ವಾಷಿಂಗ್ಟನ್ (ಅಮೇರಿಕಾ) – ನಾನು ರಷ್ಯಾ-ಉಕ್ರೇನ್ ಯುದ್ಧವನ್ನು ನಿಲ್ಲಿಸುತ್ತೇನೆ; ಆದರೆ ನಿಜವಾದ ಸಮಸ್ಯೆ ರಷ್ಯಾ-ಉಕ್ರೇನ್ ಯುದ್ಧವಲ್ಲ, ಬದಲಾಗಿ ಇಸ್ಲಾಮಿಕ್ ಭಯೋತ್ಪಾದನೆಯಾಗಿದೆ. ಇಂದು ಜಗತ್ತಿನಾದ್ಯಂತ ಈ ಭಯೋತ್ಪಾದನೆ ಕ್ಯಾನ್ಸರ್‌ನಂತೆ ಹರಡುತ್ತಿದೆ. ನಾನು ಅಮೇರಿಕಾದ ಅಧ್ಯಕ್ಷನಾಗಿದ್ದಾಗ ಇಸ್ಲಾಮಿಕ್ ಸ್ಟೇಟ್ ಅನ್ನು ನಾಶಪಡಿಸಿದೆ. ನಾನು ಇಸ್ಲಾಮಿಕ್ ಭಯೋತ್ಪಾದನೆಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಅಮೆರಿಕದ ಮಾಜಿ ಅಧ್ಯಕ್ಷ ಹಾಗೂ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಈ ಕುರಿತು ‘ಪಾಂಚಜನ್ಯ’ ಪತ್ರಿಕೆಯು ಪೋಸ್ಟ್ ಅನ್ನು ಪ್ರಸಾರ ಮಾಡಿದೆ.
ಸಂಪಾದಕೀಯ ನಿಲುವುಭಾರತವು ಇಸ್ಲಾಮಿಕ್ ಭಯೋತ್ಪಾದನೆಯಿಂದ ಹೆಚ್ಚು ನರಳುತ್ತಿದ್ದರೂ, ಭಾರತದ ಯಾವ ರಾಜಕೀಯ ನಾಯಕನೂ ಇಂತಹ ಹೇಳಿಕೆ ನೀಡಲು ಧೈರ್ಯ ಮಾಡುವುದಿಲ್ಲ ! ಅದಕ್ಕೆ ತದ್ವಿರುದ್ಧವಾಗಿ ‘ಭಯೋತ್ಪಾದನೆಗೆ ಧರ್ಮವಿಲ್ಲ’ ಎಂದು ಹೇಳಿ ಭಾರತೀಯರನ್ನು ವಂಚಿಸಲಾಗುತ್ತಿದೆ ! |