ಸಂತರು ಮತ್ತು ಮಹರ್ಷಿಗಳ ಆಧ್ಯಾತ್ಮಿಕ ಸ್ತರದ ಸಹಾಯದಿಂದಲೇ ಹಿಂದೂ ರಾಷ್ಟ್ರದ ಸ್ಥಾಪನೆ ಸಾಧ್ಯ ! – ಪರಾತ್ಪರ ಗುರು ಡಾ. ಆಠವಲೆ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

೧. ಅಖಿಲ ಬ್ರಹ್ಮಾಂಡವನ್ನು ಸೃಷ್ಟಿಸಲು ಈಶ್ವರನ ಕೇವಲ ಒಂದು ಸಂಕಲ್ಪ ಸಾಕು

‘ಆಧ್ಯಾತ್ಮಿಕ ಸ್ತರದಲ್ಲಿ ಕಾರ್ಯವು ಹೇಗೆ ನಡೆಯುತ್ತದೆ ?’, ಎಂಬುದನ್ನು ತಿಳಿದುಕೊಳ್ಳೋಣ. ಈಶ್ವರನು ಅನಂತ ಕೋಟಿ ಬ್ರಹ್ಮಾಂಡವನ್ನು ಸೃಷ್ಟಿಸಿದ್ದಾನೆ. ‘ಈಶ್ವರನು ಒಂದೊಂದು ಕಲ್ಲನ್ನು ಸೃಷ್ಟಿಸಿ ನಂತರ ಅವುಗಳಿಂದ ಪರ್ವತವನ್ನು ತಯಾರಿಸಿದನು’, ಹೀಗಿರುತ್ತದೆಯೇ ? ಈಶ್ವರನು ಕೇವಲ ಸಂಕಲ್ಪ ಮಾಡಿದನು, ‘ಎಕೋಹಮ್‌ | ಬಹುಸ್ಯಾಮ್‌ |’ ಅಂದರೆ ‘ನಾನೊಬ್ಬನಿದ್ದೇನೆ ಮತ್ತು ನಾನು ಅನಂತ ರೂಪಗಳಲ್ಲಿ ಪ್ರಕಟನಾಗುತ್ತೇನೆ.’ ಅನಂತರ ಅಖಿಲ ಬ್ರಹ್ಮಾಂಡದ ಸೃಷ್ಟಿಯಾಯಿತು.

ಪ.ಪೂ. ನಾನಾ (ನಾರಾಯಣ) ಕಾಳೆಗುರುಜಿ

೨. ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯದಲ್ಲಿ ಸಂತರ ಮಹತ್ವ

೨ ಅ. ಶೇ. ೭೦ ರಷ್ಟು ಆಧ್ಯಾತ್ಮಿಕ ಮಟ್ಟವಿರುವ ಸಂತರು : ಓರ್ವ ವ್ಯಕ್ತಿಯ ಆಧ್ಯಾತ್ಮಿಕ ಮಟ್ಟ ಶೇ. ೭೦ ರಷ್ಟು ಆದಾಗ ಆ ವ್ಯಕ್ತಿಯು ಸಂತಪದವಿಯನ್ನು ಪ್ರಾಪ್ತಮಾಡಿಕೊಳ್ಳುತ್ತಾನೆ. ಇಂತಹ ಸಂತರು ಈಶ್ವರನಲ್ಲಿ ಪ್ರಾರ್ಥಿಸಿದಾಗ ಈಶ್ವರ ಅವರ ಪ್ರಾರ್ಥನೆಯನ್ನು ಕೇಳುತ್ತಾನೆ; ಏಕೆಂದರೆ ಆ ಸಂತರು ಈಶ್ವರನ ಅನುಸಂಧಾನದಲ್ಲಿರುತ್ತಾರೆ.

೨ ಆ. ಶೇ. ೮೦ ರಷ್ಟು ಆಧ್ಯಾತ್ಮಿಕ ಮಟ್ಟವಿರುವ ಸಂತರು : ಇವರಿಗೆ ಪ್ರಾರ್ಥನೆ ಮಾಡುವ ಆವಶ್ಯಕತೆಯೇ ಇರುವುದಿಲ್ಲ. ಅವರ ಮನಸ್ಸಿನಲ್ಲಿ ‘ಹೀಗೆ ಆಗಬೇಕು, ‘ಹಿಂದೂ ರಾಷ್ಟ್ರದ ಸ್ಥಾಪನೆಯಾಗಬೇಕು’, ಮುಂತಾದ ವಿಚಾರಗಳು ಬರುತ್ತವೆ ಮತ್ತು ಅವರ ಈ ಸಂಕಲ್ಪ ಫಲಪ್ರದವಾಗಿ ಪ್ರತ್ಯಕ್ಷದಲ್ಲಿ ಆ ರೀತಿ ಘಟಿಸತೊಡಗುತ್ತದೆ.

೨ ಇ. ಶೇ. ೯೦ ರಷ್ಟು ಆಧ್ಯಾತ್ಮಿಕ ಮಟ್ಟವಿರುವ ಸಂತರು : ಇವರಿಗೆ ಸಂಕಲ್ಪವನ್ನು ಸಹ ಮಾಡಬೇಕಾಗುವುದಿಲ್ಲ. ಅವರ ಕೇವಲ ಅಸ್ತಿತ್ವದಿಂದಲೇ ಕಾರ್ಯವಾಗುತ್ತದೆ, ಉದಾ. ಪ್ರತಿದಿನ ಸೂರ್ಯನು ಉದಯಿಸುತ್ತಾನೆ. ಅವನು ಎಲ್ಲರಿಗೂ, ‘ನಾನು ಬಂದಿದ್ದೇನೆ. ಈಗ ಎದ್ದೇಳಿ !’ ಎಂದು ಹೇಳುವುದಿಲ್ಲ. ಸೂರ್ಯನ ಅಸ್ತಿತ್ವದಿಂದಲೇ ಪಶು-ಪಕ್ಷಿಗಳು, ಸಂಪೂರ್ಣ ಮನುಷ್ಯಕುಲ ಮುಂತಾದ ಎಲ್ಲರೂ ಎಚ್ಚರಗೊಳ್ಳುತ್ತಾರೆ. ಹೂವುಗಳಲ್ಲಿ ಜೇನುತುಪ್ಪ ಇರುತ್ತದೆ ಮತ್ತು ಜೇನುತುಪ್ಪದ ಅಸ್ತಿತ್ವದಿಂದಲೇ ಚಿಟ್ಟೆಗಳು ತಾವಾಗಿಯೇ ಹೂವುಗಳ ಹತ್ತಿರ ಬರುತ್ತವೆ. ಹೂವುಗಳು ಚಿಟ್ಟೆ ಗಳನ್ನು ಕರೆಯುವುದಿಲ್ಲ. ಸಂತರ ಕಾರ್ಯವೂ ಹೀಗೇ ಇರುತ್ತದೆ. ಶೇ. ೯೦ ರಷ್ಟು ಆಧ್ಯಾತ್ಮಿಕ ಮಟ್ಟವಿರುವ ಸಂತರ ಅಸ್ತಿತ್ವದಿಂದಲೇ ಪೃಥ್ವಿ ಮತ್ತು ಮನುಕುಲದ ಕೆಟ್ಟ ಪ್ರಾರಬ್ಧವು ನಾಶವಾಗುತ್ತದೆ.

೩. ಹಿಂದೂ ರಾಷ್ಟ್ರದ ಸ್ಥಾಪನೆಯಾಗಲು ಅನೇಕ ಸಂತರು ಮಾಡಿದ ಸಹಾಯ !

೩ ಅ. ಬಾರ್ಶಿ (ಸೊಲ್ಲಾಪುರ)ಯ ಪ.ಪೂ. ಕೈ. ಅಶ್ವಮೇಧಯಾಜಿ ನಾನಾ (ನಾರಾಯಣ) ಕಾಳೆಗುರುಜಿ ಇವರು ಗೋವಾದ, ರಾಮನಾಥಿಯ ಸನಾತನದ ಆಶ್ರಮಕ್ಕೆ ಬಂದು ಅಶ್ವಮೇಧ ಯಜ್ಞದ ಸಂಕಲ್ಪ ಮಾಡುವುದು : ಗೋವಾದಲ್ಲಿನ ರಾಮನಾಥಿ ಆಶ್ರಮದಲ್ಲಿ ಬಾರ್ಶಿ (ಸೊಲ್ಲಾಪುರ ಜಿಲ್ಲೆ, ಮಹಾರಾಷ್ಟ್ರ)ಯ ಅಶ್ವಮೇಧಯಾಜಿ ಪ.ಪೂ. ನಾನಾ ಕಾಳೆಗುರುಜಿ ಇವರು ‘ಅಶ್ವಮೇಧ ಯಜ್ಞದ ಸಂಕಲ್ಪವಿಧಿ’ಯನ್ನು ಮಾಡಿದರು. ನಿಜವಾಗಿಯೂ ನನಗೆ ಅವರ ಪರಿಚಯವಿರಲಿಲ್ಲ. ಒಂದು ಬಾರಿ ಅವರು ದೂರವಾಣಿ ಕರೆ ಮಾಡಿ, ”ನಾನು ನಾನಾ ಕಾಳೆ ಮಾತನಾಡುತ್ತಿದ್ದೇನೆ. ಗೋವಾದ ನಿಮ್ಮ ಆಶ್ರಮದಲ್ಲಿ ಅಶ್ವಮೇಧ ಯಜ್ಞವನ್ನು ಮಾಡಬೇಕಾಗಿದೆ”, ಎಂದು ಹೇಳಿದರು. ಅವರು ಆ ಸಂಕಲ್ಪವಿಧಿಯನ್ನು ಮಾಡಿದರು.

ಈ ರೀತಿ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಪ್ರತಿಯೊಬ್ಬ ಸಂತರು ತಮ್ಮದೇ ಆದ ರೀತಿಯಲ್ಲಿ ಬಹಳ ಕಾರ್ಯ ಮಾಡುತ್ತಿದ್ದಾರೆ ಮತ್ತು ಅವರಿಂದಾಗಿ ಹಿಂದೂ ರಾಷ್ಟ್ರದ ಸ್ಥಾಪನೆಯಾಗಲಿದೆ. ಸಾಧಕರು ಪ್ರಯತ್ನಿಸುತ್ತಿದ್ದಾರೆ. ಸಾಧಕರು ಮಾಡಿದ ಕಾರ್ಯ ಶಾರೀರಿಕ, ಮಾನಸಿಕ, ಮತ್ತು ಬೌದ್ಧಿಕ ಸ್ತರದ್ದಾಗಿದೆ. ಪ್ರತ್ಯಕ್ಷದಲ್ಲಿ ಈ ಕಾರ್ಯ ಆಧ್ಯಾತ್ಮಿಕ ಸ್ತರದಲ್ಲಾಗಬೇಕು.

(ಮುಂದುವರಿಯುವುದು)

ಪ.ಪೂ. ನಾನಾ (ನಾರಾಯಣ) ಕಾಳೆಗುರುಜಿ