ವೈಶ್ವಿಕ ಹಿಂದೂ ರಾಷ್ಟ್ರ ಉತ್ಸವದ ಆರನೇ ದಿನ (ಜೂನ್ 29)
ಹಿಂದೂ ರಾಷ್ಟ್ರ ನಿರ್ಮಾಣದಲ್ಲಿ ವಕೀಲರ ಕೊಡುಗೆ
ವಿದ್ಯಾಧಿರಾಜ್ ಸಭಾಂಗಣ – ಶ್ರೀ ತುಳಜಾಭವಾನಿ ದೇವಸ್ಥಾನದಲ್ಲಿ ಕಾಣಿಕೆ ಹುಂಡಿಯಲ್ಲಿ 8 ಕೋಟಿ 45 ಲಕ್ಷದ 97 ಸಾವಿರ ರೂಪಾಯಿಯ ಹಗರಣ ನಡೆದಿತ್ತು. ಈ ಹಗರಣದ ತನಿಖೆಯನ್ನು ನಿಲ್ಲಿಸುವ ಬಗ್ಗೆ ಸರ್ಕಾರದ ನಿರ್ಧಾರವನ್ನು ಮುಂಬಯಿ ಹೈಕೋರ್ಟ್‌ನ ಛತ್ರಪತಿ ಸಂಭಾಜಿನಗರ ವಿಭಾಗೀಯಪೀಠವು ರದ್ದುಗೊಳಿಸಿತು ಮತ್ತು ಹಿಂದಿನ ವಿಚಾರಣಾ ಸಮಿತಿಯಿಂದ ದೋಷಿ ಎಂದು ಸಾಬೀತಾಗಿದ್ದ ಹರಾಜುದಾರರು, ದೇವಾಲಯದ ನೌಕರರು, ಟ್ರಸ್ಟಿಗಳು, ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು ಸೇರಿದಂತೆ 16 ಅಪರಾಧಿಗಳ ವಿರುದ್ಧ ತುಳಜಾಪುರ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಅಪರಾಧಗಳನ್ನು ದಾಖಲಿಸಲು ನ್ಯಾಯಾಲಯ ಆದೇಶಿಸಿದೆ. ಇಷ್ಟಾದರೂ ನ್ಯಾಯಾಲಯದ ಆದೇಶದಂತೆ ಕ್ರಮಕೈಗೊಳ್ಳಲಿಲ್ಲ. ಈ ಹಗರಣದ ಹಣವನ್ನು ಈ ಎಲ್ಲ ಅಪರಾಧಿಗಳಿಂದ ವಸೂಲಿ ಮಾಡಬೇಕು ಎಂದು ಪೂ. (ನ್ಯಾಯವಾದಿ) ಸುರೇಶ ಕುಲಕರ್ಣಿ ಇವರು ಮುಂಬಯಿ ಹೈಕೋರ್ಟ್ ನಲ್ಲಿ ಒತ್ತಾಯಿಸಿದರು. ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ಆರನೇ ದಿನದ ಸತ್ರದಲ್ಲಿ ‘ತುಳಜಾಪುರ ಹಗರಣ ಪ್ರಕರಣದಲ್ಲಿ ನ್ಯಾಯಾಂಗ ಹೋರಾಟ’ ವಿಷಯದ ಕುರಿತು ಅವರು ಮಾತನಾಡುತ್ತಿದ್ದರು.