ಯೆಮನ್‌ನಲ್ಲಿ ಹೌತಿ ಬಂಡುಕೋರರ ನೆಲೆಗಳ ಮೇಲೆ ವೈಮಾನಿಕ ದಾಳಿ: 3 ಸಾವು

ಟೆಲ್ ಅವಿವ್ (ಇಸ್ರೇಲ್) ನಗರದಲ್ಲಿ ನಡೆದ ದಾಳಿಗೆ ಇಸ್ರೇಲ್ ನಿಂದ ಪ್ರತ್ಯುತ್ತರ !

ಅಲ್ ಹುದೈದಾ (ಯೆಮೆನ್) – ಯೆಮೆನ್‌ನಲ್ಲಿರುವ ಹೌತಿ ಬಂಡುಕೋರರ ಸ್ಥಾನಗಳ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿತು. ಯೆಮೆನ್‌ನ ಅಲ್ ಹುದೈದಾ ಬಂದರು ಮತ್ತು ವಿದ್ಯುತ್ ಸ್ಥಾವರವನ್ನು ಗುರಿಯಾಗಿಸಲಾಗಿದೆ. ಈ ದಾಳಿಯ ನಂತರ ಇಲ್ಲಿ ಭೀಕರ ಬೆಂಕಿ ಕಾಣಿಸಿಕೊಂಡಿದೆ. ಈ ದಾಳಿಯಲ್ಲಿ 3 ಹೌತಿ ಬಂಡುಕೋರರು ಹತರಾಗಿದ್ದಾರೆ ಮತ್ತು 87 ಮಂದಿ ಗಾಯಗೊಂಡಿದ್ದಾರೆ. ಜುಲೈ 19 ರಂದು ಟೆಲ್ ಅವಿವ್ ಮೇಲೆ ಹೌತಿ ಬಂಡುಕೋರರು ನಡೆಸಿದ ದಾಳಿಗೆ ಇಸ್ರೇಲ್ ನೀಡಿದ ಪ್ರತ್ಯುತ್ತರವಾಗಿದೆ. ಟೆಲ್ ಅವೀವ್ ದಾಳಿಯಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದರು ಮತ್ತು 10 ಮಂದಿ ಗಾಯಗೊಂಡಿದ್ದರು.

ಯೆಮೆನ್ ಮೇಲಿನ ದಾಳಿಯ ನಂತರ, ಇಸ್ರೇಲ್‌ನ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಅವರು, ಇಸ್ರೇಲಿ ನಾಗರಿಕರ ರಕ್ತಕ್ಕೆ ಬೆಲೆ ಇದೆ ಮತ್ತು ಇಸ್ರೇಲಿಗಳ ಮೇಲೆ ದಾಳಿಯಾದರೆ, ಲೆಬನಾನ್ ಮತ್ತು ಗಾಜಾದ ಪರಿಣಾಮಗಳಂತೆ ಆಗಿರುತ್ತವೆ ಎಂದು ಹೇಳಿದರು. ದಾಳಿಯ ನಂತರ, ಹೌತಿ ವಕ್ತಾರ ಯೆಹ್ಯಾ ಸಾರಿ ಇವರು, ಹೌತಿಗಳು ಇಸ್ರೇಲ್ ಮೇಲೆ ದಾಳಿ ಮಾಡಲು ಹಿಂಜರಿಯುವುದಿಲ್ಲ ಎಂದು ಹೇಳಿದರು. ಟೆಲ್ ಅವಿವ್ ಇನ್ನೂ ಸುರಕ್ಷಿತವಾಗಿಲ್ಲ ಎಂದು ಹೇಳಿದರು.

ಹೌತಿ ಬಂಡುಕೋರರು ಯಾರು?

ಹೌತಿಗಳು ಯೆಮೆನ್‌ನ ಅಲ್ಪಸಂಖ್ಯಾತ ಶಿಯಾ ‘ಜೈದಿ’ ಸಮುದಾಯದ ಶಸ್ತ್ರಸಜ್ಜಿತ ಗುಂಪಾಗಿದೆ. ಆಗಿನ ಅಧ್ಯಕ್ಷ ಅಲಿ ಅಬ್ದುಲ್ಲಾ ಸಲೇಹ್ ಅವರ ಭ್ರಷ್ಟಾಚಾರದ ವಿರುದ್ಧ ಹೋರಾಡಲು ಸಮುದಾಯದಿಂದ 1990 ರ ದಶಕದಲ್ಲಿ ಈ ಗುಂಪನ್ನು ರಚಿಸಲಾಯಿತು. ಅಭಿಯಾನದ ಸಂಸ್ಥಾಪಕ ಹುಸೇನ್ ಅಲ್-ಹೌತಿ ಅವರ ಹೆಸರನ್ನು ಇಡಲಾಗಿದೆ. ಅವರು ತಮ್ಮನ್ನು ‘ಅನ್ಸಾರ್ ಅಲ್ಲಾ’ ಎಂದರೆ ‘ದೇವರ ಸಹಚರರು’ ಎಂದು ಕರೆಯುತ್ತಾರೆ.

ಸಂಪಾದಕೀಯ ನಿಲುವು

ಭಾರತ ಇಸ್ರೇಲ್‌ನಿಂದ ತಕ್ಷಣದ ಪ್ರತ್ಯುತ್ತರ ನೀಡಲು ಯಾವಾಗ ಕಲಿಯುತ್ತದೆ ?