Non-Muslim Students In Madrasas : ಮದರಸಾಗಳಲ್ಲಿ ಹಿಂದೂ ಹಾಗೆಯೇ ಇತರೆ ಮುಸ್ಲಿಮೇತರ ಮಕ್ಕಳಿಗೆ ಶಿಕ್ಷಣ ನೀಡುವುದು ಸಮಾಜದಲ್ಲಿ ಧಾರ್ಮಿಕ ದ್ವೇಷ ಉಂಟುಮಾಡಲು ಕಾರಣವಾಗಿದೆ !

  • ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣೆ ಆಯೋಗದ ಅಧ್ಯಕ್ಷ ಪ್ರಿಯಾಂಕ ಕನೂನಗೊ ಇವರ ಹೇಳಿಕೆ !

  • ಮುಸ್ಲಿಮೇತರ ಮಕ್ಕಳಿಗೆ ಮದರಸಾಗಳಲ್ಲಿ ಕಲಿಯಲು ಕಳುಹಿಸಬಾರದು ! – ಕಾನೂನಗೊ

ಪ್ರಿಯಾಂಕ ಕಾನೂನಗೊ

ನವ ದೆಹಲಿ : ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಪ್ರಿಯಾಂಕ ಕಾನೂನಗೊ ಅವರು ಮದರಸಾಗಳಲ್ಲಿನ ಶಿಕ್ಷಣದ ವಿಷಯದಲ್ಲಿ ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ. ಅವರು, ಮದರಸಾಗಳು ಇಸ್ಲಾಮಿಕ್ ಶಿಕ್ಷಣ ನೀಡುವ ಕೇಂದ್ರಗಳಾಗಿವೆ. ಇದು ಶಿಕ್ಷಣದ ಅಧಿಕಾರದ ಕಾನೂನಿನ ಪರಿಧಿಯಿಂದ ಹೊರಗಿದೆ. ಆದ್ದರಿಂದ, ಮದರಸಾಗಳಲ್ಲಿ ಹಿಂದೂ ಮತ್ತು ಇತರ ಮುಸ್ಲಿಮೇತರ ಹುಡುಗರನ್ನು ಕಲಿಸುವುದು ಅವರ ಮೂಲಭೂತ ಹಕ್ಕುಗಳ ಉಲ್ಲಂಘನೆ ಮಾತ್ರವಲ್ಲದೆ ಸಮಾಜದಲ್ಲಿ ಧಾರ್ಮಿಕ ವೈಷಮ್ಯವನ್ನು ಹರಡಲು ಕಾರಣವಾಗಬಹುದು ಎಂದು ಹೇಳಿದ್ದಾರೆ.

1. ಉತ್ತರ ಪ್ರದೇಶದಲ್ಲಿರುವ ದೇವಬಂದ ನಗರದ ಸಮೀಪ ಹಳ್ಳಿಯೊಂದರಲ್ಲಿ ಒಬ್ಬ ಹಿಂದೂ ಹುಡುಗನನ್ನು ಬಲವಂತವಾಗಿ ಮತಾಂತರ ಮತ್ತು ಸುನ್ನತ್‌ ಮಾಡಿರುವ ಘಟನೆಯ ಕುರಿತು ಕಾನೂನಗೊ ಇವರು ಎಲ್ಲರ ಗಮನವನ್ನು ಸೆಳೆದರು. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಘಟಿಸಿರುವ ಈ ಘಟನೆಯ ಬಗ್ಗೆ ಜುಲೈ 13 ರಂದು ಕಾನೂನಗೊ ಇವರು ಮಾಹಿತಿ ನೀಡುವಾಗ, ಮುಸ್ಲಿಮೇತರ ಮಕ್ಕಳಿಗೆ ಮದರಸಾದಿಂದ ದೂರವಿರಲು ಕರೆ ನೀಡಿದರು.

2. ಈ ಸಂದರ್ಭದಲ್ಲಿ ಇದಕ್ಕೂ ಮುನ್ನಾ ಕಾನೂನಗೊ ಇವರು ರಾಜ್ಯ ಸರಕಾರಗಳಿಗೆ, ಮದರಸಾಗಳಲ್ಲಿ ಪ್ರವೇಶ ಪಡೆದ ಮುಸ್ಲಿಮೇತರ ವಿದ್ಯಾರ್ಥಿಗಳಿಗೆ ನಿಯಮಿತ ಶಾಲೆಗಳಲ್ಲಿ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ವಿನಂತಿಸಿದರು. ಉತ್ತರಪ್ರದೇಶ ಸರಕಾರದ ಮುಖ್ಯ ಸಚಿವರು ಅವರ ಶಿಫಾರಸ್ಸಿನಂತೆ ಉತ್ತರ ಪ್ರದೇಶ ಸರ್ಕಾರದ ಮುಖ್ಯ ಕಾರ್ಯದರ್ಶಿ ಆದೇಶ ನೀಡಿದ್ದರು.

3. ಕಾನೂನಗೊ ಈ ಸಂದರ್ಭದಲ್ಲಿ ಮಾತನಾಡಿ, ‘ಜಮೀಯತ್ ಉಲೇಮಾ-ಎ-ಹಿಂದ್’ ಹೆಸರಿನ ಇಸ್ಲಾಮಿಕ್ ಸಂಘಟನೆ ಈ ಆದೇಶದ ಕುರಿತು ಜನರ ದಿಕ್ಕು ತಪ್ಪಿಸುತ್ತಿದ್ದು, ಸರಕಾರದ ವಿರುದ್ಧ ಸಾಮಾನ್ಯ ಜನರ ಭಾವನೆಗಳನ್ನು ಕೆರಳಿಸುವ ಕೆಲಸ ಮಾಡುತ್ತದೆ. ಈ ಸಂಘಟನೆ ಮೌಲ್ವಿಯ ‘ದಾರುಲ್ ಉಲೂಮ್ ದೇವಬಂದ್’ ಸಂಸ್ಥೆಯ ಒಂದು ಶಾಖೆಯಾಗಿದೆ. ಆಯೋಗವು ‘ಘಜ್ವಾ-ಎ-ಹಿಂದ್’ (ಭಾರತದ ಇಸ್ಲಾಮೀಕರಣ ಮಾಡುವ) ಬೆಂಬಲಿಸಿದವರ ವಿರುದ್ಧ ಕ್ರಮ ಕೈಗೊಂಡಿದೆ ಎಂದು ಹೇಳಿದರು.

4. ಯಾರೂ ಕೂಡ ಮಕ್ಕಳ ಧಾರ್ಮಿಕ ಸ್ವಾತಂತ್ರ್ಯವನ್ನು ಉಲ್ಲಂಘಿಸಬಾರದು. ನಾನು ಕೈಮುಗಿದು ಎಲ್ಲರಲ್ಲಿ ವಿನಂತಿಸುತ್ತೇನೆ ಅವರು ಕಟ್ಟರವಾದಿ ಸಂಘಟನೆಗಳ ವದಂತಿಗಳಿಂದ ದೂರವಿರಬೇಕು ಮತ್ತು ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಕೈಜೋಡಿಸಬೇಕು ಎಂದು ಹೇಳಿದರು.

ಸಂಪಾದಕೀಯ ನಿಲುವು

ದೇಶಾದ್ಯಂತ ಹಲವು ಮದರಸಾಗಳಲ್ಲಿ ಜಿಹಾದಿ ಭಯೋತ್ಪಾದನೆಗೆ ಬೆಂಬಲ, ಬಲಾತ್ಕಾರ, ಕೊಲೆ ಇಂತಹ ಅಪರಾಧಗಳು ನಡೆದಿರುವುದು ಆಗಾಗ ಬೆಳಕಿಗೆ ಬಂದಿವೆ. ಆದ್ದರಿಂದ ಸರಕಾರವು ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತರುವುದರೊಂದಿಗೆ ಮದರಸಾಗಳ ಮೇಲೆ ನಿಷೇಧ ಹೇರುವ ಕಠಿಣ ಕಾನೂನನ್ನು ಜಾರಿಗೆ ತರುವ ಧೈರ್ಯವನ್ನು ತೋರಿಸಬೇಕು ಎಂದು ದೇಶಪ್ರೇಮಿ ಜನತೆಗೆ ಅನಿಸುತ್ತದೆ !