Vishalgadh Land Case: ವಿಶಾಲಗಡ ಪ್ರಕರಣದಲ್ಲಿ ಪರಭಣಿಯಲ್ಲಿ ಮತಾಂಧರಿಂದ ಪ್ರತಿಭಟನೆ !

ಪರಭಣಿ – ವಿಶಾಲಗಡ ಮೇಲಿನ ಅತಿಕ್ರಮಣ ತೆರವುಗೊಳಿಸುವ ಅಂಶದ ಕುರಿತು ಮಾಜಿ ಸಂಸದ ಸಂಭಾಜಿ ರಾಜೆ ಇವರ ನೇತೃತ್ವದಲ್ಲಿ ಹಿಂದುಗಳು ಪ್ರತಿಭಟನೆ ನಡೆಸಿದ್ದರು. ಆದ್ದರಿಂದ ಸರಕಾರ ಅಲ್ಲಿಯ ಅತಿಕ್ರಮಣ ತೆರವುಗೊಳಿಸುವುದು ಅನಿವಾರ್ಯಗೊಳಿಸಿತು. ಅದಕ್ಕು ಕೂಡ ನ್ಯಾಯಾಲಯವು ನಂತರ ತಡೆಯಾಜ್ಞೆ ನೀಡಿತು. ವಿಶಾಲಗಡ ಇಲ್ಲಿ ಕಥಿತ ಅತಿಕ್ರಮಣದ ಕಾರಣದಿಂದ ಪರಭಣಿಯಲ್ಲಿ ಮತಾಂಧರು ಪ್ರತಿಭಟನೆ ನಡೆಸಿದರು.

ವಿಶಾಲಗಡದ ಮೇಲೆ ಮತಾಂಧರು ನಡೆಸಿರುವ ಅತಿಕ್ರಮಣ ತೆರವುಗೊಳಿಸುವುದಕ್ಕಾಗಿ ಹಿಂದುತ್ವನಿಷ್ಠರು ಕಳೆದ ಅನೇಕ ವರ್ಷದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ‘ವಿಶಾಲಗಡದ ಮೇಲಿನ ಅತಿಕ್ರಮಣ ತೆರವುಗೊಳಿಸುವುದಕ್ಕಾಗಿ ಆಡಳಿತ ಯಾವುದೇ ಕೃತಿ ಮಾಡದೆ ಇರುವುದರಿಂದ ಜುಲೈ ೧೪ ರಂದು ಕೋಟೆಯ ಮೇಲೆ ಹೋಗುವುದು’, ಎಂದು ಮಾಜಿ ಸಂಸದ ಛತ್ರಪತಿ ಸಂಭಾಜಿ ರಾಜೆ ಇವರು ಘೋಷಿಸಿದ್ದರು. ಅದರ ಪ್ರಕಾರ ಅವರು ಜುಲೈ ೧೪ ರಂದು ಬೆಳಿಗ್ಗೆ ಸುಮಾರು ೯ ಗಂಟೆಗೆ ಕೋಟೆಯ ಕಡೆಗೆ ಹೊರಟರು. ಅವರು ಕೋಟೆಯ ಮೇಲೆ ತಲುಪುವ ಮೊದಲೇ ಸುಮಾರು ೧೧ ಗಂಟೆಗೆ ವಿಶಾಲಗಡದ ಮೇಲಿನ ಮನೆಗಳ ಮೇಲೆ ಕೆಲವು ದುಷ್ಕರ್ಮಿಗಳು ದೊಡ್ಡ ಪ್ರಮಾಣದಲ್ಲಿ ಕಲ್ಲುತೂರಾಟ ನಡೆಸಿದರು. ಇದರಲ್ಲಿ ಕೆಲವು ಮನೆಗಳ ಗಾಜುಗಳು ಓಡೆದವು ಹಾಗೂ ಕೆಲವು ಅಂಗಡಿಗಳ ಮೇಲೆ ಕೂಡ ಕಲ್ಲು ತೂರಾಟ ನಡೆಸಲಾಗಿತ್ತು ಹಾಗೂ ಕೆಲವು ದ್ವಿಚಕ್ರ ವಾಹನ ಮತ್ತು ಕಾರುಗಳ ಗಾಜುಗಳನ್ನು ಒಡೆಯಲಾಗಿತ್ತು. ಈ ಘಟನೆಯ ನಂತರ ಜಾತ್ಯತೀತ ಪಕ್ಷ ಮತ್ತು ಸಂಘಟನೆ ಇವರು ಬೃಹತ್ ಪ್ರಮಾಣದ ಬಂಡವಾಳ ಮಾಡಿಕೊಂಡು ಅಕ್ರಮ ಕಾಮಗಾರಿಯನ್ನು ನಿರ್ಲಕ್ಷಿಸಿ ಹಿಂದೂಗಳನ್ನೆ ತಪ್ಪಿತಸ್ಥರನ್ನಾಗಿ ಮಾಡುವ ಪ್ರಯತ್ನ ಮಾಡಿದ್ದರು.

ಸಂಪಾದಕೀಯ ನಿಲುವು

ಒಂದು ಸ್ಥಳದ ಧರ್ಮಬಾಂಧವರ ಮೇಲೆ ಏನಾದರೂ ಕಥಿತ ದಾಳಿ ಆದರೆ ಎರಡನೇ ಸ್ಥಳದ ಮತಾಂಧರು ತಕ್ಷಣ ಅವರ ಬೆಂಬಲಿಗೆ ಪ್ರತಿಭಟನೆ ನಡೆಸುತ್ತಾರೆ ! ಎಷ್ಟು ಹಿಂದೂಗಳು ಅವರ ಧರ್ಮ ಬಾಂಧವರ ಮೇಲಿನ ಆಘಾತದ ವಿರುದ್ಧ ಸಂಘಟಿತರಾಗುತ್ತಾರೆ ?