಗಿ ಮಾಡುವ ದೃಢನಿರ್ಧಾರವೆಂದರೆ ಪ್ರಮಾಣ ವಚನವಾಗಿದೆ. ಪ್ರಸ್ತುತ ತೆಗೆದುಕೊಳ್ಳುತ್ತಿರುವ ಪ್ರಮಾಣವಚನದಲ್ಲಿ `ನಾನು ಪ್ರತಿಜ್ಞೆ ಮಾಡುತ್ತೇನೆ, ನಾನು ಕಾನೂನಿನಿಂದ ರಚಿತವಾಗಿರುವ ಭಾರತೀಯ ಸಂವಿಧಾನದ ಮೇಲೆ ನಿಜವಾದ ವಿಶ್ವಾಸ ಮತ್ತು ನಿಷ್ಠೆಯನ್ನು ಇಡುತ್ತೇನೆ, ಭಾರತದ ಸಾರ್ವಭೌಮತ್ವ ಮತ್ತು ಅಖಂಡತೆಯನ್ನು ರಕ್ಷಿಸುತ್ತೇನೆ ಎಂದು ನಾನು ಪ್ರತಿಜ್ಞೆ ಮಾಡುತ್ತೇನೆ’ ಎನ್ನುವ ಒಂದು ಸಾಲು ಇದೆ. ಇದರಲ್ಲಿ ಯಾವ ಶಬ್ದವನ್ನು ಹಸನ ಮತ್ತು ಓವೈಸಿ ಪಾಲಿಸಿದ್ದಾರೆ ? ಒಂದೆಡೆ ಜನಪ್ರತಿನಿಧಿಗಳು ಭಾರತದ ಅಖಂಡತೆಯನ್ನು ರಕ್ಷಿಸುವ ಪ್ರತಿಜ್ಞೆ ಮಾಡುತ್ತಾರೆ; ಆದರೆ ಇನ್ನೊಂದೆಡೆ `ಭಾರತ ತೆರೆ ತುಕಡೆ ಹೋಂಗೆ’, ಎಂದು ಕೂಗುವವರಿಗೆ ಕುಮ್ಮಕ್ಕು ನೀಡುತ್ತಾರೆ. ಒಟ್ಟಿನಲ್ಲಿ ಒಂದು ವೇಳೆ ಜನಪ್ರತಿನಿಧಿಗಳು ಪ್ರಮಾಣ ವಚನದ ಪಾವಿತ್ರ‍್ಯತೆಯನ್ನು ರಕ್ಷಿಸುವುದಿಲ್ಲವಾದರೆ, `ಪ್ರಮಾಣ ವಚನ’ ಈ ಶಬ್ದವೇ ಸಂಸತ್ತಿನ ಕಾರ್ಯಪ್ರಣಾಳಿಕೆಯಿಂದ ತೆಗೆದುಹಾಕಿ ಅದರ ಬದಲಾಗಿ `ಸಾಲು ಓದುವುದು’ ಇತ್ಯಾದಿ ಯಾವುದಾದರೂ ಶಬ್ದವನ್ನು ಬಳಸಬೇಕು; ಕಾರಣವೇನೆಂದರೆ, ಪ್ರಮಾಣ ವಚನ ಈ ಶಬ್ದದ ಘನತೆಯನ್ನೇ ರಾಜಕಾರಣಿಗಳು ನಾಶ ಮಾಡಿದ್ದಾರೆ. ಇದೆಲ್ಲವನ್ನೂ ನೋಡಿದರೆ, ಸಂಸತ್ತು ಮತ್ತು ವಿಧಾನಮಂಡಲದಲ್ಲಿ ತೆಗೆದುಕೊಳ್ಳುವ ಪ್ರಮಾಣ ವಚನದಲ್ಲಿ ಕಾಲಕ್ಕೆ ತಕ್ಕಂತೆ ಕನಿಷ್ಠಪಕ್ಷ ತಿದ್ದುಪಡಿ ಮಾಡುವುದು ಅಗತ್ಯವಾಗಿದೆ. ಅದರಲ್ಲಿ `ನಾನು ಜನಪ್ರತಿನಿಧಿಯೆಂದು ನಾಗರಿಕರಿಗೆ ಸಹಾಯ ಮಾಡುವ ನನ್ನ ಜವಾಬ್ದಾರಿ ಅಥವಾ ಕರ್ತವ್ಯವನ್ನು ನಿರ್ವಹಿಸಲು, ಯಾವುದೇ ಒಂದು ವರ್ಗದವರನ್ನು ಓಲೈಸಿದರೆ, ಅನ್ಯಾಯ ಮಾಡಿದರೆ, ಭ್ರಷ್ಟಾಚಾರ ಮಾಡಿದರೆ, ಗೂಂಡಾಗಿರಿ ಮಾಡಿದರೆ ಅಥವಾ ಅನೈತಿಕ ಕೃತ್ಯಗಳನ್ನು ಮಾಡಿದರೆ, ನನ್ನ ಸದಸ್ಯತ್ವ ಶಾಶ್ವತವಾಗಿ ರದ್ದಾಗುವುದು’ ಎನ್ನುವ ವಿವರಗಳುಳ್ಳ ಮಾಹಿತಿಯನ್ನು ಸೇರಿಸಬೇಕು. `ವ್ಯಕ್ತಿಗೆ ಶಿಕ್ಷೆಯ ಭಯವಿರುತ್ತದೆ’, ಎಂದು ಮನೋವಿಜ್ಞಾನಿಗಳು ಹೇಳುತ್ತಾರೆ. ಜನಪ್ರತಿನಿಧಿಗಳು ಒಮ್ಮೆ ಚುನಾಯಿತರಾದ ಕೂಡಲೇ, ಅವರಲ್ಲಿ ಯಾವುದೇ ಭಯ ಉಳಿಯುವುದಿಲ್ಲ. ಇದರಿಂದ ಸದಸ್ಯತ್ವ ರದ್ದುಗೊಳಿಸುವ ಷರತ್ತುಗಳಿರುವ ಕಠಿಣ ಕಾನೂನು ರಚಿಸುವ ಆವಶ್ಯಕತೆ ಅತ್ಯಗತ್ಯವಾಗಿದೆ.
ದೇಶವಿರೋಧಿ ಕಥಾನಕ ?
ಒಂದೆಡೆ ಓವೈಸಿ `ಜೈ ಪ್ಯಾಲೆಸ್ಟೆನ್’ ಎಂದು ಘೋಷಿಸಿದರು. ಅದರ ಹಿಂದೆಯೇ ರಾಹುಲ್ ಗಾಂಧಿ ತುಂಬಿದ ಸಂಸತ್ತಿನಲ್ಲಿ ಹಿಂದೂಗಳನ್ನು ‘ಹಿಂಸಾತ್ಮಕ’ ಎಂದು ಸಂಬೋಧಿಸಿದರು. ಅದರ ಬೆನ್ನಿಗೆ ಹಸನ ಉರ್ದು ಮಿಶ್ರಿತ ಪದಗಳನ್ನು ಬಳಸಿ ಪ್ರಮಾಣ ವಚನ ಸ್ವೀಕರಿಸಿದರು. ಇದೆಲ್ಲವನ್ನೂ ಜೋಡಿಸಿದರೆ, ತಯಾರಾಗುವ ಚಿತ್ರಣವನ್ನು ಬದಿಗೊತ್ತಿ ಬಿಡಬಾದರು. ಇದು ದೇಶವಿರೋಧಿ ಕಥಾನವೋ ಅಥವಾ ಷಡ್ಯಂತ್ರವಾಗಿದೆಯೇ ? ಎನ್ನುವ ಸಂದೇಹ ಮೂಡುತ್ತದೆ. ಇದರಿಂದ ಈ ಘಟನೆಯ ಮೂಲಕ್ಕೆ ಹೋಗಿ ಕಂಡು ಹಿಡಿಯಬೇಕಾಗಿದೆ. ಜನರು ಸಂಘಟಿತರಾಗಿ ಅಂತಹವರ ಸದಸ್ಯತ್ವವನ್ನು ರದ್ದುಗೊಳಿಸಲು ಸರಕಾರಕ್ಕೆ ಒತ್ತಾಯಿಸಬೇಕು.