Statement from America: ರಷ್ಯಾ-ಉಕ್ರೇನ್ ಯುದ್ಧವನ್ನು ತಡೆಯಲು ಭಾರತದಿಂದ ಮಾತ್ರ ಸಾಧ್ಯ ! – ಅಮೇರಿಕಾ

ವಾಷಿಂಗ್ಟನ್ (ಅಮೇರಿಕಾ) – ಭಾರತ ಮತ್ತು ಅಮೇರಿಕಾ ಕಾರ್ಯತಂತ್ರದ ಪಾಲುದಾರಿಕೆಯಾಗಿದೆ. ಉಭಯ ದೇಶಗಳ ಮಧ್ಯೆ ಪ್ರತಿಯೊಂದು ಸೂತ್ರದ ಬಗ್ಗೆ ಸ್ಪಷ್ಟವಾದ ಚರ್ಚೆ ನಡೆಯುತ್ತಿದೆ. ಉಕ್ರೇನ್‌ಗೆ ಸಂಬಂಧಿಸಿದಂತೆ, ಭಾರತ ಸೇರಿದಂತೆ ಎಲ್ಲಾ ದೇಶಗಳು ಶಾಶ್ವತ ಶಾಂತಿಯನ್ನು ತರುವ ಪ್ರಯತ್ನಗಳನ್ನು ಬೆಂಬಲಿಸುತ್ತಿವೆ. ರಷ್ಯಾ ಮತ್ತು ಭಾರತದ ನಡುವಿನ ಉತ್ತಮ ಸಂಬಂಧವು ಈ ಯುದ್ಧವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಮಾಸ್ಕೋದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಭೇಟಿಯ ನಂತರ, ರಷ್ಯಾದೊಂದಿಗೆ ಮಾತನಾಡುವ ಮೂಲಕ ಯುದ್ಧವನ್ನು ನಿಲ್ಲಿಸುವ ಸಾಮರ್ಥ್ಯ ಭಾರತಕ್ಕಿದೆ, ಎಂದು ಅಮೇರಿಕಾಕ್ಕೆ ಅನಿಸುತ್ತದೆ, ಈ ರೀತಿ ಪ್ರತಿಕ್ರಿಯೆಯನ್ನು ಅಮೇರಿಕಾವು ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾದ ರಾಷ್ಟ್ರಾಧ್ಯಕ್ಷ ವ್ಲಾದಿಮಿರ್ ಪುಟಿನ್ ಇವರ ಮಾಸ್ಕೊದಲ್ಲಿ ನಡೆದ ಭೇಟಿಯ ನಂತರ ವ್ಯಕ್ತಪಡಿಸಿದೆ. ಮೋದಿ ಮತ್ತು ಪುಟಿನ್ ಇವರು ರಷ್ಯಾ-ಯುಕ್ರೇನ್ ಯುದ್ಧದ ಬಗ್ಗೆಯೂ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ‘ಸಧ್ಯದ ಕಾಲ ಯುದ್ಧಕ್ಕೆ ಸೂಕ್ತವಲ್ಲ’, ಎಂದು ಪ್ರಧಾನಿ ಮೋದಿ ಅವರು ಹೇಳಿದರು. ಈ ಯುದ್ಧದಲ್ಲಿ ಅಮೇರಿಕಾ ಬಹಿರಂಗವಾಗಿ ಉಕ್ರೇನ್ ಗೆ ಬೆಂಬಲವಾಗಿ ನಿಂತಿದೆ. ಅದಕ್ಕಾಗಿಯೇ ಅಮೆರಿಕದ ಈ ಅಭಿಪ್ರಾಯವು ಮಹತ್ವದ್ದಾಗಿದೆ ಎಂದು ಪರಿಗಣಿಸಲಾಗಿದೆ.

ಸಂಪಾದಕೀಯ ನಿಲುವು

“ಉಕ್ರೇನ್-ರಷ್ಯಾ ಯುದ್ಧ ನಿಲ್ಲಬೇಕು” ಹೀಗೆ ಅಮೇರಿಕಾಕ್ಕೆ ನಿಜವಾಗಿಯೂ ಅನ್ನಿಸುತ್ತದೆಯೇ? ಇದು ನಿಜವಾದ ಪ್ರಶ್ನೆಯಾಗಿದೆ. ಈ ಯುದ್ಧವು ಎಲ್ಲಿಯವರೆಗೆ ನಡೆಯುತ್ತದೆಯೊ ಅಲ್ಲಿಯವರೆಗೆ ನಡೆಯಬೇಕೆಂದು ಅಮೆರಿಕ ಬಯಸುತ್ತದೆ. ಇದರಿಂದ ರಷ್ಯಾಕ್ಕೆ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಮತ್ತು ಅದರಿಂದ ಅಮೆರಿಕಕ್ಕೆ ಲಾಭವಾಗಲಿದೆ, ಎಂಬುದು ಅಮೆರಿಕದ ಒಳ ಉದ್ದೇಶವಾಗಿದೆ !