ಭಾರತಕ್ಕೆ ಕ್ರಿಕೆಟ್ ಧರ್ಮವಾದರೂ ಪಾಕಿಸ್ತಾನಕ್ಕೆ ಅದು ‘ಕ್ರಿಕೆಟ್ ಜಿಹಾದ್’ ಆಗಿದೆ ! – ವಕೀಲ ವಿನೀತ್ ಜಿಂದಾಲ್, ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್

ವೈಶ್ವಿಕ ಹಿಂದೂ ರಾಷ್ಟ್ರ ಅಧಿವೇಶನದ ಆರನೇ ದಿನ

ಸತ್ರ : ವಕೀಲರ ನ್ಯಾಯಾಂಗ ಕೆಲಸ ಮತ್ತು ಹೋರಾಟ

ವಕೀಲ ವಿನೀತ್ ಜಿಂದಾಲ್

ವಿದ್ಯಾಧಿರಾಜ್ ಸಭಾಂಗಣ – ಭಾರತದಲ್ಲಿ ಕ್ರಿಕೆಟ್ ಅನ್ನು ಆಟ ಎಂದು ಆಡಲಾಗುತ್ತದೆ; ಆದರೆ ಪಾಕಿಸ್ತಾನ-ಭಾರತ ಪಂದ್ಯವು ಪಾಕಿಸ್ತಾನಿಯರಿಗೆ ಯುದ್ಧವಿದ್ದಂತೆ ಇರುತ್ತದೆ. ಪಾಕಿಸ್ತಾನದ ಮಾಜಿ ಕ್ರಿಕೆಟ್ ನಾಯಕ ಮತ್ತು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು, ‘ಭಾರತಕ್ಕೆ ಕ್ರಿಕೆಟ್ ಆಟವಾಗಲಿದೆ; ಆದರೆ ನಮಗೆ ಇದು ಜಿಹಾದ್ ಆಗಿದೆ.’ ಎಂದು ಹೇಳಿದ್ದರು. ಇದರಿಂದ ಜಗತ್ತಿನಲ್ಲಿ ‘ಕ್ರಿಕೆಟ್ ಜಿಹಾದ್’ ಅಸ್ತಿತ್ವದಲ್ಲಿದೆ ಎಂದು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನ ವಕೀಲ ವಿನೀತ್ ಜಿಂದಾಲ್ ಇವರು ‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದ ಆರನೇ ದಿನದಂದು ‘ಕ್ರಿಕೆಟ್ ಜಿಹಾದ್ ವಿರುದ್ಧ ನ್ಯಾಯಾಂಗ ಕಾರ್ಯ’ ವಿಷಯದ ಕುರಿತು ಮಾತನಾಡುತ್ತಿದ್ದರು.