(ಡಿಜೆ ಎಂದರೆ ದೊಡ್ಡ ಧ್ವನಿಕ್ಷೇಪಕ ಯಂತ್ರ ವ್ಯವಸ್ಥೆ)
ಮುರಾದಾಬಾದ್(ಉತ್ತರಪ್ರದೇಶ) – ಸಮಾಜವಾದಿ ಪಕ್ಷದ ನಾಯಕ ಮತ್ತು ಮಾಜಿ ಶಾಸಕ ಡಾ. ಎಸ್ ಟಿ ಹಸನ್ ಅವರು ಕಾವಡಾ ಯಾತ್ರೆಯ ಕುರಿತು ಟೀಕಾತ್ಮಕ ಹೇಳಿಕೆ ನೀಡಿದ್ದಾರೆ. ಮಸೀದಿಯ ಆಜಾನ್ ನ(ಮುಸಲ್ಮಾನರಿಗೆ ನಮಾಜ್ ಗಾಗಿ ದೊಡ್ಡ ಧ್ವನಿಯಲ್ಲಿ ಆಮಂತ್ರಿಸುವುದು ) ಧ್ವನಿ ೬೦ ಡೆಸಿಮಲ್ ಕ್ಕಿಂತಲೂ ಹೆಚ್ಚಾದರೆ ಪೊಲೀಸರು ಕೂಡಲೇ ಮಸಿದಿ ಮೇಲಿನ ಭೋಂಗಾ(ಮೈಕ್) ತೆಗೆದು ಹಾಕುತ್ತಾರೆ ; ಆದರೆ ಕಾವಡಾ ಯಾತ್ರೆಯ ವೇಳೆ ಹಾಕಲಾಗುವ ಡಿಜೆ ಮಾತ್ರ ಯಾವುದೇ ಅಡೆತಡೆ ಇಲ್ಲದೆ ನಡೆಸಲಾಗುತ್ತದೆ. ಮಸೀದಿ ಮೇಲಿನ ಭೋಗಾ ತೆಗೆಯುವವರು ಕಾವಡಾ ಯಾತ್ರೆಯಲ್ಲಿನ ಡಿಜೆ ಕೂಡ ನಿಲ್ಲಿಸಬೇಕು , ಎಂದು ಹಸನ್ ಆಗ್ರಹಿಸಿದ್ದಾರೆ. (ಮಸೀದಿ ಮೇಲಿನ ಭೋಗಾದಿಂದಾಗುವ ಧ್ವನಿ ಮಾಲಿನ್ಯದ ತುಲನೆಯಲ್ಲಿ ವರ್ಷಕ್ಕೊಮ್ಮೆ ನಡೆಯುವ ಕಾವಡಾ ಯಾತ್ರೆಯಲ್ಲಿ ಬಳಸುವ ಡಿಜೆಯ ಧ್ವನಿ ಮಾಲಿನ್ಯ ಬಹಳ ಅಲ್ಪವಾಗಿದೆ. ಇದು ಸಮಾಜವಾದಿ ಪಕ್ಷದ ನಾಯಕನಿಗೆ ಅರ್ಥವಾಗುವುದೇ ? – ಸಂಪಾದಕರು )
ಉತ್ತರ ಪ್ರದೇಶ ರಾಜ್ಯ ಸರಕಾರವು ಮೊಹರಂ ವೇಳೆ ಶಸ್ತ್ರಾಸ್ತ್ರಗಳನ್ನು ನಿಷೇಧಿಸಿದ್ದು ಸರಕಾರದ ಈ ಆದೇಶದಿಂದ ಆಕ್ರೋಶಗೊಂಡಿರುವ ಹಸನ್, ನಿರ್ಬಂಧ ಹೇರುವುದೇ ಆಗಿದ್ದರೆ ಎಲ್ಲರ ಮೇಲೆ ಸಮಾನವಾಗಿ ಹೇರಬೇಕು. ಎಲ್ಲಾ ಧರ್ಮದ ಮೆರವಣಿಗೆಗಳಲ್ಲಿ ಶಸ್ತ್ರಗಳ ಮೇಲೆ ನಿಷೇಧ ಹೇರಬೇಕು, ಆಗ ನಾವು ಆಕ್ಷೇಪ ಮಾಡುವುದಿಲ್ಲ, ಮೊಹರಂ ಸಮಯದಲ್ಲಿಯೇ ಇಂತಹ ನಿರ್ಬಂಧದ ಆವಶ್ಯಕತೆ ಏನಿದೆ? ಮೊಹರಂ ಮೆರವಣಿಗೆಯಲ್ಲಿ ಅನೇಕ ವರ್ಷದಿಂದ ಮುಸಲ್ಮಾನರು ತಮ್ಮ ಕಲೆಯನ್ನು ಪ್ರದರ್ಶಿಸುತ್ತಾರೆ ಎಂದು ಕಿಡಿಕಾರಿದರು. (ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಸರಕಾರ ಇಂತಹ ನಿರ್ಣಯ ತೆಗೆದುಕೊಳ್ಳುತ್ತದೆ, ಎಂಬುದನ್ನು ಹಸನ್ ಅವರಂತಹ ಜನಪ್ರತಿನಿಧಿಗೆ ತಿಳಿದಿಲ್ಲವೇ? – ಸಂಪಾದಕ).
ಸಂಪಾದಕೀಯ ನಿಲುವು
|