India Russia Relation : ರಷ್ಯಾದ ಜೊತೆಗೆ ಒಳ್ಳೆಯ ಸಂಬಂಧವಿದೆ ಎಂಬ ಕಾರಣಕ್ಕೆ ಭಾರತದ ಮೇಲೆ ಒತ್ತಡ ಹೇರುವುದು ಅಯೋಗ್ಯ ! – ಅಮೇರಿಕಾ

ಭಾರತದ ಪರ ಮಾತನಾಡುತ್ತಾ ಪಾಶ್ಚಿಮಾತ್ಯ ದೇಶಗಳನ್ನು ಟೀಕಿಸಿದ ರಷ್ಯಾದ ವಿದೇಶಾಂಗ ಸಚಿವ ಸರ್ಗೆಯಿ ಲ್ಯವರೋವ್ಹ್

ಉಕ್ರೇನ್ ರಾಷ್ಟ್ರಾಧ್ಯಕ್ಷ ಝೇಲೆಕ್ಸಿ, ಪ್ರಧಾನಮಂತ್ರಿ ನರೇಂದ್ರ ಮೋದಿ, ರಷ್ಯಾದ ರಾಷ್ಟ್ರಾಧ್ಯಕ್ಷ ವ್ಲಾದಿಮಿರ್ ಪುತಿನ್

ನ್ಯೂಯಾರ್ಕ್ (ಅಮೇರಿಕಾ) – ಭಾರತ ಒಂದು ಮಹಾನ ಶಕ್ತಿಯಾಗಿದೆ ಎಂದು ನನಗೆ ವಿಶ್ವಾಸವಿದೆ. ಅದು ತನ್ನ ರಾಷ್ಟ್ರದ ಹಿತ ನಿರ್ಧರಿಸುತ್ತದೆ ಮತ್ತು ತನ್ನ ಪಾಲುದಾರರನ್ನು ಆಯ್ಕೆ ಮಾಡಿಕೊಳ್ಳುತ್ತದೆ. ಭಾರತದ ಮೇಲೆ ಬಹಳ ಒತ್ತಡವಿದೆ ಎಂಬುದು ನಮಗೆ ತಿಳಿದಿದೆ. ಇದೆ ಸಂಪೂರ್ಣವಾಗಿ ಅಯೋಗ್ಯವಾಗಿದೆ, ಎಂದು ರಷ್ಯಾದ ವಿದೇಶಾಂಗ ಸಚಿವ ಸರ್ಗೆಯಿ ಲ್ಯವರೋವ್ಹ್ ಅವರು ಹೇಳಿಕೆ ನೀಡಿದರು. ರಷ್ಯಾದ ರಾಷ್ಟ್ರಾಧ್ಯಕ್ಷ ವ್ಲಾದಿಮಿರ್ ಪುತಿನ್ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಭೇಟಿಯನ್ನು ಉಕ್ರೇನ್ ಟೀಕಿಸುವುದು ಖಂಡನಿಯ ಎಂದು ಲ್ಯವರೋವ್ಹ್ ಹೇಳಿದರು. ಅವರು ನ್ಯೂಯಾರ್ಕ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.

೧.ಉಕ್ರೇನ್ ರಾಷ್ಟ್ರಾಧ್ಯಕ್ಷ ಝೇಲೆಕ್ಸಿ ಅವರು ಪ್ರಧಾನಮಂತ್ರಿ ಮೋದಿ ಮತ್ತು ಪುತಿನ್ ಅವರ ಭೇಟಿಯನ್ನು ಟೀಕಿಸುತ್ತಾ, ಜಗತ್ತಿನ ದೊಡ್ಡ ಪ್ರಜಾಪ್ರಭುತ್ವದ ನಾಯಕರು ಜಗತ್ತಿನ ದೊಡ್ಡ ಕೊಲೆಯ ಅಪರಾಧಿಯನ್ನು ಮಾಸ್ಕೊದಲ್ಲಿ ತಬ್ಬಿ ಕೊಳ್ಳುವುದನ್ನು ನೋಡುವುದು ಬಹಳ ಖೇದಕರವಾಗಿದೆ. ಇದು ಶಾಂತಿಯ ಪ್ರಯತ್ನಕ್ಕೆ ಆಘಾತವಾಗಿದೆ ಎಂದಿದ್ದರು. ಝೇಲೆಕ್ಸಿ ಅವರ ಈ ಹೇಳಿಕೆಯ ಬಗ್ಗೆ ಭಾರತ ಅಸಮಾಧಾನ ವ್ಯಕ್ತಪಡಿಸಿತ್ತು.

೨. ಉಕ್ರೇನ್ ರಾಷ್ಟ್ರಾಧ್ಯಕ್ಷ ಝೇಲೆಕ್ಸಿ ಅವರ ಹೇಳಿಕೆಯ ಸಂದರ್ಭ ನೀಡುತ್ತಾ ಲ್ಯವರೋವ್ಹ್ ಅವರು ಮಾತನಾಡಿ, ಇಂತಹ ಹೇಳಿಕೆ ಬಹಳ ಅಪಮಾನಕಾರಕವಾಗಿದೆ. ಈ ಬಗ್ಗೆ ಉಕ್ರೇನಿನ ರಾಯಭಾರಿಯನ್ನು ಕರೆದು ಪ್ರಶ್ನಿಸಲಾಯಿತು ಎಂದು ಹೇಳಿದರು. ಉಕ್ರೇನಿನ ಕೆಲವು ರಾಯಭಾರಿಗಳು ಮಾಡಿರುವ ಟೀಕೆಗಳ ಸಂದರ್ಭ ನೀಡುತ್ತಾ ಲ್ಯವರೋವ್ಹ್ ಅವರು, ಈ ರಾಯಭಾರಿಗಳು ರೌಡಿಗಳಂತೆ ವರ್ತಿಸುತ್ತಿದ್ದರು. ಆದ್ದರಿಂದ ಭಾರತ ಎಲ್ಲವನ್ನೂ ಸರಿಯಾಗಿಯೇ ಮಾಡುತ್ತಿದೆ ಎಂದು ನನಗೆ ಅನಿಸುತ್ತಿದೆ ಎಂದರು.

೩.ಲ್ಯವರೋವ್ಹ್ ಅವರು ಮುಂದೆ ಮಾತನಾಡಿ, ಭಾರತದ ವಿದೇಶಾಂಗ ಸಚಿವ ಡಾ. ಎಸ್ ಜಯಶಂಕರ್ ಅವರು ಪಾಶ್ಚಿಮಾತ್ಯ ದೇಶಗಳಿಗೆ ಭೇಟಿ ನೀಡಿದ ನಂತರ ಇಂತಹ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಅವರು ಭಾರತವು ರಷ್ಯಾದಿಂದ ಹೆಚ್ಚು ತೈಲ ಏಕೆ ಖರೀದಿಸುತ್ತಿದೆ ? ಇಂತಹ ಪ್ರಶ್ನೆಗಳಿಗೆ ಸಮಾಧಾನ ನೀಡಿದ್ದಾರೆ. ಕೆಲವು ನಿರ್ಬಂಧಗಳು ಇದ್ದರೂ ಕೂಡ ಪಾಶ್ಚಿಮಾತ್ಯ ದೇಶಗಳು ರಷ್ಯಾದಿಂದ ಈಗಲೂ ಗ್ಯಾಸ್ ಮತ್ತು ತೈಲ ಖರೀದಿಸುವುದನ್ನು ಹೆಚ್ಚಿಸಿರುವ ಅಂಕಿ ಅಂಶಗಳನ್ನು ಜೈ ಶಂಕರ್ ಅವರು ಉಲ್ಲೇಖಿಸಿದ್ದರು. ಭಾರತವು ಯಾರ ಜೊತೆ ಹೇಗೆ ವ್ಯವಹರಿಸಬೇಕು ಮತ್ತು ಸ್ವಂತ ರಾಷ್ಟ್ರದ ಹಿತರಕ್ಷಣೆ ಹೇಗೆ ಮಾಡಬೇಕು ಎಂಬುದನ್ನು ಭಾರತ ಸ್ವತಃ ನಿರ್ಧರಿಸುವುದು ಎಂದರು.