Kanwar Yatra UP : ಕಾವಡ ಯಾತ್ರೆ ದಾರಿಯಲ್ಲಿನ ಆಹಾರ ಪದಾರ್ಥಗಳ ಅಂಗಡಿಯ ಮೇಲೆ ಮಾಲೀಕರ ಹೆಸರು ಕಡ್ಡಾಯ ! – ಯೋಗಿ ಆದಿತ್ಯನಾಥ

ಮುಜಫರನಗರ ಅಷ್ಟೇ ಅಲ್ಲ, ಈಗ ಸಂಪೂರ್ಣ ಉತ್ತರಪ್ರದೇಶಕ್ಕಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಸ್ತುತಿಪರ ಆದೇಶ !

ಲಕ್ಷ್ಮಣಪುರಿ (ಉತ್ತರಪ್ರದೇಶ) – ರಾಜ್ಯದಲ್ಲಿನ ಕಾವಡಾ ಯಾತ್ರೆಯ ದಾರಿಯಲ್ಲಿರುವ ಎಲ್ಲಾ ಆಹಾರ ಪದಾರ್ಥಗಳ ಅಂಗಡಿಯ ಮಾಲೀಕರು ತಮ್ಮ ಹೆಸರನ್ನು ಅಂಗಡಿಯ ಮುಂಭಾಗದಲ್ಲಿ ಬರೆಯಬೇಕು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಆದೇಶ ನೀಡಿದ್ದಾರೆ. ಕಾವಡಾ ಯಾತ್ರಿಯೆ ಪಾವಿತ್ರತೆ ಕಾಪಾಡುವುದಕ್ಕಾಗಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಈ ಹಿಂದೆ ಪೊಲೀಸರಿಂದ ಮುಜಫರ್ ನಗರದಲ್ಲಿನ ಅಂಗಡಿಗಳು, ಢಾಬಾ ಹಾಗೂ ತಳ್ಳುವಗಾಡಿಗಾಗಿ ಈ ಆದೇಶ ನೀಡಲಾಗಿತ್ತು. ಅದಕ್ಕೆ ವಿರೋಧ ಪಕ್ಷದಿಂದ ವಿರೋಧ ವ್ಯಕ್ತವಾದ ಬಳಿಕ ಯೋಗಿ ಅವರು ಕಾವಡಾ ಯಾತ್ರೆಯ ಸಂಪೂರ್ಣ ಮಾರ್ಗದಲ್ಲಿನ ಎಲ್ಲಾ ಅಂಗಡಿಗಳಿಗಾಗಿ ಈ ನಿರ್ಣಯ ಜಾರಿಗೊಳಿಸುವ ನಿರ್ಣಯ ತೆಗೆದುಕೊಂಡಿದ್ದಾರೆ. ಮುಖ್ಯಮಂತ್ರಿಗಳ ಆದೇಶದ ಪ್ರಕಾರ ಪ್ರತಿಯೊಂದು ಆಹಾರ ಪದಾರ್ಥದ ಅಂಗಡಿ ಹಾಗೂ ತಳ್ಳುವಗಾಡಿಯ ಚಾಲಕರು ತಮ್ಮ ಮಾಲೀಕರ ಹೆಸರು ಬರೆಯಬೇಕು. ಈ ಹಿಂದೆ ಉತ್ತರಪ್ರದೇಶದ ಸಚಿವ ಕಪಿಲ್ ದೇವ್ ಅಗ್ರವಾಲ್ ಅವರು, ಕೆಲವು ಮುಸಲ್ಮಾನ ಮಾರಾಟಗಾರರು ಅವರ ಅಂಗಡಿಗಳಿಗೆ ಹಿಂದೂ ದೇವತೆಗಳ ಹೆಸರನ್ನಿಟ್ಟು ಕಾವಡಾ ಯಾತ್ರೆಯಲ್ಲಿ ಮಾಂಸಹಾರ ಮಾರುತ್ತಾರೆ. ಅಂಗಡಿಗಳಿಗೆ ‘ವೈಷ್ಣವ ಢಾಬಾ ಭಂಡಾರ’, ‘ಶಾಕುಂಬರಿ ದೇವಿ ಭೋಜನಾಲಯ’, ಮುಂತಾದ ಹೆಸರುಗಳನ್ನಿಟ್ಟು ಮಾಂಸಹಾರ ವ್ಯಾಪಾರ ಮಾಡುತ್ತಿದ್ದು ಅವರು ತಕ್ಷಣ ಆ ಹೆಸರುಗಳನ್ನು ಬದಲಾಯಿಸಬೇಕೆಂದು ಅವರು ಕರೆ ನೀಡಿದ್ದರು.

ಈ ಆದೇಶವನ್ನು ಸಮರ್ಥಿಸಿದ ಆಲ್ ಇಂಡಿಯಾ ಮುಸ್ಲಿಂ ಜಮಾತ್ ದ ರಾಷ್ಟ್ರೀಯ ಅಧ್ಯಕ್ಷ ಮೌಲಾನಾ ಶಹಬುದ್ದೀನ್ ರಜವಿ ಬರೆಲವಿ

ಮೌಲಾನಾ ಶಹಬುದ್ದೀನ್ ರಜವಿ ಬರೆಲವಿ

ಆಲ್ ಇಂಡಿಯಾ ಮುಸ್ಲಿಂ ಜಮಾತ್ ನ ರಾಷ್ಟ್ರೀಯ ಅಧ್ಯಕ್ಷ ಮೌಲಾನ (ಇಸ್ಲಾಮಿನ ಅಧ್ಯಯನಕಾರ) ಶಹಬುದ್ದೀನ್ ರಜವಿ ಬರೆಲವಿ ಅವರು ಕಾವಡಾ ಯಾತ್ರೆಯ ಮಾರ್ಗದಲ್ಲಿನ ಅಂಗಡಿ ಮಾಲೀಕರು ತಮ್ಮ ಹೆಸರನ್ನು ಬರೆಯಬೇಕೆಂಬ ರಾಜ್ಯ ಸರಕಾರದ ಆದೇಶವನ್ನು ಸಮರ್ಥಿಸಿದ್ದಾರೆ. ಮೌಲಾನಾ ಶಹಬುದ್ದೀನ್ ಅವರು, ಮುಜಫರನಗರ್ ಮತ್ತು ಸಹರಾನ್ಪುರ್ ಜಿಲ್ಲೆಗಳು ಸೂಕ್ಷ್ಮ ಪ್ರದೇಶಗಳಾಗಿವೆ. ಆದ್ದರಿಂದ ಈ ಜಿಲ್ಲೆಗಳಲ್ಲಿ ಉಚಿತ ಬಂದೋಬಸ್ತ್ ಮಾಡುವ ಜವಾಬ್ದಾರಿ ಪೊಲೀಸ್ ಮತ್ತು ಸರಕಾರದ್ದಾಗಿದೆ. ಎಲ್ಲಿಯೂ ಸಂಘರ್ಷ ನಡೆಯಬಾರದು ಮತ್ತು ಯಾತ್ರೆ ಶಾಂತಿಯಿಂದ ನೆರವೇರುವುದಕ್ಕಾಗಿ ಹಾಗೂ ಧಾರ್ಮಿಕ ಸೌಹಾರ್ದತೆ ಕಾಪಾಡುವುದಕ್ಕಾಗಿ ಈ ಆದೇಶವಾಗಿದೆ ಎಂದು ಹೇಳಿದ್ದಾರೆ. ಕಾವಡ ಯಾತ್ರೆಯು ಒಂದು ಧಾರ್ಮಿಕ ಕಾರ್ಯಕ್ರಮವಾಗಿದ್ದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಈ ಧಾರ್ಮಿಕ ಕಾರ್ಯಕ್ರಮದಲ್ಲಿಯೂ ರಾಜಕಾರಣ ಮಾಡುತ್ತಿದ್ದಾರೆ. ಅಖಿಲೇಶ್ ಅವರು ಕಾವಾಡಾ ಯಾತ್ರೆಯ ವೇಳೆ ಹಿಂದೂ ಮುಸಲ್ಮಾನರಲ್ಲಿ ಸಂಘರ್ಷದ ವಾತಾವರಣ ನಿರ್ಮಾಣ ಮಾಡಲು ಯತ್ನಿಸುತ್ತಿದ್ದಾರೆ. ಅಖಿಲೇಶ್ ಅವರು ಧಾರ್ಮಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವುದನ್ನು ನಿಲ್ಲಿಸಬೇಕು. ನಿಮಗೆ ರಾಜಕಾರಣ ಮಾಡಲು ಅನೇಕ ಅವಕಾಶಗಳು ದೊರೆಯುತ್ತವೆ, ಆ ಅವಕಾಶಗಳ ಲಾಭ ಪಡೆದು ರಾಜಕಾರಣ ಮಾಡಿ ನಮ್ಮ ಆಕ್ಷೇಪವಿಲ್ಲ ಎಂದು ಶಹಬುದ್ದೀನ್ ಟೀಕಿಸಿದ್ದಾರೆ.

ಈ ಆದೇಶ ಎಲ್ಲಾ ಅಂಗಡಿದಾರರಿಗಾಗಿದೆ ! – ಮಾಜಿ ಕೇಂದ್ರ ಸಚಿವ ಮುಕ್ತಾರ್ ಅಬ್ಬಾಸ್ ನಕ್ವಿ

ಮಾಜಿ ಕೇಂದ್ರ ಸಚಿವ ಮುಕ್ತಾರ್ ಅಬ್ಬಾಸ್ ನಕ್ವಿ

ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಕೇಂದ್ರ ಸಚಿವ ಮತ್ತು ಭಾಜಪದ ನಾಯಕ ಮುಕ್ತಾರ್ ಅಬ್ಬಾಸ್ ನಕ್ವಿ ಅವರು, ಸೀಮಿತ ಸರಕಾರಿ ಮಾರ್ಗದರ್ಶಕ ತತ್ವದಿಂದ ಈ ಆದೇಶದ ಕುರಿತು ಗದ್ದಲ ನಿರ್ಮಾಣವಾಗಿದೆ. ಉತ್ತರ ಪ್ರದೇಶ ರಾಜ್ಯ ಸರಕಾರವು ನಿರ್ಮಾಣವಾಗಬಹುದಾದ ಧಾರ್ಮಿಕ ಗೊಂದಲಗಳನ್ನು ದೂರಪಡಿಸಿದೆ ಎಂದು ನನಗೆ ಸಂತೋಷವಿದೆ. ಯೋಗಿ ಆದಿತ್ಯನಾಥ ಸರಕಾರವು ಯಾವುದೇ ಒಂದು ನಿರ್ದಿಷ್ಟ ಧರ್ಮದವರಿಗೆ ಈ ಸೂಚನೆ ನೀಡಿಲ್ಲ. ಎಲ್ಲಾ ಅಂಗಡಿದಾರರಿಗಾಗಿ ಈ ಆದೇಶ ನೀಡಲಾಗಿದೆ. ಕಾವಡಾ ಯಾತ್ರೆಯ ಸಮಯದಲ್ಲಿ ಭಕ್ತರು ಅನೇಕ ಆಹಾರ ಪದಾರ್ಥಗಳನ್ನು ಸೇವಿಸುವುದಿಲ್ಲ ಹಾಗಾಗಿ ಅವರ ಶ್ರದ್ಧೆಯನ್ನು ನಾವು ಗೌರವಿಸಬೇಕು ಎಂದರು.

ಹಿಂದೂ-ಮುಸಲ್ಮಾನರ ನಡುವೆ ಅಂತರ ನಿರ್ಮಾಣವಾಗುವುದು – ದೇವಬಂದಿ ಉಲೇಮಾ ಮುಫ್ತಿ ಅಸದ್ ಕಾಸಮಿ

ದೇವಬಂದಿ ಉಲೇಮಾ ಮುಫ್ತಿ ಅಸದ್ ಕಾಸಮಿ

ದೇವಬಂದಿ ಉಲೇಮ ಮುಫ್ತಿ ಅಸದ ಕಾಸಮಿ ಅವರು ಈ ನಿರ್ಣಯವನ್ನು ವಿರೋಧಿಸಿದ್ದು, ಇದರಿಂದ ಎರಡು ಧರ್ಮಗಳಲ್ಲಿ ಅಂತರ ನಿರ್ಮಾಣವಾಗುವುದು ಮತ್ತು ಮತಾಂಧರಿಗೆ ಅವಕಾಶ ದೊರೆಯುವುದು ಎಂದಿದ್ದಾರೆ. ಯಾತ್ರಿಕರು ಹಿಂದೂ ಮತ್ತು ಮುಸಲ್ಮಾನರ ಅಂಗಡಿ ಎಂದು ಭೇದ-ಭಾವ ಮಾಡುವರು. ಆದ್ದರಿಂದ ಈ ಆದೇಶದ ಬಗ್ಗೆ ಸರ್ಕಾರ ಮರು ಚಿಂತನೆ ಮಾಡಬೇಕು; ಯಾಕೆಂದರೆ ಹಿಂದೂಗಳು ಪ್ರತಿ ವರ್ಷ ಕಾವಡಾ ಯಾತ್ರೆಗೆ ಹೋಗುತ್ತಾರೆ, ಆಗ ಮುಸಲ್ಮಾನರು ಅವರಿಗಾಗಿ ವಿಶ್ರಾಂತಿ ಸ್ಥಳವನ್ನು ನಿರ್ಮಿಸುವುದು ಮತ್ತು ಆಹಾರದ ವ್ಯವಸ್ಥೆ ಮಾಡುತ್ತಾರೆ, ಹಾಗೂ ಪುಷ್ಪವೃಷ್ಟಿ ಮಾಡುತ್ತಾರೆ ಎಂಬುದನ್ನು ನೀವು ನೋಡಿರಬಹುದು. ಈಗ ಸರಕಾರದ ಈ ಆದೇಶದಿಂದಾಗಿ ಅವರ ನಡುವೆ ಅಂತರ ನಿರ್ಮಾಣವಾಗುವುದು. (ಸರಕಾರವು ಎಲ್ಲಾ ಅಂಗಡಿದಾರರಿಗಾಗಿ ಈ ಆದೇಶ ನೀಡಿರುವುದರಿಂದ ಈ ರೀತಿಯ ಅಂತರ ನಿರ್ಮಾಣವಾಗುವ ಪ್ರಶ್ನೆಯೇ ಬರುವುದಿಲ್ಲ. ‘ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿಕೊಂಡಂತೆ’ ಎಂಬ ಗಾದೆಯಂತೆ ಯಾರು ಉಗುಳು ಜಿಹಾದ್ ಮಾಡುತ್ತಾರೋ, ಅಂತಹ ಮುಸಲ್ಮಾನರು ತಮ್ಮ ಅಂಗಡಿಗೆ ಹಿಂದೂ ದೇವತೆಗಳ ಹೆಸರನ್ನಿಡುತ್ತಾರೆ, ಹಾಗಾಗಿ ಅವರು ಈ ಆದೇಶವನ್ನು ವಿರೋಧಿಸುತ್ತಾರೆ. ಅಂತವರ ವಿರುದ್ಧ ಕಾಸಮಿ ಏಕೆ ಮಾತನಾಡುತ್ತಿಲ್ಲ ? – ಸಂಪಾದಕರು)

ಸಂಪಾದಕೀಯ ನಿಲುವು

ಕೇವಲ ಕಾವಡಾ ಯಾತ್ರೆಗೆ ಅಷ್ಟೇ ಈ ನಿರ್ಣಯವನ್ನು ಸೀಮಿತಗೊಳಿಸದೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಶಾಶ್ವತವಾಗಿ ಈ ಆದೇಶ ನೀಡಬೇಕು. ಅದಕ್ಕಾಗಿ ಕಾನೂನು ರೂಪಿಸಬೇಕು. ಅಷ್ಟೇ ಅಲ್ಲದೆ, ಸಂಪೂರ್ಣ ದೇಶದಲ್ಲಿ ಕೂಡ ಇಂತಹ ಕಾನೂನನ್ನು ಕೇಂದ್ರ ಸರಕಾರ ರೂಪಿಸಬೇಕೆಂದು ಹಿಂದೂಗಳಿಗೆ ಅನಿಸುತ್ತದೆ !