ಖಲಿಸ್ತಾನ್ ಸಮರ್ಥಕ ಅಮೃತಪಾಲ್ ಸಿಂಗ್ ರ ಪ್ರಮಾಣ ವಚನದ ಕುರಿತು ಚರ್ಚೆ
ವಾಷಿಂಗ್ಟನ್ – ಲೋಕಸಭೆ ಚುನಾವಣೆಯಲ್ಲಿ ಪಂಜಾಬ್‌ನ ಖಡೂರ್ ಸಾಹಿಬ್ ಮತದಾನ ಕ್ಷೇತ್ರದಿಂದ ಖಲಿಸ್ತಾನ್ ಪರ ಅಮೃತಪಾಲ್ ಸಿಂಗ್ ಗೆದ್ದಿದ್ದಾರೆ. ಪ್ರಸ್ತುತ ಅವರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆ(ಎನ್.ಎಸ್.ಎ.) ಅಡಿಯಲ್ಲಿ ಅಸ್ಸಾಂನ ಜೈಲಿನಲ್ಲಿಡಲಾಗಿದೆ. ಸಂಸತ್ ಸದಸ್ಯರ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಹಾಜರಾಗಲು ಅವರಿಗೆ ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಅಮೆರಿಕಾದಲ್ಲಿರುವ ಸಿಖ್ ವಕೀಲರಾದ ಜಸ್ ಪ್ರೀತ್ ಸಿಂಗ್ ಅವರು ಅಮೆರಿಕಾದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರನ್ನು ಭೇಟಿ ಮಾಡಿದ್ದಾರೆ. ಈ ಸಭೆಯಲ್ಲಿ ಅವರು ಖಲಿಸ್ತಾನ್ ಪರ ಅಮೃತಪಾಲ್ ಸಿಂಗ್ ಅವರ ಪ್ರಮಾಣ ವಚನ ಮತ್ತು ಬಂಧನದ ವಿಷಯವನ್ನು ಪ್ರಸ್ತಾಪಿಸಿದರು ಎಂದು ವರದಿಯಾಗಿದೆ. ಈ ಭೇಟಿಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ವಕೀಲ ಜಸ್ ಪ್ರೀತ್ ಸಿಂಗ್ ಹೇಳಿದ್ದಾರೆ. ಇದಕ್ಕೆ ಶೀಘ್ರವೇ ಪರಿಹಾರ ಸಿಗುವುದೆಂಬ ಅವರು ಭರವಸೆ ವ್ಯಕ್ತಪಡಿಸಿದರು.
1. ಕ್ಯಾಲಿಫೋರ್ನಿಯಾ ರಾಜ್ಯದ ಲಾಸ್ ಏಂಜಲೀಸ್ ನಗರದಲ್ಲಿ ಈ ಸಭೆ ನಡೆಯಿತು. ಈ ಸಭೆಯಲ್ಲಿ ಅಮೃತಪಾಲ್ ಸಿಂಗ್ ಅವರೊಂದಿಗೆ ಸಿಖ್ಖರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಕೂಡ ಮಂಡಿಸಲಾಯಿತು. ಅಮೃತಪಾಲ್ ಸಿಂಗ್ ಮೇಲೆ ತಪ್ಪು ಪದ್ದತಿ ಯಿಂದ ‘ಎನ್ ಎಸ್ ಎ’ಯನ್ನು ಹೇರಲಾಗಿದೆ. ಇದು ಸಂಪೂರ್ಣ ಕಾನೂನುಬಾಹಿರವಾಗಿದೆ, ಎಂದು ಜಸ್ ಪ್ರೀತ್ ಸಿಂಗ್ ಈ ಸಂದರ್ಭದಲ್ಲಿ ಹೇಳಿದರು.
2. ಅಮೃತಪಾಲ್ ಸಿಂಗ್ ಅವರನ್ನು ಪಂಜಾಬ್ ಪೊಲೀಸರು 23 ಏಪ್ರಿಲ್ 2023 ರಂದು ಬಂಧಿಸಿದ್ದರು. ಅಂದಿನಿಂದ ಅವರನ್ನು ಅಸ್ಸಾಂನ ದಿಬ್ರುಗಢ ಕಾರಾಗೃಹದಲ್ಲಿ ಬಂಧಿಯಾಗಿಡಲಾಗಿದೆ. ಖಲಿಸ್ತಾನಿ ಸಿದ್ಧಾಂತಕ್ಕೆ ಬೆಂಬಲ ನೀಡಿದ್ದರಿಂದ ಅವರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯ ಪ್ರಕರಣ ದಾಖಲಿಸಲಾಗಿದೆ.