ಪ್ರಪಂಚದ ಯಾವುದೇ ದೇಶವು ಎಲ್ಲ ರೀತಿಯ ಭಯೋತ್ಪಾದನೆಯನ್ನು ಖಂಡಿಸುತ್ತದೆ; ನಾವು ನಂಬಿದ್ದೇವೆ ! – ಅಮೇರಿಕಾ

ಅಮೇರಿಕಾದ ವಿದೇಶಾಂಗ ಸಚಿವಾಲಯದ ಮುಖ್ಯ ಉಪ ವಕ್ತಾರ ವೇದಾಂತ್ ಪಟೇಲ್

ವಾಷಿಂಗ್ಟನ್ (ಅಮೇರಿಕಾ) – ಭಯೋತ್ಪಾದನೆಯಿಂದಾಗಿ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸುತ್ತಿಲ್ಲ ಎಂಬುದು ಭಾರತದ ಆಗ್ರಹವಾಗಿದೆ. ಇದನ್ನು ಗಮನಿಸಿದರೆ ಭಾರತ ಮತ್ತು ಪಾಕಿಸ್ತಾನದ ಜೊತೆಗೆ ಅಮೇರಿಕಾದ ಸಂಬಂಧ ಯಾವ ಮಟ್ಟದಲ್ಲಿದೆ?’, ಎಂದು ಅಮೇರಿಕಾದ ವಿದೇಶಾಂಗ ಸಚಿವಾಲಯದ ಮುಖ್ಯ ಉಪ ವಕ್ತಾರ ವೇದಾಂತ್ ಪಟೇಲ್ ಅವರಿಗೆ ಅಲ್ಲಿನ ಪತ್ರಿಕಾಗೋಷ್ಠಿಯಲ್ಲಿ ಕೇಳಲಾಯಿತು. ಈ ಪ್ರಶ್ನೆಗೆ ಉತ್ತರಿಸಿದ ಅವರು, ‘ವಿಶ್ವದ ಯಾವುದೇ ದೇಶವು ಯಾವುದೇ ರೀತಿಯ ಭಯೋತ್ಪಾದನೆಯನ್ನು ಖಂಡಿಸುತ್ತದೆ ಎಂದು ನಮಗೆ ವಿಶ್ವಾಸವಿದೆ. ತನ್ನ ನೆರೆಹೊರೆಯವರೊಂದಿಗೆ ಹೆಚ್ಚು ಸಕಾರಾತ್ಮಕ ಸಂಬಂಧಗಳನ್ನು ನಿರ್ಮಿಸುವ ಪ್ರತಿಯೊಂದು ದೇಶವನ್ನು ಅಮೇರಿಕಾ ಸ್ವಾಗತಿಸುತ್ತದೆ; ಆದರೆ ಅಂತಿಮವಾಗಿ ಅದು ಭಾರತ ಮತ್ತು ಪಾಕಿಸ್ತಾನದ ಮೇಲೆ ಅವಲಂಬಿತವಾಗಿದೆ, ಅವರು ಭಯೋತ್ಪಾದನೆಯನ್ನು ಯಾವ ದೃಷ್ಟಿಯಿಂದ ನೋಡುತ್ತಾರೆ?’

ಪಟೇಲ್ ಅವರು ಮುಂದೆ ಮಾತನಾಡಿ, ಭಾರತದ ಅನೇಕ ಕ್ಷೇತ್ರಗಳಲ್ಲಿ ನಮ್ಮ ಸಂಬಂಧವನ್ನು ಇನ್ನಷ್ಟು ಬಲಪಡಿಸುತ್ತಿದ್ದೇವೆ. ವಿಶೇಷವಾಗಿ ನಮ್ಮ ಆರ್ಥಿಕ ಸಂಬಂಧಗಳನ್ನು ಬಲಪಡಿಸುವುದಕ್ಕೆ ಹೆಚ್ಚು ಪ್ರಯತ್ನಿಸುತ್ತಿದ್ದೇವೆ ಎಂದವರು ಹೇಳಿದರು.

ಸಂಪಾದಕೀಯ ನಿಲುವು

ಪ್ರಪಂಚದ ಕೆಲವು ದೇಶಗಳು ಭಯೋತ್ಪಾದಕರ ನಿರ್ಮಾಣದ ಕಾರ್ಖಾನೆಗಳಾಗಿ ಮಾರ್ಪಟ್ಟಿವೆ ಮತ್ತು ಅವರು ಮೇಲ್ನೋಟಕ್ಕೆ ಮಾತ್ರ ಭಯೋತ್ಪಾದನೆ ವಿರೋಧ ಮಾಡುವ ನಟನೆ ಮಾಡುತ್ತಾರೆ. ಇಂತಹವರನ್ನು ಈಗ ಬಹಿರಂಗಪಡಿಸುವ ಅವಶ್ಯಕತೆ ಇದೆ ಎಂದು ಅಮೇರಿಕಾ ಎಂದಾದರೂ ಹೇಳಿದೆಯೇ?