ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಅದ್ವ್ವಿತೀಯ ಆಧ್ಯಾತ್ಮಿಕ ಸಂಶೋಧನಾ ಕಾರ್ಯ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಉನ್ನತ ಮಟ್ಟದ ಸಂತರು ಸೂಕ್ಷ್ಮದ ವಿಷಯಗಳನ್ನು ಅರಿತಿರುವುದರಿಂದ ಪ್ರತಿಯೊಂದು ಘಟಕದ ಸ್ಪಂದನಗಳನ್ನು ನಿಖರವಾಗಿ ಅರಿಯಬಲ್ಲರು; ಆದರೆ ಆಧುನಿಕ ವಿಜ್ಞಾನವಾದಿಗಳು ಮತ್ತು ಬುದ್ಧಿಜೀವಿಗಳು ಪ್ರತಿಯೊಂದು ಅಂಶವನ್ನೂ ವೈಜ್ಞಾನಿಕ ಪರೀಕ್ಷೆಯ ಮೂಲಕ, ಅಂದರೆ ಯಂತ್ರದ ಮೂಲಕ ಸಿದ್ಧ ಮಾಡಿ ತೋರಿಸಿದರೆ ಮಾತ್ರ ಸತ್ಯವೆಂದು ನಂಬುತ್ತಾರೆ ಹಾಗಾಗಿ ಪರಾತ್ಪರ ಗುರು ಡಾಕ್ಟರರು ಆಧ್ಯಾತ್ಮಿಕ ಸಂಶೋಧನೆ ಮಾಡುವಾಗ ‘ಯು.ಟಿ.ಎಸ್. (ಯುನಿವರ್ಸಲ್ ಥರ್ಮೋ ಸ್ಕ್ಯಾನರ್)’, ‘ಥರ್ಮಲ್ ಇಮೇಜಿಂಗ್’ ಇತ್ಯಾದಿ ಆಧುನಿಕ ವೈಜ್ಞಾನಿಕ ಉಪಕರಣಗಳು ಮತ್ತು ತಂತ್ರಜ್ಞಾನವನ್ನು ಬಳಸಿ ಪ್ರಯೋಗ ಮಾಡಿಸಿಕೊಳ್ಳುತ್ತಿದ್ದಾರೆ. ಇದು ಅವರು ಮಾಡುತ್ತಿರುವ ಸಂಶೋಧನೆಯ ವೈಶಿಷ್ಟ್ಯವಾಗಿದೆ. ಅವರು ಮಾಡಿದ ವಿವಿಧ ಮತ್ತು ಅಪಾರ ಆಧ್ಯಾತ್ಮಿಕ ಸಂಶೋಧನೆಗಳ ಪೈಕಿ ಕೆಲವು ಅಂಶಗಳ ಬಗ್ಗೆ ಇಲ್ಲಿ ಕಿರುಪರಿಚಯ ಮಾಡಿಕೊಡುತ್ತಿದ್ದೇವೆ.

ಲೋಲಕದ ವಿಷಯದಲ್ಲಿನ ಸಂಶೋಧನೆ 

ಪರಾತ್ಪರ ಗುರು ಡಾಕ್ಟರರು ಮರ (ಹಲಗೆ), ವಿವಿಧ ಲೋಹ, ಕಲ್ಲು, ಸ್ಫಟಿಕ, ರುದ್ರಾಕ್ಷಿ ಇತ್ಯಾದಿ ವಿವಿಧ ಘಟಕಗಳಿಂದ ತಯಾರಿಸಿದ ಲೋಲಕ ಮತ್ತು ಲೋಲಕಕ್ಕೆ ವಿವಿಧ ಲೋಹಗಳ ಸರಪಳಿ, ರೇಷ್ಮೆ, ಉಣ್ಣೆ, ಹತ್ತಿಯ ದಾರ ಮತ್ತು ಬಾಳೆದಿಂಡಿನ ನಾರನ್ನು ಉಪಯೋಗಿಸಿ ಅನೇಕ ಪ್ರಯೋಗಗಳನ್ನು ಮಾಡಿದರು. ಈ ಪ್ರಯೋಗಗಳಿಂದ ‘ಬಾಳೆದಿಂಡಿನ ನಾರಿಗೆ ರುದ್ರಾಕ್ಷಿಯನ್ನು ಕಟ್ಟಿ ಮಾಡಿದ ಲೋಲಕವು ಎಲ್ಲಕ್ಕಿಂತ ಹೆಚ್ಚು ಸಾತ್ತ್ವಿಕವಾಗಿದೆ ಎಂಬುದನ್ನು ಕಂಡುಹಿಡಿದರು.

ಕೆಟ್ಟ ಶಕ್ತಿಗಳ ಬಗ್ಗೆ ಸಂಶೋಧನೆ

ಕೆಟ್ಟ ಶಕ್ತಿಗಳ ವಿಧಗಳು, ಅವುಗಳ ಕಾರ್ಯ, ಮಾನವನ ಜೀವನ ಮತ್ತು ವಾತಾವರಣದ ಮೇಲಾಗುವ ಅವುಗಳ ಪರಿಣಾಮ, ಅವು ಮಾನವನಿಗೆ ತೊಂದರೆ ಕೊಡುವುದರ ಕಾರಣಗಳು ಮತ್ತು ಆ ತೊಂದರೆಗಳ ಲಕ್ಷಣಗಳು ಮುಂತಾದ ವಿಷಯಗಳ ಬಗ್ಗೆ ಪರಾತ್ಪರ ಗುರು ಡಾ. ಆಠವಲೆಯವರು ೨೦೦೦ ನೇ ಇಸವಿಯಿಂದ ಸಂಶೋಧನೆ ಮಾಡುತ್ತಿದ್ದಾರೆ. ಈ ಸಂಶೋಧನೆಯಿಂದ ಅವರು ಕೆಟ್ಟ ಶಕ್ತಿಗಳ ತೊಂದರೆಗಳ ಮೇಲೆ ಉಪಾಯ ಮಾಡುವ ಅನೇಕ ಪದ್ಧತಿಗಳನ್ನು ಕಂಡುಹಿಡಿದಿದ್ದಾರೆ ಮತ್ತು ಸಾಧಕರಿಗೂ ಅವುಗಳನ್ನು ಕಲಿಸಿದ್ದಾರೆ.

ರೋಗ ನಿವಾರಣೆಗಾಗಿ ಉಪಯುಕ್ತ ಉಪಾಯಪದ್ಧತಿಗಳ ಸಂಶೋಧನೆ

ಅ. ಸ್ಪರ್ಶವಿರಹಿತ ಬಿಂದುಒತ್ತಡ (ಆಕ್ಯುಪ್ರೆಶರ್) : ಶಾರೀರಿಕ ಮತ್ತು ಮಾನಸಿಕ ರೋಗಗಳನ್ನು ದೂರಗೊಳಿಸಲು ಶರೀರದ ಮೇಲೆ ಒತ್ತಡ ಕೊಟ್ಟು ಬಿಂದುಒತ್ತಡ ಉಪಾಯ ಮಾಡುವ ಪದ್ಧತಿ ಪ್ರಚಲಿತ ವಿದೆ. ೨೦೦೭ ರಲ್ಲಿ ಪರಾತ್ಪರ ಗುರು ಡಾಕ್ಟರರು ಆಧ್ಯಾತ್ಮಿಕ ತೊಂದರೆಗಳಿಗೆ ಉಪಯುಕ್ತ ‘ಸ್ಪರ್ಶವಿರಹಿತ ಬಿಂದುಒತ್ತಡ (ಆಕ್ಯುಪ್ರೆಶರ್) ಪದ್ಧತಿಯನ್ನು ಕಂಡುಹಿಡಿದರು. (ಇದರ ಬಗ್ಗೆ ‘ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ತೊಂದರೆಗಳ ನಿವಾರಣೆಗಾಗಿ ‘ಬಿಂದುಒತ್ತಡ ಎಂಬ ಗ್ರಂಥದಲ್ಲಿ ವಿವೇಚನೆ ಮಾಡಲಾಗಿದೆ.)

ಆ. ನಾಮಜಪ ಉಪಾಯ : ವಿವಿಧ ರೀತಿಯ ನಾಮಜಪಗಳನ್ನು ಮಾಡುವುದರಿಂದ ವಿವಿಧ ರೀತಿಯ ಶಾರೀರಿಕ ಮತ್ತು ಮಾನಸಿಕ ತೊಂದರೆಗಳು ದೂರವಾಗಲು ಸಹಾಯವಾಗುತ್ತದೆ. ಇದರ ಬಗ್ಗೆ ಪರಾತ್ಪರ ಗುರು ಡಾಕ್ಟರರು ಅನೇಕ ಪ್ರಯೋಗಗಳನ್ನು ಮಾಡಿ ಮುಂದಿನ ವಿಷಯಗಳನ್ನು ಕಂಡುಹಿಡಿದಿದ್ದಾರೆ.

ಆ ೧. ನಾಮಜಪದ ಪ್ರಯೋಗಪದ್ಧತಿ : ಉಚ್ಚ ದೇವತೆಗಳ ನಾಮ ಜಪದ ಪ್ರಯೋಗ ಮಾಡಿ ಅವುಗಳಿಂದ ತಮ್ಮ ತೊಂದರೆಗಳು ದೂರವಾಗಲು ಆವಶ್ಯಕವಿರುವ ನಾಮಜಪವನ್ನು ಹುಡುಕುವುದು

ಆ ೨. ಉಪಾಯಕ್ಕೆ ಉಪಯುಕ್ತವಾಗಿರುವ ನಾಮಜಪ : ‘ಶೂನ್ಯ, ‘ಮಹಾಶೂನ್ಯ, ‘ನಿರ್ಗುಣ ಮತ್ತು ‘ಓಂ ಈ ನಿರ್ಗುಣವಾಚಕ ಶಬ್ದಗಳ ಜಪ; ೦ ದಿಂದ ೯ ಅಂಕೆಗಳ ಜಪ ಮತ್ತು ಪಂಚಮಹಾಭೂತಗಳ ಜಪ (ಉದಾ. ಶ್ರೀ ವಾಯುದೇವಾಯ ನಮಃ |)

ಆ ೩. ನಾಮಜಪದ ಪರಿಣಾಮವನ್ನು ಹೆಚ್ಚಿಸುವ ಪದ್ಧತಿ : ನಾಮ ಜಪದ ಪ್ರಾರಂಭದಲ್ಲಿ ಮತ್ತು / ಅಥವಾ ಕೊನೆಯಲ್ಲಿ ೧ ಅಥವಾ ೨ ‘ಓಂ ಗಳನ್ನು ಸೇರಿಸುವುದು, ‘ಒಂದರ ನಂತರ ಒಂದು ನಾಮಜಪ ಮಾಡುವುದು (‘ಮೊದಲಿಗೆ ಮೊದಲನೇ ನಾಮಜಪ, ನಂತರ ಎರಡನೇ ನಾಮಜಪ, ನಂತರ ಪುನಃ ಮೊದಲನೇ ನಾಮಜಪ ಮತ್ತು ನಂತರ ಪುನಃ ಎರಡನೇ ನಾಮಜಪ ಈ ಪದ್ಧತಿಯಲ್ಲಿ ನಾಮಜಪ ಮಾಡುವುದು)

(ಇದರ ಬಗೆಗಿನ ವಿವರವಾದ ವಿವೇಚನೆಯನ್ನು ‘ರೋಗ ನಿವಾರಣೆಗಾಗಿ ನಾಮಜಪ (೩ ಖಂಡಗಳು) ಈ ಗ್ರಂಥಗಳಲ್ಲಿ ಮಾಡಲಾಗಿದೆ.)

ಖಾಲಿ ಪೆಟ್ಟಿಗೆಗಳ ಉಪಾಯ

ಖಾಲಿ ಪೆಟ್ಟಿಗೆಯಲ್ಲಿ ಟೊಳ್ಳಿರುತ್ತದೆ ಮತ್ತು ಟೊಳ್ಳಿನಲ್ಲಿ ಆಕಾಶತತ್ತ್ವ ವಿರುತ್ತದೆ. ಪರಾತ್ಪರ ಗುರು ಡಾಕ್ಟರರು ಪೆಟ್ಟಿಗೆಯಲ್ಲಿನ ಆಕಾಶತತ್ತ್ವದಿಂದಾಗುವ ಆಧ್ಯಾತ್ಮಿಕ ಉಪಾಯಗಳ ಬಗ್ಗೆ ಸ್ವತಃ ಪ್ರಯೋಗ ಮಾಡಿದರು ಮತ್ತು ಸಾಧಕರಿಂದಲೂ ಪ್ರಯೋಗಗಳನ್ನು ಮಾಡಿಸಿಕೊಂಡರು. ಈ ಸಂಶೋಧನೆಯ ಆಧಾರದಲ್ಲಿ ಅವರು ‘ಖಾಲಿ ಪೆಟ್ಟಿಗೆಗಳ ಉಪಾಯ ಎಂಬ ಉಪಾಯ ಪದ್ಧತಿಯನ್ನು ಕಂಡುಹಿಡಿದರು. (ಇದರ ಬಗೆಗಿನ ವಿವರವಾದ ವಿವೇಚನೆಯನ್ನು ‘ರೋಗ ನಿವಾರಣೆಗಾಗಿ ಖಾಲಿ ಪೆಟ್ಟಿಗೆಗಳ ಉಪಾಯ (೨ ಖಂಡಗಳು) ಎಂಬ ಗ್ರಂಥದಲ್ಲಿ ಮಾಡಲಾಗಿದೆ. ಈ ಉಪಾಯಪದ್ಧತಿಯನ್ನು ಹೇಗೆ ಮಾಡಬೇಕು ಎಂಬುದರ ಮಾಹಿತಿಯನ್ನು sanatan.org ಜಾಲತಾಣಗಳಲ್ಲೂ ಕೊಡಲಾಗಿದೆ.)

ಪ್ರಾಣಶಕ್ತಿವಹನ ಉಪಾಯ

ಮಾನವನ ಸ್ಥೂಲದೇಹದಲ್ಲಿ ರಕ್ತ ಪರಿಚಲನೆ, ಶ್ವಾಸಾಂಗ, ಜೀರ್ಣಾಂಗ, ನರವ್ಯೂಹ ಇತ್ಯಾದಿ ವಿವಿಧ ವ್ಯೂಹಗಳು ಕಾರ್ಯನಿರತವಾಗಿರುತ್ತವೆ. ಅವುಗಳ ಕಾರ್ಯಕ್ಕೆ ಯಾವ ಶಕ್ತಿ ಬೇಕಾಗುತ್ತದೆಯೋ, ಅದನ್ನು ಪ್ರಾಣಶಕ್ತಿವಹನ ವ್ಯೂಹವು ಪೂರೈಸುತ್ತದೆ. ಅದರಲ್ಲಿ ಯಾವುದಾದರೊಂದು ಸ್ಥಳದಲ್ಲಿ ಅಡಚಣೆ ಉಂಟಾದಲ್ಲಿ ಸಂಬಂಧಿತ ವ್ಯೂಹದ (ಅಥವಾ ಇಂದ್ರಿಯದ) ಕಾರ್ಯಕ್ಷಮತೆಯು ಕಡಿಮೆಯಾಗಿ ರೋಗಗಳುಂಟಾಗುತ್ತವೆ. ಪ್ರಾಣಶಕ್ತಿವಹನ ವ್ಯೂಹದಲ್ಲಿ ನಿರ್ಮಾಣವಾದ ಅಡಚಣೆಯನ್ನು ಹೇಗೆ ಹುಡುಕಬೇಕು, ಅದನ್ನು ದೂರಗೊಳಿಸಲು ಯಾವ ನಾಮಜಪ, ಮುದ್ರೆ ಮತ್ತು ನ್ಯಾಸ ಮಾಡಬೇಕು ಇತ್ಯಾದಿಗಳ ಬಗ್ಗೆ ಪರಾತ್ಪರ ಗುರು ಡಾಕ್ಟರರು ತಮ್ಮ ಮೇಲೆ ವಿವಿಧ ಪ್ರಯೋಗಗಳನ್ನು ಮಾಡಿದರು ಮತ್ತು ಉಪಾಯಪದ್ಧತಿಯ ಪರಿಣಾಮದ ಅನುಭವ ಪಡೆದರು. ಈ ಸಂಶೋಧನೆಯ ಫಲಿತಾಂಶವೆಂದು ‘ಪ್ರಾಣಶಕ್ತಿವಹನ ಉಪಾಯ ಈ ಪದ್ಧತಿಯು ಅಸ್ತಿತ್ವಕ್ಕೆ ಬಂದಿತು. ಇಂದು ಸನಾತನದ ಅನೇಕ ಸಾಧಕರು ಈ ಉಪಾಯಪದ್ಧತಿಯನ್ನು ಉಪಯೋಗಿಸಿ ಸ್ವತಃ ತಮ್ಮ ಮೇಲೆ ತಾವೇ ಉಪಾಯ ಮಾಡಿಕೊಳ್ಳಲು ಸಕ್ಷಮರಾಗಿದ್ದಾರೆ. ರೋಗಿಯು ತುಂಬಾ ದೂರ, ಅಂದರೆ ಇತರ ದೇಶದಲ್ಲಿದ್ದರೂ, ಆಧ್ಯಾತ್ಮಿಕ ಮಟ್ಟ ಚೆನ್ನಾಗಿರುವ ಸಾಧಕ ಅಥವಾ ‘ಇತರರ ತೊಂದರೆ ದೂರವಾಗಲು ಸಹಾಯ ಮಾಡಬೇಕು ಎಂಬ ಸಮಷ್ಟಿ ಭಾವವಿರುವ ಸಾಧಕನು ಆ ರೋಗಿಗಾಗಿ ಉಪಾಯ ಹುಡುಕಬಹುದು, ಅಂದರೆ ಅವನಿಗೆ ನಾಮಜಪ, ಮುದ್ರೆ ಮತ್ತು ನ್ಯಾಸವನ್ನು ಹೇಳಬಹುದು. ಇಂತಹ ಸಾಧಕನು ತನ್ನ ಶರೀರದ ಮೇಲೆ ಉಪಾಯ ಮಾಡಿದರೆ ಆ ರೋಗಿಯ ಮೇಲೂ ಉಪಾಯವಾಗುತ್ತದೆ. (ವಿವರಕ್ಕಾಗಿ ಓದಿ ‘ಪ್ರಾಣಶಕ್ತಿವಹನ ಉಪಾಯ (೨ ಖಂಡಗಳು).)

ಆಧ್ಯಾತ್ಮಿಕ ಉಪಾಯಗಳ ನೂತನ ಪದ್ಧತಿಗಳ ಸಂಶೋಧನೆ

ಅ. ದೇವತೆಗಳ ಸಾತ್ತ್ವಿಕ ನಾಮಪಟ್ಟಿಗಳ ಉಪಾಯ : ದೇವತೆಗಳ ಸಾತ್ತ್ವಿಕ ನಾಮಪಟ್ಟಿಗಳಿಂದ ಆಯಾ ದೇವತೆಗಳ ಶಕ್ತಿ ಪ್ರಕ್ಷೇಪಿಸುತ್ತದೆ. ಈ ಶಕ್ತಿಯಿಂದ ಆಧ್ಯಾತ್ಮಿಕ ಉಪಾಯಗಳಾಗುತ್ತವೆ. ಪರಾತ್ಪರ ಗುರು ಡಾಕ್ಟರರು ನಾಮಪಟ್ಟಿಗಳ ಉಪಯೋಗದ ಬಗ್ಗೆ ವಿವಿಧ ಪ್ರಯೋಗಗಳನ್ನು ಮಾಡಿದರು ಮತ್ತು ನಾಮಪಟ್ಟಿಗಳ ಸಹಾಯದಿಂದ ಆಧ್ಯಾತ್ಮಿಕ ತೊಂದರೆ ಗಳನ್ನು ದೂರಗೊಳಿಸುವ ಮುಂದಿನ ಪದ್ಧತಿಗಳನ್ನು ಕಂಡುಹಿಡಿದರು.

೧. ಕೆಟ್ಟ ಶಕ್ತಿಗಳ ಆಕ್ರಮಣಗಳಿಂದ ರಕ್ಷಣೆಯಾಗಲು ವ್ಯಕ್ತಿಯು ರಾತ್ರಿ ಮಲಗುವ ಮೊದಲು ತನ್ನ ನಾಲ್ಕೂ ಬದಿಗಳಲ್ಲಿ ನಾಮಪಟ್ಟಿಗಳ ಮಂಡಲ ಹಾಕುವುದು.

೨. ವಾಸ್ತುಶುದ್ಧಿಗಾಗಿ ವಾಸ್ತುವಿನಲ್ಲಿ ನಾಮಪಟ್ಟಿಗಳ ಛಾವಣಿ

೩. ವಾಹನಶುದ್ಧಿಗಾಗಿ ದ್ವಿಚಕ್ರ ವಾಹನಕ್ಕೆ ಮುಂದೆ ಮತ್ತು ಹಿಂದೆ ನಾಮಪಟ್ಟಿಗಳನ್ನು ಹಚ್ಚುವುದು ಹಾಗೂ ಚತುಷ್ಚಕ್ರ ವಾಹನಗಳಲ್ಲಿ ನಾಲ್ಕೂ ಬದಿಗಳಿಗೆ ಮತ್ತು ಮೇಲ್ಭಾಗಕ್ಕೆ ನಾಮಪಟ್ಟಿಗಳನ್ನು ಹಚ್ಚಿ ಕವಚ ತಯಾರಿಸುವುದು (ಸನಾತನದ ಸ್ಥಳೀಯ ವಿತರಕರ ಬಳಿ ವಾಸ್ತುಶುದ್ಧಿ ಮತ್ತು ವಾಹನಶುದ್ಧಿಗಾಗಿ ಆವಶ್ಯಕವಿರುವ ನಾಮಪಟ್ಟಿಗಳ ಕಟ್ಟು ಮತ್ತು ಆ ಪಟ್ಟಿಗಳನ್ನು ಹಚ್ಚುವ ಪದ್ಧತಿಗಳ ಬಗ್ಗೆ ಕರಪತ್ರ ಲಭ್ಯವಿರುತ್ತದೆ.)

ಆ. ಕುಂಡಲಿನಿಚಕ್ರಗಳ ಸ್ಥಾನದಲ್ಲಿ ದೇವತೆಗಳ ಸಾತ್ತ್ವಿಕ ಚಿತ್ರ ಅಥವಾ ನಾಮಪಟ್ಟಿಯನ್ನು ಹಚ್ಚುವುದು : ಮನುಷ್ಯನ ದೇಹದಲ್ಲಿ ಬ್ರಹ್ಮಾಂಡದಲ್ಲಿನ ಪ್ರಾಣಶಕ್ತಿಯು ಕುಂಡಲಿನಿಚಕ್ರಗಳ ಮಾಧ್ಯಮದಿಂದ ಪ್ರವಹಿಸುತ್ತಿರುತ್ತದೆ. ವ್ಯಕ್ತಿಯ ಯಾವುದಾದರೊಂದು ಕುಂಡಲಿನಿಚಕ್ರದ ಮೂಲಕ ಶರೀರದಲ್ಲಿ ಪ್ರವಹಿಸುವ ಪ್ರಾಣಶಕ್ತಿ ವಹನದಲ್ಲಿ ಅಡಚಣೆಯುಂಟಾದರೆ ಆ ಕುಂಡಲಿನಿಚಕ್ರಕ್ಕೆ ಸಂಬಂಧಿಸಿದ ಅವಯವಗಳಲ್ಲಿ ರೋಗ ನಿರ್ಮಾಣವಾಗುತ್ತದೆ; ಆದ್ದರಿಂದ ಆ ಕುಂಡಲಿನಿಚಕ್ರದ ಸ್ಥಾನದಲ್ಲಿ ಉಪಾಯ ಮಾಡಿದರೆ ವ್ಯಕ್ತಿಗಾಗುವ ತೊಂದರೆ ಬೇಗನೇ ಕಡಿಮೆಯಾಗಲು ಸಹಾಯವಾಗುತ್ತದೆ. ‘ಕುಂಡಲಿನಿಚಕ್ರಗಳ ಸ್ಥಾನದಲ್ಲಿ ದೇವತೆಗಳ ಸಾತ್ತ್ವಿಕ ಚಿತ್ರಗಳು ಅಥವಾ ದೇವತೆಗಳ ಸಾತ್ತ್ವಿಕ ಚಿತ್ರಗಳು ಸಿಗದಿದ್ದರೆ ದೇವತೆಗಳ ಸಾತ್ತ್ವಿಕ ನಾಮಪಟ್ಟಿಗಳನ್ನು ಹಾಕುವುದರಿಂದ ಕುಂಡಲಿನಿಚಕ್ರಗಳ ಮೇಲೆ ಉಪಾಯವಾಗುತ್ತದೆ ಎಂಬುದನ್ನು ಪರಾತ್ಪರ ಗುರು ಡಾಕ್ಟರರು ಕಂಡುಹಿಡಿದಿದ್ದಾರೆ.

ಇ. ಸನಾತನ ನಿರ್ಮಿತ ಸಾತ್ತ್ವಿಕ ಗಣೇಶಮೂರ್ತಿಗೆ ಪ್ರದಕ್ಷಿಣೆ ಹಾಕುವುದು

ಈ. ಸಂತರು ಬಹಳ ಸಮಯ ವಾಸಿಸಿದ ವಾಸ್ತುವಿನಲ್ಲಿ ಅಥವಾ ಕೋಣೆಯಲ್ಲಿ ಕುಳಿತು ನಾಮಜಪಾದಿ ಉಪಾಯ ಮಾಡುವುದು

ಉ. ಸಂತರು ಬಹಳಷ್ಟು ಸಮಯ ಉಪಯೋಗಿಸಿದ ವಸ್ತುಗಳನ್ನು ಆಧ್ಯಾತ್ಮಿಕ ಉಪಾಯಗಳಿಗಾಗಿ ಉಪಯೋಗಿಸುವುದು

ಊ. ಪರಾತ್ಪರ ಗುರು ಡಾ. ಆಠವಲೆಯವರ ಕೋಣೆ ಯಲ್ಲಿನ ಕಪಾಟಿನ ಛಾಯಾಚಿತ್ರವನ್ನು ಉಪಾಯಕ್ಕಾಗಿ ಬಳಸುವುದು

ಪಂಚತತ್ತ್ವಗಳಿಗನುಸಾರ ಉಪಾಯ

ಮನುಷ್ಯನ ಶರೀರವು ಪೃಥ್ವಿ, ಆಪ, ತೇಜ, ವಾಯು ಮತ್ತು ಆಕಾಶ ಈ ಪಂಚತತ್ತ್ವಗಳಿಂದ (ಮಹಾಭೂತಗಳಿಂದ) ತಯಾರಾಗಿದೆ. ಆಯಾ ತತ್ತ್ವದ (ಮಹಾಭೂತದ) ಸ್ತರದಲ್ಲಿ ಉಪಾಯ ಮಾಡಿದರೆ ಆಯಾ ತತ್ತ್ವಕ್ಕೆ ಸಂಬಂಧಿಸಿದ ತೊಂದರೆಗಳು ದೂರವಾಗಲು ಸಹಾಯವಾಗುತ್ತದೆ. ಪಂಚತತ್ತ್ವಗಳ ಸ್ತರದಲ್ಲಿ ಉಪಾಯ ಮಾಡುವುದರ ಬಗ್ಗೆ ಪರಾತ್ಪರ ಗುರು ಡಾಕ್ಟರರು ವಿವಿಧ ಪ್ರಯೋಗಗಳನ್ನು ಮುಂದಿನಂತೆ ಮಾಡಿದ್ದಾರೆ.

೧. ಪೃಥ್ವಿತತ್ತ್ವದ ಉಪಾಯ : ಹಣೆಗೆ ಸಾತ್ತ್ವಿಕ ಕುಂಕುಮ ಹಚ್ಚುವುದು, ಸಾತ್ತ್ವಿಕ ಸುಗಂಧದ್ರವ್ಯದ ಪರಿಮಳ ತೆಗೆದುಕೊಳ್ಳುವುದು ಇತ್ಯಾದಿ.

೨. ಆಪತತ್ತ್ವದ ಉಪಾಯ : ತೀರ್ಥಪ್ರಾಶನ ಮಾಡುವುದು, ಕಲ್ಲುಪ್ಪಿನ ನೀರಿನಲ್ಲಿ ೧೫ ನಿಮಿಷ ಎರಡೂ ಕಾಲುಗಳನ್ನು ಮುಳುಗಿಸಿಡುವುದು ಇತ್ಯಾದಿ

೩. ತೇಜತತ್ತ್ವದ ಉಪಾಯ : ವಿಭೂತಿ ಹಚ್ಚಿಕೊಳ್ಳುವುದು, ತುಪ್ಪದ ದೀಪದ ಜ್ಯೋತಿಯ ಕಡೆಗೆ ಕೆಲವು ಸಮಯ ಎವೆಯಿಕ್ಕದೇ ನೋಡುವುದು ಇತ್ಯಾದಿ.

೪. ವಾಯುತತ್ತ್ವದ ಉಪಾಯ : ವಿಭೂತಿ ಊದುವುದು ಇತ್ಯಾದಿ

೫. ಆಕಾಶತತ್ತ್ವದ ಉಪಾಯ

ಅ. ಶುಭ್ರ ಆಕಾಶದೆಡೆಗೆ ನೋಡುವುದು, ಶುಭ್ರ ಆಕಾಶದ ಕೆಳಗೆ ಕುಳಿತು ನಾಮಜಪಾದಿ ಉಪಾಯ ಮಾಡುವುದು

ಆ. ಪ.ಪೂ. ಭಕ್ತರಾಜ ಮಹಾರಾಜರ ಅಥವಾ ಇತರ ಸಂತರ ವಾಣಿಯಲ್ಲಿನ ಭಜನೆಗಳನ್ನು ಕೇಳುವುದು

ಇ. ಖಾಲಿ ಪೆಟ್ಟಿಗೆಗಳ ಉಪಾಯ ಮಾಡುವುದು

(ಎಲ್ಲ ಲೇಖನಗಳ ಆಧಾರ : ಸನಾತನ ನಿರ್ಮಿತ ಗ್ರಂಥ ‘ಪರಾತ್ಪರ ಗುರು ಡಾ. ಆಠವಲೆಯವರ ಸರ್ವಾಂಗೀಣ ಕಾರ್ಯದ ಸಂಕ್ಷಿಪ್ತ ಪರಿಚಯ !’)

* ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ.

* ಆಧ್ಯಾತ್ಮಿಕ ತೊಂದರೆ : ಇದರರ್ಥ ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳಿರುವುದು. ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳು ಶೇ. ೫೦ ರಷ್ಟು ಅಥವಾ ಅದಕ್ಕಿಂತ ಹೆಚ್ಚು ಪ್ರಮಾಣದಲ್ಲಿರುವುದು ಎಂದರೆ ತೀವ್ರ ತೊಂದರೆ, ನಕಾರಾತ್ಮಕ ಸ್ಪಂದನಗಳು ಶೇ. ೩೦ ರಿಂದ ಶೇ ೪೯ ರಷ್ಟು ಇರುವುದು ಎಂದರೆ ಮಧ್ಯಮ ತೊಂದರೆ, ಶೇ. ೩೦ ಕ್ಕಿಂತ ಕಡಿಮೆಯಿರುವುದು ಅಂದರೆ ಮಂದ ಆಧ್ಯಾತ್ಮಿಕ ತೊಂದರೆ ಇರುವುದಾಗಿದೆ. ಆಧ್ಯಾತ್ಮಿಕ ತೊಂದರೆಯು ಪ್ರಾರಬ್ಧ, ಪೂರ್ವಜರ ತೊಂದರೆ ಇತ್ಯಾದಿ ಆಧ್ಯಾತ್ಮಿಕ ಸ್ತರದ ಕಾರಣಗಳಿಂದ ಆಗುತ್ತದೆ. ಆಧ್ಯಾತ್ಮಿಕ ತೊಂದರೆಗಳನ್ನು ಸಂತರು ಅಥವಾ ಸೂಕ್ಷ್ಮ ಸ್ಪಂದನಗಳನ್ನು ಅರಿಯುವ ಸಾಧಕರು ಕಂಡು ಹಿಡಿಯಬಲ್ಲರು.

*ಕೆಟ್ಟ ಶಕ್ತಿ: ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ -ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ. ಉದಾ. ಅಸುರರು, ರಾಕ್ಷಸರು, ಪಿಶಾಚಿ ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ.