India Received 10 Lakh Crore: ಭಾರತಕ್ಕೆ 10 ಲಕ್ಷ ಕೋಟಿ ರೂಪಾಯಿ ಕಳುಹಿಸಿದ ವಿದೇಶದಲ್ಲಿ ಕೆಲಸ ಮಾಡುವ ಭಾರತೀಯರು !

ನವದೆಹಲಿ – ವಿದೇಶದಲ್ಲಿ ಕೆಲಸ ಮಾಡುವ ಭಾರತೀಯರು 2023 ರಲ್ಲಿ ಭಾರತಕ್ಕೆ 10 ಲಕ್ಷ ಕೋಟಿ ರೂಪಾಯಿಗಳನ್ನು ಕಳುಹಿಸಿದರು. ಇದು ವಿಶ್ವದಲ್ಲೇ ಅತಿ ಹೆಚ್ಚು ಎಂದು ವಿಶ್ವಬ್ಯಾಂಕ್ ಮಾಹಿತಿ ನೀಡಿದೆ. ವಿದೇಶದಲ್ಲಿ ಗಳಿಸಿದ ಹಣವನ್ನು ಸ್ವದೇಶಕ್ಕೆ ಕಳುಹಿಸುವಲ್ಲಿ ಮೆಕ್ಸಿಕೋ ಭಾರತದ ಬಳಿಕ ಎರಡನೇ ಕ್ರಮಾಂಕದಲ್ಲಿದೆ. ಮೆಕ್ಸಿಕನ್ ವಾಸಿಗಳು ವಿದೇಶದಿಂದ 5 ಲಕ್ಷ ಕೋಟಿ ರೂಪಾಯಿ ಸಂಪಾದನೆ ಮಾಡಿ ತಮ್ಮ ದೇಶಕ್ಕೆ ಕಳುಹಿಸಿದ್ದಾರೆ. ನಂತರದ ಸ್ಥಾನದಲ್ಲಿರುವ ಚೀನಾ 4 ಲಕ್ಷ ಕೋಟಿ ರೂ., ೪ನೆೇ ಸ್ಥಾನದಲ್ಲಿರುವ ಫಿಲಿಪೈನ್ಸ್ 3 ಲಕ್ಷ ಕೋಟಿ ರೂ., ಮತ್ತು ಐದನೇ ಸ್ಥಾನದಲ್ಲಿರುವ ಪಾಕಿಸ್ತಾನ 2 ಲಕ್ಷದ 20 ಸಾವಿರ ಕೋಟಿ ರೂ.ಗಳನ್ನು ವಿದೇಶಗಳಲ್ಲಿರುವ ಅನಿವಾಸಿ ತನ್ನ ನಾಗರಿಕರಿಂದ ಪಡೆದಿದೆ.

2022 ರಲ್ಲಿ, ಅನಿವಾಸಿ ಭಾರತೀಯರು ಭಾರತಕ್ಕೆ 9 ಲಕ್ಷ 28 ಸಾವಿರ ಕೋಟಿ ರೂಪಾಯಿಗಳನ್ನು ಭಾರತಕ್ಕೆ ಕಳುಹಿಸಿದ್ದರು. ಇನ್ನು, ಪಾಕಿಸ್ತಾನಿ ಅನಿವಾಸಿಗಳು 2.2 ಲಕ್ಷ ಕೋಟಿ ರೂಪಾಯಿಗಳನ್ನು ಕಳುಹಿಸಿದ್ದರು. ಆದರೆ 2023 ರಲ್ಲಿ, ಇದರಲ್ಲಿ ಶೇ. 12 ರಷ್ಟು ಇಳಿಕೆಯಾಗಿತ್ತು.

ಸಂಯುಕ್ತ ಅರಬ್ ಎಮಿರಾಟ್ಸನಿಂದ (ಯುಎಇ) ‘ಯುಪಿಎ’ ಮೂಲಕ ಹಣ ಕಳುಹಿಸಿದ ಭಾರತೀಯರು !

ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಯುಪಿಎ (ಆನ್‌ಲೈನ್ ಮನಿ ಟ್ರಾನ್ಸ್‌ಫರ್) ವ್ಯವಸ್ಥೆಯನ್ನು ಪ್ರಾರಂಭಿಸಿದ್ದರಿಂದ, ಅಲ್ಲಿ ಕೆಲಸಕ್ಕಾಗಿ ಹೋದ ಭಾರತೀಯರು ಆನ್ ಲೈನ್ ಮೂಲಕ ಹಣ ಕಳುಹಿಸಿದ್ದಾರೆ. ವಿಶ್ವಬ್ಯಾಂಕ್ ಪ್ರಕಾರ, ಅನಿವಾಸಿ ಭಾರತೀಯರು ಅತ್ಯಧಿಕ ಹಣವನ್ನು ಅಮೇರಿಕಾದಿಂದ ಕಳುಹಿಸಿದ್ದಾರೆ. ಆ ನಂತರ ಹೆಚ್ಚಿನ ಹಣವನ್ನು ಸಂಯುಕ್ತ ಅರಬ್ ಎಮಿರಾಟ್ಸನಿಂದ ಕಳುಹಿಸಲಾಗಿದೆ.