ಹಿಂದತ್ವನಿಷ್ಠರ ಸಂಘಟಿತ ಪ್ರಯತ್ನದಿಂದಾಗಿ ಅದೇ ಸ್ಥಳದಲ್ಲಿ ಶ್ರೀ ದತ್ತಗುರುವಿನ ಮೂರ್ತಿ ಪುನರ್ ಸ್ಥಾಪನೆ!
ಪುಣೆ – ನಗರದ ಎರಂಡ್ವಣೆಯ ಸತ್ಯಂ ಇಂಡಸ್ಟ್ರಿಯಲ್ ಎಸ್ಟೇಟ್‌ನಲ್ಲಿರುವ ರಸ್ತೆ ಬದಿಯ ಒಂದು ಕಟ್ಟಡದ ಆವರಣದಲ್ಲಿ ಕಳೆದ 30-35 ವರ್ಷಗಳಿಂದ ಶ್ರೀ ದತ್ತಾತ್ರಯರ ಸಣ್ಣ ದೇವಾಲಯವಿತ್ತು; ಆದರೆ ಜಾನ್ ಥಾಮಸ್ ಎಂಬ ಓರ್ವ ಕ್ರಿಶ್ಚಿಯನ್ ವ್ಯಕ್ತಿಯ ಒಂದು ದೂರಿನ ಮೇರೆಗೆ ಸರ್ಕಾರವು ಮಧ್ಯರಾತ್ರಿ 12 ಗಂಟೆಗೆ ಈ ದೇವಾಲಯವನ್ನು ಕೆಡವಿತು. ಪುಣೆ ಮಹಾನಗರ ಪಾಲಿಕಯು ರಾತ್ರಿ 12 ಗಂಟೆಗೆ ಈ ಕ್ರಮವನ್ನು ಕೈಕೊಳ್ಳಲು ಪ್ರಾರಂಭಿಸಿತು.
ಈ ವಿಷಯ ತಿಳಿಯುತ್ತಲೇ ಅಲ್ಲಿನ ‘ವಿಶ್ವ ಹಿಂದೂ ಮರಾಠಾ ಸಂಘ’ದ ಪದಾಧಿಕಾರಿಗಳು ಹಾಗೂ ಸದಸ್ಯರು ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ತಡೆಯುವ ಪ್ರಯತ್ನ ಮಾಡಿದರು. ಆದರೆ, ಪೊಲೀಸರು-ಪಾಲಿಕೆ ಅಧಿಕಾರಿಗಳು ವಿರೋಧಿಸುತ್ತಿದ್ದ ಹಿಂದೂಗಳನ್ನು ತಡೆದು, ದೇವಸ್ಥಾನವು ರಸ್ತೆಯಲ್ಲಿಲ್ಲದಿದ್ದರೂ, ಹಾಗೆಯೇ ಯಾರಿಗೂ ಯಾವುದೇ ಪೂರ್ವಸೂಚನೆ ನೀಡದೆ, ದೇವಸ್ಥಾನವನ್ನು ಕೆಡವಿ ದತ್ತಗುರುವಿನ ಮೂರ್ತಿಯನ್ನು ತೆಗೆದುಕೊಂಡು ಹೋದರು.
Following a Christian individual’s complaint, the @PMCPune demolishes a Datta Mandir located in the premises of a builiding in Erandwane, Pune
Despite the temple having been there for the past 30-35 years and not being located on the road, it was demolished abruptly, and the… pic.twitter.com/0P9UjWTEoL
— Sanatan Prabhat (@SanatanPrabhat) July 7, 2024
ಆ ಬಳಿಕ ಸಕಲ ಹಿಂದೂ ಸಮಾಜ ಹಾಗೂ ಸಂಘಟನೆಗಳ ವತಿಯಿಂದ ಅಲ್ಲಿ ತಕ್ಷಣ ‘ರಸ್ತೆತಡೆ ’ ಚಳವಳಿ ನಡೆಸಲಾಯಿತು ಮತ್ತು ಸರ್ಕಾರದ ಮೇಲೆ ಒತ್ತಡ ಹೇರಿದ ಬಳಿಕ ಕೆಲವೇ ಗಂಟೆಗಳಲ್ಲಿ ಶ್ರೀ ದತ್ತಗುರುವಿನ ಮೂರ್ತಿಯನ್ನು ಮಹಾನಗರ ಪಾಲಿಕೆಯಿಂದ ವಾಪಸ್ ಪಡೆದು ಕೆಡವಿದ ಸ್ಥಳದಲ್ಲಿಯೇ ಪುನರ್ ಪ್ರತಿಷ್ಠಾಪಿಸಲಾಯಿತು. ವರಪೇಭೂಷಣ ಎಂಬ ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಿಂದ ಈ ಮಾಹಿತಿಯನ್ನು ಪ್ರಸಾರ ಮಾಡಲಾಗಿದೆ. ಈ ಮಾಹಿತಿಯು ಇತರ ಸಾಮಾಜಿಕ ಜಾಲತಾಣಗಳಲ್ಲೂ ಪ್ರಸಾರವಾಗುತ್ತಿದ್ದು, ಪುಣೆ ನಗರ ಪಾಲಿಕೆಯ ಹಿಂದೂ ವಿರೋಧಿ ಕ್ರಮದ ಬಗ್ಗೆ ಹಿಂದೂಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆ ನಂತರ ಅಲ್ಲಿ ಶ್ರೀ ದತ್ತಗುರುಗಳ ಆರತಿ ಮತ್ತು ಛತ್ರಪತಿ ಶಿವರಾಯರ ‘ಶಿವವಂದನೆ’ ಕಾರ್ಯಕ್ರಮ ನಡೆಸಲಾಯಿತು. ಅದೇ ಸ್ಥಳದಲ್ಲಿ ಭವ್ಯ ದೇವಸ್ಥಾನದ ಜೀರ್ಣೋದ್ಧಾರದ ಸಂಕಲ್ಪವನ್ನು ಮಾಡಲಾಯಿತು ಮತ್ತು ಅದಕ್ಕೆ ಎಲ್ಲರೂ ಸಹಕರಿಸಲು ಮತ್ತು ಕೊಡುಗೆ ನೀಡಲು ನಿರ್ಧರಿಸಿದರು. ಆದರೆ ಮಹಾನಗರ ಪಾಲಿಕೆಯ ಈ ಕ್ರಮದ ಹಿಂದೆ ಅದರ ನಿಲುವು ಇದುವರೆಗೂ ತಿಳಿದು ಬಂದಿಲ್ಲ.
ಸಂಪಾದಕೀಯ ನಿಲುವುಹಿಂದೂ ದೇವಾಲಯಗಳ ಮೇಲೆ ಕೂಡಲೇ ಕ್ರಮಕೈಗೊಳ್ಳುವ ಸರ್ಕಾರವು ಅಕ್ರಮ ಗೋರಿ, ದರ್ಗಾ, ಮದರಸಾಗಳು ಅಥವಾ ಇತರ ಪಂಥದವರ ಪೂಜಾ ಸ್ಥಳಗಳ ಮೇಲೆ ಕ್ರಮ ಕೈಗೊಳ್ಳಲು ಹೆದರುತ್ತದೆ! |