ಇಸ್ರೇಲ್ ಕಂಪನಿಗಳ ಮೇಲೆ ನಿಷೇಧ !
ಇಸ್ಲಾಮಬಾದ್ (ಪಾಕಿಸ್ತಾನ) – ಪಾಕಿಸ್ತಾನ ಸರಕಾರವು ಇಸ್ರೇಲಿನ ಪ್ರಧಾನಿ ಬೆಂಜಮಿನ್ ನೇತನ್ಯಾಹೂ ಇವರನ್ನು ‘ಭಯೋತ್ಪಾದಕ’ ಎಂದು ಘೋಷಿಸಿದೆ. ‘ತೆಹರಿಕ್-ಏ-ಲಬೈಕ್ ಪಾಕಿಸ್ತಾನ್’ (ಟಿ.ಎಲ್.ಪಿ.) ಈ ರಾಜಕೀಯ ಪಕ್ಷ ಕೆಲವು ಸಮಯದಿಂದ ಇಸ್ಲಾಮಾಬಾದನಲ್ಲಿ ಪ್ರತಿಭಟನೆ ನಡೆಸುತ್ತಿದೆ. ನೇತನ್ಯಾಹೂ ಇವರನ್ನು ಭಯೋತ್ಪಾದಕನೆಂದು ಘೋಷಿಸಲು ಟಿ.ಎಲ್.ಪಿ. ಆಗ್ರಹಿಸುತ್ತಿತ್ತು. ಇಂತಹ ಪರಿಸ್ಥಿತಿಯಲ್ಲಿ ಸರಕಾರವು ನೇತನ್ಯಾಹೂ ಇವರನ್ನು ಭಯೋತ್ಪಾದಕನೆಂದು ಘೋಷಿಸುವ ನಿರ್ಣಯ ತೆಗೆದುಕೊಂಡಿದೆ.
ಪಾಕಿಸ್ತಾನದ ಪ್ರಧಾನಿ ಶಹಾಬಾಜ್ ಶರೀಫ್ ಇವರ ರಾಜಕೀಯ ಸಲಹೆಗಾರ ರಾಣಾ ಸನಾವುಲ್ಲ ಇವರು, ನೇತನ್ಯಾಹೂ ಭಯೋತ್ಪಾದಕ ಮತ್ತು ಯುದ್ಧದಲ್ಲಿನ ಅಪರಾಧಗಳಿಗಾಗಿ ತಪ್ಪಿತಸ್ಥರಾಗಿದ್ದಾರೆ. ನೇತನ್ಯಾಹೂ ಇವರ ವಿರುದ್ಧ ಮೊಕದ್ದಮೆ ಕೂಡ ನಡೆಸಬೇಕೆಂದು ನಮ್ಮ ಭೇಡಿಕೆಯಾಗಿದೆ ಎಂದು ಹೇಳಿದರು. ಗಾಝಾದಲ್ಲಿನ ದಾಳಿಗಾಗಿ ಇಸ್ರೇಲನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಎಲ್ಲಾ ಇಸ್ರೇಲಿ ಉತ್ಪಾದನೆಗಳು ಮತ್ತು ಕಂಪನಿಗಳ ಮೇಲೆ ಕೂಡ ನಾವು ನಿಷೇಧ ಹೇರುತ್ತೇವೆ. ಇಸ್ರೇಲಿನ ಉತ್ಪಾದನೆಗಳು ಯಾವುದು ? ಇದರ ಕುರಿತು ಸಂಶೋಧನೆ ನಡೆಸುವುದಕ್ಕಾಗಿ ಸರಕಾರ ಒಂದು ಸಮಿತಿ ಸ್ಥಾಪನೆ ಮಾಡುವುದು. ಅದರ ನಂತರ ಉತ್ಪಾದನೆಗಳನ್ನು ನಿಷೇಧಿಸಲಾಗುವುದು ಎಂದು ಹೇಳಿದರು.
ಪಾಕಿಸ್ತಾನದ ವಿದೇಶಾಂಗ ಸಚಿವ ಇಶಾಕ ದಾರ ಇವರು ಕೂಡ ಇತ್ತೀಚಿಗೆ ಇಸ್ರೇಲಿನ ಪ್ರಧಾನ ಮಂತ್ರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದರು.
ಸಂಪಾದಕೀಯ ನಿಲುವುಪಾಕಿಸ್ತಾನದ ಹಾಸ್ಯಸ್ಪದ ನಿರ್ಣಯ ! ಯಾವ ದೇಶಕ್ಕೆ ‘ಭಯೋತ್ಪಾದಕರ ಕಾರ್ಖಾನೆ’ ಆಗಿರುವುದರಿಂದ ಜಗತ್ತು ‘ಭಯೋತ್ಪಾದಕ ದೇಶ’ ಎಂದೇ ಘೋಷಿಸುವ ಅವಶ್ಯಕತೆ ಇದೆ, ಆ ದೇಶ ಇನ್ನೊಂದು ದೇಶದ ಪ್ರಧಾನಿಗೆ ಭಯೋತ್ಪಾದಕ ಎಂದು ಘೋಷಿಸುತ್ತದೆ, ಇದಕ್ಕಿಂತ ದೊಡ್ಡ ಹಾಸ್ಯ ಬೇರೆ ಇಲ್ಲ ! |