ಸೆಂಗರ್ ಇವರಿಂದ ಸರ್ವೋಚ್ಚ ನ್ಯಾಯಾಲಯದಲ್ಲಿ ಮಧ್ಯಪ್ರವೇಶಕ್ಕೆ ಅರ್ಜಿ !
ಮುಂಬಯಿ – ಮುಸ್ಲಿಮರು, ಕ್ರೈಸ್ತರು ಮತ್ತು ಇತರ ಧರ್ಮಗಳಿಗೆ ಮೀಸಲಾತಿಯ ವಿಷಯವು ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವಾಗ, ಮಹಾರಾಷ್ಟ್ರದಲ್ಲಿ ಪರಿಶಿಷ್ಟ ಜಾತಿ ಮತ್ತು ಇತರ ವರ್ಗಗಳಿಗೆ ಹೇಗೆ ಮೀಸಲಾತಿ ನೀಡಲಾಯಿತು ? ಇದು ಕಾನೂನು ಬಾಹಿರವಾಗಿದೆ. ಅದನ್ನು ರದ್ದು ಮಾಡಿ, ಎಂದು ‘ಹಿಂದೂ ಲಾ ಬೋರ್ಡ್’ನ ಮುಖ್ಯಸ್ಥ ಅಜಯ ಸಿಂಗ್ ಸೆಂಗರ್ ಅವರು ಸುಪ್ರೀಂ ಕೋರ್ಟ್‌ನಲ್ಲಿ ಮಧ್ಯಂತರ ಅರ್ಜಿಯನ್ನು ಸಲ್ಲಿಸಿದ್ದಾರೆ.
ಇದರಲ್ಲಿ, ಅಸ್ಪೃಶ್ಯರ ನೈತಿಕ ಸ್ಥೈರ್ಯ ಹೆಚ್ಚಿಸಲು ಅವರಿಗೆ ಮೀಸಲಾತಿ ಕಲ್ಪಿಸಲಾಗಿದೆ. ದೇಶದ ಮೂಲ ಸಂವಿಧಾನದಲ್ಲಿ ಕೇವಲ ಹಿಂದೂಗಳಿಗೆ ಮಾತ್ರ ಜಾತಿ ಮೀಸಲಾತಿ ನೀಡಲಾಗಿದೆ. ಆದ್ದರಿಂದ, ಹಿಂದೂ ಧರ್ಮವನ್ನು ತ್ಯಜಿಸಿದ ನಂತರ, ಮೀಸಲಾತಿಯಿಂದ ಲಾಭ ಪಡೆಯುವ ಹಿಂದೂಗಳ ಮೀಸಲಾತಿ ತಾನಾಗಿಯೇ ಕೊನೆಗೊಳ್ಳುತ್ತದೆ. ಒಂದೇ ವ್ಯಕ್ತಿಗೆ 2 ಧರ್ಮದ ಲಾಭವನ್ನು ಸರಕಾರ ಹೇಗೆ ನೀಡುತ್ತಿದೆ? ಒಂದೆಡೆ ಅಲ್ಪಸಂಖ್ಯಾತರು ಎಂದು ಆಡಳಿತದ ಸೌಲಭ್ಯಗಳ ಲಾಭ ಪಡೆಯುವುದು, ಮತ್ತೊಂದೆಡೆ ಹಿಂದೂಗಳ ಜಾತಿಯ ಮೀಸಲಾತಿ ಪಡೆಯುವುದು, ಇದು ಕಾನೂನು ಬಾಹಿರ ಎಂದು ಹೇಳಿದರು.