|
ಇಂದೋರ (ಮಧ್ಯಪ್ರದೇಶ) – ಮಧ್ಯಪ್ರದೇಶದ ಧಾರ ಜಿಲ್ಲೆಯಲ್ಲಿರುವ 13 ನೇ ಶತಮಾನದ ಐತಿಹಾಸಿಕ ಭೋಜಶಾಲಾದಲ್ಲಿ 98 ದಿನ ನಡೆಸಿದ ಭಾರತೀಯ ಪುರಾತತ್ವ ಇಲಾಖೆಯ ಸಮೀಕ್ಷೆಯ ವರದಿಯನ್ನು ಮಧ್ಯಪ್ರದೇಶ ಉಚ್ಚನ್ಯಾಯಾಲಯದ ಇಂದೋರ ವಿಭಾಗೀಯಪೀಠಕ್ಕೆ ಸಲ್ಲಿಸಲಾಗಿದೆ. ಈ ವರದಿಯನ್ನು ಆಧರಿಸಿ ಉಚ್ಚನ್ಯಾಯಾಲಯದಲ್ಲಿ ಜುಲೈ 22ರಂದು ವಿಚಾರಣೆ ನಡೆಸಲಿದೆ. ಸದ್ಯ ಈ ವರದಿಯನ್ನು ಸಾರ್ವಜನಿಕಗೊಳಿಸದಂತೆ ನ್ಯಾಯಾಲಯ ಆದೇಶಿಸಿದೆ. ಇಂದೋರ ಉಚ್ಚನ್ಯಾಯಾಲಯದ ಆದೇಶದ ಮೇರೆಗೆ ಸಮೀಕ್ಷೆ ನಡೆಸಲಾಗಿದೆ. ಸಮೀಕ್ಷೆಯ ಸಮಯದಲ್ಲಿ, ಮುಸ್ಲಿಂ ಪಕ್ಷದವರು ಕಾಲಕಾಲಕ್ಕೆ ಆಕ್ಷೇಪಣೆಗಳನ್ನು ವ್ಯಕ್ತಪಡಿಸಿದ್ದಾರೆ; ಆದರೆ ಅದನ್ನು ನಿರ್ಲಕ್ಷಿಸಿ ಸಮೀಕ್ಷೆ ಪೂರ್ಣಗೊಳಿಸಲಾಗಿದೆ. ಸಮೀಕ್ಷೆಯ ಸಮಯದಲ್ಲಿ ಮಾಡಿದ ಉತ್ಖನನದಲ್ಲಿ ಭೂಮಿಯಿಂದ ಅನೇಕ ವಿಶೇಷ ಅವಶೇಷಗಳನ್ನು ಹೊರಗೆ ತೆಗೆಯಲಾಗಿದೆ. ಭೋಜಶಾಲಾ ಗೋಡೆಗಳು ಮತ್ತು ಕಂಬಗಳ ಜೊತೆಗೆ 37 ದೇವತೆಗಳ ವಿಗ್ರಹಗಳು ಕಂಡುಬಂದಿವೆ. ಒಟ್ಟು 1 ಸಾವಿರದ 700 ಅವಶೇಷಗಳು ಪತ್ತೆಯಾಗಿವೆ. ಇವುಗಳಲ್ಲಿ 650 ಅವಶೇಷಗಳು ಅತ್ಯಂತ ಮಹತ್ವದ್ದಾಗಿದೆ.
ಮಾರ್ಚ್ 11 ರಿಂದ ಜೂನ್ 27 ರ ಕಾಲಾವಧಿಯವರೆಗೆ ಸಮೀಕ್ಷೆ ನಡೆಸಲಾಗಿದೆ. ಇಂದೂರ ಉಚ್ಚ ನ್ಯಾಯಾಲಯವು ಭೋಜಶಾಲಾದ 500 ಮೀಟರ್ ಪರಿಧಿಯ ವೈಜ್ಞಾನಿಕ ಸಮೀಕ್ಷೆಗೆ ಆದೇಶ ನೀಡಿತ್ತು. ಸಮೀಕ್ಷೆ ವೇಳೆ ಉತ್ಖನ ನಡೆಸಲಾಯಿತು. ಈ ಸಮೀಕ್ಷೆಯ ಛಾಯಾಚಿತ್ರ ತೆಗೆಯುವುದರೊಂದಿಗೆ ಚಿತ್ರೀಕರಣವನ್ನು ಕೂಡ ನಡೆಸಲಾಗಿದೆ.
#WATCH | Archeological Survey of India to present a report on Bhojshala Complex in Dhar | Advocate Hari Shankar Jain says, ” Today is a very happy occasion…it has been clear by the (ASI) report today that there used to be a Hindu temple…only Hindu puja should take place… pic.twitter.com/Ewca3Kjs7Z
— ANI (@ANI) July 15, 2024
ಜೈನ ಸಮುದಾಯದವರಿಂದಲೂ ಭೋಜಶಾಲಾ ಮೇಲೆ ದಾವೆ !
ಜೈನ ಸಮುದಾಯವೂ ಭೋಜಶಾಲಾ ಮೇಲೆ ದಾವೆ ಮಾಡಿದೆ. ಭೋಜಶಾಲಾ ಒಂದು ಜೈನ ಧಾರ್ಮಿಕ ಸ್ಥಳವಾಗಿದೆ ಎಂದು ಹೇಳುವ ಅರ್ಜಿ ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಈ ಕುರಿತು ಉಚ್ಚನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದೆ.
ಏನಿದು ಪ್ರಕರಣ ?
‘ಹಿಂದೂ ಫ್ರಂಟ್ ಫಾರ್ ಜಸ್ಟಿಸ್’ ಈ ಸಂಘಟನೆಯು ಮೇ 1, 2022 ರಂದು ಇಂದೋರ್ ಉಚ್ಚನ್ಯಾಯಾಲಯದಲ್ಲಿ ಭೋಜಶಾಲಾ ಕುರಿತು ಅರ್ಜಿಯನ್ನು ಸಲ್ಲಿಸಿದೆ. ಅದರಲ್ಲಿ ‘ಪ್ರತಿ ಮಂಗಳವಾರ ಹಿಂದೂಗಳು ಭೋಜಶಾಲೆಯಲ್ಲಿ ಯಾಗ ಮಾಡುವ ಮೂಲಕ ವಾಸ್ತುವನ್ನು ಶುದ್ಧೀಕರಿಸುತ್ತಾರೆ ಮತ್ತು ಶುಕ್ರವಾರದಂದು ಮುಸ್ಲಿಮರು ನಮಾಜ ಹೆಸರಿನಲ್ಲಿ ವಾಸ್ತುವನ್ನು ಅಶುದ್ಧ ಮಾಡುತ್ತಾರೆ. ಇದನ್ನು ನಿಲ್ಲಿಸಬೇಕು. ಭೋಜಶಾಲೆಯ ಸಂಪೂರ್ಣ ನಿಯಂತ್ರಣವನ್ನು ಹಿಂದೂಗಳಿಗೆ ಒಪ್ಪಿಸಬೇಕು. ಇದಕ್ಕಾಗಿ ಅವಶ್ಯಕವಿದ್ದರೆ ಸಂಪೂರ್ಣ ವಾಸ್ತುವಿನ ಛಾಯಾಗ್ರಹಣ, ಚಿತ್ರೀಕರಣ ಮತ್ತು ಉತ್ಖನನ ನಡೆಸಬೇಕು’ ಎಂಬ ಬೇಡಿಕೆ ಮುಂದಿಡಲಾಗಿತ್ತು. ಈ ಅರ್ಜಿಯ ಮೇಲೆ ನ್ಯಾಯಾಲಯವು ಪುರಾತತ್ವ ಇಲಾಖೆಗೆ ಸಮೀಕ್ಷೆ ನಡೆಸುವಂತೆ ಆದೇಶ ನೀಡಿತ್ತು. ಇದೇ ಆವರಣದಲ್ಲಿ ಮುಸಲ್ಮಾನ ಆಕ್ರಮಣಕಾರರು ನಿರ್ಮಿಸಿದ ಕಮಲ ಮೌಲಾ ಮಸೀದಿ ಇದೆ.
ಭೋಜಶಾಲಾ ಎಂದರೇನು?
11 ನೇ ಶತಮಾನದಲ್ಲಿ ಪರಮಾರ ಕುಟುಂಬವು ಮಧ್ಯಪ್ರದೇಶದ ಧಾರ ಜಿಲ್ಲೆಯ ರಾಜ್ಯವಾಳಿತು. ರಾಜಾ ಭೋಜನು 1000 ರಿಂದ 1055 ರವರೆಗೆ ಧಾರ ಆಡಳಿತಗಾರನಾಗಿದ್ದನು. ವಿಶೇಷವೆಂದರೆ, ರಾಜಾ ಭೋಜ ಶ್ರೀ ಸರಸ್ವತಿ ದೇವಿಯ ಮಹಾನ ಭಕ್ತರಾಗಿದ್ದರು. 1034 ರಲ್ಲಿ, ರಾಜಾ ಭೋಜನು ಒಂದು ಮಹಾವಿದ್ಯಾಲಯವನ್ನು ಸ್ಥಾಪಿಸಿದನು. ಈ ಮಹಾವಿದ್ಯಾಲಯ ತದನಂತರ ‘ಭೋಜಶಾಲಾ’ ಎಂದು ಕರೆಯಲ್ಪಟ್ಟಿತು. ಇದನ್ನೇ ವಾಗ್ದೇವಿಯ (ಸರಸ್ವತಿ ದೇವಿಯ) ದೇವಸ್ಥಾನವೆಂದು ಕರೆಯಲಾಗುತ್ತದೆ.
ನಮ್ಮ ದಾವೆ ಹೆಚ್ಚು ಶಕ್ತಿಯುತವಾಗಿದೆ ! – ನ್ಯಾಯವಾದಿ ವಿಷ್ಣು ಶಂಕರ ಜೈನ
‘ಹಿಂದೂ ಫ್ರಂಟ್ ಫಾರ್ ಜಸ್ಟಿಸ್’ ನ ಅರ್ಜಿದಾರ ಮತ್ತು ನ್ಯಾಯವಾದಿ ವಿಷ್ಣು ಶಂಕರ್ ಜೈನ ಇವರು, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಇಂದು ಇಂದೋರ ಉಚ್ಚನ್ಯಾಯಾಲಯದ ಎದುರು ತನ್ನ ವರದಿಯನ್ನು ಸಲ್ಲಿಸಿದೆ. ಈ ವರದಿ 2 ಸಾವಿರ ಪುಟಗಳದ್ದಾಗಿದೆ. ನಾವು ವರದಿಯ ವಿವರಗಳನ್ನು ನೋಡುತ್ತಿದ್ದೇವೆ. ನಾನು ವರದಿಯ ಆಧಾರದಲ್ಲಿ, ಅದು ಬಹಳ ಸಕಾರಾತ್ಮಕವಾಗಿದೆಯೆಂದು ಹೇಳಬಲ್ಲೆ. ಈ ಕಾರಣದಿಂದಾಗಿ, ನಮ್ಮ ‘ಭೋಜಶಾಲಾ ಮೊದಲಿನಿಂದಲೂ ಅಸ್ತಿತ್ವದಲ್ಲಿರುವ ಹಿಂದೂ ರಚನೆಯಾಗಿತ್ತು. ಅದನ್ನು ಕಾನೂನುಬಾಹಿರವಾಗಿ ಮಸೀದಿಯಲ್ಲಿ ಪರಿವರ್ತಿಸಲಾಯಿತು’ ಎಂಬ ನಮ್ಮ ದಾವೆ ಹೆಚ್ಚು ಪ್ರಬಲವಾಯಿತು. ಆದ್ದರಿಂದ ಇಲ್ಲಿ ಶುಕ್ರವಾರ ನಮಾಜಗಾಗಿ ಮುಸ್ಲಿಮರಿಗೆ ನೀಡಿರುವ ಅನುಮತಿಯನ್ನು ರದ್ದುಪಡಿಸಬೇಕು ಎಂಬುದು ನಮ್ಮ ಮೂಲ ಬೇಡಿಕೆಯಾಗಿದೆ.