Muslims In Agniveer Scheme : ಮುಸಲ್ಮಾನ ಯುವಕರು ‘ಅಗ್ನಿವೀರ’ರಾಗಿ ದೇಶ ಸೇವೆ ಮಾಡಬೇಕು ! – ಕಾಝಿ ಸಾಕಿಬ್ ಅದಿಬ್

ಕಾನ್ಪುರದಲ್ಲಿನ ೩೦೦ ಕ್ಕುಹೆಚ್ಚಿನ ಮಸೀದಿಯಲ್ಲಿ ‘ಅಗ್ನಿವೀರ ಯೋಜನೆ’ ಮುಸಲ್ಮಾನರ ಹಿತದಲ್ಲಿ ಇದೆ ಎಂದು ಬೋಧನೆ !

(ಕಾಝಿ ಎಂದರೆ ಇಸ್ಲಾಮಿ ಕಾನೂನ ತಜ್ಞ ಮತ್ತು ನ್ಯಾಯಾಧೀಶ)

ಕಾನಪುರ್ – ಮುಸಲ್ಮಾನ ಜನಾಂಗದವರು ಕೇಂದ್ರ ಸರಕಾರದ ‘ಅಗ್ನಿವೀರ ಯೋಜನೆ’ಗೆ ಬೆಂಬಲ ನೀಡಿದೆ. ಕಾನಪುರದಲ್ಲಿನ ೩೦೦ ಕ್ಕೂ ಹೆಚ್ಚಿನ ಮಸೀದಿಯಲ್ಲಿ ‘ಅಗ್ನಿವೀರ ಯೋಜನೆ’ ದೇಶದಲ್ಲಿನ ಮುಸಲ್ಮಾನರ ಹಿತಕ್ಕಾಗಿ ಇರುವುದು ಎಂದು ಘೋಷಿಸಿದ್ದಾರೆ. ‘ಮುಸಲ್ಮಾನ ಯುವಕರು ಅಗ್ನಿ ವೀರರಾಗಿ ದೇಶಕ್ಕಾಗಿ ಬಲಿದಾನ ನೀಡುವುದರಿಂದ ಹಿಂದೆ ಸರಿಯಬಾರದು. ಮುಸಲ್ಮಾನ ಯುವಕರು ಮುಂದೆ ಬಂದು ಈ ಯೋಜನೆಯಾ ಲಾಭ ಪಡೆಯಬೇಕೆಂದು’ ಕಾಝಿ ಸಾಕಿಬ ಅದಿಬ ಇವರು ಕರೆ ನೀಡಿದ್ದಾರೆ. ನರಾಮೌ, ರಾಣೆಗಂಜ್, ಓಂಪುರವಾ ಮತ್ತು ಕಾನಪುರ್ ಇಲ್ಲಿಯ ಮಸೀದಿಗಳಲ್ಲಿ ಶುಕ್ರವಾರ ಜುಲೈ ೫ ರಂದು ನಡೆದಿರುವ ನಮಾಜಿನ ನಂತರ ಉಪಸ್ಥಿತರಿಗೆ ಉದ್ದೇಶಿಸಿ ಹೇಳುತ್ತಿದ್ದರು.

ದೇಶದಲ್ಲಿನ ಮುಸಲ್ಮಾನರ ಬಗ್ಗೆ ಗೌರವ ಹೆಚ್ಚುವುದು !

ಕೇಂದ್ರ ಸರಕಾರದ ಯೋಜನೆ ಎಲ್ಲಾ ಜಾತಿ, ಜನಾಂಗ ಮತ್ತು ವರ್ಗದ ಹಿತಕ್ಕಾಗಿ ಇದೆ. ಈ ಯೋಜನೆಯಲ್ಲಿ ಸಹಭಾಗಿಯಾದರೆ ದೇಶದಲ್ಲಿನ ಮುಸಲ್ಮಾನರಿಗೆ ಗೌರವ ಹೆಚ್ಚಾಗುವುದು. ಯುವಕರ ನಿರುದ್ಯೋಗ ಸಮಸ್ಯೆಯ ಪ್ರಶ್ನೆ ಬಗೆಹರಿಯುವುದು. ಸೈನ್ಯದಲ್ಲಿ ೪ ವರ್ಷದ ಸೇವೆಯ ನಂತರ ಸ್ವಂತದ ಇಷ್ಟದ ಯಾವುದೇ ವ್ಯವಸಾಯ ಆರಂಭಿಸುವುದಕ್ಕೆ ಸಾಕಷ್ಟು ಹಣ ಇರಲಿದೆ. ಕೇಂದ್ರ ಮತ್ತು ರಾಜ್ಯ ಸರಕಾರದ ವಿವಿಧ ಇಲಾಖೆಯಲ್ಲಿ ಕೂಡ ನೌಕರಿಯ ಅವಕಾಶ ಲಭ್ಯವಾಗುವುದು, ಹೀಗೆಯೂ ಕಾಝಿ ಸಾಕಿಬ ಅದಿಬ ಇವರು ಸ್ಪಷ್ಟಪಡಿಸಿದರು.

ಸಂಪಾದಕೀಯ ನಿಲುವು

ಈ ಹಿಂದೆ ಮಸೀದಿಯಿಂದ ಎಂದಾದರೂ ಈ ರೀತಿ ಭಾರತೀಯ ಸೈನ್ಯದಲ್ಲಿ ಭರ್ತಿ ಆಗಲು ಕರೆ ನೀಡಿರುವ ಬಗ್ಗೆ ಕೇಳಿಲ್ಲ, ಆದ್ದರಿಂದ ‘ಈ ಕರೆಯ ಹಿಂದೆ ಯಾವುದಾದರೂ ಷಡ್ಯಂತರ ಇದೆಯೇ ?’, ಹೀಗೆ ಯಾರಿಗಾದರೂ ಅನುಮಾನ ಬಂದರೆ ಅದರಲ್ಲಿ ಆಶ್ಚರ್ಯವೇನು ಇಲ್ಲ !

ಪಾಕಿಸ್ತಾನ ೧೯೪೮ ರಲ್ಲಿ ಕಾಶ್ಮೀರದ ಮೇಲೆ ದಾಳಿ ನಡೆಸಿದಾಗ ಮಹಾರಾಜ ಹರಿ ಸಿಂಹ ಇವರ ಸೈನ್ಯದಲ್ಲಿನ ಮುಸಲ್ಮಾನ ಸೈನಿಕರು ಹರಿ ಸಿಂಹ ಇವರ ವಿರುದ್ಧ ಬಂಡಾಯ ಸಾರಿದರು ಹಾಗೂ ಪಾಕಿಸ್ತಾನಿ ಸೈನ್ಯದ ಜೊತೆಗೆ ಕೈಜೋಡಿಸಿದ್ದರು, ಈ ಘಟನೆ ಎಂದು ಮರೆಯಲು ಸಾಧ್ಯವಿಲ್ಲ !