|
ಕೋಲಕಾತಾ (ಬಂಗಾಳ) – ಬಾಂಗ್ಲಾದೇಶದ ಜಿಹಾದಿ ಭಯೋತ್ಪಾದಕ ಸಂಘಟನೆ ‘ಅನ್ಸಾರ್-ಅಲ್-ಇಸ್ಲಾಂ’ ಬಂಗಾಳದಲ್ಲಿ ಸಕ್ರಿಯವಾಗಿರುವುದು ಬೆಳಕಿಗೆ ಬಂದಿದೆ. ಈ ಸಂಘಟನೆಯು ಬಂಗಾಳದಲ್ಲಿ `ಶಹೀದ ಮೊಡ್ಯುಲ್’ (ಸ್ಥಳೀಯ ಗುಂಪು) ಸಿದ್ಧಪಡಿಸಿದೆ. ಪರಸ್ಪರರೊಂದಿಗೆ ಸಂವಾದ ಮಾಡಲು ಭಯೋತ್ಪಾದಕರು ಅಂತಹ ಆಪ್ ಗಳನ್ನು ಬಳಸುತ್ತಾರೆ, ಇದು ಭದ್ರತಾ ಇಲಾಖೆಯ ರಾಡಾರ್ ಮೇಲೆ ತ್ವರಿತವಾಗಿ ಬರುವುದಿಲ್ಲ. ಈ ಮಾಡ್ಯೂಲ್‌ನಲ್ಲಿ ಹೆಚ್ಚು ಹೆಚ್ಚು ಭಯೋತ್ಪಾದಕರನ್ನು ನೇಮಿಸಿಕೊಳ್ಳಲಾಗುತ್ತಿದೆ. ಕೋಲಕಾತಾ ಪೊಲೀಸರ ವಿಶೇಷ ಕಾರ್ಯಪಡೆಯು ಈ ಮಾಹಿತಿಯನ್ನು ಬಹಿರಂಗಪಡಿಸಿದೆ. ಈ ದಳವು ಅನ್ಸರ್-ಅಲ್-ಇಸ್ಲಾಮಿಯಾದ ಮೂವರು ಭಯೋತ್ಪಾದಕರನ್ನು ಬಂಧಿಸಿದೆ, ಬಂಧಿತರ ತನಿಖೆಯಲ್ಲಿ ಅವರ ಉದ್ದೇಶವನ್ನು ಹೇಳಿದ್ದಾರೆ.
1. ವಿಶೇಷ ತನಿಖಾ ದಳವು ಜೂನ್ 22, 2024 ರಂದು ಮೊಹಮ್ಮದ್ ಹಬೀಬುಲ್ಲಾ ಹೆಸರಿನ ಭಯೋತ್ಪಾದಕನನ್ನು ಬಂಧಿಸಿತ್ತು. ಹಬೀಬುಲ್ಲಾನನ್ನು ವರ್ಧಮಾನ ಜಿಲ್ಲೆಯಿಂದ ಬಂಧಿಸಲಾಗಿತ್ತು. ಹಬೀಬುಲ್ಲಾ ‘ಶಹೀದ್ ಮಾಡ್ಯೂಲ್’ನ ಮುಖ್ಯಸ್ಥನಾಗಿದ್ದಾನೆಂದು ಹೇಳಲಾಗಿದೆ. ವಿಚಾರಣೆಯಲ್ಲಿ ಹಬೀಬುಲ್ಲಾ ಅವರ ಷಡ್ಯಂತ್ರ ಮತ್ತು ತಮ್ಮ ಗುಂಪಿನ ಸಹಚರರ ಹೆಸರನ್ನು ಕೂಡ ಬಹಿರಂಗಪಡಿಸಿದನು. ಹಬೀಬುಲ್ಲಾನ ಮಾಹಿತಿಯ ಆಧಾರದ ಮೇಲೆ, ತನಿಖಾ ದಳವು ಜೂನ್ 25ರಂದು ಹರೇಜ್ ಶೇಖ್ ಮತ್ತು ಜೂನ್ 28 ರಂದು ಅನ್ವರ್ ಶೇಖ್ ಅವರನ್ನು ಬಂಧಿಸಿತ್ತು. ಈ ಮೂವರ ವಿಚಾರಣೆಯಲ್ಲಿ ಅವರು ಬಂಗಾಳದಲ್ಲಿ ಅನ್ಸಾರ್-ಅಲ್-ಇಸ್ಲಾಂ ಈ ಬಾಂಗ್ಲಾದೇಶಿ ಭಯೋತ್ಪಾದಕ ಸಂಘಟನೆಗಳ ಜಾಲಗಳನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆಂದು ಬಹಿರಂಗವಾಗಿದೆ. ಇಲ್ಲಿ ಅವರು ‘ಶಹೀದ ಮಾಡ್ಯೂಲ್’ ಅನ್ನು ಸಿದ್ಧಪಡಿಸುತ್ತಿದ್ದರು, ಇದಕ್ಕಾಗಿ ದೊಡ್ಡ ಪ್ರಮಾಣದಲ್ಲಿ ಯುವಕರನ್ನು ನೇಮಿಸಿಕೊಳ್ಳಲಾಗುತ್ತಿತ್ತು. ಈ ಎಲ್ಲಾ ಆರೋಪಿಗಳು ಸಂವಹನಕ್ಕಾಗಿ ಟೆಲಿಗ್ರಾಮ್ ಮತ್ತು ಇತರೆ ಕೆಲವು ಆಪ್ ಗಳನ್ನು ಬಳಸುತ್ತಿದ್ದರು. ಈ ಆಪ್ ಗಳನ್ನು ಸುಲಭವಾಗಿ ಕಂಡು ಹಿಡಿಯಲು ಸಾಧ್ಯವಾಗುವುದಿಲ್ಲ.
2. ಪೊಲೀಸರು ಮತ್ತು ಇತರ ಭದ್ರತಾ ಇಲಾಖೆಗಳನ್ನು ಮೋಸಗೊಳಿಸಲು ಈ ಭಯೋತ್ಪಾದಕರು ಸುಳ್ಳು ಹೆಸರುಗಳನ್ನು ಇಟ್ಟಿದ್ದರು. ಈ ಭಯೋತ್ಪಾದಕರು ತಮ್ಮ ಸಂಭಾಷಣೆಯಲ್ಲಿ ಅನೇಕ ಸಾಂಕೇತಿಕ ಶಬ್ದಗಳನ್ನು ಉಪಯೋಗಿಸಿದ್ದಾರೆ, ಇದನ್ನು ಪೊಲೀಸರು ತೆರೆಯಲು ಪ್ರಯತ್ನಿಸುತ್ತಿದ್ದಾರೆ. ಇಂಟರನೆಟ ಮೂಲಕ ಈ ಭಯೋತ್ಪಾದಕರು ಜಿಹಾದಿ ವಿಚಾರ ಸರಣಿಯ ಯುವಕರನ್ನು ಗುರುತಿಸುತ್ತಿದ್ದರು ನಂತರ ಅವರೊಂದಿಗೆ ಮಾತನಾಡುತ್ತಿದ್ದರು. ಹಬೀಬುಲ್ಲಾ ಭಾರತದಲ್ಲಿಯೂ ಈ ಸಂಘಟನೆಯನ್ನು ನಡೆಸುತ್ತಿದ್ದನು. ಎಲ್ಲರೂ ಅವನ ಸೂಚನೆಗಳನ್ನು ಪಾಲಿಸುತ್ತಿದ್ದರು. ಸಧ್ಯಕ್ಕೆ ಬಂಗಾಳ ಪೊಲೀಸರು ಅವರ ಜಾಲದ ಬುಡ ಭಾರತದಲ್ಲಿ ಎಷ್ಟು ಆಳದವರೆಗೆ ಬೇರೂರಿದೆಯೆಂದು ಕಂಡುಹಿಡಿಯುವಲ್ಲಿ ಕಾರ್ಯನಿರತರಾಗಿದ್ದಾರೆ.
3. ಅನ್ಸಾರ್-ಅಲ್-ಇಸ್ಲಾಂ ಸಂಘಟನೆಗೆ ಬಾಂಗ್ಲಾದೇಶದಲ್ಲಿ ನಿಷೇಧಿಸಲಾಗಿದೆ. ಜೂನ್ 2024 ರ ವೇಳೆಗೆ, ಬಾಂಗ್ಲಾದೇಶ ಪೊಲೀಸರು ಈ ಸಂಘಟನೆಯು 3 ಭಯೋತ್ಪಾದಕರನ್ನು ಕಾಕ್ಸ್ ಬಜಾರ್‌ನಿಂದ ಬಂಧಿಸಿತ್ತು. ಮಹಮ್ಮದ್ ಜಕಾರಿಯಾ, ಮಹಮ್ಮದ್ ನಿಯಾಮತ್ ಉಲ್ಲಾಹ ಮತ್ತು ಮಹಮ್ಮದ್ ಒಝೈರ್ ಅವರ ಹೆಸರುಗಳಾಗಿವೆ. ಇವರೆಲ್ಲರ ವಯಸ್ಸು ಸುಮಾರು 20 ವರ್ಷಗಳಾಗಿವೆ. ಈ ಗುಂಪಿನ ಜನರು ಅಫ್ಘಾನಿಸ್ತಾನದಲ್ಲಿ ಕಾರ್ಯನಿರತವಾಗಿರುವ ತಾಲಿಬಾನನನ್ನು ಆದರ್ಶವೆಂದು ನಂಬುತ್ತಾರೆ.
Bangladeshi #terrorist organizations are active in Bengal; Using apps to recruit Mu$l!m youth into the organization in #Bengal.
Information obtained after the arrest of 3 terrorists!
There is no doubt that Bangladeshi terrorist organizations will recruit infiltrating… pic.twitter.com/GLseACsOHU
— Sanatan Prabhat (@SanatanPrabhat) July 9, 2024
ಸಂಪಾದಕೀಯ ನಿಲುವುಬಾಂಗ್ಲಾದೇಶಿ ಭಯೋತ್ಪಾದಕ ಸಂಘಟನೆಯು ಭಾರತದಲ್ಲಿ ನುಸುಳಿರುವ ಬಾಂಗ್ಲಾದೇಶಿ ಮುಸ್ಲಿಮರನ್ನು ಭರ್ತಿ ಮಾಡಿಕೊಂಡು ದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಬಹುದು, ಅದರಲ್ಲಿ ಯಾವುದೇ ಸಂದೇಹವಿಲ್ಲ ! ಇದರಿಂದಲಾದರೂ ಭಾರತಕ್ಕೆ ನುಸುಳುಕೋರರ ಉಪದ್ರವದ ಕಲ್ಪನೆ ಬಂದು ಅವರನ್ನು ತಕ್ಷಣವೇ ಹೊರ ಹಾಕಲು ಪ್ರಯತ್ನಿಸುವರು ಎಂದು ಅಪೇಕ್ಷೆ ! |