Women Molested By Pakistan Personnel: ಪಾಕಿಸ್ತಾನಿ ರಾಯಭಾರಿ ಕಚೇರಿಯ ಸಿಬ್ಬಂದಿ ಮಿನ್ಹಾಜ್ ಹುಸೇನ್ ನಿಂದ ಭಾರತೀಯ ಮಹಿಳೆಗೆ ಕಿರುಕುಳ!

ನವ ದೆಹಲಿ : ನವ ದೆಹಲಿಯ ಪಾಕಿಸ್ತಾನ ರಾಯಭಾರಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯ ಮಹಿಳೆಗೆ ಪಾಕಿಸ್ತಾನಿ ಸಿಬ್ಬಂದಿ ಮಿನ್ಹಾಜ್ ಹುಸೇನ್ ಕಿರುಕುಳ ನೀಡಿರುವುದು ಬೆಳಕಿಗೆ ಬಂದಿದೆ. ಇದಕ್ಕೂ ಮೊದಲು, ಸಂತ್ರಸ್ತೆಯು ತನಗೆ ಕಿರುಕುಳ ನೀಡಿದ ಮಿನ್ಹಾಜ್ ಹುಸೇನ್ ವಿರುದ್ಧ ರಾಯಭಾರ ಕಚೇರಿಯ ಹೈ ಕಮಿಷನರ್ ಸಾದ್ ಅಹ್ಮದ್ ವಾರೈಚ್ ಅವರಿಗೆ ದೂರು ನೀಡಿದ್ದರು; ಆದರೆ ಅವರು ಹುಸೇನ್ ನ್ನು ರಕ್ಷಿಸಲು ಪ್ರಯತ್ನಿಸಿದ. (ಇದರಿಂದ ಪಾಕಿಸ್ತಾನಿ ಅಧಿಕಾರಿಗಳ ಮಾನಸಿಕತೆ ತೋರಿಸುತ್ತದೆ! – ಸಂಪಾದಕರು) ಈ ಘಟನೆ ಮತ್ತೆ ಸಂಭವಿಸಿದ ನಂತರ, ಸಂತ್ರಸ್ತೆ ಪೊಲೀಸರ ಮೊರೆ ಹೋದರು.

1. ಮನ್ಹಾಜ್ ಹುಸೇನ್ ಪಾಕಿಸ್ತಾನಿ ಅಧಿಕಾರಿ ಸಾದ್ ಅಹ್ಮದ್ ವಾರೈಚ್ ಅವರ ಅಡುಗೆಯವರಾಗಿದ್ದಾರೆ. ಅಲ್ಲಿ ಭಾರತೀಯ ಮಹಿಳೆ ಸಹಾಯಕಿಯಾಗಿ ಕೆಲಸ ಮಾಡುತ್ತಾರೆ. ಮಿನ್ಹಾಜ್ ಅವರು ಫೆಬ್ರವರಿಯಲ್ಲಿ ದೆಹಲಿಯಲ್ಲಿರುವ ಪಾಕಿಸ್ತಾನಿ ರಾಯಭಾರಿ ಕಚೇರಿಯಲ್ಲಿ ಕೆಲಸ ಮಾಡಲು ಪಾಕಿಸ್ತಾನದಿಂದ ಬಂದಿದ್ದರು. ಅಂದಿನಿಂದ ಸಂತ್ರಸ್ತೆಗೆ ಕಿರುಕುಳ ನೀಡುತ್ತಿದ್ದ. ಆಕೆಗೆ ದೈಹಿಕ ಸಂಬಂಧಕ್ಕಾಗಿ ಒತ್ತಡ ಹೇರುತ್ತಿದ್ದ.

2. ಈ ಕಿರುಕುಳದಿಂದ ಬೇಸತ್ತ ಸಂತ್ರಸ್ತೆಯು ಜೂನ್ 28 ರಂದು ಮಿನ್ಹಾಜ್ ಹುಸೇನ್ ವಿರುದ್ಧ ತಿಲಕಮಾರ್ಗ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆತನ ವಿರುದ್ಧ ಪ್ರಕರಣ ದಾಖಲಾಗಿದೆ.

3. ಈ ಹಿಂದೆ, ಪಾಕಿಸ್ತಾನಕ್ಕೆ ಪ್ರಯಾಣಿಸುತ್ತಿದ್ದ ಮಹಿಳಾ ಪ್ರಾಧ್ಯಾಪಕರ ಮೇಲೆ ರಾಯಭಾರ ಕಚೇರಿಯ ಸಿಬ್ಬಂದಿ ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು ಆರೋಪಿಸಲಾಗಿತ್ತು. (ಇದರರ್ಥ ಭಾರತದಲ್ಲಿನ ಪಾಕಿಸ್ತಾನಿ ರಾಯಭಾರ ಕಚೇರಿಯು ಕಾಮುಕರ ಅಡ್ಡೆಯಾಗಿ ಮಾರ್ಪಟ್ಟಿದೆ, ಎಂದೇ ಕಾಣಿಸಿಸುತ್ತದೆ ! – ಸಂಪಾದಕರು)

ಸಂಪಾದಕೀಯ ನಿಲುವು

ಭಾರತೀಯ ರಾಯಭಾರ ಕಚೇರಿಯಲ್ಲಿ ಕೆಲಸ ಮಾಡಲು ಪಾಕಿಸ್ತಾನದಿಂದ ಬರುವ ಪಾಕಿಸ್ತಾನಿ ಉದ್ಯೋಗಿಗಳು ಭಾರತೀಯ ಮಹಿಳೆಗೆ ಕಿರುಕುಳ ನೀಡಲು ಧೈರ್ಯ ಮಾಡುತ್ತಾರೆ, ಇದು ಅವರ ಉನ್ಮಾದವನ್ನು ತೋರಿಸುತ್ತದೆ! ಅಂಥವರನ್ನು ಜೀವಾವಧಿ ಶಿಕ್ಷೆ ನಿಡುವುದು ಅಗತ್ಯವಾಗಿದೆ !