ತೆಲ್ ಅವೀವ್ (ಇಸ್ರೇಲ್) – ಇಸ್ರೇಲ್ ಸೈನ್ಯದಿಂದ ಗಾಜಾ ಪಟ್ಟಿಯಲ್ಲಿನ ಒಂದು ಶಾಲೆಯ ಮೇಲೆ ನಡೆಸಿರುವ ದಾಳಿಯಲ್ಲಿ ೨೯ ಜನರು ಸಾವನ್ನಪ್ಪಿದ್ದಾರೆ. ಈ ಶಾಲೆಯಲ್ಲಿ ನಿರಾಶ್ರಿತರನ್ನು ಇರಿಸಲಾಗಿತ್ತು, ಎಂದು ಹೇಳಲಾಗುತ್ತಿದೆ, ಆದರೆ ಇಲ್ಲಿ ಹಮಾಸ್ ನ ಭಯೋತ್ಪಾದಕರು ಅಡಗಿದ್ದರು ಎಂದು ಇಸ್ರೇಲ್ ಹೇಳಿದೆ. ೪ ದಿನಗಳ ಹಿಂದೆ ಕೂಡ ಇಸ್ರೇಲ್ ಗಾಜಾದಲ್ಲಿನ ಒಂದು ಶಾಲೆಯ ಮೇಲೆ ದಾಳಿ ನಡೆಸಿತ್ತು. ಆ ದಾಳಿಯಲ್ಲಿ ೧೬ ಜನರು ಸಾವನ್ನಪ್ಪಿದ್ದರು.
Israel Strikes UNRWA’s School in Gaza Killing 29 several others injured – the fourth attack on a school building in four days.
The Israeli military claims that Hamas militants were operating in structures located in the school area.#GazaStrip #HamasisISIS #IsraelPalestineWar pic.twitter.com/Pu31aFuY9a
— Sanatan Prabhat (@SanatanPrabhat) July 10, 2024
ಗಾಜಾದಲ್ಲಿನ ಖಾನ್ ಯೂನಿಸ್ ನಿಂದ ಜನರನ್ನು ಸ್ಥಳಾಂತರಗೊಳಿಸಲು ಇನ್ನಷ್ಟು ಸಮಯ ನೀಡಿ. ಈ ನಡುವೆ ನಿರಾಶ್ರಿತರ ಮೇಲೆ ದಾಳಿ ನಡೆಸಬೇಡಿ ಎಂದು ವಿಶ್ವಸಂಸ್ಥೆ ಇಸ್ರೇಲ್ ಗೆ ಹೇಳಿದೆ. ಆದರೆ ಇಸ್ರೇಲ್, ನಾವು ಇಲ್ಲಿಯವರೆಗೆ ಹಮಾಸ್ ನ ೨೪ ಬಟಾಲಿಯನ್ ಗಳನ್ನು ನಾಶಗೊಳಿಸಿದ್ದೇವೆ; ಆದರೆ ಇನ್ನೂ ೪ ಬಟಾಲಿಯನ್ ರಾಫಾ ನಗರದಲ್ಲಿ ಅಡಗಿ ಕುಳಿತಿವೆ. ಅವರನ್ನು ನಾಶಗೊಳಿಸುವುದಕ್ಕಾಗಿ ಈ ಕಾರ್ಯಾಚರಣೆ ನಡೆಸುವುದು ಆವಶ್ಯಕವಾಗಿದೆ ಎಂದು ಸ್ಪಷ್ಟಪಡಿಸಿದೆ. (ಜಿಹಾದಿ ಭಯೋತ್ಪಾದಕರನ್ನು ಮತ್ತು ಅದರ ಸಂಘಟನೆಯನ್ನು ಹೇಗೆ ನಾಶ ಮಾಡಬೇಕು ಎಂಬುದನ್ನು ಭಾರತವು ಇಸ್ರೇಲ್ ನಿಂದ ಕಲಿಯಬೇಕು! – ಸಂಪಾದಕರು).