ತಾಜ್ ಮಹಲ್ ನಲ್ಲಿ ದುಗ್ಧಾಭಿಷೇಕ ಮತ್ತು ಜಲಾಭಿಷೇಕ ಮಾಡಲು ಅವಕಾಶ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆ

ತಾಜಮಹಲ

ಆಗ್ರಾ (ಉತ್ತರ ಪ್ರದೇಶ) – ತಾಜ್ ಮಹಲ್ ನಲ್ಲಿ ಶ್ರಾವಣ ಮಾಸದಲ್ಲಿ ದುಗ್ಧಾಭಿಷೇಕ ಮತ್ತು ಜಲಾಭಿಷೇಕ ಮಾಡಲು ಯೋಗಿ ಯುವ ಬ್ರಿಗೇಡ್‌ನ ಪ್ರದೇಶಾಧ್ಯಕ್ಷ ಮತ್ತು ಅರ್ಜಿದಾರ ಕುಂವರ್ ಅಜಯ್ ತೋಮರ್ ಅವರು ಸ್ಕಾಲ್ ಕಾಜ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯಲ್ಲಿ ‘ಪುರಾತತ್ವ ಇಲಾಖೆಯ ಅಧೀಕ್ಷಕರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ. ಆಗಸ್ಟ್ 16 ರಂದು ಈ ಅರ್ಜಿಯ ವಿಚಾರಣೆ ನಡೆಯಲಿದೆ. ಈ ಹಿಂದೆ ಏಪ್ರಿಲ್ 26, 2024 ರಂದು ಅರ್ಜಿಯನ್ನು ದಾಖಲಿಸಲಾಗಿತ್ತು. ನ್ಯಾಯಾಲಯವು ಆಗ ಪುರಾತತ್ವ ಇಲಾಖೆಗೆ ನೋಟಿಸ್ ಕಳುಹಿಸಿತ್ತು; ಆದರೆ, ಇಲಾಖೆಯಿಂದ ಈ ಬಗ್ಗೆ ಯಾವುದೇ ಉತ್ತರ ಬಂದಿರಲಿಲ್ಲ ಹೀಗಾಗಿ ಈಗ ಮತ್ತೊಮ್ಮೆ ಅರ್ಜಿ ಸಲ್ಲಿಸಲಾಗಿದೆ.

ಶ್ರಾವಣ ಮಾಸವು ಕೋಟ್ಯಾವಧಿ ಹಿಂದೂಗಳ ಶ್ರದ್ಧೆಯ ಮಾಸವಾಗಿದೆ. ಭಗವಾನ್ ಶಂಕರನ ಆರಾಧನೆಯ ಮಾಸವಾಗಿದೆ. ತೇಜೋಮಹಾಲಯ (ತಾಜ್ ಮಹಲ್) ಶಿವನ ದೇವಾಲಯವಾಗಿರುವುದರಿಂದ ಅಲ್ಲಿ ಜಲಾಭಿಷೇಕ, ದುಗ್ಧಾಭಿಷೇಕ ನಡೆಸಲು ಅವಕಾಶ ನೀಡಬೇಕು ಎಂದು ಕುಂವರ್ ಅಜಯ್ ತೋಮರ್ ಅವರು ಈ ಅರ್ಜಿ ಮೂಲಕ ಮನವಿ ಮಾಡಿದ್ದಾರೆ. 1212 ರಲ್ಲಿ, ರಾಜಾ ಪರಮಾದಿದೇವನು ತೇಜೋಮಹಾಲಯವನ್ನು ನಿರ್ಮಿಸಿದ್ದನು. ಆಗ ಅಲ್ಲಿನ ದೇವಸ್ಥಾನವನ್ನು ಸುರಕ್ಷಿತವಾಗಿಡಲಾಗಿತ್ತು. ಮುಂದೆ ಮೊಗಲರ ಆಡಳಿತ ಬಂದಾಗ ಶಾಹಜಹಾನನು ರಾಜಾ ಮಾನಸಿಂಹನಿಂದ ತೇಜೋಮಹಾಲಯವನ್ನು ವಶಕ್ಕೆ ಪಡೆದನು. ತೇಜೋಮಹಾಲಯದಲ್ಲಿ ಶಹಜಹಾನನ ಪತ್ನಿ ಮುಮ್ತಾಜಳ ಸಮಾಧಿ ಇಲ್ಲ. ಮುಮತಾಜಳ ನಿಜವಾದ ಗೋರಿಯು(ಸಮಾಧಿಯು) ಮಧ್ಯಪ್ರದೇಶದ ಬುರ್ಹಾನ್‌ಪುರದಲ್ಲಿದೆ. ಮುಮತಾಜಳ ಮೃತದೇಹ ತಾಪಿ ನದಿಯ ದಡದಲ್ಲಿ ಹೂಳಲಾಯಿತು. ಇದರ ದಾಖಲೆಗಳು ಇಂದಿಗೂ ಕೂಡ ಲಭ್ಯವಿದೆ. ಮೊಗಲರು ಭಾರತದಲ್ಲಿ ಬಂದು ದೇವಸ್ಥಾನಗಳನ್ನು ಧ್ವಂಸಗೊಳಿಸಿದರು ಮತ್ತು ಅವುಗಳ ಮೇಲೆ ಗೋರಿಗಳನ್ನು ನಿರ್ಮಿಸಿದರು.

ಸಂಪಾದಕೀಯ ನಿಲುವು

ಹಿಂದೂಗಳಿಗೆ ಇಂತಹ ಬೇಡಿಕೆಗಳನ್ನು ಮಾಡುವ ಪರಿಸ್ಥಿತಿ ಬರಬಾರದು; ಸರಕಾರವೇ ತಾಜ್ ಮಹಲ್ ನ ಉತ್ಖನನಕ್ಕೆ ಆದೇಶ ನೀಡುವ ಮೂಲಕ ಸತ್ಯವನ್ನು ಹೊರತರುವುದು ಅಗತ್ಯವಾಗಿದೆ!