ನೇಹಾ ಹಿರೇಮಠ ಕೊಲೆ ಪ್ರಕರಣ !
ಹುಬ್ಬಳ್ಳಿ – ಮಹಾನಗರ ಪಾಲಿಕೆ ಕೌನ್ಸಿಲರ್ ನಿರಂಜನ ಹಿರೇಮಠ ಅವರ ಪುತ್ರಿ ನೇಹಾ ಹಿರೇಮಠ ಅವರ ಹತ್ಯೆ ಹಿಂದೆ ‘ಲವ್ ಜಿಹಾದ್’ ಇದೆ ಎಂದು ಆರೋಪಿಸಿ ನೇಹಾ ಹಿರೇಮಠ್ ಅವರ ತಂದೆ ನಿರಂಜನ ಹಿರೇಮಠ, ಬಿಜೆಪಿ ಮತ್ತು ಹಿಂದುತ್ವನಿಷ್ಠ ಸಂಘಟನೆಗಳು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದ್ದವು; ಆದರೆ ಈಗ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ಚಾರ್ಜ್ ಶೀಟ್ ನಲ್ಲಿ ಲವ್ ಜಿಹಾದ್ ನ ಯಾವುದೇ ಉಲ್ಲೇಖವಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ, ಮದುವೆಗೆ ನಿರಾಕರಿಸಿದ್ದರಿಂದ ನೇಹಾಳನ್ನು ಫಯಾಜ್ ಕೊಂದಿದ್ದಾನೆ ಎಂದು ಹೇಳಲಾಗಿದೆ. 473 ಪುಟಗಳ ಈ ಚಾರ್ಜ್ ಶೀಟ್ ನಲ್ಲಿ 99 ಸಾಕ್ಷಿದಾರರ ಉಲ್ಲೇಖ ಇದೆ. ಏಪ್ರಿಲ್ 18ರಂದು ಮಧ್ಯಾಹ್ನ ಬಿವಿಬಿ ಕಾಲೇಜಿನ ಆವರಣದಲ್ಲಿ ವಿದ್ಯಾರ್ಥಿನಿ ನೇಹಾಳ ಹತ್ಯೆ ಮಾಡಲಾಗಿತ್ತು.
ನೇಹಾ ಹಿರೇಮಠ ಹಾಗೂ ಆರೋಪಿ ಫಯಾಜ್ ಈ ಕಾಲೇಜಿನಲ್ಲಿ ಬಿಸಿಎ ಓದುತ್ತಿದ್ದರು. ಇಬ್ಬರೂ ಮೊದಲು ಸ್ನೇಹಿತರಾಗಿದ್ದರು. ನಂತರ ಅವರು ಪರಸ್ಪರ ಪ್ರೀತಿಸಲು ಪ್ರಾರಂಭಿಸಿದರು. ಮಾರ್ಚ್ 2024 ರಲ್ಲಿ, ಇಬ್ಬರ ಮಧ್ಯೆ ಜಗಳವಾಯಿತು. ಆನಂತರ ನೇಹಾ ಆರೋಪಿ ಫಯಾಜ್ ನೊಂದಿಗೆ ಮಾತನಾಡುವುದನ್ನು ನಿಲ್ಲಿಸಿದಳು. ಆದ್ದರಿಂದ ಹತಾಶನಾದ ಫಯಾಜ್ ನೇಹಾಳ ಹತ್ಯೆ ಮಾಡಿದನು.
Neha Hiremath Murder Case : No mention of Love Ji#ad in charge-sheet, murder blamed on marriage rejection
Understand the effects of having a #Congress Government in Karnataka ! pic.twitter.com/sdZ4CNMpkf
— Sanatan Prabhat (@SanatanPrabhat) July 11, 2024