ಭಾರತ ಅಲಂಕರಿಸಲಿದೆ ಅಧ್ಯಕ್ಷತೆ ಸ್ಥಾನ
ನವ ದೆಹಲಿ – ಇದುವರೆಗೆ ಭಾರತದ 42 ಐತಿಹಾಸಿಕ ತಾಣಗಳಿಗೆ ‘ವಿಶ್ವ ಪರಂಪರೆ’ ಸ್ಥಾನಮಾನವನ್ನು ಪಡೆದಿವೆ ಮತ್ತು ಶೀಘ್ರದಲ್ಲೇ ಇನ್ನೂ ಹಲವು ತಾಣಗಳು ಪಟ್ಟಿಯಲ್ಲಿ ಸೇರ್ಪಡೆಗೊಳ್ಳುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ಜುಲೈ 21ರಂದು ದೆಹಲಿಯಲ್ಲಿ ‘ಯುನೆಸ್ಕೋ ವಿಶ್ವ ಪರಂಪರೆ ಸಮಿತಿ’ ಸಭೆ ನಡೆಯಲಿದ್ದು, ಭಾರತದಲ್ಲಿ ಇದೇ ಪ್ರಥಮ ಬಾರಿಗೆ ಸಭೆ ನಡೆಯಲಿದೆ. ಆ ಸಂದರ್ಭದಲ್ಲಿ, ಭಾರತವು ಈ ಸಮಿತಿಯ ಅಧ್ಯಕ್ಷತೆಯನ್ನು ವಹಿಸಲಿದೆ. ಜುಲೈ 21 ರಿಂದ 31 ರ ಈ ಕಾಲಾವಧಿಯಲ್ಲಿ ನಡೆಯುವ ಈ ಸಭೆಯಲ್ಲಿ 195 ದೇಶಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಇದು ‘ಯುನೆಸ್ಕೋ’ದ ವಿಶ್ವ ಪರಂಪರೆ ಸಮಿತಿಯ 46 ನೇ ಅಧಿವೇಶನವಾಗಿದೆ. ಇದು ವಿಶ್ವದ ಸಾಂಸ್ಕೃತಿಕ ಮತ್ತು ಅಪರೂಪದ ಪರಂಪರೆಯ ಪ್ರಚಾರಕ್ಕಾಗಿ ಕೆಲಸ ಮಾಡುವ ‘ಯುನೆಸ್ಕೊ’ದ 21 UNESCO ದೇಶಗಳ ಪ್ರತಿನಿಧಿಗಳನ್ನು ಒಳಗೊಂಡಿದೆ. ಭಾರತಕ್ಕೆ ನಾಲ್ಕನೇ ಬಾರಿಗೆ ಸಮಿತಿಯ ಭಾಗವಾಗಲು ಅವಕಾಶ ಸಿಕ್ಕಿದ್ದು, ಸದಸ್ಯತ್ವದ ಅವಧಿ 4 ವರ್ಷಗಳು (2021 ರಿಂದ 2025) ಆಗಿದೆ. ಇದರೊಂದಿಗೆ ಭಾರತ ಸಮಿತಿಯ ಅಧ್ಯಕ್ಷತೆ ವಹಿಸಲಿದೆ. ಕೇಂದ್ರ ಸಾಂಸ್ಕೃತಿಕ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಈ ಕುರಿತು ಮಾಹಿತಿ ನೀಡಿದ್ದಾರೆ.
ವಿಶ್ವ ಪರಂಪರೆ ಸಮಿತಿ ಸಭೆಯ ಮಹತ್ವ!
ವಿಶ್ವ ಪರಂಪರೆಯ ಸಮಿತಿಯು ವಿಶ್ವ ಪರಂಪರೆಯ ತಾಣಗಳ ನೊಂದಣಿ ಮಾಡುತ್ತದೆ. ಎಲ್ಲಾ ಸ್ಥಳಗಳ ಉಸ್ತುವಾರಿ ಸರಿಯಾಗಿ ಆಗುತ್ತಿದೆಯೇ ಎಂದು ನೋಡಿಕೊಳ್ಳುತ್ತದೆ. ಅದರ ಲೆಕ್ಕಪತ್ರಗಳನ್ನು ಈ ಸಮಿತಿಯು ನಿರ್ವಹಿಸುತ್ತದೆ. ವಿಶ್ವ ಪರಂಪರೆ ಸಮಿತಿಯ ಸಭೆಗಳಲ್ಲಿ, ಆಯಾ ದೇಶಗಳಲ್ಲಿನ ವಾಸ್ತುಶಿಲ್ಪದ ಪರಂಪರೆಯ ತಾಣಗಳ ಪಟ್ಟಿಯಲ್ಲಿ ಸೇರ್ಪಡೆಗೊಳ್ಳುವ ಚರ್ಚೆ ಮತ್ತು ಮೌಲ್ಯಮಾಪನ ಮಾಡಲಾಗುತ್ತದೆ. ಈ ಸಭೆಯಲ್ಲಿ ಅಂತಿಮ ಎಂದು ಘೋಷಿಸಲಾದ ತಾಣಗಳನ್ನು `ಯುನೆಸ್ಕೋ’ದಿಂದ `ವಿಶ್ವ ಪರಂಪರೆಯ ಪಟ್ಟಿಯಲ್ಲಿ’ ಸೇರಿಸಲಾಗುತ್ತದೆ.