ಸನಾತನ ಸಂಸ್ಥೆಯ ‘ಅಧ್ಯಾತ್ಮದ ಪ್ರಾಸ್ತಾವಿಕ ವಿವೇಚನೆ’ ಈ ಗುಜರಾತಿ ‘ಇ-ಬುಕ್’ ಪ್ರಕಾಶನ !

ಜಾಗತಿಕ ಹಿಂದೂ ರಾಷ್ಟ್ರ ಉತ್ಸವದ ಐದನೇ ದಿನ

ಎಡದಿಂದ ಶ್ರೀ. ಸುನಿಲ್ ಘನವಟ, ಇ-ಪುಸ್ತಕವನ್ನು ಪ್ರಕಟಿಸುವಾಗ. ಪೂ. ಪ್ರಾ. ಪವನ್ ಸಿನ್ಹಾ ಗುರೂಜಿ, ಮಾಜಿ ಪ್ರಧಾನ ಜಿಲ್ಲಾ ನ್ಯಾಯಾಧೀಶ ನ್ಯಾಯವಾದಿ ದಿಲೀಪ್ ದೇಶಮುಖ ಮತ್ತು ಶ್ರೀ. ಗುರುಪ್ರಸಾದ್ ಗೌಡ

ವಿದ್ಯಾಧಿರಾಜ್ ಸಭಾಂಗಣ – ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ 5 ನೇ ದಿನ, ಅಂದರೆ ಜೂನ್ 28 ರಂದು, ಸನಾತನ ಸಂಸ್ಥೆಯ ಮೊದಲ ಸತ್ರದಲ್ಲಿ, ಸನಾತನ ಸಂಸ್ಥೆಯ ‘ಅಧ್ಯಾತ್ಮದ ಪ್ರಾಸ್ತಾವಿಕ ವಿವೇಚನೆ’ ಈ ಗುಜರಾತಿ ‘ಇ-ಬುಕ್’ ಪ್ರಕಾಶನವನ್ನು ಉತ್ತರಪ್ರದೇಶದ ಪವನ್ ಚಿಂತನ್ ಧಾರಾ ಆಶ್ರಮದ ಸಂಸ್ಥಾಪಕ ಪೂ. ಪ್ರಾ. ಪವನ್ ಸಿನ್ಹಾ ಗುರೂಜಿ ಇವರ ಹಸ್ತದಿಂದ ಮಾಡಲಾಯಿತು. ಈ ಸಂದರ್ಭದಲ್ಲಿ ವ್ಯಾಸಪೀಠದ ಮೇಲೆ ಮಾಜಿ ಪ್ರಧಾನ ಜಿಲ್ಲಾ ನ್ಯಾಯಾಧೀಶ ನ್ಯಾಯವಾದಿ ದಿಲೀಪ್ ದೇಶಮುಖ್, ಮಹಾರಾಷ್ಟ್ರ ಮತ್ತು ಛತ್ತೀಸಗಡ ರಾಜ್ಯ ಸಮನ್ವಯಕ ಶ್ರೀ. ಸುನಿಲ್ ಘನವಟ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಮಹಾರಾಷ್ಟ್ರ ರಾಜ್ಯ ಸಮನ್ವಯಕ ಶ್ರೀ. ಗುರುಪ್ರಸಾದ ಗೌಡ ಉಪಸ್ಥಿತರಿದ್ದರು.