ಜಮ್ಮು-ಕಾಶ್ಮೀರದಲ್ಲಿ 4 ಸೈನಿಕರು ಮತ್ತು ಓರ್ವ ಪೊಲೀಸ್ ಹುತಾತ್ಮ !

ಸಾಂಧರ್ಭಿಕ ಚಿತ್ರ

ಶ್ರೀನಗರ (ಜಮ್ಮು-ಕಾಶ್ಮೀರ) – ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೊಮ್ಮೆ ಜಿಹಾದಿ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ 3 ಸೈನಿಕರು, 1 ಕ್ಯಾಪ್ಟನ್ ಮತ್ತು 1 ಪೊಲೀಸ್ ಹುತಾತ್ಮರಾಗಿದ್ದಾರೆ. ಡೊಡಾ ಜಿಲ್ಲೆಯ ಡೆಸಾ ಅರಣ್ಯದ ಧಾರಿ ಗೋಟೆ ಉರರಬಾಗಿಯಲ್ಲಿ ಈ ಘಟನೆ ನಡೆದಿದೆ. ಕಳೆದ ಒಂದೂವರೆ ತಿಂಗಳಲ್ಲಿ ಉಗ್ರರ ದಾಳಿಯಲ್ಲಿ 14 ಯೋಧರು ಹುತಾತ್ಮರಾಗಿದ್ದಾರೆ.

ರಾಷ್ಟ್ರೀಯ ರೈಫಲ್ಸ್ ಮತ್ತು ಜಮ್ಮು- ಕಾಶ್ಮೀರ ಪೊಲೀಸರು ಜುಲೈ 15 ರಿಂದ ಇಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದರು. ಶೋಧ ಕಾರ್ಯಾಚರಣೆ ನಡೆಯುತ್ತಿರುವಾಗ ಉಗ್ರರು ಅವರ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಸೈನಿಕರು ಮತ್ತು ಪೊಲೀಸರು ಅವರನ್ನು ಬೆನ್ನಟ್ಟಿದರು. ದಟ್ಟವಾದ ಕಾಡಿನಿಂದಾಗಿ ಭಯೋತ್ಪಾದಕರು ಸೈನಿಕರಿಂದ ತಪ್ಪಿಸಿಕೊಳ್ಳುತ್ತಿದ್ದರು. ರಾತ್ರಿ 9 ಗಂಟೆ ಸುಮಾರಿಗೆ ಮತ್ತೆ ಗುಂಡಿನ ದಾಳಿ ನಡೆದಿದೆ. ಇದರಲ್ಲಿ 4 ಯೋಧರು ಹಾಗೂ 1 ಪೊಲೀಸ್ ಗಾಯಗೊಂಡಿದ್ದಾರೆ. ಅವರು ಚಿಕಿತ್ಸೆ ಪಡೆಯುತ್ತಿದ್ದಾಗಲೇ ಮೃತಪಟ್ಟರು.

ಸಂಪಾದಕೀಯ ನಿಲುವು

ಕಾಶ್ಮೀರದಲ್ಲಿ ನಿಲ್ಲದ ಜಿಹಾದಿ ಭಯೋತ್ಪಾದನೆ ! ಕಾಶ್ಮೀರದಲ್ಲಿ ಈ ಭಯೋತ್ಪಾದನೆಯ ಹಿಂದೆ ಯಾರಿದ್ದಾರೆ ?, ಇದು ಗೊತ್ತಿದ್ದರೂ ಭಾರತದ ಆಡಳಿತಗಾರರಿಗೆ ಅದನ್ನು ಸಂಪೂರ್ಣವಾಗಿ ನಾಶ ಮಾಡುವ ಇಚ್ಛಾಶಕ್ತಿ ಇಲ್ಲ, ಇದೇ ಇಂತಹ ಘಟನೆಗಳಿಂದ ಮತ್ತೆ ಮತ್ತೆ ಕಮಡುಬರುತ್ತಿದೆ. ಇದು ಭಾರತಕ್ಕೆ ನಾಚಿಕೆಗೇಡಿನ ಸಂಗತಿ !