ಅಮೇರಿಕೆಯ ವರದಿಯಿಂದ ಮಾಹಿತಿ ಬಹಿರಂಗ
ನ್ಯೂಯಾರ್ಕ್ (ಅಮೇರಿಕಾ) – ರಷ್ಯಾ-ಉಕ್ರೇನ್ ಯುದ್ಧ ಹಾಗೆಯೇ ಇಸ್ರೇಲ್-ಹಮಾಸ್ ಯುದ್ಧವು ಚರ್ಚೆಯ ವಿಷಯವಾಗಿದ್ದರೂ, ದಕ್ಷಿಣ ಚೀನಾದ ಸಮುದ್ರದಲ್ಲಿ ಹೆಚ್ಚುತ್ತಿರುವ ಒತ್ತಡ ಮತ್ತು ಚೀನಾದ ‘ಪೀಪಲ್ಸ್ ಲಿಬರೇಶನ್ ಆರ್ಮಿ’ ಭಾರತದ ಗಡಿಯಲ್ಲಿ ತನ್ನ ಸ್ಥಾನವನ್ನು ನಿರಂತರವಾಗಿ ಬಲಪಡಿಸುತ್ತಿರುವುದರ ಕಡೆಗೆ ಕಡೆಗಣಿಸುವಂತಿಲ್ಲ. ‘ಯು.ಎಸ್. ಇಂಟಲಿಜೆನ್ಸ ಕಮ್ಯುನಿಟಿ’ಯ ವರದಿಯಲ್ಲಿ ಈ ಮಾಹಿತಿ ನೀಡಲಾಗಿದ್ದು ಅದರಲ್ಲಿ ವಾರ್ಷಿಕ ಅಪಾಯದ ಮೌಲ್ಯಮಾಪನ ಮಾಡಲಾಗಿದೆ. ಅದರಲ್ಲಿ ಚೀನಾ ಮತ್ತು ಭಾರತದ ನಡುವಿನ ಗಡಿ ವಿವಾದವು ಪ್ರಪಂಚದ ಇತರೆ ಎಲ್ಲ ಸಂಘರ್ಷಗಳು, ಬೆದರಿಕೆಗಳು ಮತ್ತು ಉದ್ವಿಗ್ನತೆಗಳಲ್ಲಿ ಒಂದು ಎಂದು ತಿಳಿಯಲಾಗಿದೆ. ‘ಗಡಿ ವಿವಾದದಿಂದ ಉಭಯ ದೇಶಗಳ ಸಂಬಂಧಗಳಲ್ಲಿ ಒತ್ತಡ ಇರಲಿದೆ’, ಎಂದು ಈ ವರದಿಯಲ್ಲಿ ಹೇಳಲಾಗಿದೆ. ಜೂನ 2020 ರ ಗಾಲ್ವಾನ ಸಂಘರ್ಷ ಬಿಟ್ಟರೆ, ಎರಡೂ ದೇಶಗಳ ಗಡಿಯಲ್ಲಿ ಯಾವುದೇ ದೊಡ್ಡ ಸಂಘರ್ಷಗಳು ನಡೆದಿಲ್ಲ. ಹೀಗಿದ್ದರೂ ಚೀನಾ ಅನಿಶ್ಚಿತ ಕಾಲಕ್ಕಾಗಿ ದೊಡ್ಡ ಪ್ರಮಾಣದಲ್ಲಿ ಸೈನ್ಯ ನಿಯೋಜಿಸಲಾಗಿದೆಯೆಂದು ಈ ವರದಿಯಲ್ಲಿ ನಮೂದಿಸಲಾಗಿದೆ.
ಏಪ್ರಿಲ್ 2024 ರಲ್ಲಿ, ‘ಯು.ಎಸ್. ಆರ್ಮಿ ವಾರ್ ಕಾಲೇಜ್’ನ ‘ಸ್ಟ್ರಾಟೆಜಿಕ್ ಸ್ಟಡೀಸ್ ಇನ್‌ಸ್ಟಿಟ್ಯೂಟ್’ 2020-21ರಲ್ಲಿ ಅಕ್ಸೈ ಚೀನಾದಲ್ಲಿರುವ ಪರ್ವತ ಗಡಿಯಲ್ಲಿ ಚೀನಾದ ಸೇನೆಯ ಚಲನವಲನಗಳ ಆಳವಾದ ತನಿಖೆಯ ವರದಿಯನ್ನು ಪ್ರಕಟಿಸಿತು. ವರದಿಯ ಪ್ರಮುಖ ಲೇಖಕ ಡೆನಿಸ್ ಬ್ಲಾಸ್ಕೊ ಇವರು ಬೀಜಿಂಗ್ ಮತ್ತು ಹಾಂಗ್ ಕಾಂಗ್ ನಡುವೆಯ ಅಮೇರಿಕೆಯ ಮಾಜಿ ರಕ್ಷಣಾ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಅವರು, ಅಕ್ಸೈ ಚಿನ್ ಪ್ರದೇಶದಿಂದ ಸೈನ್ಯವನ್ನು ಹಿಂತೆಗೆದುಕೊಳ್ಳಲು ಚೀನಾವು ಭಾರತೀಯ ಸೇನೆ ಮತ್ತು ಸರಕಾರದೊಂದಿಗೆ ಚರ್ಚಿಸುತ್ತಿದ್ದರೂ ಅದು, ಅಕ್ಸೈ ಚೀನದಲ್ಲಿರುವ ಪ್ರತ್ಯಕ್ಷ ನಿಯಂತ್ರಣ ರೇಖೆ ಮತ್ತು ಡೊಕ್ಲಾಮ ಗಡಿಯಲ್ಲಿ ತನ್ನ ಸೇನೆಯನ್ನು ಅನಿರ್ದಿಷ್ಟವಾಗಿ ನಿಯೋಜಿಸುತ್ತದೆ ಎಂದು ಅವರು ಹೇಳಿದರು.
ಜೂನ್ 2020 ರಲ್ಲಿ, ಭಾರತೀಯ ಸೈನಿಕರು ಭಾರತ-ಚೀನಾ ಗಡಿಯುದ್ದಕ್ಕೂ ಗಾಲ್ವಾನ್ ಕಣಿವೆಯಲ್ಲಿ ಭಾರತೀಯ ಸೈನಿಕರು ಚೀನಿ ಸೈನಿಕರಿಗೆ ಪಾಠ ಕಲಿಸಿದ್ದರಿಂದ, ಹೆದರಿದ ಚೀನಾ ತನ್ನ ಸೇನೆಯನ್ನು ನಿಯೋಜಿಸಿರುವುದರಲ್ಲಿ ಆಶ್ಚರ್ಯವಿಲ್ಲ. ಹೀಗಿದ್ದರೂ, ಭಾರತವು ತನ್ನ ಯುದ್ಧ ಸಿದ್ಧತೆ ಮತ್ತು ಸಾಮರ್ಥ್ಯವನ್ನು ನಿರಂತರವಾಗಿ ಹೆಚ್ಚಿಸಿಕೊಳ್ಳುವುದು ಅತ್ಯಾವಶ್ಯಕವಾಗಿದೆ !
ಭಾರತದ ನೆರೆಯ ಶತ್ರು ರಾಷ್ಟ್ರದ ಬಗ್ಗೆ ಮಾಹಿತಿ ಏಳು ಸಾಗರದಾಚೆಗೆ ಇರುವ ಅಮೇರಿಕಾಗೆ ಸಿಗುತ್ತದೆ, ಅದು ಭಾರತಕ್ಕೆ ಹೇಗೆ ಸಿಗುವುದಿಲ್ಲ ? |