ಡೊನಾಲ್ಡ್ ಟ್ರಂಪ್ ಅನ್ನು ಭಗವಾನ್ ಜಗನ್ನಾಥನು ರಕ್ಷಿಸಿದನು ! – ಇಸ್ಕಾನ್

1976 ರಲ್ಲಿ, ಅಮೆರಿಕದಲ್ಲಿ ಮೊದಲ ಜಗನ್ನಾಥ ರಥಯಾತ್ರೆಗಾಗಿ ಟ್ರಂಪ್ ಸಹಾಯ ಮಾಡಿದ್ದರು !

ಕೋಲಕಾತಾ (ಬಂಗಾಳ) – ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪೆನ್ಸಿಲ್ವೇನಿಯಾದಲ್ಲಿ ಮಾರಣಾಂತಿಕ ದಾಳಿ ಆಗಿದ್ದ ಘಟನೆ ಎಲ್ಲಾ ಕಡೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಅದೇ ರೀತಿ, ಜಗನ್ನಾಥನ ಕೃಪೆಯಿಂದಲೇ ಟ್ರಂಪ್ ಇಂದು ಪಾರಾಗಿದ್ದಾರೆ ಎಂದು ಆಧ್ಯಾತ್ಮಿಕ ಸಂಸ್ಥೆ ಇಸ್ಕಾನ್‌ನ ಉಪಾಧ್ಯಕ್ಷ ಮತ್ತು ವಕ್ತಾರ ರಾಧಾರಾಮನ್ ದಾಸ್ ಹೇಳಿದ್ದಾರೆ. ಇದಕ್ಕಾಗಿ ಅವರು 48 ವರ್ಷಗಳ ಹಿಂದಿನ ಒಂದು ದಿವ್ಯ ಘಟನೆಯನ್ನು ವಿವರಿಸಿದರು.

‘X’ ನಿಂದ ಪೋಸ್ಟ್ ಮಾಡುವಾಗ, ಇಸ್ಕಾನ್‌ನ ದಾಸ್ ಇವರು,

ಇಸ್ಕಾನ್‌ನ ಉಪಾಧ್ಯಕ್ಷ ಮತ್ತು ವಕ್ತಾರ ರಾಧಾರಾಮನ್ ದಾಸ್

1. 1976 ರಲ್ಲಿ, ಡೊನಾಲ್ಡ್ ಟ್ರಂಪ್ ಇವರು ನ್ಯೂಯಾರ್ಕ್‌ನಲ್ಲಿ ರಥಯಾತ್ರೆಯನ್ನು ಆಯೋಜಿಸಲು ಭಗವಾನ್ ಶ್ರೀಕೃಷ್ಣನ ಅನುಯಾಯಿಗಳಿಗೆ ಸಹಾಯ ಮಾಡಿದವರು. ಅವರ ಸಹಾಯದಿಂದಲೇ ರಥವನ್ನು ಸ್ಥಾಪಿಸಲು ಸಾಧ್ಯವಾಯಿತು. ಇಂದು, ಜಗನ್ನಾಥ ದೇವರು ಈ ಸಹಾಯವನ್ನು ಮರುಪಾವತಿಸಿ ಟ್ರಂಪ್‌ಗೆ ಜೀವ ನೀಡಿದನು.

2. ಸದ್ಯ ಪುರಿಯಲ್ಲಿ ಜಗನ್ನಾಥ ರಥಯಾತ್ರೆ ನಡೆಯುತ್ತಿದ್ದು, ಅಮೆರಿಕದಲ್ಲಿ ಈ ಘಟನೆ ನಡೆದಿದೆ. ಅವರ ಜೀವವನ್ನು ಉಳಿಸಲು ಖಂಡಿತವಾಗಿಯೂ ದೈವಿಕ ಹಸ್ತಕ್ಷೇಪ ಎಂದು ನಾನು ನಂಬುತ್ತೇನೆ.

3. 1976 ರಲ್ಲಿ, ಇಸ್ಕಾನ್‌ನ ಹತ್ತನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ, ನ್ಯೂಯಾರ್ಕ್ ನಗರದ ಪ್ರತಿಷ್ಠಿತ ಮ್ಯಾನ್‌ಹ್ಯಾಟನ್ ಪ್ರದೇಶದಲ್ಲಿ ಮೊದಲ ಜಗನ್ನಾಥ ರಥಯಾತ್ರೆಯನ್ನು ನಡೆಸಲಾಯಿತು. ಆದರೂ ಹಲವು ಸವಾಲುಗಳಿದ್ದವು. ಇಲ್ಲಿ ‘ಫಿಫ್ಥ ವೆನ್ಯೂ’ ಮಾರ್ಗವನ್ನು ಬಳಸಲು ಅಧಿಕೃತ ಅನುಮತಿ ನೀಡಲಾಗಿತ್ತು.

4. ಆರೂ, ಬೃಹತ್ ಮರದ ರಥವನ್ನು ನಿರ್ಮಿಸಲು ಮುಕ್ತ ಸ್ಥಳ ಸಿಗುವುದು ಅಗತ್ಯವಾಗಿತ್ತು. ಅಂತಹ ಜಾಗವನ್ನು ನೀಡಲು ಅನೇಕ ಸಂಸ್ಥೆಗಳು ಹಿಂಜರಿಯುತ್ತಿದ್ದವು. ಅವರು ಇತರ ವಿಷಯಗಳ ಜೊತೆಗೆ ಸಂಭಾವ್ಯ ಕಾನೂನು ಸಮಸ್ಯೆಗಳ ಬಗ್ಗೆ ಚಿಂತಿತರಾಗಿದ್ದರು. ಪ್ರದೇಶದಲ್ಲಿ ರೈಲ್ವೆ ಪ್ರದೇಶದಲ್ಲಿ ಸ್ಥಾನ ಪಡೆಯಲು ಸಾಕಷ್ಟು ಪ್ರಯತ್ನ ಮಾಡಲಾಯಿತು; ಆದರೆ ಅದು ಸಿಗಲಿಲ್ಲ. ಕೆಲವು ದಿನಗಳ ನಂತರ, ಅಲ್ಲಿ ದೊಡ್ಡ ಪ್ರದೇಶವನ್ನು 30 ವರ್ಷದ ಉದ್ಯಮಿ ಡೊನಾಲ್ಡ್ ಟ್ರಂಪ್ ಇವರ ಸಂಸ್ಥೆ ಖರೀಧಿಸಿದೆ ಎಂದು ತಿಳಿದುಬಂದಿದೆ. ಕೃಷ್ಣ ಭಕ್ತರು ಈ ಭಾಗವನ್ನು ಪಡೆಯಲು ಟ್ರಂಪ್ ಅವರನ್ನು ವಿನಂತಿಸಿದರು. “ವಿನಂತಿಯನ್ನು ನೀಡಲಾಗುವುದಿಲ್ಲ, ಎಂದು “ಟ್ರಂಪ್ ಕಂಪನಿಯ ಹಿರಿಯ ಅಧಿಕಾರಿ ಹೇಳಿದರು; ಆದರೆ ಭಕ್ತರು ತಂದ ಶ್ರೀಕೃಷ್ಣನ ಪ್ರಸಾದವನ್ನು ಸ್ವೀಕರಿಸಿದ ಟ್ರಂಪ್ ಅವರ ಬೇಡಿಕೆ ಪತ್ರಕ್ಕೆ ಸಹಿ ಹಾಕಿ ಅಂಗೀಕರಿಸಿದರು. ಎಲ್ಲೆಡೆ ಅಚ್ಚರಿ ವ್ಯಕ್ತವಾಯಿತು.

5. ಅಂತಿಮವಾಗಿ ಕೃಷ್ಣ ಭಕ್ತರು ರಥಯಾತ್ರೆಗೆ ಹೋಗಲು ಅನುಮತಿ ನೀಡುವಂತೆ ಮ್ಯಾನ್‌ಹ್ಯಾಟನ್ ಪೊಲೀಸ್ ಮುಖ್ಯಸ್ಥರಿಗೆ ವಿಶೇಷ ಮನವಿ ಸಲ್ಲಿಸಿದರು. ‘ಅವರಿಂದ ಅರ್ಜಿಯನ್ನು ಹೇಗೆ ಸ್ವೀಕರಿಸುತ್ತಾರೆ ಎಂಬುದು ಯಾರಿಗೂ ತಿಳಿದಿರಲಿಲ್ಲ. ಆದರೆ ಕೂಲಂಕುಷವಾಗಿ ಪರಿಶೀಲಿಸಿದ ಹಿರಿಯ ಅಧಿಕಾರಿ ಮುಗುಳ್ನಗುತ್ತಾ ದಾಖಲೆಗಳಿಗೆ ಸಹಿ ಹಾಕಿದರು. “ನಾನೇಕೆ ಹೀಗೆ ಮಾಡುತ್ತಿದ್ದೇನೆಂದು ನನಗೆ ತಿಳಿದಿಲ್ಲ” ಎಂದು ಅವರು ಸಹಿ ಹಾಕಿದರು. ಈ ಘಟನೆಯನ್ನು ಹೇಳುವಾಗ ರಾಧಾರಾಮನ್ ದಾಸ್ ಅವರು ದೇವರ ಕೃಪೆ ಹೇಗಿರುತ್ತದೆ ಎಂಬುದನ್ನು ಸುಂದರವಾಗಿ ವಿವರಿಸಿದ್ದಾರೆ.