Education Jihad: ದೆಹಲಿಯಲ್ಲಿ ಈಗ ‘ಕೋಚಿಂಗ್ ಜಿಹಾದ್’

  • ಕೋಚಿಂಗ್ ಸೆಂಟರ್‌ನಲ್ಲಿ ಮುಸ್ಲಿಂ ಶಿಕ್ಷಕರಿಂದ ಹಿಂದೂ ವಿದ್ಯಾರ್ಥಿಗಳಿಗೆ ಖುರಾನ್ ಓದಲು ಒತ್ತಾಯ !

  • ಪೋಷಕರಿಂದ ಪೊಲೀಸರಲ್ಲಿ ದೂರು!

ನವ ದೆಹಲಿ – ಇಲ್ಲಿನ ಶಕುರಪುರ ಪರಿಸರದಲ್ಲಿ ಜೆ.ಎಮ್.ಡಿ. ಕೋಚಿಂಗ ಸೆಂಟರನಲ್ಲಿ ಮುಸ್ಲಿಂ ಶಿಕ್ಷಕ ರಿಜ್ವಾನ್ ಹಿಂದೂ ವಿದ್ಯಾರ್ಥಿಗಳ ಬ್ರೈನ್ ವಾಷ್ ಮಾಡಿ ದೇವರಪೂಜೆ ಮಾಡುವುದನ್ನು ಬಿಟ್ಟು ಅಲ್ಲಾನ ಪೂಜೆ ಮಾಡಲು ಮತ್ತು ಕುರಾನ ಓದುವಂತೆ ಹೇಳುತ್ತಿದ್ದನು. ಇಲ್ಲಿ ಕಲಿಯುತ್ತಿದ್ದ ಓರ್ವ ವಿದ್ಯಾರ್ಥಿಯ ಪೋಷಕರು ಈ ಪ್ರಕರಣದ ಕುರಿತು ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ.

ಈ ದೂರಿನಲ್ಲಿ, ನನ್ನ ಮಗ ಜೆ.ಎಂ.ಡಿ. ಕೋಚಿಂಗ್ ಸೆಂಟರನಲ್ಲಿ ಕಲಿಯುತ್ತಿದ್ದಾನೆ ಮತ್ತು ಕಳೆದ ಅನೇಕ ದಿನಗಳಿಂದ ಅವನು ನನಗೆ ಕುರಾನ ವಿಷಯದಲ್ಲಿ ಕೇಳುತ್ತಿದ್ದನು. ಮೊದಲು ನಾನು ಅದನ್ನು ನಿರ್ಲಕ್ಷಿಸಿದೆ; ಆದರೆ ಮಗನು, ಅವನ ಶಿಕ್ಷಕ ರಿಜ್ವಾನ ಅವನಿಗೆ ಮೇಲಿಂದ ಮೇಲೆ ಕುರಾಣ ಓದಲು ಹೇಳುತ್ತಿದ್ದನು ಮತ್ತು `ಕಲಮಾ’ (ಅಲ್ಲಾನನ್ನು ಗೌರವಿಸುವ ಹೇಳಿಕೆ) ಓದುವಂತೆ ಒತ್ತಾಯಿಸುತ್ತಾನೆ ಎಂದು ಹೇಳಿದನು. ಸೆಂಟರನಲ್ಲಿರುವ ಶಿಕ್ಷಕರು ಮಕ್ಕಳಿಗೆ, ‘ನಿಮ್ಮ ಹಿಂದೂ ಧರ್ಮವು ಮೂರ್ಖತನದ್ದಾಗಿದೆ. ನಿಮ್ಮ ದೇವತೆಗಳಲ್ಲಿ ಶಕ್ತಿಯಿಲ್ಲ. ಆದ್ದರಿಂದ ಈಗಿನಿಂದಲೇ ಕುರಾನ್ ಮತ್ತು ಕಲಮಾ ಓದಬೇಕಾಗುವುದು. ಅದರಲ್ಲಿ ಬಹಳಷ್ಟು ಶಕ್ತಿ ಇದೆ. ಇದರಿಂದ ನೀವು ಬಲಶಾಲಿಯಾಗುತ್ತೀರಿ’ ಎಂದು ಹೇಳುತ್ತಿದ್ದರು. ಈ ವಿಷಯದಲ್ಲಿ ರಿಜ್ವಾನನನ್ನು ಮೊಬೈಲ ಮೂಲಕ ಸಂಪರ್ಕಿಸಿ ವಿಚಾರಿಸಿದಾಗ ಅವನು ಅವಾಚ್ಯ ಶಬ್ದಗಳಲ್ಲಿ ನಿಂದಿಸಿದ. ಅವನು, ನಾನು ದಾವೂದ ಇಬ್ರಾಹಿಂನ ಅಪ್ಪನಾಗಿದ್ದೇನೆ. ನಾನು ನಿಮ್ಮ ಸಂಪೂರ್ಣ ಕುಟುಂಬವನ್ನು ನಗ್ನಗೊಳಿಸಿ ಕುಣಿಯುವಂತೆ ಮಾಡುತ್ತೇನೆ’, ಎಂದು ಹೇಳಿದನು.

‘ಜೈ ಮಾತಾ ದಿ’ ಕೋಚಿಂಗ್ ಸೆಂಟರ್ ನಲ್ಲಿ ಮುಸ್ಲಿಂ ಶಿಕ್ಷಕ

ಈ ಪ್ರಕರಣದಲ್ಲಿ ‘ಸ್ವರಾಜ್ಯ’ ದಿನಪತ್ರಿಕೆಯ ಸಂಪಾದಕಿ ಸ್ವಾತಿ ಗೋಯಲ್ ಶರ್ಮಾ ಅವರು ತಮ್ಮ ಪೋಸ್ಟನಲ್ಲಿ, `ನಾನು ಮಕ್ಕಳ ತಂದೆಯೊಂದಿಗೆ ಮಾತನಾಡಿದ್ದೇನೆ. ಸತ್ಯವೇನೆಂದರೆ, ಯಾವ ಕೋಚಿಂಗ ಸೆಂಟರನಲ್ಲಿ ಅಪ್ರಾಪ್ತ ಹಿಂದೂ ಮಕ್ಕಳ ಮತಾಂತರಗೊಳಿಸಲಾಗುತ್ತಿದೆಯೋ, ಅದರ ಹೆಸರು `ಜೈ ಮಾತಾ ದಿ’ ಆಗಿದೆ. ಮತ್ತು ಫಲಕದ ಮೇಲೆ `ಜೆ.ಎಮ್.ಡಿ.’ ಎಂದು ಬರೆಯಲಾಗಿದೆ. ಮಕ್ಕಳ ಪೋಷಕರು ಹೇಳುವುದೇನೆಂದರೆ, ಅವರು ಮಕ್ಕಳಿಗೆ ಅಲ್ಲಿ ದಾಖಲಿಸಿದಾಗ ಅವರಿಗೆ ಸಂಜಯ ಹೆಸರಿನ ವ್ಯಕ್ತಿಯೊಂದಿಗೆ ಮಾತುಕತೆಯಾಗಿತ್ತು. ರಿಜ್ವಾನ ಮತ್ತು ಅಬ್ರಾರ ಹೆಸರಿನ ಶಿಕ್ಷಕರು ಕಲಿಸಲು ಬರುತ್ತಾರೆ ಮತ್ತು ಮಕ್ಕಳಿಗೆ ಮತಾಂತರಗೊಳ್ಳುವಂತೆ ಮಾಡಬಹುದು ಎಂಬುದು ಆ ಸಮಯದಲ್ಲಿ ಅವರ ಪೋಷಕರಿಗೆ ತಿಳಿದಿರಲಿಲ್ಲ, ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಹಿಂದೂಗಳೇ, ನಿಮ್ಮ ಮಕ್ಕಳಿಗೆ ಯಾರು ಮತ್ತು ಏನು ಕಲಿಸುತ್ತಿದ್ದಾರೆ, ಎನ್ನುವ ಮಾಹಿತಿಯನ್ನು ಪಡೆಯಿರಿ ! ಕೋಚಿಂಗ್ ಸೆಂಟರ್ ಹೆಸರಿನಲ್ಲಿ ನಿಮ್ಮ ಮಕ್ಕಳನ್ನು ಮತಾಂತರಗೊಳಿಸಲು ಪ್ರಯತ್ನಿಸುವವರನ್ನು ಬಹಿರಂಗಪಡಿಸಿರಿ !

ಮುಸ್ಲಿಮರು ಎಷ್ಟೇ ಕಲಿತರೂ, ಅವರು ತಮ್ಮ ಧರ್ಮದ ವಿಚಾರವನ್ನೇ ಮಾಡುತ್ತಾರೆ, ಹಾಗೆಯೇ ಹಿಂದೂಗಳು ಎಷ್ಟೇ ಕಲಿತರೂ ಅವರು ಜಾತ್ಯತೀತರಾಗಿದ್ದು ಇತರೆ ಧರ್ಮದವರನ್ನು ಶ್ರೇಷ್ಠರೆಂದು ತಿಳಿಯುತ್ತಾರೆ !