ಮತಾಂಧರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ! – ಸಕಲ ಹಿಂದೂ ಸಮಾಜ

  • ಠಾಣೆ: ಮತಾಂಧರಿಂದ ಮಹಿಳೆಗೆ ಕಿರುಕುಳ

  • ಪೊಲೀಸ್ ಆಯುಕ್ತರಿಗೆ ಮನವಿ !

  • ದೇವಸ್ಥಾನದೊಳಗೆ ಚಪ್ಪಲಿ-ಬೂಟುಗಳನ್ನು ಧರಿಸಿ ಪ್ರವೇಶಿಸಿದ 100 ರಿಂದ 150 ಮುಸ್ಲಿಮರ ಗುಂಪು !

  • ಆರೋಪಿಗಳನ್ನು ರಕ್ಷಿಸಲು ಮತಾಂಧರು ಮತ್ತು ಸರಕಾರಿ ಅಧಿಕಾರಿಗಳಿಂದ ಪೊಲೀಸರ ಮೇಲೆ ಒತ್ತಡ !

ಠಾಣೆ – ಮಹಿಳೆಯೊಬ್ಬಳನ್ನು ಬೆನ್ನು ಹತ್ತಿ ಅವಳ ಮನೆಯೊಳಗೆ ನುಗ್ಗಿ ಅವಳಿಗೆ ಕಿರುಕುಳ ನೀಡಿರುವ ಪ್ರಕರಣದಲ್ಲಿ ಶೆಹಜಾದ್ ಶೇಖ್ ಎಂಬ ಮತಾಂಧನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಹಿಂದೂ ಸಂಘಟನೆ ಹಾಗೂ ಬಿಜೆಪಿ ಪದಾಧಿಕಾರಿಗಳು ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದರು. ಮುಖ್ಯಮಂತ್ರಿ ಏಕನಾಥ್ ಶಿಂಧೆಯವರು ಕೂಡ ಈ ಪ್ರಕರಣದಲ್ಲಿ ಗಮನಹರಿಸುವಂತೆ ಹಿಂದೂ ಸಂಘಟನೆಗಳು ಒತ್ತಾಯಿಸಿವೆ.

ಠಾಣೆಯ ಹಾಜುರಿ ಪ್ರದೇಶದಲ್ಲಿ ಒಂದು ವಿಶಿಷ್ಟ ಸಮುದಾಯದವರು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶದಿಂದ ಷಡ್ಯಂತ್ರಗಳನ್ನು ನಡೆಸುತ್ತಿದ್ದಾರೆ. ಕಾನೂನಿನ ಭಯವಿಲ್ಲದಿರುವ ಈ ಸಮುದಾಯದವರಿಂದ ದೇವಸ್ಥಾನಗಳ ವಿಡಂಬನೆ ಮಾಡಲಾಗುತ್ತಿದೆ. ‘ಜಿಹಾದಿ ಉನ್ಮಾದ ನಡೆಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಸಕಲ ಹಿಂದೂ ಸಮಾಜದವರು ಆಗ್ರಹಿಸಿದ್ದಾರೆ.

1.ಜೂನ್ 23 ರಂದು, ಶಹಜಾದ್ ಶೇಖ್ ಚಿಲ್ಲರೆ ಹಣ ಕೇಳುವ ನೆಪದಲ್ಲಿ ಹಾಡು ಹಗಲಿನಲ್ಲಿಯೇ ಹಿಂದೂ ಮಹಿಳೆಯೊಬ್ಬಳ ಮನೆಯೊಳಗೆ ನುಗ್ಗಿ ಅವಳಿಗೆ ಕಿರುಕುಳ ನೀಡಿದನು. ತನ್ನನ್ನು ರಕ್ಷಿಸಿಕೊಳ್ಳಲು ಸಂತ್ರಸ್ತ ಮಹಿಳೆಯು ಸಮೀಪದ ಶಿವ ಮಂದಿರದಲ್ಲಿ ಆಶ್ರಯ ಪಡೆದಳು.

2. ಆಗ 100 ರಿಂದ 150 ಮುಸ್ಲಿಮರು ದೇವಾಲಯದ ಆವರಣದೊಳಗೆ ನುಗ್ಗಿ ಸಂತ್ರಸ್ತ ಮಹಿಳೆಯನ್ನು ಹೊರಗೆ ಬರುವಂತೆ ಬೆದರಿಸಿದರು. ಮಹಿಳೆ ಹೊರಬರಲು ನಿರಾಕರಿಸಿದಾಗ, ಚಪ್ಪಲಿ-ಬೂಟುಗಳನ್ನು ಧರಿಸಿದ್ದ ಮುಸ್ಲಿಮರು ದೇವಸ್ಥಾನದೊಳಗೆ ನುಗ್ಗಿ ದೇವಸ್ಥಾನದ ವಿಡಂಬನೆಯನ್ನು ಮಾಡುತ್ತಾ ಬೆದರಿಕೆ ಹಾಕಿದರು.

3. ಈ ಘಟನೆಯಿಂದ ಹಿಂದೂ ದೇವಸ್ಥಾನಗಳ ಪಾವಿತ್ರ್ಯಕ್ಕೆ ಧಕ್ಕೆ ಉಂಟಾಗಿದ್ದು, ಧಾರ್ಮಿಕ ಉದ್ವಿಗ್ನತೆ ಉಂಟಾಗಿದೆ ಎಂದು ಹಿಂದೂಗಳು ಮನವಿ ಮಾಡಿದ್ದಾರೆ. ಈ ಪ್ರಕರಣದಿಂದಾಗಿ ಹಿಂದೂ ಸಮಾಜದಲ್ಲಿ ಅಭದ್ರತೆ ಮತ್ತು ಆಕ್ರೋಶ ನಿರ್ಮಾಣವಾಗಿದೆ.

4. ಮತಾಂಧರು ಆರೋಪಿಯನ್ನು ರಕ್ಷಿಸಲು ಪೊಲೀಸರ ಮೇಲೆ ಒತ್ತಡ ಹೇರಿದ್ದರು. ಸ್ಥಳೀಯಾಡಳಿತ ಅಧಿಕಾರಿಗಳು ಪೊಲೀಸರ ಮೇಲೆ ಒತ್ತಡ ತಂದಿದ್ದರು. ಪೊಲೀಸರು ಈ ಪ್ರಕರಣದಲ್ಲಿ ಅಪರಾಧ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದರು; ಆದರೆ ಆರೋಪಿಗಳನ್ನು ತಕ್ಷಣ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದರಿಂದ ಹಿಂದೂ ಸಮುದಾಯದವರು ಆಕ್ರೋಶಗೊಂಡಿದ್ದಾರೆ.

5. ಪೊಲೀಸರು ತಪ್ಪಿತಸ್ಥರ ವಿರುದ್ಧ ಅಪರಾಧ ದಾಖಲಿಸಬೇಕು ಮತ್ತು ಇತರ ಜಿಹಾದಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ಕ್ರಮ ಕೈಕೊಳ್ಳಲು ಕಟ್ಟುನಿಟ್ಟಿನ ಮುಂದಡಿಯಿಡಬೇಕು. ಈ ವಿಷಯದಲ್ಲಿ ಒಂದು ವೇಳೆ ತಕ್ಷಣ ಕ್ರಮ ಕೈಗೊಳ್ಳದಿದ್ದರೆ, ತೀವ್ರ ಆಂದೋಲನ ನಡೆಸುವುದಾಗಿ ಸಕಲ ಹಿಂದೂ ಸಮಾಜದ ವಿಜಯ ತ್ರಿಪಾಠಿಯವರು ಎಚ್ಚರಿಕೆ ನೀಡಿದ್ದಾರೆ.

6. ‘ಆರೋಪಿಗಳಿಗೆ ಅತ್ಯಂತ ಕಠಿಣ ಶಿಕ್ಷೆಯಾಗಬೇಕು ಎಂದು ಸಕಲ ಹಿಂದೂ ಸಮಾಜ, ಹಾಗೂ ಭಾರತೀಯ ಸ್ತ್ರೀಶಕ್ತಿ, ರಾಷ್ಟ್ರ ಸೇವಿಕಾ ಸಮಿತಿ, ಹಿಂದೂ ಜಾಗರಣ ಮಂಚ, ವಿಶ್ವ ಹಿಂದೂ ಪರಿಷತ್, ಬಜರಂಗ ದಳ, ದುರ್ಗಾ ವಾಹಿನಿ, ಶಿವಶಂಭು ವಿಚಾರ ಮಂಚ ಮೊದಲಾದ ಸಂಘಟನೆಗಳು ಜೂನ 29 ರಂದು ಠಾಣೆ ಪೊಲೀಸ್ ಆಯುಕ್ತರನ್ನು ಭೇಟಿಯಾಗಿ ಅವರಿಗೆ ಮನವಿ ಸಲ್ಲಿಸಿವೆ.

ಹಾಜೂರಿನಲ್ಲಿ ಹಿಂದೂಗಳು ಅಸುರಕ್ಷಿತ !

ಈ ಘಟನೆಯ ಬಳಿಕ ಠಾಣೆ ಪೊಲೀಸ್ ಆಯುಕ್ತರಿಗೆ ನೀಡಲಾಗಿರುವ ಮನವಿಯಲ್ಲಿ `ಹಾಜೂರಿನ ಹಿಂದೂಗಳು ಅತ್ಯಂತ ಅಸುರಕ್ಷಿತರಾಗಿದ್ದಾರೆ. ಹಲವು ತಿಂಗಳುಗಳಿಂದ ಹಿಂದೂಗಳ ಮೇಲಿನ ದೌರ್ಜನ್ಯದಿಂದಾಗಿ ಅವರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತಿದೆ ಎಂದು ಹೇಳಲಾಗಿದೆ.

ಸಂಪಾದಕೀಯ ನಿಲುವು

  • ಮತಾಂಧರು ಮತ್ತು ಸರಕಾರಿ ಅಧಿಕಾರಿಗಳ ಒತ್ತಡಕ್ಕೆ ಮಣಿದು ತಮ್ಮ ಕರ್ತವ್ಯದಿಂದ ನುಣುಚಿಕೊಳ್ಳುವ ಇಂತಹ ಪೊಲೀಸರಿಂದ ಏನು ಉಪಯೋಗ? ಇಂತಹವರನ್ನು ಸೇವೆಯಿಂದ ವಜಾಗೊಳಿಸಬೇಕು !
  • ಹಿಂದೂಗಳೇ, ದೇವಸ್ಥಾನದ ಪಾವಿತ್ರ್ಯತೆ ಹಾಳು ಮಾಡುವ ಮತಾಂಧರ ವಿರುದ್ಧ ಕ್ರಮ ಕೈಗೊಳ್ಳುವವರೆಗೆ ಪೊಲೀಸರನ್ನು ಪ್ರಶ್ನಿಸುತ್ತೀರಿ