೧. ಗುರುವಾಣಿಯಲ್ಲಿ ಸಾಮರ್ಥ್ಯ ಇರುತ್ತದೆ, ಇದು ನಿರ್ವಿವಾದ ಸತ್ಯವಾಗಿದೆ; ಆದರೆ ಅವರ ಶಬ್ದಗಳು ಸತ್ಯವಾಗುವುದಕ್ಕಾಗಿ ಅವರ ಮೇಲೆ ಶ್ರದ್ಧೆ ಕೂಡ ಇರಬೇಕಾಗುತ್ತದೆ.
೨. ಗುರುಗಳಿಗೆ ಶಿಷ್ಯನಿಗೆ ಅಥವಾ ಸಾಧಕನಿಗೆ ಅವರಿಗೆ ಏನು ಕಲಿಸುವುದಿದೆ, ಅದು ಹೃದಯದಿಂದ ಹೃದಯಕ್ಕೆ ಆಗುವುದಕ್ಕಾಗಿ ಶಿಷ್ಯ ಅಥವಾ ಸಾಧಕನಿಗೆ ಗುರುಗಳ ಕುರಿತಾಗಿ ಅನನ್ಯ ಭಾವ ಇರಬೇಕು.
೩. ನಮ್ಮ ಅಂತಃಕರಣದಲ್ಲಿನ ಗುರುಚರಣ ಇದು ಸಾಧಕರಿಗೆ ಎಲ್ಲಕ್ಕಿಂತ ದೊಡ್ಡ ಆಧಾರ ಅನಿಸಬೇಕು.
೪. ಗುರುಗಳ ಸೇವೆ ಯಾಂತ್ರಿಕವಾಗಿ ಅಲ್ಲ, ಗುರುಗಳಿಗೆ ಏನು ಅಪೇಕ್ಷಿತವಿದೆ ? ಅದನ್ನು ತಿಳಿದುಕೊಂಡು ಮಾಡುವವರು ಗುರುಗಳಿಗೆ ಹೆಚ್ಚು ಪ್ರಿಯವಾಗಿದ್ದಾರೆ.
– (ಪೂ.) ಸಂದೀಪ ಆಳಶಿ (೨೭.೫.೨೦೨೪)