IMA Chief Apologizes : ಸರ್ವೋಚ್ಚ ನ್ಯಾಯಾಲಯದ ಕ್ಷಮೆಕೋರಿದ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ನ ಅಧ್ಯಕ್ಷ ಡಾ. ಅಶೋಕನ್ !

  • ಪತಂಜಲಿ ಉತ್ಪಾದನೆಯ ಕುರಿತು ಸರ್ವೋಚ್ಚ ನ್ಯಾಯಾಲಯದ ನಿಲುವಿನ ಬಗ್ಗೆ ಅಶೋಕನ್ ಟೀಕಿಸಿದ್ದರು !

  • ಸರ್ವೋಚ್ಚ ನ್ಯಾಯಾಲಯವು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಗೆ ಛೀಮಾರಿ ಹಾಕಿತ್ತು !

ನವದೆಹಲಿ – ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ನ(ಐಎಂಎ) ಅಧ್ಯಕ್ಷ ಡಾ. ಆರ್.ವಿ.ಅಶೋಕನ್ ಅವರು ಸರ್ವೋಚ್ಚ ನ್ಯಾಯಾಲಯದ ವಿರುದ್ಧ ನೀಡಿರುವ ಹೇಳಿಕೆಯ ಕುರಿತು ಬಹಿರಂಗ ಕ್ಷಮಾಯಾಚನೆ ಮಾಡಿದ್ದಾರೆ. ಇದರ ಕುರಿತು ಐಎಂಎ ಸುತ್ತೋಲೆ ಹೊರಡಿಸಿದ್ದು, ಸರ್ವೋಚ್ಚ ನ್ಯಾಯಾಲಯದ ಪ್ರತಿಷ್ಠೆ ಅಲ್ಪಗೊಳಿಸುವ ಉದ್ದೇಶ ಡಾ. ಅಶೋಕನ್ ಇವರದಾಗಿರಲಿಲ್ಲ, ಎಂದು ಸ್ಪಷ್ಟನೆ ನೀಡಿದೆ.

ಏನಿದು ಪ್ರಕರಣ?

ಪತಂಜಲಿ ಆಯುರ್ವೇದ ಲಿಮಿಟೆಡ್ ನ ಉತ್ಪಾದನೆಯ ಕುರಿತು ತಥಾಕಥಿತ ದಾರಿ ತಪ್ಪಿಸುವ ಜಾಹೀರಾತು ಪ್ರಸಾರ ಮಾಡಿರುವ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಈ ಅರ್ಜಿಯಲ್ಲಿ ಐಎಂಎ ಅನ್ನು ಕೂಡ ಆರೋಪಿಸಲಾಗಿತ್ತು. ಈ ಮೋಕದ್ದಮೆಯ ವಿಚಾರಣೆಯ ಸಮಯದಲ್ಲಿ ಸರ್ವೋಚ್ಚ ನ್ಯಾಯಾಲಯವು, ನಿಮ್ಮ ಮನೆಯ ಸ್ಥಿತಿಯನ್ನು ಕೂಡ ಸರಿಪಡಿಸುವ ಅಗತ್ಯವಿದೆ ಎಂದು ಐಎಂಎ ಅನ್ನು ಟೀಕಿಸಿತ್ತು. ಆಗ ನ್ಯಾಯಾಲಯವು ಖಾಸಗಿ ವೈದ್ಯರು ನಡೆಸುತ್ತಿರುವ ಅನೈತಿಕ ಕೃತ್ಯಗಳ ಬಗ್ಗೆ ಹೇಳಿಕೆ ನೀಡಿತ್ತು. ಈ ಬಗ್ಗೆ ಡಾ. ಅಶೋಕನ್ ಅವರು ಪಿಟಿಐ ವಾರ್ತಾ ಸಂಸ್ಥೆಗೆ ಸಂದರ್ಶನ ನೀಡಿದ್ದರು ಮತ್ತು ಸರ್ವೋಚ್ಚ ನ್ಯಾಯಾಲಯವು ಖಾಸಗಿ ಡಾಕ್ಟರರ ಕುರಿತು ತಾಳಿರುವ ನಿಲುವಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಾ ನ್ಯಾಯಾಲಯವು ತಾಳಿರುವ ನಿಲುವು ಅವರ ಪ್ರತಿಷ್ಠೆಗೆ ಅನುರೂಪವಾಗಿಲ್ಲ ಎಂದು ಹೇಳಿದ್ದರು.

ಸರ್ವೋಚ್ಚ ನ್ಯಾಯಾಲಯದಿಂದ ಛೀಮಾರಿ !

ಈ ಸಂದರ್ಶನವನ್ನು ಗಮನಿಸಿದ ಸರ್ವೋಚ್ಚ ನ್ಯಾಯಾಲಯವು ವಿಚಾರಣೆಯ ಸಮಯದಲ್ಲಿ, ‘ನಾವು ನಿಮ್ಮಿಂದ ಜವಾಬ್ದಾರಿಯುತ ವರ್ತನೆಯನ್ನು ಅಪೇಕ್ಷಿಸುತ್ತೇವೆ, ನಿಮಗೆ ನ್ಯಾಯಾಲಯದ ಬಗ್ಗೆ ಏನು ಅನಿಸುತ್ತದೆ ಎಂಬುದನ್ನು ನೀವು ಈ ರೀತಿ ಮಾಧ್ಯಮಗಳ ಎದುರು ಹೇಳಿಕೆ ನೀಡಲು ಸಾಧ್ಯವಿಲ್ಲ. ನೀವು ಅನಿರೀಕ್ಷಿತವಾಗಿ ಈ ರೀತಿ ಏಕೆ ವರ್ತಿಸಿದ್ದೀರಾ ?’ ಎಂದು ಕೇಳಿತ್ತು. ಇದರ ಕುರಿತು ಡಾ. ಅಶೋಕನ್ ಅವರು ಪ್ರತಿಜ್ಞಾ ಪತ್ರ ಪ್ರಸ್ತುತಪಡಿಸಿ ನ್ಯಾಯಾಲಯದ ಕ್ಷಮೆ ಕೋರಿದ್ದರು; ಆದರೆ ನ್ಯಾಯಾಲಯವು ಅದನ್ನು ನಿರಾಕರಿಸಿತ್ತು. ಆಗ ಸರ್ವೋಚ್ಚ ನ್ಯಾಯಾಲಯವು ಡಾ. ಅಶೋಕನ್ ಅವರಿಗೆ ಬಹಿರಂಗ ಕ್ಷಮಯಾಚನೆ ಮಾಡಲು ಹೇಳಿತ್ತು. ಈ ವಿಚಾರಣೆಯ ನಂತರ ಡಾ. ಅಶೋಕನ್ ಅವರು ಬಹಿರಂಗವಾಗಿ ಕ್ಷಮಯಾಚನೆ ಮಾಡಿದರು.

ಖಾಸಗಿ ಡಾಕ್ಟರರನ್ನು ಟೀಕಿಸಿದ ಸರ್ವೋಚ್ಚ ನ್ಯಾಯಾಲಯ !

ಸರ್ವೋಚ್ಚ ನ್ಯಾಯಾಲಯವು ಈ ವಿಚಾರಣೆಯ ವೇಳೆ ಅಸೋಸಿಯೇಷನ್ ಸದಸ್ಯರು (ಡಾಕ್ಟರ್ಸ್) ಮಾಡುತ್ತಿರುವ ಅನೈತಿಕ ಕೃತ್ಯಗಳಿಗೆ ಸಂಬಂಧಿತ ಅನೇಕ ದೂರುಗಳಿವೆ. ಅವರ ಈ ಅನೈತಿಕ ಕೃತ್ಯಗಳಿಂದಾಗಿ ರೋಗಿಗಳು ಅವರ ಮೇಲಿನ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ. ಡಾಕ್ಟರ್ಸ್ ರೋಗಿಗಳಿಗೆ ಕೇವಲ ದುಬಾರಿ ಔಷಧಿ ಬರೆದು ಕೊಡುವುದರ ಜೊತೆಗೆ ಅನಾವಶ್ಯಕ ಪರೀಕ್ಷೆಗಳು ಮಾಡಿಸಲು ಕೂಡ ಶಿಫಾರಸು ಮಾಡುತ್ತಿದ್ದಾರೆ ಎಂದು ಟೀಕಿಸಿತ್ತು. (ಇದರ ಕುರಿತು ಸರಕಾರ ಅಥವಾ ಐಎಂಎ ಏನೂ ಮಾಡುವುದಿಲ್ಲ, ಆದ್ದರಿಂದ ನ್ಯಾಯಾಲಯವೇ ಇಂತಹ ಡಾಕ್ಟರ್ ಗಳ ವಿರುದ್ಧ ಕಠಿಣ ಕ್ರಮ ಕೈಗೊಂಡು ಅವರ ಪ್ರಮಾಣ ಪತ್ರ ರದ್ದು ಪಡಿಸಬೇಕು, ಆಗಲೇ ವೈದ್ಯರಿಂದ ನಡೆಯುವ ಈ ಲೂಟಿ ನಿಲ್ಲುವುದು ! – ಸಂಪಾದಕರು)

ಸಂಪಾದಕೀಯ ನಿಲುವು

ದಿಕ್ಕು ತಪ್ಪಿಸುವ ಜಾಹೀರಾತು ಪ್ರಸಾರ ಮಾಡಿರುವ ಪ್ರಕರಣದಲ್ಲಿ ಬಾಬಾ ರಾಮದೇವ ಅವರಿಗೆ ಸರ್ವೋಚ್ಚ ನ್ಯಾಯಾಲಯವು ಕ್ಷಮಯಾಚನೆ ಮಾಡಲು ಹೇಳಿತ್ತು, ಆ ಬಳಿಕ ಅನೇಕ ಪ್ರಸಾರ ಮಾಧ್ಯಮಗಳಲ್ಲಿ ಇದರ ಕುರಿತಾದ ತೀಕ್ಷ್ಣ ಸಮಾಚಾರಗಳು ಪ್ರಸಾರವಾಗಿದ್ದವು; ಆದರೆ ಇದೇ ಪ್ರಕರಣದ ಕಕ್ಷಿದಾರರಾಗಿದ್ದ ಐಎಂಎ ಅಧ್ಯಕ್ಷರಿಗೂ ಕೂಡ ಸರ್ವೋಚ್ಚ ನ್ಯಾಯಾಲಯ ಛೀಮಾರಿ ಹಾಕಿತ್ತು ಮತ್ತು ಅವರಿಗೆ ಕ್ಷಮೆ ಯಾಚಿಸಲು ಹೇಳಿತ್ತು. ಆದರೆ ಈ ಸಮಾಚಾರ ಮಾತ್ರ ಮುಚ್ಚಿಡಲಾಗಿತ್ತು. ಇದರಿಂದ ಪ್ರಸಾರ ಮಾಧ್ಯಮಗಳಲ್ಲಿ ಹಿಂದೂ ವಿರೋಧಿ ವ್ಯವಸ್ಥೆ ಹೇಗೆ ಕಾರ್ಯನಿರತವಾಗಿರುತ್ತದೆ ಎಂಬುದು ಕಂಡುಬರುತ್ತದೆ !