ಶ್ವಿಕ ಹಿಂದೂ ರಾಷ್ಟ್ರ ಅಧಿವೇಶನದ ಆರನೇ ದಿನ
ಸತ್ರ : ವಕೀಲರ ನ್ಯಾಯಾಂಗ ಕೆಲಸ ಮತ್ತು ಹೋರಾಟ
ವಿದ್ಯಾಧಿರಾಜ್ ಸಭಾಂಗಣ – ಎಲ್ಲಾ ಜಿಹಾದ್‌ಗಳಲ್ಲಿ ಅತ್ಯಂತ ಅಪಾಯಕಾರಿ ಎಂದರೆ ‘ಭೂಮಿ ಜಿಹಾದ್’ (ಲ್ಯಾಂಡ್ ಜಿಹಾದ್) ಆಗಿದೆ ಮತ್ತು ಎಲ್ಲಾ ಜಿಹಾದ್‌ಗಳು ಈ ಜಿಹಾದ್‌ಗೆ ಸಂಬಂಧಿಸಿವೆ. ಇದರ ಅಡಿಯಲ್ಲಿ ಅವರು ಹೆಚ್ಚಿನ ಸರ್ಕಾರಿ ಭೂಮಿಯನ್ನು ಪಡೆಯಲು ಪ್ರಯತ್ನಿಸುತ್ತಾರೆ. ಅಲ್ಲಿ ಆರಂಭದಲ್ಲಿ ಮಜಾರ್ (ಮುಸ್ಲಿಂ ಗೋರಿ) ನಿರ್ಮಿಸುತ್ತಾರೆ. ಅದರ ನಂತರ ಅಲ್ಲಿ ಒಂದು ದರ್ಗಾವನ್ನು (ಗೋರಿಯ ಸ್ಥಳದಲ್ಲಿ ಮಾಡಿದ ರಚನೆ) ನಿರ್ಮಿಸುತ್ತಾರೆ ಮತ್ತು ಕ್ರಮೇಣ ಅದು ಭವ್ಯವಾದ ಮಸೀದಿಯಾಗಿ ರೂಪಾಂತರಗೊಳ್ಳುತ್ತದೆ. ಕಾಲಾನಂತರದಲ್ಲಿ ಪ್ರವಾಸೋದ್ಯಮದ ಹೆಸರಿನಲ್ಲಿ ಅನೇಕ ಮತಾಂಧರು ಅಲ್ಲಿಗೆ ಬರುತ್ತಾರೆ. ಅವರು ಅಲ್ಲಿ ನೆಲೆಸುತ್ತಾರೆ. ಹೀಗೆ ಮಾಡಿ 5 ಕಿಮೀ ಪ್ರದೇಶವು ಮುಸ್ಲಿಂ ಬಹುಸಂಖ್ಯಾತವಾಗುತ್ತದೆ. ಆ ನಂತರ ಅಲ್ಲಿ ಅತಿಕ್ರಮಣ ತಡೆಯುವುದು ಕಷ್ಟವಾಗುತ್ತದೆ. ಆದುದರಿಂದ ಇದನ್ನು ಮೊದಲಿನಿಂದಲೂ ತಡೆಯುವ ಅಗತ್ಯವಿದೆ ಎಂದು ‘ಹಿಂದೂ ಟಾಸ್ಕ ಫೋರ್ಸ’ನ ಸಂಸ್ಥಾಪಕ ವಕೀಲ ಖುಷ್ ಖಂಡೇಲ್ವಾಲ್ ಇವರು ‘ವೈಶ್ವಿಕ್ ಹಿಂದೂ ರಾಷ್ಟ್ರ ಮಹೋತ್ಸವ’ದ ಆರನೇ ದಿನದಂದು ಹೇಳಿದರು. ಅವರು ‘ಸರ್ಕಾರಿ ಭೂಮಿಯಲ್ಲಿ ನಿರ್ಮಿಸಿರುವ ದರ್ಗಾಗಳ ವಿರುದ್ಧ ನ್ಯಾಯಾಲಯದ ಹೋರಾಟ’ ವಿಷಯ ಕುರಿತು ಮಾತನಾಡುತ್ತಿದ್ದರು.
ಕ್ಷಣಚಿತ್ರ : ಈ ಪ್ರಕರಣದ ಕುರಿತು ಮಾತನಾಡುವಾಗ ವಕೀಲ ಖುಷ್ ಖಂಡೇಲ್ವಾಲ್ ತಮ್ಮ ಅನುಭವವನ್ನು ಹಂಚಿಕೊಂಡರು. ಈ ಪ್ರಕರಣದ ಸರಕಾರಿ ಅಧಿಕಾರಿಗಳು, ಈ ಪ್ರಕರಣದಲ್ಲಿ ಹಣ ಪಡೆದು ಭ್ರಷ್ಟಾಚಾರ ಮಾಡುವಂತೆ ನಮ್ಮ ಮೇಲೆ ಒತ್ತಡ ಹೇರಲಾಗಿತ್ತು; ಆದರೆ ನಾವು ವಕೀಲ ಖಂಡೇಲ್ವಾಲ್ ಅವರನ್ನು ನೋಡಿದ ನಂತರ ಹಣವನ್ನು ತಿರಸ್ಕರಿಸಿದ್ದೇವೆ ಎಂದು ಹೇಳಿದರು.
ಭಗವಾನ ಶ್ರೀಕೃಷ್ಣನ ಕಾರ್ಯವನ್ನು ಅರಿತು ಧರ್ಮಕಾರ್ಯ ಮಾಡಬೇಕು ! – ವಕೀಲ ಖುಷ್ ಖಂಡೇಲ್ವಾಲ್, ಸಂಸ್ಥಾಪಕ, ‘ಹಿಂದೂ ಟಾಸ್ಕ ಫೋರ್ಸ್’ಕೆಲವರು ನನ್ನನ್ನು ‘ಈ ಕಾರ್ಯ ಮಾಡುವಾಗ ಹೆದರಿಕೆ ಆಗುವುದಿಲ್ಲವೇ ?’, ಎಂದು ಕೇಳುತ್ತಾರೆ. ಆಗ ನನಗನ್ನಿಸುತ್ತದೆ, ‘ಇದು ಭಗವಾನ ಶ್ರೀಕೃಷ್ಣನ ಕಾರ್ಯವಾಗಿದೆ. ಅದು ಆತನ ಇಚ್ಛೆಯಿಂದ ಪೂರ್ಣವಾಗುತ್ತದೆ. ಆದ್ದರಿಂದ ಈ ಕಾರ್ಯವನ್ನು ತಡೆಯುವ ಶಕ್ತಿ ಯಾರಿಗೂ ಇಲ್ಲ.’ ಸನಾತನ ಧರ್ಮದಲ್ಲಿ ಹುಟ್ಟಿದ್ದು ನಮ್ಮ ಸೌಭಾಗ್ಯವಾಗಿದೆ. ಧರ್ಮವನ್ನು ರಕ್ಷಿಸುವ ಮೂಲಕವೇ ನಾವು ಈ ಸನಾತನ ಧರ್ಮದ ಋಣವನ್ನು ತೀರಿಸಬಹುದು. ನಾವೆಲ್ಲರೂ ಭಗವಾನ ಶ್ರೀಕೃಷ್ಣನನ್ನು ಕೇಂದ್ರವಾಗಿಟ್ಟುಕೊಂಡು ಕಾರ್ಯ ಮಾಡಿದರೆ ನಮ್ಮ ಗೆಲುವು ನಿಶ್ಚಿತ ಎಂದು ಹೇಳಿದರು. |