‘ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ’ ಪ್ರಕ್ರಿಯೆಯ ಬಗ್ಗೆ ಸನಾತನ ಆಶ್ರಮದ ಶೇ. ೬೭ ಆಧ್ಯಾತ್ಮಿಕ ಮಟ್ಟದ ಸೌ. ಸುಪ್ರಿಯಾ ಮಾಥೂರರಿಂದ ಶ್ರೀಮತಿ ಅಶ್ವಿನಿ ಪ್ರಭು (ಆಧ್ಯಾತ್ಮಿಕ ಮಟ್ಟ ಶೇ. ೬೨) ಇವರಿಗೆ ಕಲಿಯಲು ಸಿಕ್ಕಿದ ಅಂಶಗಳು !

ಸೌ. ಸುಪ್ರಿಯಾ ಮಾಥೂರ

೨೦೧೯ ರಲ್ಲಿ ಶ್ರೀಮತಿ ಅಶ್ವಿನಿ ಪ್ರಭು (ಆಧ್ಯಾತ್ಮಿಕ ಮಟ್ಟ ಶೇ. ೬೨)ಇವರು ಸ್ವಭಾವದೋಷ ಹಾಗೂ ಅಹಂ ನಿರ್ಮೂಲನೆ ಪ್ರಕ್ರಿಯೆಗಾಗಿ ಗೋವಾದ ರಾಮನಾಥಿಯ ಸನಾತನ ಆಶ್ರಮಕ್ಕೆ ಬಂದಿದ್ದರು. ಸೌ. ಸುಪ್ರಿಯಾ ಮಾಥೂರರು (ಆಧ್ಯಾತ್ಮಿಕ ಮಟ್ಟ ಶೇ. ೬೭) ಪೂರ್ಣವೇಳೆ ಸಾಧನೆ ಮಾಡುವವರಿಗೆ ಪ್ರಕ್ರಿಯೆಯನ್ನು ಮಾಡಿಸುತ್ತಾರೆ. ಈ ಪ್ರಕ್ರಿಯೆಯ ಸಂದರ್ಭದಲ್ಲಿ ಶ್ರೀಮತಿ ಅಶ್ವಿನಿ ಪ್ರಭು ಹಾಗೂ ಇತರ ಸಾಧಕರಿಂದಾದ ತಪ್ಪುಗಳು ಹಾಗೂ ಮನಸ್ಸಿನ ಪ್ರಕ್ರಿಯೆಯ ಪ್ರಸಂಗಗಳನ್ನು ಅವರು ಹೇಳಿದಾಗ ಸೌ. ಸುಪ್ರಿಯಾ ಮಾಥೂರರು ಸಾಧಕರಿಗೆ ಮುಂದಿನ ದೃಷ್ಟಿಕೋನವನ್ನು ನೀಡಿದರು. ಶ್ರೀಮತಿ ಅಶ್ವಿನಿ ಪ್ರಭು ಇವರಿಗೆ ಪ್ರಕ್ರಿಯೆಯಿಂದ ಕಲಿಯಲು ಸಿಕ್ಕಿದ ಅಂಶಗಳನ್ನು ಮುಂದೆ ಕೊಡಲಾಗಿದೆ. ೨೫/೩೯ ನೇ ಸಂಚಿಕೆಯಲ್ಲಿ ಅದರ ಕೆಲವು ಭಾಗ ನೋಡಿದೆವು. ಇಂದು ಈ ಲೇಖನದ ಅಂತಿಮ ಭಾಗವನ್ನು ನೋಡೋಣ.   

(ಭಾಗ ೮)

ಹಿಂದಿನ ಸಂಚಿಕೆ ಓದಲು ಇಲ್ಲಿ ಕ್ಲಿಕ್ ಮಾಡಿ : https://sanatanprabhat.org/kannada/117434.html
ಶ್ರೀಮತಿ ಅಶ್ವಿನಿ ಪ್ರಭು

೨೦. ಪ್ರಸಂಗ – ಸಹಸಾಧಕರು ಮಾತನಾಡಿದ ನಂತರ ಮೊಬೈಲ್‌ ಮೈಕ್‌ ಮ್ಯೂಟ್‌ ಇರುವುದರಿಂದ ಮತ್ತು ಪ್ರಶ್ನೆಗೆ ಉತ್ತರ ನೀಡದೇ ಇರುವುದರಿಂದ ಪ್ರತಿಕ್ರಿಯೆ ಬರುವುದು

೨೦ ಅ. ದೃಷ್ಟಿಕೋನ

೧. ಇಂತಹ ಪ್ರತಿಕ್ರಿಯೆ ಎಲ್ಲೆಲ್ಲಿ ಬರುತ್ತದೆ ? ಅದನ್ನು ನೋಡಬೇಕು

೨. ಇದರಲ್ಲಿ ನನಗೇನು ಅನಿಸುತ್ತದೆ ? ಇದರ ಕಡೆಗೆ ಹೆಚ್ಚು ಗಮನ ನೀಡಿದರೆ; ಕಲಿಯುವ ಮತ್ತು ಪರಿಸ್ಥಿತಿ ತಿಳಿದುಕೊಳ್ಳುವ ಪ್ರಯತ್ನ ಆಗುತ್ತದೆ. ಕಲಿಯುವ ವೃತ್ತಿ ಕಡಿಮೆ ಇರುವುದರಿಂದ ಅಹಂಗೆ ಧಕ್ಕೆ ಬರಬಾರದೆಂದು, ಅದರ ಕಡೆಗೆ ಹೆಚ್ಚು ಗಮನ ಹೋಗುತ್ತದೆ. ಕೆಲವು ಪ್ರಸಂಗದಲ್ಲಿ ಪ್ರತಿಕ್ರಿಯೆ ವ್ಯಕ್ತಪಡಿಸುವ ಬದಲು ಸುಲಭವಾಗಿ ಹೇಳುವ ಪ್ರಯತ್ನ ಆಗಬೇಕು.

೩. ‘ಸ್ವ’ದ ಮಹತ್ವ ಎಲ್ಲಿಯೂ ಕಡಿಮೆ ಆಗಬಾರದು ಎಂಬ ಅಹಂನ ವಿಚಾರವಿದ್ದರೆ ನಮ್ಮೆದುರಿನ ವ್ಯಕ್ತಿ ಹೇಗೆ ಹೇಳುತ್ತಾರೆ ? ಎಂಬ ಪದ್ಧತಿಯ ಕಡೆಗೆ ಗಮನ ಹೋಗುತ್ತದೆ; ಏಕೆಂದರೆ ನಮ್ಮ ಗಮನ ಎಲ್ಲಾ ಇತರರ ಸ್ವಭಾವದೋಷಗಳ ಕಡೆಗೆ ಇರುತ್ತದೆ. ಕಲಿಯುವ ಪ್ರವೃತ್ತಿ ಇದ್ದಲ್ಲಿ ಎದುರಿನ ವ್ಯಕ್ತಿ ಏನನ್ನು ಹೇಳುತ್ತಿದ್ದಾರೆ ? ಎಂಬತ್ತ ಗಮನ ಇರುತ್ತದೆ. ಅಲ್ಲಿ ಕಲಿಯುವ ಭಾಗ ಹೆಚ್ಚಾಗುತ್ತದೆ.

೪. ಇತರರ ಸ್ವಭಾವದೋಷಗಳತ್ತಲೇ ಹೆಚ್ಚು ಗಮನವಿದ್ದಲ್ಲಿ ಪ್ರಾಯಶ್ಚಿತ್ತ ತೆಗೆದುಕೊಳ್ಳಬೇಕು. ಇತರರನ್ನು ಅರ್ಥ ಮಾಡಿಕೊಳ್ಳುವುದು, ಅವರನ್ನು ಅರಿತುಕೊಳ್ಳುವ ಪ್ರಮಾಣವನ್ನು ಹೆಚ್ಚಿಸಬೇಕು.

೨೧. ಪ್ರಸಂಗ – ಕ್ಷಮೆಯಾಚನೆ ಮಾಡುವಾಗ ಪೂರ್ಣಪ್ರಸಂಗ ಹೇಳದಿರುವುದು ಅಥವಾ ಕ್ಷಮಾಯಾಚನೆ ಮಾಡುವಾಗ ಸ್ವಂತಕ್ಕೆ ರಿಯಾಯಿತಿ ಕೊಟ್ಟು ಹೇಳುವುದು ಹೆಚ್ಚು ಇರುತ್ತದೆ.

೨೧ ಅ. ದೃಷ್ಟಿಕೋನ

೧. ಕ್ಷಮೆಯಾಚನೆ ಮಾಡುವಾಗ ತನ್ನ ಅನುಕೂಲಕ್ಕೆ ತಕ್ಕಂತೆ ಹೇಳುವುದು

೨. ಪೂರ್ಣ ಪ್ರಸಂಗ ಹೇಳದೇ ಇರುವ ಕಾರಣ ಏನು ? ಎಂದು ಚಿಂತನೆ ಆಗಬೇಕು.

೩. ಸಾಧಕರು ಪೂರ್ಣ ಪ್ರಸಂಗ ಮರೆಮಾಚುತ್ತಿದ್ದಲ್ಲಿ ಅಪ್ರಾಮಾಣಿಕತೆ. ಅದಕ್ಕಾಗಿ ಪುನಃ ಸೇವೆಯ ಸ್ಥಳದಲ್ಲಿ ಮತ್ತು ಸಾಧಕರೆದುರು ಪೂರ್ಣ ತಪ್ಪು ಹೇಳಿ ಕ್ಷಮಾಯಾಚನೆ ಮಾಡಬೇಕು.

೪. ಕ್ಷಮೆಯಾಚನೆ ಮಾಡುವಾಗ ಪ್ರಸಂಗ ಪೂರ್ಣವಾಗಿ ಹೇಳದಿರುವುದು, ಎಂದರೆ ಮನಸ್ಸಿಗನುಸಾರ ಮಾಡುವುದು. ನನಗೆ ಹೇಗೆ ಬೇಕು ಹಾಗೆ, ಎಂದರೆ ಮನಸ್ಸಿಗನುಸಾರ ಮಾಡುವುದು. ನನಗೆ ಹೇಗೆ ಬೇಕು ಹಾಗೆ ಮಾಡುವುದು. ಸುಲಭ ಇರುವುದನ್ನು ಮಾತ್ರ ಹೇಳುವುದು; ಆದರೆ  ಪ್ರತ್ಯಕ್ಷ ಭಗವಂತನು ನಮ್ಮನ್ನು ಪ್ರತಿಕ್ಷಣ ನೋಡುತ್ತಿರುತ್ತಾನೆ.

೫. ಇಷ್ಟು ಚಿಕ್ಕ ವಿಷಯದಲ್ಲಿ ಇಷ್ಟು ಅಪ್ರಾಮಾಣಿಕತನವಿದ್ದರೆ ಮುಂದೆ ದೊಡ್ಡ ಸ್ವಭಾವದೋಷದ ಬಗ್ಗೆ ಹೇಗೆ ಆಗುವುದು ?

ಇಲ್ಲಿ ನಾನು ಕ್ಷಮಯಾಚನೆ ಮಾಡಿದೆ, ಇದಕ್ಕಿಂತಲೂ ನಾನು ಏನು ಮರೆಮಾಚಿದ್ದೇನೆ ? ಅದನ್ನು ಅವರಿಗೆ ಹೇಳಿ ಕ್ಷಮಾಯಾಚನೆ ಮಾಡುವುದು ಅಪೇಕ್ಷಿತವಿರುತ್ತದೆ.

೨೨. ಪ್ರಸಂಗ – ತುರ್ತಾಗಿ ಹೊರಗೆ ಹೋಗುವ ಪ್ರಸಂಗ ಬಂದಾಗ ಪ್ರಕ್ರಿಯೆ ಆಗುವುದಿಲ್ಲ

೨೨. ಅ. ದೃಷ್ಟಿಕೋನ

೧. ಈ ಪ್ರಸಂಗದಲ್ಲಿ ‘ಪ್ರಕ್ರಿಯೆ ಆಗಬಾರದೆಂದು ಮನಸ್ಸು ರಿಯಾಯ್ತಿ ತೆಗೆದುಕೊಳ್ಳುತ್ತಿದೆ’, ಇದು ತಕ್ಷಣ ಗಮನಕ್ಕೆ ಬರಬೇಕು.

೨. ನಾವು ಎಲ್ಲಿದ್ದರೂ, ಎಲ್ಲಿಗೆ ಹೋದರು, ಪ್ರಾರ್ಥನೆ, ಕೃತಜ್ಞತೆ, ಮತ್ತು ಆತ್ಮನಿವೇದನೆ ಕಡೆಗೆ ಸತತ ಗಮನ ನೀಡಬೇಕು.

೩. ಗಡಿಬಿಡಿ ಇತ್ತು ಎನ್ನುವುದು ಎಂದರೆ ಸಮರ್ಥನೆ ಮಾಡುವುದು. ಅದರ ಬದಲು ನನ್ನಿಂದ ಇಂದು ಪ್ರಯತ್ನ ಆಗಿಲ್ಲ, ಹೀಗೆ ಹೇಳುವುದು ಅಂದರೆ ಪ್ರಾಮಾಣಿಕತನವಾಗಿದೆ.

೪. ತಪ್ಪನ್ನು ಸಹ ತತ್ತ್ವನಿಷ್ಠರಾಗಿ ಹೇಳಲು ಕಲಿಯಬೇಕು. ತಪ್ಪನ್ನು ಸೌಮ್ಯ ಮಾಡಿ ಹೇಳುವುದು ಎಂದರೆ ಅಹಂ  ಕಾಪಾಡುವುದು. ಆದ್ದರಿಂದ ಅಲ್ಪಸಂತುಷ್ಟಿ ಬರುತ್ತದೆ.

೫. ನಾನು ಸರಿ ಇದ್ದೇನೆ, ಎಂದು ಮನಸ್ಸಿನ ಮೂಲೆಯಲ್ಲಿ ಇರುತ್ತದೆ. ತಪ್ಪನ್ನು ಇದ್ದ ಹಾಗೆ ಹೇಳುವುದರಿಂದ ಸಾಧನೆಯಲ್ಲಿನ ಆನಂದ ಸಿಗಬಲ್ಲದು, ಇಲ್ಲವಾದರೆ ಸ್ವ ಕಾಪಾಡುತ್ತಾ ಮತ್ತು ರಿಯಾಯ್ತಿ ಪಡೆಯುತ್ತಾ ಸಾಧನೆ ಮಾಡುವುದರಿಂದ ಸಾಧನೆಯ ವೇಗ ಕಡಿಮೆ ಆಗುತ್ತದೆ. ಮುಂದೆ ಮುಂದೆ ಮನಸ್ಸು ಬಹಿರ್ಮುಖವಾಗಿ ಇತರರ ತಪ್ಪುಗಳತ್ತಲೇ ನೋಡತೊಡಗುತ್ತದೆ

– ಶ್ರೀಮತಿ ಅಶ್ವಿನಿ ಪ್ರಭು, ಮಂಗಳೂರು.   

(ಮುಕ್ತಾಯ)