ಬಾಹ್ಯಾಕಾಶದಲ್ಲಿ ಅಮೆರಿಕದೊಂದಿಗೆ ಚೀನಾ ಯುದ್ಧ ಮಾಡುವ ಸಿದ್ಧತೆಯಲ್ಲಿ !

ವಾಷಿಂಗ್ಟನ್ (ಅಮೆರಿಕಾ) – ಅಮೆರಿಕವು ಬಾಹ್ಯಾಕಾಶದಲ್ಲಿ ತನ್ನ ಪ್ರಾಬಲ್ಯವನ್ನು ದೀರ್ಘಕಾಲ ಉಳಿಸಿಕೊಂಡಿದೆ; ಆದರೆ ಈಗ ಅದು ಅಪಾಯದಲ್ಲಿದೆ. ಬಾಹ್ಯಾಕಾಶದಲ್ಲಿ ಚೀನಾ ತನ್ನ ಸಾಮರ್ಥ್ಯಗಳನ್ನು ವೇಗವಾಗಿ ಅಭಿವೃದ್ಧಿಪಡಿಸಿದೆ ಮತ್ತು ಕಾರ್ಯತಂತ್ರದ ತಂತ್ರಗಳಿಗೆ ಒತ್ತು ನೀಡಿದೆ, ಆದ್ದರಿಂದ ಶೀಘ್ರದಲ್ಲೇ ಅದು ಬಾಹ್ಯಾಕಾಶದಲ್ಲಿ ಅಮೆರಿಕಾ ಜೊತೆ ಯುದ್ಧ ಮಾಡುವ ಸಿದ್ಧತೆಯಲ್ಲಿದೆ.

1. ಅಮೇರಿಕಾ ಸಂಸ್ಥೆ ‘ರಂಡ್’ನ ಹೊಸ ವರದಿಯಲ್ಲಿ, ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ಕಳೆದ ಎರಡು ದಶಕಗಳಲ್ಲಿ ಪಡೆದುಕೊಂಡಿರುವ ಬಾಹ್ಯಾಕಾಶ ಆಧಾರಿತ ಸಾಮರ್ಥ್ಯಗಳನ್ನು ವಿಶ್ಲೇಷಿಸಿದೆ. ಚೀನಾದ ರಾಷ್ಟ್ರಾಧ್ಯಕ್ಷ ಶೀ ಜಿನ್‌ಪಿಂಗ್ ಅಮೆರಿಕವನ್ನು ದುರ್ಬಲ ಶಕ್ತಿ ಎಂದು ಪರಿಗಣಿಸಿದೆ. ಈ ಕಾರಣದಿಂದಾಗಿ, ಭವಿಷ್ಯದಲ್ಲಿ ಬಾಹ್ಯಾಕಾಶ ಸ್ಪರ್ಧೆಗಾಗಿ ಚೀನಾ ಈಗ ಆಕ್ರಮಣಕಾರಿಯಾಗಿ ಸಿದ್ಧತೆ ಮಾಡುತ್ತಿದೆ.

2. ವರದಿಯ, ಚೀನಾ ಸೇನೆಯ ರಣತಂತ್ರವು ಪ್ರತಿಕಾರಾತ್ಮಕ ಆಕ್ರಮಣಕಾರಿಯನ್ನು ಒಳಗೊಂಡಿದೆ, ಇದು ವಿರೋಧಿಗಳಿಗೆ ವಿನಾಶಕಾರಿ ಬಾಹ್ಯಾಕಾಶ ಯುದ್ಧವನ್ನು ಎದುರಿಸಲು ಅಥವಾ ಅನಿವಾರ್ಯಗೊಳಿಸಲು ಬಳಸಲಾಗುತ್ತದೆ ಎಂದು ಹೇಳಲಾಗಿದೆ.

3. ಚೀನಾವು ಬಾಹ್ಯಾಕಾಶದಲ್ಲಿ ತನ್ನ ಮಿಲಿಟರಿ ಸಾಮರ್ಥ್ಯವನ್ನು ಪ್ರಮುಖ್ಯವಾಗಿ ಅಮೇರಿಕಾವನ್ನು ತನ್ನ ದೃಷ್ಟಿಯಲ್ಲಿ ಇಟ್ಟು ಅಭಿವೃದ್ಧಿಪಡಿಸುತ್ತಿದೆ ಎಂದು ವರದಿಯಲ್ಲಿ ಸೂಚಿಸಲಾಗಿದೆ. ಈ ಪ್ರಕರಣದಲ್ಲಿ ಅಮೆರಿಕ ಶೀಘ್ರ ನಿರ್ಧಾರ ತೆಗೆದುಕೊಳ್ಳಬೇಕು.

ಸಂಪಾದಕೀಯ ನಿಲುವು

ವಿಸ್ತರಣಾವಾದಿ ಚೀನಾದ ಮನಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಇಡೀ ಜಗತ್ತು ಅದರ ವಿರುದ್ಧ ಮೈತ್ರಿ ಕೂಟ ಸಂಘಟಿಸುವುದು ಅವಶ್ಯಕವಾಗಿದೆ !