ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ವಿವಿಧ ಸಂಘಟನೆಗಳು ಮತ್ತು ಯುವಕರು ಮಾಡಿದ ಸಂಘರ್ಷ, ಮತಾಂತರವನ್ನು ತಡೆಗಟ್ಟುವ ಆದರ್ಶವನ್ನು ಧರ್ಮವೀರ ಸಂಭಾಜಿ ರಾಜೆ ಇವರು ಹಿಂದೂಗಳೆದುರು ಇಟ್ಟಿದ್ದಾರೆ ! – ಸದ್ಗುರು ಬಾಳ ಮಹಾರಾಜ, ಇಚಲಕರಂಜಿ, ಕೊಲ್ಹಾಪುರ.

ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ಆರನೇ ದಿನ (೨೯ ಜೂನ್) – ಉದ್ಬೋಧನಾ ಸತ್ರ

ಛತ್ರಪತಿ ಶಿವಾಜಿ ಮಹಾರಾಜರಿಂದಾಗಿ ಹಿಂದು ಧರ್ಮವು ಉಳಿದುಕೊಂಡಿದೆ, ಮತ್ತು ಧರ್ಮವೀರ ಸಂಭಾಜಿ ಮಹಾರಾಜರು ಇರದಿದ್ದರೆ, ಮಹಾರಾಷ್ಟ್ರದ ಜೊತೆಗೆ ಸಂಪೂರ್ಣ ದೇಶದಲ್ಲಿ ಇಸ್ಲಾಮೀಕರಣದ ಪ್ರಭಾವ ನಿರ್ಮಾಣವಾಗಬಹುದಿತ್ತು. ಭಗವಾನ ಶ್ರೀಕೃಷ್ಣನು ಭಗವದ್ಗೀತೆಯಲ್ಲಿ, ‘ಧರ್ಮಸಂಸ್ಥಾಪನೆಗಾಗಿ ನಾನು ಪುನಃ ಪುನಃ ಅವತಾರ ತಾಳುತ್ತೇನೆ’, ಎಂದು ಹೇಳಿದ್ದಾನೆ. ಯಾವ ರೀತಿ ರಾವಣನ ವಧೆಯನ್ನು ಶ್ರೀರಾಮನು, ಕಂಸನ ವಧೆಯನ್ನು ಶ್ರೀಕೃಷ್ಣನು ಮಾಡಿದನೋ, ಅದೇ ರೀತಿ ಛತ್ರಪತಿ ಶಿವಾಜಿ ಮಹಾರಾಜರು ಔರಂಗಜೇಬ್‌ನಿಗೆ ಸಾಕುಸಾಕಾಗುವಂತೆ ಮಾಡಿ ಸೋಲಿಸಿದರು. ಧರ್ಮವೀರ ಸಂಭಾಜಿ ಮಹಾರಾಜರು ಹಿಂದೂಗಳನ್ನು ಮತಾಂತರಗೊಳಿಸುವ ಕ್ರೈಸ್ತರ ಮೇಲೆ ವರ್ಚಸ್ಸು ಬೀರಿದರು.

“ಹಿಂದೂಗಳನ್ನು ಮತಾಂತರಿಸಿದರೆ, ಪೋರ್ಚುಗೀಸ್‌ರ ಹಿಂದೂಕರಣ ಮಾಡುವೆನು’, ಎಂಬ ಎಚ್ಚರಿಕೆ ನೀಡಿದರು. ಹಿಂದೂಗಳ ಮತಾಂತರವನ್ನು ಹೇಗೆ ತಡೆಗಟ್ಟಬೇಕು ? ಎಂದು ಧರ್ಮವೀರ ಸಂಭಾಜಿ ಮಹಾರಾಜರು ಹಿಂದೂಗಳಿಗೆ ಆದರ್ಶ ಹಾಕಿ ಕೊಟ್ಟಿದ್ದಾರೆ. ನಮಗೆ ಭಾರತವನ್ನು ಹಿಂದುರಾಷ್ಟ್ರವನ್ನಾಗಿ ಮಾಡಬೇಕಾಗಿದೆ, ಈ ವಿಚಾರವನ್ನು ನಮ್ಮ ಹೃದಯದಲ್ಲಿ ಗಟ್ಟಿ ಮಾಡಬೇಕು.