‘೨೦೧೫ ರಿಂದ ನನಗೆ ಸಪ್ತರ್ಷಿ ಜೀವನಾಡಿಪಟ್ಟಿಯ ಮಾಧ್ಯಮದಿಂದ ಋಷಿಗಳ ಸತ್ಸಂಗ ಲಭಿಸಿತು. ಋಷಿಗಳಿಂದ ನನಗೆ ಮೂವರು ಗುರುಗಳು (ಟಿಪ್ಪಣಿ) ಅವತಾರಿ ಜೀವಗಳಾಗಿದ್ದಾರೆ ಎಂಬುದು ತಿಳಿಯಿತು. ಇಂದು ನನಗೆ ಯಾರಾದರು, ‘ನಿನಗೆ ಮೂವರು ಗುರುಗಳ ಮೇಲೆ ಶ್ರದ್ಧೆಯಿದೆಯೇ ?’, ಎಂದು ಕೇಳಿದರೆ, ಅದರ ಬಗ್ಗೆ ಚಿಂತನೆ ಮಾಡಿದಾಗ ನನ್ನ ಶ್ರದ್ಧೆ ಕಡಿಮೆ ಬೀಳುತ್ತದೆ ಎಂಬುದು ನನ್ನ ಗಮನಕ್ಕೆ ಬಂದಿತು; ಏಕೆಂದರೆ ಕಠಿಣ ಪ್ರಸಂಗಗಳಲ್ಲಿ ನನ್ನ ಶ್ರದ್ಧೆ ಅಸ್ಥಿರವಾಗುತ್ತದೆ. ಹೇಗೆ ನನ್ನ ಸ್ಥಿತಿ ಇದೆಯೋ, ಹಾಗೆ ಈಶ್ವರಪ್ರಾಪ್ತಿಗಾಗಿ ಸಾಧನೆ ಮಾಡುವ ಇತರ ಸಾಧಕರದ್ದೂ ಇರಬಹುದು. ಕಳೆದ ಕೆಲವು ದಿನಗಳಲ್ಲಿ ‘ಮೂವರು ಗುರುಗಳ ಮೇಲಿನ ಶ್ರದ್ಧೆ ಏಕೆ ಕಡಿಮೆ ಬೀಳುತ್ತದೆ ?’, ಎಂಬುದರ ಬಗ್ಗೆ ಚಿಂತನೆ ಮಾಡಿದಾಗ ನನಗೆ ಕೆಲವು ಅಂಶಗಳು ಕಲಿಯಲು ಸಿಕ್ಕಿದವು, ಅವುಗಳನ್ನು ಗುರುದೇವರ ಜನ್ಮೋತ್ಸವದ ನಿಮಿತ್ತ ಸನಾತನದ ಮೂವರು ಗುರುಗಳ ಚರಣಗಳಲ್ಲಿ ಅರ್ಪಿಸುತ್ತಿದ್ದೇನೆ.
ಟಿಪ್ಪಣಿ – ಮೂವರು ಗುರುಗಳು : ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ, ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ.
೧. ಅನೇಕ ಪ್ರಯತ್ನಗಳನ್ನು ಮಾಡಿಯೂ ದೇವತೆಗಳು, ಋಷಿಗಳು ಮತ್ತು ಯೋಗಿಗಳಿಗೂ ಅರಿವಾಗದಿರುವ ಶ್ರೀವಿಷ್ಣುವಿನ ಲೀಲೆ !
ಶೃಂಗೇರಿ ಮಠದ ಶಂಕರಾಚಾರ್ಯರ ಓರ್ವ ವಿದ್ವಾಂಸ ಭಕ್ತರು ಮುಂದಿನಂತೆ ಬರೆದಿದ್ದಾರೆ, ‘ಶ್ರೀವಿಷ್ಣುವನ್ನು ತಿಳಿದುಕೊಳ್ಳುವುದು ತುಂಬಾ ಕಠಿಣವಾಗಿದೆ. ಬ್ರಹ್ಮಾಂಡವನ್ನು ನಡೆಸುವ ತ್ರಿಮೂರ್ತಿಗಳೆಂದರೆ ಬ್ರಹ್ಮ, ವಿಷ್ಣು ಮತ್ತು ಮಹೇಶ ಈ ದೇವತೆಗಳಲ್ಲಿ ಶ್ರೀವಿಷ್ಣು ಕಡಕ್ ದೇವತೆಯಾಗಿದ್ದಾನೆ.’ ಅವರ ಈ ವಾಕ್ಯವನ್ನು ಓದಿದಾಗ ನನಗೆ, ‘ಶ್ರೀವಿಷ್ಣುವು ಪಾಲನಕರ್ತನಾಗಿದ್ದಾನೆ. ಅವನು ಸಂಪೂರ್ಣ ಪೃಥ್ವಿಯ ಚಕ್ರವರ್ತಿ ರಾಜನಾಗಿದ್ದಾನೆ. ಶ್ರೀವಿಷ್ಣುವು ನಿಯಮಗಳನ್ನು ಪಾಲಿಸುವ ಮತ್ತು ಮಾಡಿಸುವ ಮರ್ಯಾದಾ ಪುರುಷೋತ್ತಮನಾಗಿದ್ದಾನೆ. ಒಂದು ಕಡೆ ಅವನು ಲೀಲಾಧರನಾಗಿದ್ದರೆ, ಇನ್ನೊಂದು ಕಡೆಗೆ ಅವನು ಭಕ್ತವತ್ಸಲನಾಗಿದ್ದಾನೆ. ಒಂದು ಕಡೆ ಅವನು ಧರ್ಮದ ಮೂರ್ತಿಮಂತ ರೂಪವಾಗಿದ್ದರೆ, ಇನ್ನೊಂದು ಕಡೆಗೆ ಅವನು ನಿಯಮಗಳನ್ನು ಉಲ್ಲಂಘಿಸುವ ಪೂರ್ಣಪುರುಷೋತ್ತಮನಾಗಿದ್ದಾನೆ. ದೇವತೆಗಳು, ಋಷಿಗಳು ಮತ್ತು ಯೋಗಿಗಳು ಅವನನ್ನು ತಿಳಿದುಕೊಳ್ಳಲು ಅಸಮರ್ಥರಾಗಿರುವುದರಿಂದಲೇ ಅವರು ಶ್ರೀವಿಷ್ಣುವಿನ ಭಕ್ತಿಯನ್ನು ಮಾಡಿದರು, ಅವನಿಗೆ ಪ್ರಶ್ನೆಗಳನ್ನು ಕೇಳಿದರು, ಅವನ ಸತ್ಸಂಗ ಪಡೆಯಲು ಪ್ರಯತ್ನಿಸಿದರು ಮತ್ತು ಯುಗಯುಗಗಳಲ್ಲಿ ಅವನಿಂದ ಜ್ಞಾನವನ್ನು ಪಡೆಯಲು ಪ್ರಯತ್ನಿಸಿದರು. ಶ್ರೀವಿಷ್ಣುವನ್ನು ತಿಳಿದುಕೊಳ್ಳುವ ಪ್ರಯತ್ನವು ಕಲಿಯುಗದಲ್ಲಿ ಈಗಲೂ ನಡೆದಿದೆ. ಶ್ರಿವಿಷ್ಣು ಮತ್ತು ಅವನ ಲೀಲೆ ಸಂಪೂರ್ಣವಾಗಿ ತಿಳಿದ ಮನುಷ್ಯನಿಲ್ಲ.
೨. ‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರು ಮನುಷ್ಯನ ರೂಪದಲ್ಲಿನ ಶ್ರೀಮನ್ನಾರಾಯಣ ಆಗಿದ್ದಾರೆ’, ಇದನ್ನು ಮರೆತಿರುವುದರಿಂದ ಶ್ರದ್ಧೆ ಕಡಿಮೆಯಾಗಿ ಸಾಧಕನ ಅಹಂಭಾವ ಹೆಚ್ಚಾಗುವುದು
ಶ್ರೀವಿಷ್ಣು ಭಾವ-ಭಾವನೆ ಮತ್ತು ಗುಣ-ದೋಷ ಈ ಎಲ್ಲದರ ಆಚೆಗಿರುತ್ತಾನೆ. ವೈಕುಂಠಪತಿ ಶ್ರೀಮನ್ನಾರಾಯಣನಲ್ಲಿ ಏನು ವೈಶಿಷ್ಟ್ಯಗಳಿವೆಯೋ, ಅವು ಪೃಥ್ವಿಯ ಮೇಲಿನ ಯಾವ ಮಾನವನಲ್ಲಿ ಕಂಡುಬರುತ್ತವೆಯೋ, ಅವರ ಹೆಸರು ‘ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆ !’
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಪೃಥ್ವಿಯ ಮೇಲಿನ ಅಘೋಷಿತ ರಾಜರಾಗಿದ್ದಾರೆ. ಅವರ ರಾಜ್ಯವು ಕಾಣಿಸುವುದಿಲ್ಲ; ಏಕೆಂದರೆ ಅವರು ಭಗವಂತನಾಗಿದ್ದು ಅವರ ರಾಜ್ಯ ಅನಂತವಾಗಿದೆ. ಪೃಥ್ವಿ ಶ್ರೀವಿಷ್ಣುವಿನದ್ದಾಗಿದೆ; ಆದ್ದರಿಂದ ಪೃಥ್ವಿ ಮತ್ತು ಶ್ರೀವಿಷ್ಣುವಿನ ನಡುವಿನ ಸಂಬಂಧವು ಬೇರೆಯೇ ಆಗಿದೆ. ಭಕ್ತರಿಗಾಗಿ ಶ್ರೀವಿಷ್ಣು ಮನುಷ್ಯಯೋನಿಯಲ್ಲಿ ಜನ್ಮ ಪಡೆಯುತ್ತಾನೆ. ಮನುಷ್ಯಜನ್ಮ ಎಂದ ಕೂಡಲೇ ಜನ್ಮ, ಕಾಯಿಲೆ, ಪರಿವಾರ, ಅಪ್ತರು, ವಿವಾಹ ಇತ್ಯಾದಿಗಳಿರುತ್ತವೆ. ಯಾವ ಭಗವಂತನು ಯಾರ ಅಧೀನದಲ್ಲಿರುವುದಿಲ್ಲವೋ, ಅವನು ಮನುಷ್ಯಧರ್ಮದ ಅಧೀನದಲ್ಲಿರುತ್ತಾನೆ. ಅವನು ಮನುಷ್ಯರಂತೆ ನಿಯಮಗಳನ್ನು ಪಾಲಿಸುತ್ತಾನೆ, ಮನುಷ್ಯರಂತೆ ಇರುತ್ತಾನೆ ಮತ್ತು ಮನುಷ್ಯರಂತೆ ನಡೆದುಕೊಳ್ಳುತ್ತಾನೆ. ಅವನ ನಡತೆಯು ಮನುಷ್ಯನಂತೆ ಇರುವುದರಿಂದ ಹತ್ತಿರದ ಮನುಷ್ಯನೂ ಅವನನ್ನು ಗುರುತಿಸಲು ಕಡಿಮೆ ಬೀಳುತ್ತಾನೆ ಮತ್ತು ‘ಅವನು ಮನುಷ್ಯರೂಪದಲ್ಲಿನ ಶ್ರೀಮನ್ನಾರಾಯಣನು ದೇವರಾಗಿದ್ದಾನೆ’, ಎಂಬುದನ್ನು ಮರೆಯುತ್ತಾನೆ. ಮೇಲಿನಂತೆ ನಾನು ಮರೆತಿರುವುದರಿಂದಲೇ ಕಠಿಣ ಪ್ರಸಂಗಗಳಲ್ಲಿ ನನ್ನ ಶ್ರದ್ಧೆ ಕಡಿಮೆ ಆಯಿತು ಮತ್ತು ನನ್ನ ಅಹಂಭಾವ ಹೆಚ್ಚಾಯಿತು.
೩. ಸಹಜಭಾವದಲ್ಲಿರುವ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರ ಸ್ವರೂಪದ ವಿಸ್ಮರಣೆಯಾಗುವುದು
ಯಾವ ರೀತಿ ನಾನು ಮನುಷ್ಯರೂಪದ ಶ್ರೀಮನ್ನಾರಾಯಣನನ್ನು ಮರೆತೆನೋ, ಅದೇ ರೀತಿ ನನಗೆ ಆ ಶ್ರೀಮನ್ನಾರಾಯಣನ ಶಕ್ತಿಯಾಗಿರುವ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರ ವಿಸ್ಮರಣೆಯೂ ಆಯಿತು. ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಜೊತೆಗೆ ಸೇವೆ ಮಾಡುತ್ತಿರುವಾಗ ಅವರು ಎಂದಿಗೂ ಗುರುಸ್ಥಾನದಲ್ಲಿರುವಂತೆ ವರ್ತಿಸಲಿಲ್ಲ. ಅವರಿಬ್ಬರೂ ಯಾವಾಗಲೂ ಸಹಸಾಧಕಿಯರಂತೆ ನಡೆದುಕೊಳ್ಳುತ್ತಿದ್ದರು. ‘ಭಕ್ತಿಯ ಅಭಾವ ಮತ್ತು ಅಹಂಭಾವದಿಂದ ನನಗೆ ಸಹ ಸಾಧಕಿಯರಂತೆ ಸೇವೆಯಲ್ಲಿರುವ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ನನ್ನ ‘ಮೋಕ್ಷಗುರುಗಳಿದ್ದಾರೆ’, ಎಂಬ ಅರಿವು ಕಡಿಮೆ ಆಯಿತು. – ಶ್ರೀ. ವಿನಾಯಕ ಶಾನಭಾಗ ಇದರಿಂದ ಅವರೊಂದಿಗೆ ನನ್ನ ನಡೆ-ನುಡಿಗಳು ಬದಲಾದವು, ಹಾಗೆಯೇ ನನ್ನ ಹೃದಯದಲ್ಲಿ ಅವರ ಬಗೆಗಿನ ಭಾವವು ಬದಲಾಯಿತು ಮತ್ತು ಆಧ್ಯಾತ್ಮಿಕ ಭಾವದ ಜಾಗವನ್ನು ಅಹಂಭಾವವು ತೆಗೆದುಕೊಂಡಿತು; ಗುರುಗಳು ಮಾತ್ರ ತನ್ನ ಶಿಷ್ಯನ ಕೈ ಎಂದಿಗೂ ಬಿಡುವುದಿಲ್ಲ. ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರು ನನಗೆ ನನ್ನಲ್ಲಿನ ಅಹಂನ ಅರಿವು ಮಾಡಿಕೊಟ್ಟರು.
೪. ದೇವರ ಕೃಪೆಯಿಂದ ಸನಾತನದ ಮೂವರು ಗುರುಗಳ ಮಹಾತ್ಮೆಯ ಬಗ್ಗೆ ಸಾಧಕನಿಗೆ ಆದ ಅರಿವು !
೪ ಅ. ಭೂದೇವಿಸ್ವರೂಪ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ! : ಒಮ್ಮೆ ಚೆನ್ನೈಯಲ್ಲಿನ ವಾಸ್ತುವಿಶಾರದ ಶ್ರೀ. ಮುರಳಿಯವರು ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರನ್ನು ಭೇಟಿಯಾಗಲು ಬಂದಿದ್ದರು. ಆಗ ಅವರು, “ಮನುಷ್ಯನು ಭೂಮಿಯ ಮೇಲೆ ತನ್ನ ಹಕ್ಕನ್ನು ಸಾಧಿಸುತ್ತಿರುತ್ತಿರುತ್ತಾನೆ; ನಿಜ ಹೇಳುವುದಾದರೆ ಆ ಭೂಮಿಯು ಭೂದೇವಿಯದ್ದಾಗಿರುತ್ತದೆ. ‘ಯಾವ ಭೂಮಿಯ ಮೇಲೆ ಯಾರು ಇರಬೇಕು ?, ಎಂಬುದನ್ನು ಭೂದೇವಿಯೇ ನಿರ್ಧರಿಸುತ್ತಾಳೆ. ಅವಳ ಆಜ್ಞೆಯನ್ನು ಮೀರಿ ಏನು ಆಗುವುದಿಲ್ಲ ಎಂದು ಕೇಳಿದಾಗ ನನ್ನ ತಲೆಯಲ್ಲಿ ಸ್ವಲ್ಪ ಪ್ರಕಾಶ ಬಿದ್ದಿತು. ೨೦೦೧ ರಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಯವರ ಕೃಪೆಯಿಂದ ದೇವದ (ಪನವೇಲ್)ನಲ್ಲಿ ಸನಾತನದ ಮೊದಲನೇ ಆಶ್ರಮವನ್ನು ನಿರ್ಮಿಸಲಾಯಿತು. ಅನಂತರ ೨೦೦೪ ರಲ್ಲಿ ರಾಮನಾಥಿ (ಗೋವಾ)ದಲ್ಲಿನ ಸನಾತನದ ಆಶ್ರಮದ ನಿರ್ಮಾಣ ಮಾಡಲಾಯಿತು. ಪ್ರಸ್ತುತ ಭೂದೇವಿಸ್ವರೂಪ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ಇರುತ್ತಿರುವ ರಾಮನಾಥಿಯಲ್ಲಿನ ಸನಾತನ ಆಶ್ರಮವು ವಿಹಂಗಮ ರೂಪವನ್ನು ಧಾರಣೆ ಮಾಡುತ್ತಿದೆ. ಅನೇಕ ಸ್ಥಳಗಳಲ್ಲಿ ಹೊಸ ಆಶ್ರಮಗಳು ನಿರ್ಮಾಣವಾಗುತ್ತಿವೆ. ಹೊಸ ವಾಸ್ತು ಮತ್ತು ಭೂಮಿಯು ಭೂದೇವಿಯ ಅಧೀನದಲ್ಲಿವೆ. ಮುಂದೆ ಆ ವಾಸ್ತುವಿನಲ್ಲಿರುವ ಸಾಧಕರು ಈಗ ನಮ್ಮ ಕಣ್ಣಿಗೆ ಕಾಣಿಸದಿದ್ದರೂ, ‘ಆ ಸಾಧಕರು ಭೂದೇವಿಯ ಕೃಪೆಯಿಂದ ಯೋಗ್ಯ ಸಮಯದಲ್ಲಿ ಮತ್ತು ಯೋಗ್ಯ ಸ್ಥಳದಲ್ಲಿ ವಾಸಿಸುವರು, ಇದು ಮಾತ್ರ ಸತ್ಯವಾಗಿದೆ. ‘ಆ ಭೂದೇವಿಯಿಂದ ಭೂಧನ ಮತ್ತು ರತ್ನಗಳು ಪ್ರಾಪ್ತವಾಗುತ್ತವೆ, ಮನುಷ್ಯನಿಗೆ ಆಹಾರ ಮತ್ತು ಆಶ್ರಯ ಸಿಗುತ್ತದೆ, ಆ ಭೂದೇವಿಯು ಸನಾತನದ ವಿವಿಧ ಆಶ್ರಮಗಳ ಪಾಲನೆ-ಪೋಷಣೆ ಮಾಡಿ ಅವುಗಳನ್ನು ರಕ್ಷಿಸುವಳು, ನನ್ನ ಈ ಶ್ರದ್ಧೆ ಕಡಿಮೆ ಬಿದ್ದಿತು.
೪ ಆ. ಶ್ರೀದೇವಿಸ್ವರೂಪ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ! : ಶ್ರೀವಿಷ್ಣುವಿನ ಎರಡನೇ ಶಕ್ತಿಯಾದ ‘ಶ್ರೀದೇವಿ ಇವಳು ಸರ್ವಗುಣಸಂಪನ್ನ ಮತ್ತು ಸಮೃದ್ಧಿಯ ಪ್ರತೀಕವಾಗಿದ್ದಾಳೆ. ಅವಳು ಶ್ರೀವಿಷ್ಣುವಿನ ಆತ್ಮವಿದ್ಯೆಯನ್ನು ಪ್ರದಾನಿಸುವ ದೇವಿಯಾಗಿದ್ದಾಳೆ; ಆದರೆ ಅವಳು ಮಹಾಮಾಯಾರೂಪಿ ಚಂಚಲೆಯಾಗಿದ್ದಾಳೆ. ಶ್ರೀವಿಷ್ಣುವನ್ನು ತಿಳಿದುಕೊಳ್ಳಲು ಎಷ್ಟು ಕಠಿಣ ವಾಗಿದೆಯೋ, ಅವಳ ಮಾಯೆಯನ್ನು ತಿಳಿದುಕೊಳ್ಳುವುದು ಅಷ್ಟೇ ಕಠಿಣವಾಗಿದೆ. ಇದುವರೆಗೆ ನನಗೆ ಸನಾತನದ ಮೂರು ಗುರುಗಳ ಪೈಕಿ ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರ ಒಡನಾಟ ಎಲ್ಲಕ್ಕಿಂತ ಹೆಚ್ಚು ಸಿಕ್ಕಿತು. ನಾನು ಅವರ ಸಹಜ ನಡೆ-ನುಡಿಗಳ ಕಡೆಗೆ ಗಮನ ಕೊಟ್ಟಿರುವುದರಿಂದ ನನ್ನ ಮನಸ್ಸಿನಲ್ಲಿ ಅವರಲ್ಲಿನ ದೇವತ್ವದ ಅರಿವು ಕಡಿಮೆ ಆಯಿತು. ಅವರು ಯಾವಾಗಲೂ ‘ಯಾವುದಾದರೊಂದು ವಿಷಯವನ್ನು ಹೀಗೆ ಮಾಡೋಣ, ಎಂದು ಹೇಳದೇ ನನಗೆ, “ಅಣ್ಣಾ, ಇದನ್ನು ಹೀಗೆ ಮಾಡುವುದೇ ? ಎಂದು ಕೇಳುತ್ತಾರೆ ‘ಎಲ್ಲ ಆಯೋಜನೆಯು ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರ ಇಚ್ಛೆಯಂತೆಯೇ ನಡೆಯುತ್ತಿದೆ, ಎಂಬುದನ್ನು ನಾನು ಭಕ್ತಿಯ ಅಭಾವದಿಂದ ಗುರುತಿಸಲಿಲ್ಲ. ‘ಆ ಮಹಾಲಕ್ಷ್ಮಿಯ ಕಟಾಕ್ಷವು ವೈಕುಂಠದಿಂದ ಪೃಥ್ವಿಯ ಮೇಲೆ ಬಿದ್ದಿರುವುದರಿಂದ ಪೃಥ್ವಿಯ ಮೇಲಿನ ಜೀವಗಳಿಗೆ ಸಮೃದ್ಧಿ ಲಭಿಸುತ್ತದೆ ಮತ್ತು ಅವರ ಜೀವನದಲ್ಲಿ ಮಂಗಲಕರ ಘಟನೆಗಳು ಘಟಿಸುತ್ತವೆ, ಆ ಶ್ರೀ ಮಹಾಲಕ್ಷ್ಮೀಯ ಸಾಕ್ಷಾತ್ ಸ್ವರೂಪವಾಗಿರುವ ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರ ಜೊತೆಯಲ್ಲಿರುವಾಗ ಎಂದಿಗೂ ಯಾವುದೇ ವಿಷಯದಲ್ಲಿ ಕೊರತೆ ಅನಿಸುವುದಿಲ್ಲ, ಇದು ನನ್ನ ಗಮನಕ್ಕೆ ಬರಲಿಲ್ಲ.
‘ಹೇ ಭೂದೇವಿ-ಶ್ರೀದೇವಿಸಹಿತ ಶ್ರೀಮನ್ನಾರಾಯಣ, ನಾನು ನಿಮ್ಮ ಚರಣಗಳಲ್ಲಿ ಶರಣಾಗಿದ್ದೇನೆ. ‘ನಿಮ್ಮ ಮೂಲ ಸ್ವರೂಪದ ವಿಸ್ಮರಣೆ ಆಗಿರುವುದರಿಂದ ನಾನು ಕೆಲವು ಕಾಲ ಧ್ಯೇಯದಿಂದ ದೂರವಾಗಿದ್ದೆನು, ಅದಕ್ಕಾಗಿ ನಾನು ನಿಮ್ಮ ಚರಣಗಳಲ್ಲಿ ಕ್ಷಮೆಯಾಚನೆ ಮಾಡುತ್ತೇನೆ. ಹೇ ಶ್ರೀಮನ್ನಾರಾಯಣ, ‘ನನ್ನನ್ನು ಪುನಃ ನಿಮ್ಮ ಚರಣಗಳಲ್ಲಿ ತೆಗೆದುಕೊಂಡು ನನ್ನನ್ನು ಉದ್ಧರಿಸಿರಿ, ಇದೇ ನಿಮ್ಮ ಚರಣಗಳಲ್ಲಿ ಪ್ರಾರ್ಥನೆ.
– ಶ್ರೀ. ವಿನಾಯಕ ಶಾನಭಾಗ (ಆಧ್ಯಾತ್ಮಿಕ ಮಟ್ಟ ಶೇ. ೬೭, ವಯಸ್ಸು ೪೧ ವರ್ಷ), ಬೆಂಗಳೂರು. (೧೭.೫.೨೦೨೪)