Terror Attack: ಕಟುವಾ (ಜಮ್ಮು) ಇಲ್ಲಿ ನಡೆದಿರುವ ದಾಳಿಯಲ್ಲಿ ೫ ಸೈನಿಕರು ಹುತಾತ್ಮರಾಗಿದ್ದರೆ, ೫ ಜನರಿಗೆ ಗಾಯ !

ಸೈನ್ಯದ ಮೇಲೆ ದಾಳಿ ನಡೆಸಿದ ಭಯೋತ್ಪಾದಕರಿಗೆ ಸ್ಥಳಿಯ ಮಾರ್ಗದರ್ಶಕರಿಂದ ಸಿಕ್ಕಿತ್ತು ಸಹಾಯ !

ಕಟುವಾ (ಜಮ್ಮು-ಕಾಶ್ಮೀರ) – ಜುಲೈ ೮ ರಂದು ಮಧ್ಯಾಹ್ನ ಜಿಹಾದಿ ಭಯೋತ್ಪಾದಕರು ಇಲ್ಲಿ ನಡೆಸಿದ ದಾಳಿಯಲ್ಲಿ ಓರ್ವ ಕಿರಿಯ ಅಧಿಕಾರಿ ಸಹಿತ ೫ ಸೈನಿಕರು ವೀರಗತಿ ಪಡೆದಿದ್ದಾರೆ. ಅದರ ನಂತರ ಸೈನ್ಯ ಪರಿಸರವನ್ನು ಸುತ್ತುವರೆದಿದೆ. ಜುಲೈ ೯ ರಂದು ಕೂಡ ಭಯೋತ್ಪಾದಕರ ಶೋಧ ಕಾರ್ಯಾಚರಣೆ ಮತ್ತು ಚಕಮಕಿಗಳು ಮುಂದುವರೆದಿರುವುದು ತಿಳಿದು ಬಂದಿದೆ. ಸೈನಿಕರು ನೀಡಿರುವ ಮಾಹಿತಿಯ ಪ್ರಕಾರ ೩ ಭಯೋತ್ಪಾದಕರು ಈ ದಾಳಿ ಮಾಡಿದ್ದಾರೆ. ಅವರ ಬಳಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಇವೆ. ಈ ಭಯೋತ್ಪಾದಕರು ಇತ್ತೀಚಿಗೆ ಗಡಿ ದಾಟಿ ನುಸುಳಿದ್ದಾರೆ. ಓರ್ವ ‘ಲೋಕಲ್ ಗೈಡ್’ ಕೂಡ (ಸ್ಥಳಿಯ ಮಾರ್ಗದರ್ಶಕನು) ಅವರಿಗೆ ದಾಳಿಯಲ್ಲಿ ಸಹಾಯ ಮಾಡಿದ್ದಾನೆ. ಕಳೆದ ೩ ದಿನದಲ್ಲಿ ನಡೆದಿರುವ ವಿವಿಧ ಭಯೋತ್ಪಾದಕ ದಾಳಿಯಲ್ಲಿ ಒಟ್ಟು ೭ ಸೈನಿಕರು ವೀರಗತಿ ಹೊಂದಿದ್ದಾರೆ.

‘ಕಾಶ್ಮೀರಕ್ಕೆ ಸ್ವಾತಂತ್ರ್ಯ ದೊರೆಯುವವರೆಗೆ ಈ ಹೋರಾಟ ಮುಂದುವರೆಯುವುದಂತೆ !’ – ಕಾಶ್ಮೀರ್ ಟೈಗರ್ಸ್

‘ಕಾಶ್ಮೀರ ಟೈಗರ್ಸ್’ ಹೆಸರಿನ ಭಯೋತ್ಪಾದಕ ಸಂಘಟನೆಯು ಈ ದಾಳಿಯ ಹೊಣೆ ಸ್ವೀಕರಿಸಿದೆ. ಈ ಸಂಘಟನೆ ನಿಷೇಧಿತ ‘ಜೈಶ-ಏ-ಮಹಮ್ಮದ್’ ನ ಶಾಖೆ ಎಂದು ನಂಬಲಾಗಿದೆ. ಕಟುವಾದ ಬಡನೋಟ ಇಲ್ಲಿ ಭಾರತೀಯ ಸೈನ್ಯದ ಮೇಲೆ ‘ಹ್ಯಾಂಡ್ ಗ್ರಾನೆಡ್’ ಮತ್ತು ‘ಸ್ನೀಪರ್ ಗನ್’ ನಿಂದ ದಾಳಿ ನಡೆಸಲಾಗಿದೆ. ಕೆಲವು ದಿನಗಳ ಹಿಂದೆ ಡೋಡಾದಲ್ಲಿ ಹತರಾಗಿರುವ ೩ ಭಯೋತ್ಪಾದಕರ ಸಾವಿನ ಸೇಡು ಇದಾಗಿದೆ. ಆದಷ್ಟು ಬೇಗನೆ ಇಂತಹ ದಾಳಿಗಳು ನಡೆಸಲಾಗುವುದು. ಕಾಶ್ಮೀರಕ್ಕೆ ಸ್ವಾತಂತ್ರ್ಯ ದೊರೆಯುವವರೆಗೆ ಈ ಹೋರಾಟ ಮುಂದುವರೆಯುವುದು ಎಂದು, ಈ ಭಯೋತ್ಪಾದಕ ಸಂಘಟನೆ ಹೇಳಿದೆ.

‘ಶತ್ರು ಸಹಾಯ ಕಾನೂನಿ’ನ ಉಪಯೋಗ ಮಾಡಿಕೊಂಡು ವರ್ಷದ ಕೊನೆಯವರೆಗೆ ಭಯೋತ್ಪಾದಕರನ್ನು ಬೇರು ಸಹಿತ ನಾಶ ಮಾಡುವ ಗುರಿ !

ಈ ವರ್ಷದ ಕೊನೆಯಲ್ಲಿ ಸೈನ್ಯವು ಜಮ್ಮು ಪ್ರದೇಶದಿಂದ ಭಯೋತ್ಪಾದನೆ ಸಂಪೂರ್ಣವಾಗಿ ನಾಶ ಮಾಡುವ ಯೋಜನೆ ರೂಪಿಸಿದೆ. ಇತ್ತೀಚಿಗೆ ಗೃಹ ಸಚಿವಾಲಯದ ಸಭೆಯ ನಂತರ ಪುಂಛ, ರಾಜೌರಿ, ರಿಯಾಸಿ ಮತ್ತು ಕಟುವಾದಲ್ಲಿ ಸಕ್ರಿಯ ಇರುವ ೩೦ ಭಯೋತ್ಪಾದಕರ ಪಟ್ಟಿ ತಯಾರಿಸಿದ್ದು ಭಯೋತ್ಪಾದಕ ಮತ್ತು ಅವರಿಗೆ ಸಹಾಯ ಮಾಡುವುದಕ್ಕಾಗಿ ‘ಎನಿಮಿ ಏಜೆಂಟ್ ಲಾ’ (ಶತ್ರು ಸಹಾಯಕ ಕಾನೂನು) ಮತ್ತೆ ಮೂಲ ಸ್ವರೂಪದಲ್ಲಿ ಜಾರಿಗೊಳಿಸುವ ನಿರ್ಣಯ ತೆಗೆದುಕೊಳ್ಳಲಾಗಿದೆ. ಈ ಕಾನೂನಿನಲ್ಲಿ ಭಯೋತ್ಪಾದಕರಿಗೆ ಸಹಾಯ ಮಾಡುವವರ ಆಸ್ತಿ ವಶಪಡಿಸಿಕೊಳ್ಳುವುದರ ಜೊತೆಗೆ ಅವರಿಗೆ ಜೀವಾವಧಿ ಶಿಕ್ಷೆ ಮತ್ತು ಗಲ್ಲು ಶಿಕ್ಷೆ ನೀಡುವ ವರೆಗಿನ ವ್ಯವಸ್ಥೆ ಇದೆ. ೧೯೪೮ ರಲ್ಲಿ ವಿದೇಶಿ ಭಯೋತ್ಪಾದಕ ಮತ್ತು ನುಸುಳುಕೋರರನ್ನು ನಾಶ ಮಾಡುವುದಕ್ಕಾಗಿ ಇದನ್ನು ರೂಪಿಸಲಾಗಿತ್ತು. ಪ್ರಸ್ತುತ ‘ಯುಎಪಿಎ’ ಕಾನೂನು (ಅಕ್ರಮ ಚಟುವಟಿಕೆ ನಿಷೇಧ ಕಾನೂನು) ಜಾರಿ ಇದ್ದರೂ ಕೂಡ, ‘ಶತ್ರು ಸಹಾಯಕ ಕಾನೂನು’ ಇನ್ನು ಕಠೋರವಾಗಿದೆ.