ಮೂವರು ಗುರುಗಳು ರಥದಲ್ಲಿ ವಿರಾಜಮಾನರಾದ ಮೇಲೆ ರಥದ ಚೈತನ್ಯದಿಂದ ಮತ್ತು ಬ್ರಹ್ಮೋತ್ಸವದಲ್ಲಿನ ಚೈತನ್ಯದಿಂದ ೩ ಗುರುಗಳಲ್ಲಿನ ಚೈತನ್ಯದಲ್ಲಿ ತುಂಬಾ ಹೆಚ್ಚಳವಾಗುವುದು

ಸಚ್ಚಿದಾನಂದ ಪರಬಹ್ಮ ಡಾ. ಜಯಂತ ಆಠವಲೆ ಇವರ ೮೧ ನೇ ಜನ್ಮೋತ್ಸವದ ನಿಮಿತ್ತ ಆಚರಿಸಿದ ‘ಬ್ರಹ್ಮೋತ್ಸವದ ಸಂದರ್ಭದ ಸಂಶೋಧನೆ

ಬ್ರಹ್ಮೋತ್ಸವದ ನೆನಪುಗಳು ಬನ್ನಿ ಸಂಗ್ರಹಿಸಿಡೋಣ

ರಥಯಾತ್ರೆಯಲ್ಲಿ ಎಲ್ಲರಿಗಿಂತ ಮುಂದೆ (1) ಧರ್ಮಧ್ವಜ ಹಿಡಿದಿರುವ ಸಾಧಕ (2) ಮಂಗಲ ಕಲಶ ಹಿಡಿದಿರುವ ಸಾಧಕಿ (3) ಸುಮಂಗಲಿಯರ ದಳದ ಸಾಧಕಿಯರು (4) ಧ್ವಜ ದಳದ ಸಾಧಕರು ತಾಳ ದಳದ ಸಾಧಕಿಯರು (5) ರಥವನ್ನೆಳೆಯುತ್ತಿರುವ ಸಾಧಕರು (6) ಧ್ವಜ ದಳದ ಸಾಧಕಿಯರು

೧. ಸಚ್ಚಿದಾನಂದ ಪರಬಹ್ಮ ಡಾ. ಆಠವಲೆ, ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಈ ಮೂವರು ಗುರುಗಳು ‘ಬ್ರಹ್ಮೋತ್ಸವದ ರಥದಲ್ಲಿ ವಿರಾಜಮಾನರಾದ ಮೇಲೆ ರಥದ ಚೈತನ್ಯವು ಉತ್ತರೋತ್ತರ ಬಹಳಷ್ಟು ಪ್ರಮಾಣದಲ್ಲಿ ಹೆಚ್ಚಾಗುವುದು.

ಶ್ರೀವಿಷ್ಣುಸ್ವರೂಪ ಸಚ್ಚಿದಾನಂದ ಪರಬಹ್ಮ ಡಾ. ಆಠವಲೆ ಮತ್ತು ಅವರ ಉತ್ತರಾಧಿಕಾರಿ ಶ್ರೀಮಹಾಲಕ್ಷ್ಮೀಸ್ವರೂಪ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಈ ಮೂವರು ಗುರುಗಳು ರಥದಲ್ಲಿ ವಿರಾಜಮಾನರಾದ ಮೇಲೆ ಅವರಲ್ಲಿನ ದೈವೀ ಊರ್ಜೆ ರಥದಲ್ಲಿ ಸಂಗ್ರಹವಾಯಿತು. ಈ ದಿವ್ಯ ರಥಯಾತ್ರೆಯನ್ನು ನೋಡಲು ದೇವ-ದೇವತೆಗಳು ಸೂಕ್ಷ್ಮದಲ್ಲಿ ಕಾರ್ಯಕ್ರಮದ ಸ್ಥಳಕ್ಕೆ ಬಂದಿದ್ದರು. ಆದುದರಿಂದ ಸಂಪೂರ್ಣ ವಾತಾವರಣ ಪ್ರಸನ್ನ ಮತ್ತು ಚೈತನ್ಯಮಯವಾಗಿತ್ತು. ರಥವು ಮುಂದೆ ಸಾಗಿದಂತೆ ಮೂವರೂ ಗುರುಗಳಿಂದ ವಾತಾವರಣದಲ್ಲಿ ಚೈತನ್ಯ ಮತ್ತು ಆನಂದದ ಸ್ಪಂದನಗಳು ತುಂಬಾ ಪ್ರಮಾಣದಲ್ಲಿ ಪ್ರಕ್ಷೇಪಿತವಾಗುತ್ತಿದ್ದವು. ಎಲ್ಲ ದೇವಿದೇವತೆಗಳು ಸೂಕ್ಷ್ಮದಿಂದ ರಥದ ಮೇಲೆ ಪುಷ್ಪವೃಷ್ಟಿ ಮಾಡಿ ಮೂವರು ಗುರುಗಳ ಜಯಜಯಕಾರ ಮಾಡುತ್ತಿದ್ದರು. ಈ ಚೈತನ್ಯಮಯ ವಾತಾವರಣದ ಸುಪರಿಣಾಮ ರಥದ ಮೇಲಾಗಿ ಅದು ವಿಲಕ್ಷಣ ಚೈತನ್ಯದಿಂದ ಭರಿತವಾಯಿತು.

ಕು. ಮಧುರಾ ಭೋಸಲೆ

೨. ಬ್ರಹ್ಮೋತ್ಸವದ ಚೈತನ್ಯದಿಂದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ, ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರಲ್ಲಿನ ಚೈತನ್ಯವು ಬಹಳಷ್ಟು ಪ್ರಮಾಣದಲ್ಲಿ ಹೆಚ್ಚಾಗುವುದು

ಮೂವರು ಗುರುಗಳಲ್ಲಿ ಬ್ರಹ್ಮೋತ್ಸವದ ಮೊದಲು ತುಂಬಾ ಪ್ರಮಾಣದಲ್ಲಿ ಚೈತನ್ಯವಿತ್ತು. ಬ್ರಹ್ಮೋತ್ಸವದ ನಂತರ ಮೂವರು ಗುರುಗಳಲ್ಲಿ ಸಕಾರಾತ್ಮಕ ಊರ್ಜೆಯಲ್ಲಿ ವಿಲಕ್ಷಣ ಹೆಚ್ಚಳವಾದುದರ ಅರಿವಾಗುವುದು. ಇದರಿಂದ ಸಪ್ತರ್ಷಿಗಳು ಮೂವರು ಗುರುಗಳಿಗೆ ಅವತಾರವೆಂದು ಏಕೆ ಹೇಳುತ್ತಾರೆ ? ಎಂಬುದು ಗಮನಕ್ಕೆ ಬಂದಿತು.

೩. ಬ್ರಹ್ಮೋತ್ಸವದಲ್ಲಿನ ರಥಯಾತ್ರೆಯಲ್ಲಿ ಸಹಭಾಗಿಯಾದ ಸಾಧಕ ಹಾಗೂ ಸಾಧಕಿಯರ ಮೇಲೆ ರಥಯಾತ್ರೆಯ ಚೈತನ್ಯದಿಂದ ತುಂಬಾ ಸಕಾರಾತ್ಮಕ ಪರಿಣಾಮವಾಗುವುದು

ಸನಾತನದ ಸಾಧಕರು ಪರಾತ್ಪರ ಗುರು ಡಾಕ್ಟರರ ಮೇಲೆ ಸಂಪೂರ್ಣ ಶ್ರದ್ಧೆಯನ್ನಿಟ್ಟು ೨೦-೨೫ ವರ್ಷಕ್ಕಿಂತಲೂ ಹೆಚ್ಚು ಕಾಲದಿಂದ ಸಾಧನೆಯಲ್ಲಿದ್ದಾರೆ. ಅನೇಕ ಕಠಿಣ ಪ್ರಸಂಗಗಳಲ್ಲಿ ತುಂಬಾ ತೊಂದರೆಗಳನ್ನು ಸಹಿಸಿಕೊಂಡು ಅವರ ಸಾಧನೆ ಪರಿಪಕ್ವವಾಗಿ ವೃದ್ಧಿಯಾಗುತ್ತಿದೆ. ಸಾಧಕರ ಪ್ರವಾಸ ಪಿತೃಯಾನ ಮಾರ್ಗ ದಿಂದ ಇರುವುದರಿಂದ ಅವರಿಗೆ ಘೋರವಾದ ಆಪತ್ಕಾಲದಿಂದ ಮಾರ್ಗಕ್ರಮಣ ಮಾಡುತ್ತಾ ಮುಂದೆ ಹೋಗಬೇಕಾಗಿದೆ. ಕೆಟ್ಟ ಶಕ್ತಿಗಳು ಸಾಧಕರಿಗೆ ಬೇರೆ ಬೇರೆ ರೀತಿಯಲ್ಲಿ ತೊಂದರೆಗಳನ್ನು ನೀಡುವುದರಿಂದ ಸಾಧಕರಿಗೆ ವಿಕಲ್ಪಗಳು ಬರುವುದು, ಮಾಯೆಯ ವಿಚಾರಗಳು ಹೆಚ್ಚಾಗುವುದು, ಭವಿಷ್ಯದ ಬಗ್ಗೆ ಕಾಳಜಿ ಅನಿಸುವುದು, ಸಾಧನೆಯ ಗತಿ ಕುಂಠಿತವಾಗುವುದು, ಸಾಧನೆಯ ಉತ್ಸಾಹ ಕಡಿಮೆಯಾಗುವುದು ಮುಂತಾದ ತೊಂದರೆಗಳಾಗುತ್ತಿವೆ. ಇದರಿಂದ ಸಾಧಕರ ಮೇಲೆ ಎಂದಿಗೂ ಬರದಷ್ಟು  ಪ್ರಚಂಡ ಪ್ರಮಾಣದಲ್ಲಿ ಕಪ್ಪು (ತೊಂದರೆದಾಯಕ ಸ್ಪಂದನಗಳ) ಆವರಣ ಬಂದಿದೆ. ಹೀಗಿದ್ದರೂ ಸಾಧಕರ ಮೇಲೆ ಗುರುಕೃಪೆಯೂ ಅಷ್ಟೇ ಇದೆ. ಇದನ್ನು ಗಮನದಲ್ಲಿಟ್ಟುಕೊಂಡು ಸಾಧಕರು ಸಾಧನೆಯಲ್ಲಿನ ಮಾರ್ಗಕ್ರಮಣವನ್ನು ಮುಂದುವರಿಸುವುದು ಆವಶ್ಯಕವಿದೆ. ಸಾಧಕರ ತೊಂದರೆ ದೂರವಾಗಿ ಸಂಪೂರ್ಣ ಜೀವನ ಆನಂದಮಯವನ್ನಾಗಿಸಲು ಭಗವಂತನು ಈ ಬ್ರಹ್ಮೋತ್ಸವದ ಆಯೋಜನೆ ಮಾಡಿದ್ದಾನೆ.

ಮೂವರು ಗುರುಗಳಿಂದ ಪ್ರಕ್ಷೇಪಿತವಾದ ದಿವ್ಯ ಚೈತನ್ಯದಿಂದ ರಥಯಾತ್ರೆಯಲ್ಲಿ ಸಹಭಾಗಿಯಾದ ಸಾಧಕ ಹಾಗೂ ಸಾಧಕಿಯರ ಮೇಲೆ ಬಂದಿದ್ದ ತೊಂದರೆದಾಯಕ ಸ್ಪಂದನಗಳ ಆವರಣವು ತುಂಬಾ ಪ್ರಮಾಣದಲ್ಲಿ ಕಡಿಮೆಯಾಗಿ ಅವರಲ್ಲಿ ಸಕಾರಾತ್ಮಕ ಸ್ಪಂದನಗಳು ಅನೇಕ ಪಟ್ಟು ಹೆಚ್ಚಾದವು. ಅದರಿಂದ ‘ಬ್ರಹ್ಮೋತ್ಸವ ಎಂದರೆ ಸಾಧಕರಿಗಾಗಿ ಸಾಧನೆಯ ಅದ್ವೀತಿಯ ಪರ್ವವೇ ಆಗಿದೆ, ಎಂದು ಅನಿಸಿತು.

ಟಿಪ್ಪಣಿ ೧ – ಎರಡು ಕೈಗಳನ್ನು ಜೋಡಿಸಿ ನಮಸ್ಕಾರದ ಮುದ್ರೆ ಮಾಡಿದ ಸೌಭಾಗ್ಯವತಿ ಸಾಧಕಿಯರ ಬಳಗಕ್ಕೆ ‘ಸುವಾಸಿನಿ ಬಳಗದ ಸಾಧಕಿ’ಯರು ಎಂದು ಹೇಳಲಾಗಿದೆ.

– ಸೌ. ಮಧುರಾ ಧನಂಜಯ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೧.೭.೨೦೨೩), ವಿ-ಅಂಚೆ : [email protected]