ಮೇ ೩೦ ರಂದು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ೮೨ ನೇ ಜನ್ಮೋತ್ಸವವು ಗೋವಾದ ರಾಮನಾಥಿಯ ಸನಾತನ ಸಂಸ್ಥೆಯ ಆಶ್ರಮದಲ್ಲಿ ಭಾವಪೂರ್ಣವಾಗಿ ನೆರವೇರಿತು. ‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ಮಹಾಮೃತ್ಯುಯೋಗ ದೂರವಾಗಿ ಅವರಿಗೆ ಆರೋಗ್ಯ ಪೂರ್ಣ ದೀರ್ಘಾಯುಷ್ಯ ಲಭಿಸಲಿ ಹಾಗೂ ಸಾಧಕರ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಮಟ್ಟದಲ್ಲಿನ ತೊಂದರೆಗಳು ದೂರವಾಗಲಿ ಮತ್ತು ಆದಷ್ಟು ಬೇಗನೆ ಹಿಂದೂ ರಾಷ್ಟ್ರದ ಸ್ಥಾಪನೆ ಆಗಲಿ, ಎಂಬ ಉದ್ದೇಶವಿರಿಸಿ ಮೇ ೨೮ ರಿಂದ ೩೦ ಈ ಕಾಲಾವಧಿಯಲ್ಲಿ ಆಶ್ರಮದಲ್ಲಿ ‘ಚಂಡಿಯಾಗವನ್ನು ಆಯೋಜಿಸಲಾಗಿತ್ತು. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ಆಧ್ಯಾತ್ಮಿಕ ಉತ್ತರಾಧಿಕಾರಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಹಾಗೂ ಸನಾತನದ ಸಂತರ ವಂದನೀಯ ಉಪಸ್ಥಿತಿಯಲ್ಲಿ ಈ ಯಾಗ ನೆರವೇರಿತು. ಆ ಸಂದರ್ಭದಲ್ಲಿ ಬಂದ ದೈವೀ ಅನುಭವ ಮತ್ತು ಅದರ ಹಿಂದಿರುವ ಶಾಸ್ತ್ರವನ್ನು ಇಲ್ಲಿ ನೀಡಲಾಗಿದೆ.
೧. ರಾಮನಾಥಿ ಆಶ್ರಮದಲ್ಲಿನ ಕಮಲಪೀಠದಲ್ಲಿ ಎರಡು ಕಮಲಗಳು ವಿಶಿಷ್ಟ ದಿಕ್ಕಿನಲ್ಲಿ ಅರಳುವುದು
೧ ಅ. ದೈವೀ ಅನುಭವ : ೨೭.೫.೨೦೨೪ ರಂದು ರಾಮನಾಥಿ ಆಶ್ರಮದಲ್ಲಿನ ಕಮಲಪೀಠದಲ್ಲಿ ಎರಡು ಕಮಲಗಳು ಅರಳಿದವು.
೧ ಆ. ವೈಶಿಷ್ಟ್ಯಗಳು : ಕಮಲಪೀಠದಲ್ಲಿ ಅರಳಿದ ಕಮಲಗಳು ಯಾವಾಗಲೂ ಅರಳುವ ಕಮಲಗಳ ತುಲನೆಯಲ್ಲಿ ಹೆಚ್ಚು ದೊಡ್ಡದಾಗಿದ್ದವು ಹಾಗೂ ಸುಂದರವಾಗಿದ್ದವು. ಒಂದು ಕಮಲದ ಮುಖ ರಾಮನಾಥಿ ಆಶ್ರಮದ ಕಡೆಗೆ, ಇನ್ನೊಂದು ಕಮಲದ ಮುಖ ಹೊರಗಿನ ದಿಕ್ಕಿನಲ್ಲಿತ್ತು.
೧ ಇ. ಸೂಕ್ಷ್ಮದಲ್ಲಿನ ಶಾಸ್ತ್ರ : ಕಮಲಪೀಠದಲ್ಲಿ ಅರಳಿದ ಕಮಲಗಳ ಕಡೆಗೆ ನೋಡಿದಾಗ ಭಗವಾನ ವಿಷ್ಣುವಿನ ಕಮಲನಯನಗಳ (ಕಮಲದಂತಿರುವ ನಯನಗಳು) ನೆನಪಾಗುತ್ತವೆ. ಒಂದು ಕಮಲದ ಮುಖ ರಾಮನಾಥಿ ಆಶ್ರಮದ ಕಡೆಗೆ ಮತ್ತು ಇನ್ನೊಂದು ಕಮಲದ ಮುಖ ಹೊರಗಿನ ದಿಕ್ಕಿನಲ್ಲಿರುವುದು, ಇದರ ಎರಡು ಭಾವಾರ್ಥಗಳಿವೆ.
೧. ‘ಕಮಲ ಈ ವಿಷ್ಣುಸ್ವರೂಪ ಗುರುದೇವರ ಕೃಪಾದೃಷ್ಟಿ ಸನಾತನದ ವಿವಿಧ ಆಶ್ರಮಗಳಲ್ಲಿದ್ದು ಸಾಧನೆಯನ್ನು ಮಾಡುವ ಹಾಗೂ ಆಶ್ರಮದ ಹೊರಗೆ ಅಂದರೆ ಸಂಸಾರದಲ್ಲಿದ್ದು ಸಾಧನೆ ಮಾಡುವ ಸಾಧಕರ ಮೇಲೆಯೂ ಇದೆ’, ಎಂಬುದರ ಸಂಕೇತವಾಗಿದೆ.
೨. ಕಮಲಪೀಠದಲ್ಲಿ ಅರಳಿದ ಕಮಲರೂಪಿ ಚೈತನ್ಯದ ಸ್ರೋತವು ತಳಮಳದಿಂದ ಸಾಧನೆಯನ್ನು ಮಾಡುವ ಸಾಧಕರ ಕಡೆಗೆ ಪ್ರಕ್ಷೇಪಣೆಯಾಗುತ್ತಿದೆ. ಕೆಲವು ಸಾಧಕರು ಸನಾತನದ ಆಶ್ರಮದಲ್ಲಿದ್ದು ಸಾಧನೆ ಮಾಡುತ್ತಾರೆ. ಆದ್ದರಿಂದ ಒಂದು ಕಮಲದ ಮುಖ ಆಶ್ರಮದ ಕಡೆಗಿದೆ. ಕೆಲವು ಸಾಧಕರು ಸಂಸಾರದಲ್ಲಿದ್ದು ತಳಮಳದಿಂದ ಸಾಧನೆ ಮಾಡುತ್ತಾರೆ. ಆದ್ದರಿಂದ ಇನ್ನೊಂದು ಕಮಲದ ಮುಖ ಆಶ್ರಮದ ಹೊರಗಿನ ದಿಕ್ಕಿನಲ್ಲಿದೆ.
೨. ಸಾಧಕರು ವಾಸಿಸುತ್ತಿರುವ ನಾಗೇಶಿಯ ಪರಿಸರದಲ್ಲಿ ಸ್ವರ್ಣಸಂಪಿಗೆಯ ಹೂವು ಅರಳುವುದು
೨ ಅ. ದೈವೀ ಅನುಭವ : ೨೭.೫.೨೦೨೪ ರಂದು ಸಾಧಕರು ವಾಸಿಸುವ ನಾಗೇಶಿ ಪರಿಸರದಲ್ಲಿ ಸ್ವರ್ಣ ಸಂಪಿಗೆ ಹೂವು ಅರಳಿತು.
೨ ಆ. ವೈಶಿಷ್ಟ್ಯ : ಈ ಪರಿಸರದಲ್ಲಿ ಕಳೆದ ವರ್ಷ ಅಂದರೆ ಬ್ರಹ್ಮೋತ್ಸವದ (ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ೮೧ ನೇ ಜನ್ಮೋತ್ಸವದ) ಅವಧಿಯಲ್ಲಿ ನೆಟ್ಟಿರುವ ಸ್ವರ್ಣ ಸಂಪಿಗೆಯ ಸಣ್ಣ ಗಿಡದಲ್ಲಿ ಹೂವು ಅರಳಿತು. ಇದು ವೈಶಿಷ್ಟ್ಯಪೂರ್ಣವಾಗಿದೆ. ಅನುಭವಿಗಳ ಅಭಿಪ್ರಾಯಕ್ಕನುಸಾರ ಇಷ್ಟು ಸಣ್ಣ ಗಿಡದಲ್ಲಿ ಹೂವು ಬರುವುದಿಲ್ಲ. ಇದೇ ಪರಿಸರದಲ್ಲಿ ೩-೪ ವರ್ಷಗಳಷ್ಟು ಹಳೆಯ ಒಂದು ಸ್ವರ್ಣ ಸಂಪಿಗೆಯ ಗಿಡವಿದೆ; ಆದರೆ ಅದರಲ್ಲಿ ಇದುವರೆಗೆ ಹೂವು ಬಂದಿಲ್ಲ.
೨ ಇ. ಸೂಕ್ಷ್ಮದಲ್ಲಿನ ಶಾಸ್ತ್ರ : ಸ್ವರ್ಣ ಸಂಪಿಗೆಯ ಹಳದಿ ಹೂವನ್ನು ನೋಡಿದಾಗ ಭಗವಾನ ಶ್ರೀವಿಷ್ಣುವಿನ ‘ಪಿತಾಂಬರಧಾರಿ ರೂಪದ (ಹಳದಿವಸ್ತ್ರ ಧರಿಸಿದ ರೂಪದ)’ ನೆನಪಾಗುತ್ತದೆ. ಶ್ರೀವಿಷ್ಣು ಯೋಗ ನಿದ್ರೆಯಲ್ಲಿರುವಾಗ ಅಂತರ್ದೃಷ್ಟಿಯಿಂದ ಸೂಕ್ಷ್ಮಜಗತ್ತಿನಲ್ಲಿ ಸಂಚರಿಸುತ್ತಾನೆ. – ಶ್ರೀ. ನಿಷಾದ ದೇಶಮುಖ ಆಗ ಅವನ ಸುತ್ತಲೂ ಹಳದಿ ಬಣ್ಣದ ಸೂಕ್ಷ್ಮ ಪ್ರಭಾವಲಯ ಇರುತ್ತದೆ. ಈ ಪುಷ್ಪ ಅದರ ಅಂದರೆ ಚೈತನ್ಯದ ಸಂಕೇತವಾಗಿದೆ.
೩. ೨೭ ರಿಂದ ೩೦.೫.೨೦೨೪ ಈ ಅವಧಿಯಲ್ಲಿ ಅನೇಕ ಸಾಧಕರ ಮನೆಗಳಲ್ಲಿನ ವಿವಿಧ ಪ್ರಕಾರದ ಪುಷ್ಪಗಳು ಅರಳಿದವು.
೩ ಅ. ದೈವೀ ಅನುಭವ : ೨೭ ರಿಂದ ೩೦.೫.೨೦೨೪ ಈ ಅವಧಿಯಲ್ಲಿ ಅನೇಕ ಸಾಧಕರ ಮನೆಗಳಲ್ಲಿನ ಗಿಡಗಳಲ್ಲಿ ವಿವಿಧ ಪ್ರಕಾರದ ಪುಷ್ಪಗಳು ಅರಳಿದವು.
೩ ಆ. ವೈಶಿಷ್ಟ್ಯಗಳು : ಹೂವು ಅರಳಲು ಬೇಕಾಗುವ ನಿರ್ಧಿಷ್ಟ ಸಮಯದ ಮೊದಲು ಅಥವಾ ನಿರ್ಧಿಷ್ಟ ಸಮಯದ ನಂತರ ಹೂವು ಅರಳುವುದು ಎಂದರೆ, ಹೂವು ಅರಳಲು ಆ ವಿಶಿಷ್ಟ ಸಮಯದ ದಾರಿ ಕಾಯುತ್ತಿತ್ತು.
೩ ಇ. ಸೂಕ್ಷ್ಮದಲ್ಲಿನ ಶಾಸ್ತ್ರ : ವಿವಿಧ ಪುರಾಣಗಳಲ್ಲಿ ಹೇಳಿರುವ ಹಾಗೆ ಹಾಗೂ ಪುರಾಣಗಳ ಆಧಾರದಲ್ಲಿ ತೋರಿಸಲ್ಪಡುವ ದೂರಚಿತ್ರವಾಹಿನಿಗಳಲ್ಲಿನ ಮಾಲಿಕೆಗಳಲ್ಲಿ ಮುಂದಿನಂತೆ ತೋರಿಸ ಲಾಗುತ್ತದೆ, ಅವತಾರಗಳು ಭೂಮಿಯ ಮೇಲೆ ಜನ್ಮತಾಳಿದಾಗ ಹೂವುಗಳು ಅರಳುತ್ತವೆ, ತಂಪುಗಾಳಿ ಬೀಸಲು ಆರಂಭವಾಗುತ್ತದೆ ಇತ್ಯಾದಿ. ಇದರ ಕಾರಣ ಹೇಗಿದೆಯೆಂದರೆ, ಯಾವಾಗ ಭೂಮಿಯ ಮೇಲೆ ಅವತಾರಗಳ ಪ್ರಕಟೀಕರಣವಾಗುತ್ತದೆಯೋ, ಆಗ ಭೂಮಿಯ ಮೇಲಿನ ಸಾತ್ತ್ವಿಕತೆಯು ಕಾಲಕ್ಕನುಸಾರ ಬಹಳಷ್ಟು ಹೆಚ್ಚಾಗುತ್ತದೆ. ಸಾತ್ತ್ವಿಕತೆಯಲ್ಲಿ ವೃದ್ಧಿಯಾಗುವುದರಿಂದ ಪ್ರಕೃತಿಯಲ್ಲಿ ಸಕಾರಾತ್ಮಕ ಬದಲಾವಣೆಯಾಗಿ ಹೂವುಗಳು ಅರಳುವಂತಹ ಘಟನೆಗಳು ಘಟಿಸುತ್ತವೆ.
೨೭ ರಿಂದ ೩೦.೫.೨೦೨೪ ಈ ಅವಧಿಯಲ್ಲಿ ಆಚರಿಸಲ್ಪಡುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಜನ್ಮೋತ್ಸವದಿಂದ ವಾಯುಮಂಡಲದ ಸಾತ್ತ್ವಿಕತೆ ಹೆಚ್ಚಾಗಿರುವುದರಿಂದ ಹಾಗೂ ಸಾಧಕರಲ್ಲಿನ ಭಾವದಿಂದ ಅನೇಕ ಸ್ಥಳಗಳಲ್ಲಿ ಪುಷ್ಪಗಳು ಅರಳಿದವು. ಇದರಿಂದ ‘ಪ್ರಕೃತಿಯೂ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಜನ್ಮೋತ್ಸವದ ಆನಂದವನ್ನು ಸವಿಯುತ್ತಿದೆ’, ಎನ್ನುವ ಅನುಭೂತಿಗಳು ಸಾಧಕರಿಗೆ ಬಂದವು.
೪. ನವಚಂಡಿ ಯಾಗದ ಸಮಯದಲ್ಲಿ ಯಜ್ಞದ ಸ್ಥಳಕ್ಕೆ ಚಿಟ್ಟೆ (ಪಾತರಗಿತ್ತಿ) ಆಕರ್ಷಿತವಾಗುವುದು
೪ ಅ. ದೈವೀ ಅನುಭವ : ೨೮ ರಿಂದ ೩೦.೫.೨೦೨೪ ಈ ಅವಧಿಯಲ್ಲಿ ಸನಾತನದ ರಾಮನಾಥಿ ಆಶ್ರಮದಲ್ಲಿ ನೆರವೇರಿದ ನವಚಂಡೀ ಯಾಗದ ಮೂರೂ ದಿನ ಯಜ್ಞ ನಡೆಯುವಾಗ ಯಜ್ಞದ ಸ್ಥಳದಲ್ಲಿ ನಿರಂತರ ಚಿಟ್ಟೆಗಳು ಬರುತ್ತಿದ್ದವು.
೪ ಆ. ವೈಶಿಷ್ಟ್ಯಗಳು : ಇತರ ದಿನಗಳಲ್ಲಿ ಆ ಪರಿಸರದಲ್ಲಿ ಚಿಟ್ಟೆಗಳು ಬರುವುದಿಲ್ಲ. ಯಜ್ಞ ನಡೆಯುತ್ತಿರುವಾಗ ಒಂದು ಚಿಟ್ಟೆ ಒಂದು ಸ್ಥಳದಲ್ಲಿ ಶಾಂತ ರೀತಿಯಿಂದ ಕುಳಿತುಕೊಳ್ಳುತ್ತಿತ್ತು, ಯಜ್ಞದ ಸಮಯದಲ್ಲಿ ನಡುವೆ ಸ್ವಲ್ಪ ವಿಶ್ರಾಂತಿ ಇರುವಾಗ ಅವು ಯಜ್ಞಕುಂಡದ ಸುತ್ತಲೂ ಹಾರಾಡುತ್ತಿದ್ದವು; ಆದರೆ ಅವು ಹೊರಗೆ ಹೋಗುತ್ತಿರಲಿಲ್ಲ.
೪ ಇ. ಸೂಕ್ಷ್ಮದಲ್ಲಿನ ಶಾಸ್ತ್ರ : ಸಾಧನೆಯಿಂದ ಭೂಲೋಕದ ಯಾವುದೇ ಒಂದು ಭಾಗ ತುಂಬಾ ಸಾತ್ತ್ವಿಕವಾದಾಗ ಅಲ್ಲಿ ಉಚ್ಚಲೋಕದಂತಹ (ಮಹರ್ಲೋಕ, ಜನಲೋಕ, ತಪಲೋಕದಂತಹ) ವಾತಾವರಣ ಸೃಷ್ಟಿಯಾಗುತ್ತದೆ. ಆಗ ಸಾತ್ತ್ವಿಕತೆ ಹೆಚ್ಚಾಗಿರುವುದರಿಂದ ಅಲ್ಲಿ ಚಿಟ್ಟೆಗಳು ಆಕರ್ಷಿಸಲ್ಪಡು ತ್ತವೆ. ಯಜ್ಞಸ್ಥಳದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಯವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಾದ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರ ವಂದನೀಯ ಉಪಸ್ಥಿತಿ ಇತ್ತು. ಅವರು ಸಮಷ್ಟಿ ಗುರುಗಳಾಗಿದ್ದು ಅವರ ಆಧ್ಯಾತ್ಮಿಕ ಮಟ್ಟ ಉಚ್ಚ ಮಟ್ಟದ್ದಾಗಿದೆ. ಸಂತರಿಂದ ಪ್ರಕ್ಷೇಪಣೆಯಾಗುವ ಸಾತ್ತ್ವಿಕತೆಯಿಂದಾಗಿ ಚಿಟ್ಟೆಗಳು ಯಜ್ಞಸ್ಥಳದ ಕಡೆಗೆ ಆಕರ್ಷಿಸಲ್ಪಟ್ಟವು.
೫. ರಾಮನಾಥಿ ಆಶ್ರಮದಲ್ಲಿ ನವಚಂಡಿ ಯಾಗ ನಡೆಯುತ್ತಿರುವಾಗ ಆಶ್ರಮದ ಮುಖ್ಯ ದ್ವಾರದ ಮುಂದೆ ಗೋವು ಕುಳಿತುಕೊಳ್ಳುವುದು
೫ ಅ. ದೈವೀ ಅನುಭವ : ನವಚಂಡಿ ಯಾಗದ ಮೊದಲ ದಿನ, ಅಂದರೆ ೨೮.೫.೨೦೨೪ ರಂದು ಯಾಗ ಆರಂಭವಾದ ಕೂಡಲೆ ಎರಡು ಗೋವುಗಳು ರಾಮನಾಥಿ ಆಶ್ರಮದ ಮುಖ್ಯ ದ್ವಾರದ ಬಲಬದಿಯಲ್ಲಿ ತುಂಬಾ ಹೊತ್ತು ಕುಳಿತಿದ್ದವು.
೫ ಆ. ವೈಶಿಷ್ಟ್ಯಗಳು : ಅನೇಕ ಸಾಧಕರು ರಾಮನಾಥಿ ಆಶ್ರಮದ ಮುಖ್ಯ ದ್ವಾರದ ಬಳಿ ಸೇವೆಯನ್ನು ಮಾಡುತ್ತಿರುತ್ತಾರೆ. ಬೇರೆ ದಿನಗಳಲ್ಲಿ ಈ ಸಮಯದಲ್ಲಿ ಅಲ್ಲಿ ಗೋವುಗಳು ಕುಳಿತು ಕೊಂಡಿರುವುದು ಕಾಣಿಸುವುದಿಲ್ಲ; ಆದರೆ ನವಚಂಡಿ ಯಾಗ ಆರಂಭವಾದಾಗ ಒಂದು ಗೋವು ತುಂಬಾ ಹೊತ್ತು ಕುಳಿತು ಕೊಂಡಿತ್ತು, ಇದು ವೈಶಿಷ್ಟ್ಯಪೂರ್ಣವಾಗಿತ್ತು.
೫ ಇ. ಸೂಕ್ಷ್ಮದಲ್ಲಿನ ಶಾಸ್ತ್ರ : ಗೋವು ಸಾತ್ತ್ವಿಕ ಪ್ರಾಣಿಯಾಗಿದ್ದು ಅದರಲ್ಲಿ ೩೩ ಕೋಟಿ ದೇವತೆಗಳ ತತ್ತ್ವಗಳನ್ನು ಆಕರ್ಷಿಸುವ ಹಾಗೂ ಪ್ರಕ್ಷೇಪಣೆ ಮಾಡುವ ಕ್ಷಮತೆ ಇರುತ್ತದೆ. ಆದ್ದರಿಂದ ಹಿಂದೂ ಧರ್ಮದಲ್ಲಿ ಗೋವಿಗೆ ಗೌರವದ ಸ್ಥಾನವಿದೆ. ಗೋವಿನಲ್ಲಿ ಅತೀ ಹೆಚ್ಚು ಸಾತ್ತ್ವಿಕತೆ ಇರುವುದರಿಂದ ಅದರ ಹಟ್ಟಿಯಲ್ಲಿಯೂ ನಿರ್ಗುಣ ತತ್ತ್ವದ ಅರಿವಾಗುತ್ತದೆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಜನ್ಮೋತ್ಸವದ ನಿಮಿತ್ತ ಮಾಡಿದ ಯಜ್ಞದಲ್ಲಿಯೂ ನಿರ್ಗುಣತತ್ತ್ವ ಪ್ರಕ್ಷೇಪಣೆಯಾಗುತ್ತಿತ್ತು. ಈ ನಿರ್ಗುಣತತ್ತ್ವವು ಆಶ್ರಮದ ಹೊರಗೆ ಕೂಡ ಪ್ರಕ್ಷೇಪಣೆಯಾಗುತ್ತಿತ್ತು. ಈ ನಿರ್ಗುಣ ತತ್ತ್ವದಿಂದ ಆಕರ್ಷಿಸಲ್ಪಟ್ಟು ಎರಡು ಗೋವುಗಳು ಆಶ್ರಮದ ಮುಖ್ಯ ದ್ವಾರದಲ್ಲಿ ಬಂದು ಕುಳಿತುಕೊಂಡಿದ್ದವು. ಸಂಕ್ಷೇಪದಲ್ಲಿ ಹೇಳುವುದಾದರೆ ಗೋವುಗಳು ಈ ರೀತಿ ಕುಳಿತುಕೊಳ್ಳುವುದು ಒಂದು ಶುಭ ಸಂಕೇತವಾಗಿದೆ ಹಾಗೂ ಸಾತ್ತ್ವಿಕತೆ ಆಕರ್ಷಿಸುವ ಮತ್ತು ಪ್ರಕ್ಷೇಪಿಸುವ ಸಂಕೇತವಾಗಿದೆ.
೬. ಯಜ್ಞದಲ್ಲಿನ ಚೈತನ್ಯದಿಂದಾಗಿ ಸನಾತನದ ದೇವದ ಆಶ್ರಮದಲ್ಲಿನ ಪಾಕಶಾಲೆಯಲ್ಲಿನ ದೇವರ ಮಂಟಪದಲ್ಲಿ ಇಟ್ಟಿರುವ ಅನ್ನಪೂರ್ಣಾದೇವಿಗೆ ಅರ್ಪಿಸಿದ ಹೂವು ಈಶಾನ್ಯ ದಿಕ್ಕಿಗೆ ಸರಿಯುವುದು
೬ ಅ. ದೈವೀ ಅನುಭವ : ೨೭.೫.೨೦೨೪ ರಂದು ಸನಾತನದ ದೇವದ (ಪನವೇಲ್) ಆಶ್ರಮದಲ್ಲಿನ ಪಾಕಶಾಲೆಯಲ್ಲಿನ ದೇವರ ಮಂಟಪದಲ್ಲಿ ಇಟ್ಟಿರುವ ಅನ್ನಪೂರ್ಣಾದೇವಿಯ ಮೂರ್ತಿಗೆ ಗೊಂಡೆ ಹೂವನ್ನು ಅರ್ಪಿಸಲಾಗಿತ್ತು. ದೇವಿಗೆ ಅರ್ಪಿಸಿದ ಗೊಂಡೆ ಹೂವು ಯಜ್ಞದ ನಂತರ ಈಶಾನ್ಯ ದಿಕ್ಕಿಗೆ ಸರಿದಿರುವುದು ಕಾಣಿಸಿತು.
೬ ಆ. ವೈಶಿಷ್ಟ್ಯ : ದೇವರ ಮಂಟಪದಲ್ಲಿ ಅರ್ಪಿಸಿದ ಇತರ ಹೂವುಗಳು ಯಥಾಸ್ಥಿತಿಯಲ್ಲಿದ್ದವು. ಗಾಳಿಯಿಂದ ಹೂವು ಅಲ್ಲಾಡಿರಬಹುದೆಂದು ತಿಳಿದರೂ, ಒಂದೇ ಹೂವು ಅಲ್ಲಾಡಿದೆ ಹಾಗೂ ಉಳಿದ ಹೂವುಗಳು ಅಲ್ಲಾಡಲಿಲ್ಲ, ಎನ್ನಲು ಸಾಧ್ಯವಿಲ್ಲ.
೬ ಇ. ಸೂಕ್ಷ್ಮದಲ್ಲಿನ ಶಾಸ್ತ್ರ : ವಾಸ್ತುಶಾಸ್ತ್ರಕ್ಕನುಸಾರ ಈಶಾನ್ಯ ದಿಕ್ಕನ್ನು ದೇವತ್ವದ ದಿಕ್ಕೆಂದು ಪರಿಗಣಿಸಲಾಗುತ್ತದೆ. ರಾಮನಾಥಿ ಆಶ್ರಮ ದಲ್ಲಿ ಸಮಷ್ಟಿಗಾಗಿ ನಡೆಯುತ್ತಿರುವ ನವಚಂಡಿ ಯಾಗದಲ್ಲಿನ ಸಾತ್ತ್ವಿಕತೆಯು ದೇವದ ಆಶ್ರಮದಲ್ಲಿಯೂ ನಿರ್ಮಾಣವಾಯಿತು. ಈ ಸಾತ್ತ್ವಿಕತೆಯು ಬೇರೆ ದಿಕ್ಕುಗಳ ತುಲನೆಯಲ್ಲಿ ಈಶಾನ್ಯ ದಿಕ್ಕಿನಲ್ಲಿ ಹೆಚ್ಚು ಪ್ರಮಾಣದಲ್ಲಿತ್ತು. ಹೂವು ದೂರಚಿತ್ರವಾಹಿನಿಯ ‘ಅಂಟೇನಾ’ದಂತೆ ಬ್ರಹ್ಮಾಂಡದಲ್ಲಿನ ಚೈತನ್ಯವನ್ನು ಮೂರ್ತಿಯಲ್ಲಿ ಆಕರ್ಷಿಸುವ ಮಾಧ್ಯಮವಾಗಿರುತ್ತದೆ. ದೇವದ ಆಶ್ರಮದ ಈಶಾನ್ಯ ದಿಕ್ಕಿನಲ್ಲಿ ಸಾತ್ತ್ವಿಕತೆ ಹೆಚ್ಚಾಗಿರುವುದರಿಂದ ಆ ಸಾತ್ತ್ವಿಕತೆಯನ್ನು ಗ್ರಹಣ ಮಾಡಲು ಹೂವು ಆ ದಿಕ್ಕಿಗೆ ತಿರುಗಿತು. ಇದು ವಾಯುತತ್ತ್ವಕ್ಕೆ ಸಂಬಂಧಿಸಿದ ಅನುಭೂತಿಯಾಗಿದೆ. ಇದರಿಂದ ಸ್ಥೂಲದಿಂದ ಯಜ್ಞ ರಾಮನಾಥಿ ಆಶ್ರಮದಲ್ಲಿ ನಡೆಯುತ್ತಿದ್ದರೂ ಅದರ ಪರಿಣಾಮ ಸಾಧನೆ ಮಾಡುವ ಎಲ್ಲ ಕಡೆಗಳಲ್ಲಿ ಸಮಷ್ಟಿಯ ಮೇಲಾಗುವುದರ ಸಂಕೇತವಾಗಿದೆ.
೭. ಕೃತಜ್ಞತೆ
ವಿದ್ಯುತ್ತನ್ನು ವ್ಯಾಟ್ (Watt) ನಲ್ಲಿ ಅಳೆಯಬಹುದು, ನೀರನ್ನು ಲೀಟರ್‌ನಲ್ಲಿ ಅಳೆಯಬಹುದು, ಅದೇ ರೀತಿ ಅನುಭೂತಿಯು ಅಧ್ಯಾತ್ಮಶಾಸ್ತ್ರದ ಪರಿಣಾಮವನ್ನು ಅಳೆಯುವ ಮಾನದಂಡವಾಗಿದೆ. ‘ಈ ಸ್ಥೂಲ ಹಾಗೂ ಸೂಕ್ಷ್ಮ ಸ್ತರದಲ್ಲಿ ಬಂದಿರುವ ವಿವಿಧ ಅನುಭೂತಿಗಳಿಂದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಅವತಾರತ್ವ ಮತ್ತು ದಿವ್ಯ ಅಸ್ತಿತ್ವದ ಅನುಭೂತಿಯನ್ನು ಎಲ್ಲೆಡೆಯ ಸಾಧಕರಿಗೆ ಪಡೆಯಲು ಸಾಧ್ಯವಾಯಿತು’, ಅದಕ್ಕಾಗಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳು !’
– ಶ್ರೀ. ನಿಷಾದ ದೇಶಮುಖ (ಸೂಕ್ಷ್ಮದಲ್ಲಿ ಲಭಿಸಿದ ಜ್ಞಾನ, ಆಧ್ಯಾತ್ಮಿಕ ಮಟ್ಟ ಶೇ. ೬೩) ಸನಾತನ ಆಶ್ರಮ, ರಾಮನಾಥಿ ಗೋವಾ. (೩೧.೫.೨೦೨೪)
* ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ. |