Bengal Couple Beaten: ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ನಾಯಕ ತಾಜ್ಮೂಲ್ ನ ದಂಪತಿಯನ್ನು ಥಳಿಸುವ ಮತ್ತೊಂದು ವಿಡಿಯೋ ವೈರಲ್

ಕೋಲಕಾತಾ (ಬಂಗಾಳ) – ಬಂಗಾಳದ ವಿರೋಧ ಪಕ್ಷದ ನಾಯಕ ಶುಭೇಂದು ಅಧಿಕಾರಿ ತಮ್ಮ ‘ಎಕ್ಸ್‌’ ಖಾತೆಯಲ್ಲಿ ಒಂದು ವೀಡಿಯೊ ಪೋಸ್ಟ ಮಾಡಿದ್ದಾರೆ. ಈ ವೀಡಿಯೊ ದಿನಾಂಕ 16 ಜೂನ್ 2024 ಎಂದು ಅವರು ಹೇಳಿದ್ದಾರೆ. ಇದರಲ್ಲಿ ಮಹಿಳೆಯನ್ನು ರಾತ್ರಿಯ ಸಮಯದಲ್ಲಿ ಹಗ್ಗದಿಂದ ಕಟ್ಟಿ ಹಾಕಲಾಗುತ್ತಿದೆ. ಈ ಮಹಿಳೆಯೊಂದಿಗೆ, ಒಬ್ಬ ವ್ಯಕ್ತಿಯನ್ನು ವಿವಸ್ತ್ರಗೊಳಿಸಿ ಹಗ್ಗದಿಂದ ಕಟ್ಟಲಾಗುತ್ತಿದೆ. ಈ ವೇಳೆ ಇಬ್ಬರಿಗೂ ದೊಣ್ಣೆಯಿಂದ ಹೊಡೆದಿದ್ದಾರೆ. ಈ ಕುರಿತು ಶುಭೇಂದು ಅಧಿಕಾರಿ ಇವರು, ‘ನ್ಯಾಯಾಲಯದ ಎರಡನೇ ಭಾಗ ರಸ್ತೆಯಲ್ಲಿ. ಇದರಲ್ಲಿ ತೃಣಮೂಲ ಕಾಂಗ್ರೆಸ್ ನಾಯಕ ತಜ್ಮುಲ್ ಅಲಿಯಾಸ್ ಜೆಸಿಬಿ ನ್ಯಾಯಾಧೀಶರು ಮತ್ತು ಮರಣದಂಡನೆಕಾರರಾಗಿ ನಟಿಸಿದ್ದಾರೆ. ಇನ್ನೊಂದು ದಿನ ಮಮತಾ ಬ್ಯಾನರ್ಜಿಯವರ ಬಂಗಾಳದಲ್ಲಿ, ಅಲ್ಲಿ ‘ಇಸ್ಲಾಮಿಕ್ ಸ್ಟೇಟ್’ನ ಸಂಪ್ರದಾಯಗಳನ್ನು ನಿರಂಕುಶವಾಗಿ ಅನುಸರಿಸಲಾಗುತ್ತದೆ.’ ಎಂದು ಬರೆದಿದ್ದಾರೆ.

ಈ ಘಟನೆಯನ್ನು ಷರಿಯಾ ಕಾನೂನಿನಡಿಯಲ್ಲಿ ಶಿಕ್ಷೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಕೆಲವು ದಿನಗಳ ಹಿಂದೆ, ತಾಜ್ಮೂಲ್ ವಿವಾಹೇತರ ಸಂಬಂಧ ಹೊಂದಿದ್ದ ದಂಪತಿಯನ್ನು ಥಳಿಸಿದ ವೀಡಿಯೊ ವೈರಲ್ ಆಗಿತ್ತು. ಇದೇ ತಾಜ್ಮೂಲ್ ನ ಎರಡನೇ ವಿಡಿಯೋ ಇದು.

ಸಂಪಾದಕೀಯ ನಿಲುವು

ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಸರ್ಕಾರ ಎಂದರೆ ಇಸ್ಲಾಮಿಕ್ ಆಡಳಿತ ಮತ್ತು ಈಗ ಅದು ಶೀಘ್ರದಲ್ಲೇ ಬಾಂಗ್ಲಾದೇಶವಾದರೆ ಆಶ್ಚರ್ಯಪಡಬೇಕಾಗಿಲ್ಲ !