ಸೂಕ್ಷ್ಮ ಪರೀಕ್ಷಣೆಯ ಇನ್ನೂ ಮುಂದಿನ ಹಂತ, ಅಂದರೆ ಗುರುತತ್ತ್ವದಿಂದ ನಿರ್ಗುಣ ಈಶ್ವರೀ ತತ್ತ್ವದೆಡೆಗೆ ಸಾಗುವ ಬಗ್ಗೆ ಪರಾತ್ಪರ ಗುರು ಡಾಕ್ಟರರು ನೀಡಿದ ಬೋಧನೆ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

೧. ಪರಾತ್ಪರ ಗುರು ಡಾಕ್ಟರರಲ್ಲಿ ಸಾಧಕರಿಗೆ ಕಲಿಸುವ ತಳಮಳ ಅತ್ಯಧಿಕವಾಗಿದೆ, ಆದುದರಿಂದ ಅವರ ಕಲಿಸುವಿಕೆಯ ವೇಗವೂ ಅತ್ಯಧಿಕವಾಗಿದೆ

‘ಅಧ್ಯಾತ್ಮದಲ್ಲಿ ಒಳ್ಳೆಯ ಗುರುಗಳು ಲಭಿಸುವುದು’, ಇದು ಶಿಷ್ಯನ ಭಾಗ್ಯವೇ ಆಗಿರುತ್ತದೆ. ಈ ಘೋರ ಕಲಿಯುಗದಲ್ಲಿ ನಮಗೆ, ಸಾಧಕರಿಗೆ ಪರಾತ್ಪರ ಗುರು ಡಾಕ್ಟರರಂತಹ ಅವತಾರಿ ಗುರುಗಳು ಲಭಿಸುವುದೆಂದರೆ, ಇದಕ್ಕಿಂತ ದೊಡ್ಡ ಭಾಗ್ಯ ಬೇರೇನಿದೆ ? ಪರಾತ್ಪರ ಗುರು ಡಾಕ್ಟರರಲ್ಲಿ ಸಾಧಕರಿಗೆ ಕಲಿಸುವ ತಳಮಳ ಎಷ್ಟಿದೆ ಎಂದರೆ, ಅವರಿಗೆ ಕೂಡಲೇ ಕಲಿಯುವ ಮತ್ತು ಅದಕ್ಕನುಸಾರ ಕೃತಿಯನ್ನು ಮಾಡುವ ಸಾಧಕರು ಇಷ್ಟವಾಗುತ್ತಾರೆ. ಪರಾತ್ಪರ ಗುರು ಡಾಕ್ಟರರು ಅವರನ್ನು ತುಂಬಾ ಪ್ರೋತ್ಸಾಹಿಸುತ್ತಾರೆ. ಗುರುದೇವರ ಕಲಿಸುವ ವೇಗ ಎಷ್ಟಿದೆ ಎಂದರೆ ಅವರ ವೇಗದೊಂದಿಗೆ ಧಾವಿಸುವುದು ಸಾಮಾನ್ಯ ಸಾಧಕನಿಗೆ ಸಾಧ್ಯವಿಲ್ಲ ಎಂಬುದನ್ನು ಇಂದಿನತನಕ ನಾನು ಅನೇಕ ಬಾರಿ ಅನುಭವಿಸಿದ್ದೇನೆ. ಇಂತಹ ಸಮಯದಲ್ಲಿ ‘ಅವರ ಕಲಿಕೆಯೊಂದಿಗೆ ಧಾವಿಸುವ ಶಕ್ತಿ ನಮಗೆ ಸಿಗಲಿ ಮತ್ತು ಅವರ ವಿಚಾರಗಳು ನಮ್ಮ ಬುದ್ಧಿಗೆ ಯೋಗ್ಯ ರೀತಿಯಲ್ಲಿ ಅರ್ಥವಾಗಲಿ’, ಎಂದು ನಾವು ದೇವರಲ್ಲಿ ಪ್ರಾರ್ಥನೆಯನ್ನು ಮಾಡುತ್ತಿದ್ದೆವು.

ಶ್ರೀಚಿತ್‌ಶಕ್ತಿ ಸೌ. ಅಂಜಲಿ ಮುಕುಲ ಗಾಡಗೀಳ

೨. ‘ಯಾರ ದೇಹದಲ್ಲಿಯೂ ಸಿಲುಕದೇ ನಿರ್ಗುಣ ಶಕ್ತಿಯ ಅನುಸಂಧಾನದಲ್ಲಿರಬೇಕು’, ಎಂದು ಪರಾತ್ಪರ ಗುರು ಡಾಕ್ಟರರು ಕಲಿಸುವುದು

ಗುರುದೇವರು, ”ಈ ಬ್ರಹ್ಮಾಂಡದಲ್ಲಿ ಈಶ್ವರನಂತೆ ಬೇರೆ ಯಾರೂ ಇಲ್ಲ. ಅವನು ಶೇ. ೧೦೦ ರಷ್ಟು ಪರಿಪೂರ್ಣನಾಗಿದ್ದಾನೆ. ಅವನನ್ನು ತಲುಪಬೇಕಾದರೆ, ಆ ನಿರ್ಗುಣ ಶಕ್ತಿಯ ಅನುಸಂಧಾನದಲ್ಲಿರಬೇಕು. ಅದನ್ನು ಈಗಿನಿಂದಲೇ ಅಭ್ಯಾಸ (ರೂಢಿ) ಮಾಡಿಕೊಳ್ಳಿ. ಈ ಮನುಷ್ಯಜನ್ಮವು ಅತ್ಯಂತ ಕಡಿಮೆ ಕಾಲಾವಧಿಯದ್ದಾಗಿದೆ. ನಮಗೆ ಯಾವಾಗ ಮರಣ ಬರಲಿದೆ, ಎಂಬುದು ನಮಗೂ ಗೊತ್ತಿಲ್ಲ. ಆದ್ದರಿಂದ ಈಶ್ವರೀ ಶಕ್ತಿಯನ್ನು ಸ್ಮರಿಸಲು ಮತ್ತು ಯಾರ ದೇಹದಲ್ಲಿಯೂ ಸಿಲುಕದಿರಲು ಇಂದಿನಿಂದಲೇ ಪ್ರಯತ್ನಿಸಿರಿ” ಎಂದು ಹೇಳಿ ಅವರು ನಮಗೆ ‘ಹೇ ಈಶ್ವರಾ….’ ಎಂಬ ಶಬ್ದವನ್ನು ಪ್ರತಿಯೊಂದು ಪ್ರಾರ್ಥನೆಯ ಆರಂಭದಲ್ಲಿ ಉಚ್ಚರಿಸಿಯೇ ಮುಂದಿನ ಹಂತದ ಪ್ರಾರ್ಥನೆಯನ್ನು ಮಾಡಲು ಕಲಿಸಿದರು. ಮೊದಲು ನಾವು ಅವರಲ್ಲಿಯೇ ಪ್ರಾರ್ಥನೆ ಮಾಡಿ ಎಲ್ಲ ಕೃತಿಗಳನ್ನು ಮಾಡುತ್ತಿದ್ದೆವು.

೩. ‘ಒಬ್ಬ ದೇವತೆಯ ಮೇಲೆ ಮಾತ್ರವಲ್ಲ, ಎಲ್ಲ ದೇವತೆಗಳು ನಮ್ಮವರೆಂದು ತಿಳಿದು ಸಾಧಕರು ವ್ಯಾಪಕರಾದರೆ ಅಧ್ಯಾತ್ಮದಲ್ಲಿ ಅವರ ಪ್ರಗತಿಯು ಬೇಗನೇ ಆಗುತ್ತದೆ’, ಎಂದು ಪರಾತ್ಪರ ಗುರು ಡಾಕ್ಟರರು ಹೇಳುವುದು

ಪರಾತ್ಪರ ಗುರು ಡಾಕ್ಟರರು, ”ಪ್ರಾರ್ಥನೆಯನ್ನು ಮಾಡುವಾಗ ಪ್ರತಿಯೊಬ್ಬರಲ್ಲಿ ಈಶ್ವರನ ಕುರಿತಾದ ಭಾವದ ಸ್ವರೂಪವು ಬೇರೆ ಬೇರೆ ಆಗಿರುತ್ತದೆ. ಈಶ್ವರನು ಯಾವುದಾದರೊಂದು ರೂಪದಲ್ಲಿ ಸಾಧಕರ ಎದುರಿಗೆ ಬರುತ್ತಾನೆ. ಕೆಲವೊಮ್ಮೆ ಸಾಧಕರಿಗೆ ಅವನು ನನ್ನ ರೂಪದಲ್ಲಿ ಕಾಣಿಸಿಕೊಳ್ಳಬಹುದು, ಕೆಲವೊಮ್ಮೆ ಶ್ರೀ ಗಣೇಶನ ರೂಪದಲ್ಲಿ, ಕೆಲವೊಮ್ಮೆ ಶ್ರೀಕೃಷ್ಣನ ರೂಪದಲ್ಲಿ ಕಾಣಿಸಬಹುದು ! ಆ ಸಮಯದಲ್ಲಿ ಸಾಧಕನಿಗೆ ಯಾವ ದೇವತೆಯ ತತ್ತ್ವದ ಅವಶ್ಯಕತೆ ಇರುತ್ತದೆಯೋ, ಆ ರೂಪದಲ್ಲಿ ಅವನು ಕಾಣಿಸಿಕೊಳ್ಳುತ್ತಾನೆ ಅಥವಾ ಮನಸ್ಸಿಗೆ ಅರಿವಾಗುತ್ತದೆ; ಆದರೆ ವ್ಯಷ್ಟಿ ಸಂಪ್ರದಾಯದಲ್ಲಿ ಹೀಗೆ ಇರುವುದಿಲ್ಲ. ಅವರಿಗೆ ಒಂದೇ ದೇವತೆಯ ಮೇಲೆ ಶ್ರದ್ಧೆಯಿರುತ್ತದೆ ಮತ್ತು ಆ ದೇವತೆಯೇ ಅವರಿಗಾಗಿ ಸರ್ವಸ್ವವಾಗಿರುತ್ತದೆ. ಆದ್ದರಿಂದ ಒಂದು ರೀತಿಯಲ್ಲಿ ಅವರು ಆ ದೇವತೆಯಲ್ಲಿಯೇ ಸಿಲುಕುತ್ತಾರೆ. ನಮಗೆ ಹಾಗೆ ಮಾಡಲಿಕ್ಕಿಲ್ಲ; ನಾವು ಸರ್ವವ್ಯಾಪಿ ಈಶ್ವರನಂತೆ ಆಗಬೇಕಾಗಿದ್ದಲ್ಲಿ ಎಲ್ಲ ದೇವತೆಗಳು ನಮ್ಮವರೆಂದು ಅನಿಸಬೇಕು. ಸಮಷ್ಟಿ ಸಾಧನೆಯನ್ನು ಮಾಡುವಾಗ ಈ ರೀತಿ ವ್ಯಾಪಕ ದೃಷ್ಟಿಕೋನವನ್ನಿಟ್ಟರೆ, ಆಯಾ ದೇವತೆಗಳ ಬಗ್ಗೆ ಶ್ರದ್ಧೆ ಮೂಡಲು ಸಹಾಯವಾಗುತ್ತದೆ. ನಾವು ಈ ರೀತಿ ವ್ಯಾಪಕರಾದರೆ, ಅಧ್ಯಾತ್ಮದಲ್ಲಿ ಬೇಗ ಪ್ರಗತಿಯಾಗುತ್ತದೆ”, ಎಂದು ಹೇಳಿದರು.

೪. ಸನಾತನವು ಒಂದು ಸಂಪ್ರದಾಯವಲ್ಲ, ಎಲ್ಲ ದೇವತೆಗಳ ಆರಾಧನೆ ಮಾಡಲು ಕಲಿಸುವ ಧರ್ಮವಾಗಿದ್ದು ‘ಸತತವಾಗಿ ವರ್ತಮಾನದಲ್ಲಿರಿ’, ಎಂಬ ಬೋಧನೆಯಿಂದ ಪರಾತ್ಪರ ಗುರು ಡಾಕ್ಟರರು ಸಾಧಕರಿಗೆ ‘ಕಾಲ’ ಹೆಸರಿನಲ್ಲಿಯೇ ಗುರು ಮಾಡಿಕೊಟ್ಟಿರುವುದು

ಪರಾತ್ಪರ ಗುರು ಡಾಕ್ಟರರ ಈ ರೀತಿಯ ಬೋಧನೆಯ ನಂತರ ನಮ್ಮ ಪರೀಕ್ಷಣೆಯಲ್ಲಿ ‘ಹೇ ಈಶ್ವರಾ, ನಮಗೆ ಇಂತಹ ಒಂದು ವಿಷಯವನ್ನು ಕಲಿಸು’, ಎಂಬ ಶಬ್ದವು ಬರತೊಡಗಿತು. ಗುರುಗಳು ನಮ್ಮನ್ನು ನಿರ್ಗುಣ ತತ್ತ್ವದ ಕಡೆಗೆ ಆದಷ್ಟು ಬೇಗನೇ ಹೇಗೆ ಕರೆದುಕೊಂಡು ಹೋಗುತ್ತಿದ್ದಾರೆ ನೋಡಿ ! ಸನಾತನದ ಯಾವುದೇ ಸಾಧಕನನ್ನು ನೋಡಿ, ಅವನಿಗೆ ಎಲ್ಲ ದೇವರ ಬಗ್ಗೆ ವಿಶೇಷ ಪ್ರೀತಿ (ಆತ್ಮೀಯತೆ) ಅನಿಸುತ್ತದೆ. ಅನೇಕ ಜನರು ನಮಗೆ, ”ನಿಮ್ಮ ಸನಾತನ ಸಂಪ್ರದಾಯದ ದೇವತೆ ಯಾವುದು ?” ಎಂದು ಕೇಳುತ್ತಾರೆ. ಆಗ ನಾವು ಅವರಿಗೆ, ”ನಮ್ಮಲ್ಲಿ ಯಾವುದೇ ವಿಶಿಷ್ಟ ದೇವತೆ ಎಂದೇನಿಲ್ಲ. ಸನಾತನವು ಸಂಪ್ರದಾಯವಲ್ಲ; ಅದು ಎಲ್ಲ ದೇವತೆಗಳ ಆರಾಧನೆಯ ಮಹತ್ವವನ್ನು ಹೇಳುವ ಧರ್ಮವಾಗಿದೆ” ಎಂದು ಉತ್ತರ ನೀಡುತ್ತೇವೆ.

ದತ್ತಾತ್ರೇಯರು ಹೇಗೆ ೨೪ ಗುಣ ಗುರುಗಳನ್ನು ಮಾಡಿಕೊಂಡಿದ್ದರೋ, ನಮ್ಮದೂ ಅದೇ ರೀತಿಯಿದೆ. ವರ್ತಮಾನ ಸ್ಥಿತಿಯಲ್ಲಿ ನಾವು ಪ್ರತಿಯೊಬ್ಬರಿಂದ ಏನಾದರೂ ಕಲಿಯುತ್ತಿರುತ್ತೇವೆ ಮತ್ತು ಅವರೇ ನಮಗೆ ಆ ಕಾಲಕ್ಕಾಗಿ ಗುರುಗಳಾಗಿರುತ್ತಾರೆ. ಕಾಲವನ್ನೇ ಗುರುಗಳೆಂದು ಮಾಡಿಕೊಂಡರೆ, ಸರ್ವವ್ಯಾಪಕರಾಗಲು ಎಷ್ಟು ಸಮಯ ಬೇಕಾಗುತ್ತದೆ, ಇದನ್ನು ನಮಗೆ ‘ಸತತವಾಗಿ ವರ್ತಮಾನಕಾಲದಲ್ಲಿರಬೇಕು’, ಈ ವಾಕ್ಯದಿಂದ ಪರಾತ್ಪರ ಗುರು ಡಾಕ್ಟರರು ಕಲಿಸಿದರು. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ‘ಸತತವಾಗಿ ವರ್ತಮಾನಕಾಲದಲ್ಲಿರಬೇಕು’, ಈ ಬೋಧನೆಯಿಂದ ಪರಾತ್ಪರ ಗುರು ಡಾಕ್ಟರರು ನಮಗೆ ‘ಕಾಲ’ವನ್ನೇ ಗುರುಗಳನ್ನಾಗಿ ಮಾಡಿಕೊಟ್ಟಿದ್ದಾರೆ.

ಈ ರೀತಿ ಪರಾತ್ಪರ ಗುರು ಡಾಕ್ಟರರು ನಮ್ಮ ಅಧ್ಯಾತ್ಮಿಕ ಪ್ರವಾಸವನ್ನು ಸೂಕ್ಷ್ಮ ಪರೀಕ್ಷಣೆಯಿಂದ ನಿಧಾನವಾಗಿ ನಿರ್ಗುಣ ಈಶ್ವರನನ್ನು ಗುರುತಿಸುವ ವರೆಗಿನ ಹಂತದತ್ತ ಒಯ್ದರು.’

(ಮುಂದುವರಿಯುವುದು)

– ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ, ಚೆನ್ನೈ, ತಮಿಳುನಾಡು. (೬.೨.೨೦೨೨)