ಸಂತರನ್ನು ಜ್ಯಾತಿವಾದಿಗಳೆಂದು ಟೀಕಿಸುವ ಶ್ಯಾಮ್ ಮಾನವ್ ಅವರನ್ನು ‘ಅಂಧಶ್ರದ್ಧಾನಿರ್ಮೂಲನ ಕಾನೂನು ಸಮಿತಿ’ಯಿಂದ ಹೊರಹಾಕಿ ! – ಹಿಂದೂ ಜನಜಾಗೃತಿ ಸಮಿತಿ

ಹಿಂದೂ ಜನಜಾಗೃತಿ ಸಮಿತಿಯಿಂದ ಸರಕಾರಕ್ಕೆ ಆಗ್ರಹ

ಪ್ರೊ. ಶ್ಯಾಮ್ ಮಾನವ್

ಮುಂಬಯಿ – ವಾಮಾಚಾರ ಕಾನೂನನ್ನು ಉತ್ತೇಜಿಸಲು ಆಗಿನ ಕಾಂಗ್ರೆಸ್ ಸರಕಾರ ನೇಮಿಸಿದ್ದ ಸರಕಾರಿ ಸಮಿತಿಯ ಸಹ ಅಧ್ಯಕ್ಷ ಶ್ಯಾಮ್ ಮಾನವ್ ಈಗಲೂ ಆ ಸಮಿತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ವಾಸ್ತವವಾಗಿ, ಅವರು ಸುಳ್ಳು ಬರಹಗಳನ್ನು ಬರೆದಿದ್ದಾರೆ; ಹಾಗಾಗಿ ಅವರಿಗೆ ನ್ಯಾಯಾಲಯ ಶಿಕ್ಷೆ ಮತ್ತು ದಂಡ ವಿಧಿಸಿತ್ತು. ಅವರು ವಾರಕರಿ ಸಂಪ್ರದಾಯದ ಸಾಧು ಮತ್ತು ಸಂತರನ್ನು ನಿರಂತರವಾಗಿ ಜಾತಿವಾದ ಭಾಷೆಯಲ್ಲಿ ಟೀಕಿಸುವ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತಿದ್ದಾರೆ. ಆದ್ದರಿಂದ, ವಾಮಾಚಾರ ಕಾನೂನನ್ನು ಉತ್ತೇಜಿಸಲು ನೇಮಿಸಲಾದ ಸರಕಾರಿ ಸಮಿತಿಯಿಂದ ಶ್ಯಾಮ್ ಮಾನವ್ ಅವರನ್ನು ಉಚ್ಚಾಟಿಸಬೇಕೆಂದು ಹಿಂದೂ ಜನಜಾಗೃತಿ ಸಮಿತಿಯು ಮಹಾರಾಷ್ಟ್ರ ರಾಜ್ಯದ ಮುಖ್ಯಮಂತ್ರಿ ಏಕನಾಥ್ ಶಿಂದೆ ಹಾಗೂ ಉಪಮುಖ್ಯಮಂತ್ರಿ ಮತ್ತು ಗೃಹ ಸಚಿವ ದೇವೇಂದ್ರ ಫಡ್ನವಿಸ್ ಅವರಿಗೆ ಮನವಿಯ ಮೂಲಕ ಒತ್ತಾಯಿಸಿದೆ.

ಈ ಮನವಿಯಲ್ಲಿ,

1. ಪುಣೆಯ ಸುಪ್ರಸಿದ್ಧ ಡಾ.ಪಿ.ವಿ. ವರ್ತಕ ಅವರ ಬಗ್ಗೆ ಸುಳ್ಳು ಬರಹವನ್ನು ಪ್ರಕಟಿಸಿದ ಕುರಿತು ಪುಣೆಯ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ಶ್ರೀ. ಪಾಧ್ಯೆ ಇವರ ನ್ಯಾಯಾಲಯವು ಪ್ರೊ. ಶ್ಯಾಮ್ ಮಾನವ್‌ಗೆ ಒಂದು ದಿನದ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿತ್ತು. ‘ಮುಂಬಯಿ ಸಾರ್ವಜನಿಕ ವಿಶ್ವಸ್ಥ ಸಂಸ್ಥೆ ಆಕ್ಟ್, 1950’ ರ ಸೆಕ್ಷನ್ 56 ರ ಅಡಿಯಲ್ಲಿ ಕ್ರಿಮಿನಲ್ ಅಪರಾಧಕ್ಕೆ ಶಿಕ್ಷೆಗೊಳಗಾದ ವ್ಯಕ್ತಿಯು ಯಾವುದೇ ಸಾರ್ವಜನಿಕ ಸಮಿತಿ ಅಥವಾ ಟ್ರಸ್ಟ್‌ನ ಸದಸ್ಯರಾಗಲು ಸಾಧ್ಯವಿಲ್ಲ. ಹಾಗಿದ್ದಲ್ಲಿ, ಹುದ್ದೆಯು ಸ್ವಯಂಚಾಲಿತವಾಗಿ ರದ್ದಾಗುತ್ತದೆ. ಹಾಗಾಗಿ ಸರಕಾರ ಕಾನೂನು ಸಮಿತಿಗೆ ಮಾನವ್ ಅವರನ್ನು ಸೇರಿಸಿಕೊಂಡಿರುವುದು ಕಾನೂನು ಬಾಹಿರವಾಗಿದೆ.

2. ಹಿಂದೂ ಧರ್ಮ, ಸಂತರ ಸಂಪ್ರದಾಯದ ಬಗ್ಗೆ ದ್ವೇಷ ಹೊಂದಿರುವ ಮಾನವ್ ಇವರು ಸಾಮಾಜಿಕ ನ್ಯಾಯ ಇಲಾಖೆ ಆಯೋಜಿಸಿದ್ದ ವಾಮಾಚಾರ ಕಾನೂನು ಜನಜಾಗೃತಿ ಕಾರ್ಯಕ್ರಮದಲ್ಲಿ ‘ಜ್ಞಾನೇಶ್ವರರು ಕೋಣದ ಬಾಯಿಯಿಂದ ವೇದಗಳನ್ನು ಹೇಳಿಸಿದ್ದು ಸುಳ್ಳು ಹೇಳಲಾಗುತ್ತಿದೆ’ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಹಿಂದೆಯೂ ‘ಕುಲಕರ್ಣ್ಯರ (ಸಂತ ಜ್ಞಾನೇಶ್ವರ ಮಹಾರಾಜರ) 12ರ ಹರೆಯದ ಪುತ್ರನು ಗೋಡೆ ನಡೆಸಲು ಹೇಗೆ ಸಾಧ್ಯ?’, ‘ಸಂತ ತುಕಾರಾಂ ಮಹಾರಾಜರು ದೇಹ ಸಹಿತ ವೈಕುಂಠಕ್ಕೆ ಹೋಗಿರದೇ ಅವರ ಕೊಲೆಯಾಗಿತ್ತು’, ಈ ರೀತಿಯ ವಾರಕರಿ ಸಹಿತ ಮಹಾರಾಷ್ಟ್ರದ ಭಕ್ತರ ಧಾರ್ಮಿಕ ಭಾವನೆ ನೋಯಿಸಿದ ಅನೇಕ ಅಕ್ಷೆಪಾರ್ಹ ಹಾಗೂ ಜಾತಿವಾದ ಹೇಳಿಕೆ ನೀಡುತ್ತಿರುತ್ತಾರೆ.

3. ಈ ವಾಮಾಚಾರದ ಕಾನೂನು ನಿಖರವಾಗಿ ಏನನ್ನು ಉತ್ತೇಜಿಸುತ್ತಿದೆ? ಇದು ಕಾನೂನಿನ ಪ್ರಚಾರವಲ್ಲ, ಬದಲಾಗಿ ಉದ್ದೇಶಪೂರ್ವಕವಾಗಿ ವಾರಕರಿಗಳ ಶ್ರದ್ಧೆಯ ಮೇಲೆ ಆಘಾತ ಮಾಡುವ ಅಘೋರಿ ರೂಪವಾಗಿದೆ. ಸರಕಾರಿ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡು ಹಿಂದೂ ಸಂತರ ಮಾನಹಾನಿ ಮಾಡಿದ ಶ್ಯಾಮ್ ಮಾನವ್ ಅವರನ್ನು ಕೂಡಲೇ ಮೇಲಿನ ಸರಕಾರಿ ಸಮಿತಿಯಿಂದ ಹೊರಹಾಕಬೇಕು.

4. ಅದೇ ರೀತಿ ಮೂಢನಂಬಿಕೆಗಳ ನಿರ್ಮೂಲನೆಯ ಹೆಸರಿನಲ್ಲಿ ಸಮಾಜಸೇವೆಯ ವೇಷ ತೊಟ್ಟಿರುವ ‘ಮಹಾರಾಷ್ಟ್ರ ಅಂಧಶ್ರಾದ್ಧ ನಿರ್ಮೂಲನ ಸಮಿತಿ’ ತಮ್ಮ ಟ್ರಸ್ಟ್‌ಗಳಲ್ಲಿ ಅನೇಕ ಆರ್ಥಿಕ ಹಗರಣಗಳನ್ನು ಎಸಗಿದ್ದಾರೆ. ಇದರ ವಿರುದ್ಧ ಸೂಕ್ತ ದೂರುಗಳು ನೊಂದಾಯಿಸಿವೆ.

5. ‘ಅನ್ನಿಸ್’ ಸರಕಾರಕ್ಕೆ ಮೋಸ ಮಾಡಿ ಲಕ್ಷಾಂತರ ರೂಪಾಯಿ ಕೊಡುಗೆಯನ್ನು ಮುಳುಗಿಸಿದೆ. ವಿದೇಶದಿಂದ ಲಕ್ಷಗಟ್ಟಲೆ ಹಣ ಪಡೆದು ಲೆಕ್ಕ ನೀಡದ ಕಾರಣಕ್ಕೆ ಕೇಂದ್ರ ಗೃಹ ಸಚಿವಾಲಯ ಅನ್ನಿಸ್‌ನ ನೋಂದಣಿಯನ್ನು ವಿದೇಶಿ ವಿನಿಮಯ ನೋಂದಣಿಯಿಂದ (ಎಫ್‌ಸಿಆರ್‌ಎ) ರದ್ದುಗೊಳಿಸಿದೆ.

6. ‘ಅನ್ನಿಸ್’ ಅವರ ಟ್ರಸ್ಟ್‌ನ ಮೇಲೆ ನಿರ್ವಾಹಕರನ್ನು ನೇಮಿಸಲು ಸಹಾಯಕ ದತ್ತಿ ಆಯುಕ್ತರು ಶಿಫಾರಸು ಮಾಡಿದ್ದಾರೆ. ಈ ಎಲ್ಲಾ ರೀತಿಯ ಬಗ್ಗೆ ಸರಕಾರಿ ಮಟ್ಟದಲ್ಲಿ ಕೂಲಂಕುಷವಾಗಿ ತನಿಖೆ ನಡೆಸಲಾಗುತ್ತಿದೆ.

7. ನಕ್ಸಲೀಯ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಕ್ಕಾಗಿ ಈ ಸಂಘಟನೆಯ ಕಾರ್ಯಕರ್ತರನ್ನೂ ಬಂಧಿಸಲಾಗಿದೆ. ಇಂತಹ ಭ್ರಷ್ಟರು, ವಂಚಕರು, ನಗರ ನಕ್ಸಲೀಯ ಸಂಘಟನೆಗಳು ಮತ್ತು ಅವರ ಪದಾಧಿಕಾರಿಗಳು ಸರಕಾರದ ಸಮಿತಿಗಳಲ್ಲಿ ಸ್ಥಾನ ಪಡೆಯುವುದು ತುಂಬಾ ಗಂಭೀರವಾಗಿದೆ. ಆದ್ದರಿಂದ ಶ್ಯಾಮ್ ಮಾನವ್ ಅವರಂತೆ ಈ ಸಂಘಟನೆಯ ಪದಾಧಿಕಾರಿಗಳನ್ನೂ ಕೂಡಲೇ ಸರಕಾರಿ ಸಮಿತಿಯಿಂದ ತೆಗೆದು ಹಾಕಿ ಈ ಸಮಿತಿಯನ್ನೇ ವಿಸರ್ಜಿಸಬೇಕು. ಎಂದು ಹೇಳಿದೆ.