ದೇವಾಲಯ ಆಧಾರಿತ ಆರ್ಥಿಕತೆಯ ನಾಶ ಮಾಡಿದ್ದರಿಂದಾಗಿ, ಭಾರತದಲ್ಲಿ ಕಮ್ಯುನಿಸಂ ಮತ್ತು ಬಂಡವಾಳಶಾಹಿಗಳ ಪ್ರವೇಶ ! – ಅಂಕಿತ್ ಶಾ, ಗುಜರಾತ್

ಅಂಕಿತ್ ಶಾ, ಗುಜರಾತ್

ವಿದ್ಯಾಧಿರಾಜ್ ಸಭಾಂಗಣ – ಅರ್ಥಶಾಸ್ತ್ರಜ್ಞ ಆಡಮ್ ಸ್ಮಿತ್ ಅವರ ಅರ್ಥಶಾಸ್ತ್ರವು ಬಂಡವಾಳಶಾಹಿಯನ್ನು ಆಧರಿಸಿದೆ. ಆದ್ದರಿಂದ ಜಗತ್ತಿನ ಶೇ.90ರಷ್ಟು ಸಂಪತ್ತು ಶೇ.5ರಷ್ಟು ಜನರಲ್ಲಿ ಸಂಗ್ರಹವಾಯಿತು. ವಿಶ್ವದ 100 ಶ್ರೀಮಂತರ ಪಟ್ಟಿ ಸಿದ್ಧವಾಗುತ್ತದೆ. ಈ ರೀತಿಯಾಗಿ ವೈಯಕ್ತಿಕ ಸಂಪತ್ತಿನ ಕ್ರೋಢೀಕರಣವು ವಿಶ್ವಕ್ಕೆ ಒಳ್ಳೆಯದಲ್ಲ. ನಾವು ಇಷ್ಟು ಸಂಪತ್ತನ್ನು ಸಂಗ್ರಹಿಸಬಾರದು ಮತ್ತು ಇತರರು ಬಡವರಾಗುತ್ತಾರೆ ಮತ್ತು ಅವುಗಳನ್ನು ನೀಡಲು ಸಮಯ ಬರುತ್ತದೆ. ಕಾರ್ಲ್ ಮಾರ್ಕ್ಸ್ ಇವರು, ಏನನ್ನಾದರೂ ಉಚಿತವಾಗಿ ನೀಡುವ ಪದ್ದತಿಯನ್ನು ಪ್ರಾರಂಭಿಸಿದರು. ಮತ ರಾಜಕಾರಣದ ಮೂಲಕ ಉಚಿತ ಸೌಲಭ್ಯ ಅಥವಾ ವಸ್ತುಗಳನ್ನು ನೀಡುವ ಪರಿಪಾಠ ಹೆಚ್ಚಾಗಿದೆ. ಭಾರತೀಯ ಆರ್ಥಿಕತೆಯು ಮಾತ್ರ ಅದನ್ನು ಸ್ವಾವಲಂಬಿಯನ್ನಾಗಿ ಮಾಡುತ್ತದೆ. ಸನಾತನ ಧರ್ಮದ ಅರ್ಥಶಾಸ್ತ್ರದಲ್ಲಿ ದೇವಾಲಯಗಳ ಸ್ಥಾನವು ಬಹಳ ಮುಖ್ಯವಾಗಿದೆ.

ಸನಾತನ ಧರ್ಮದಲ್ಲಿ ದೇವಸ್ಥಾನಗಳ ಆರ್ಥಿಕತೆಯಿಂದ ಶಿಕ್ಷಣ ಪ್ರಣಾಳಿಕೆ ನಡೆಯುತ್ತದೆ. ದೇವಸ್ಥಾನಗಳ ಆರ್ಥಿಕತೆಯಿಂದ ಗ್ರಾಮಗಳು ರೂಪುಗೊಳ್ಳುತ್ತಿದ್ದವು. ಬ್ರಿಟಿಷರು ಭಾರತಕ್ಕೆ ಬಂದಾಗ ‘ಶಿಕ್ಷಣ ಇಲಾಖೆ’ ವ್ಯವಸ್ಥೆಯನ್ನು ಜಾರಿಗೆ ತಂದರು. ಭಾರತದಲ್ಲಿ ಶಿಕ್ಷಣವು ಎಂದಿಗೂ ರಾಜನಿಂದ ನಿಯಂತ್ರಿಸಲ್ಪಡಲಿಲ್ಲ. ಭಾರತದಲ್ಲಿ ಶಿಕ್ಷಣ ವ್ಯವಸ್ಥೆಯು ದೇವಾಲಯದ ಆರ್ಥಿಕತೆಯಿಂದ ನಡೆಸಲ್ಪಟ್ಟಿತ್ತು. ಋಷಿಮುನಿ ಪಠ್ಯಕ್ರಮವನ್ನು ನಿರ್ಧರಿಸುತ್ತಿದ್ದರು. ರಾಜ ಭ್ರಷ್ಟನಾಗಿದ್ದಾಗ ಆರ್ಯ ಚಾಣಕ್ಯ ಸಮಾಜವನ್ನು ಸಂಘಟಿಸಿ ರಾಜ ಧನಾನಂದನನ್ನು ಉರುಳಿಸಿದ ಉದಾಹರಣೆ ನಮ್ಮ ಇತಿಹಾಸದಲ್ಲಿದೆ. ಬ್ರಿಟಿಷರು ಶಿಕ್ಷಣ ವ್ಯವಸ್ಥೆಯನ್ನು ಸರ್ಕಾರಕ್ಕೆ ನೀಡಿದರು. ‘ಉದ್ಯೋಗಕ್ಕಾಗಿ ಶಿಕ್ಷಣ’ ಎಂಬ ವಿಧಾನವನ್ನು ಬ್ರಿಟಿಷರು ಅಳವಡಿಸಿಕೊಂಡರು. ಇದು ಕಳೆದ 400 ವರ್ಷಗಳಲ್ಲಿ ಸಂಭವಿಸಿದೆ. ಗುರುಕುಲವು ದೇವಸ್ಥಾನದ ಆವರಣದಲ್ಲೇ ಇರಬೇಕು. ದೇವಾಲಯದ ಆರ್ಥಿಕತೆಯ ನಾಶದಿಂದ ಕಮ್ಯುನಿಸಂ ಮತ್ತು ಬಂಡವಾಳಶಾಹಿಗಳು ಭಾರತಕ್ಕೆ ಬಂತು. ಅವರನ್ನು ಪುರಸ್ಕರಿಸುವ ಬದಲು ದೇವಸ್ಥಾನ ಆಧಾರಿತ ಆರ್ಥಿಕತೆಯ ಜ್ಞಾನವನ್ನು ಪಾಶ್ಚಿಮಾತ್ಯರಿಗೆ ನೀಡಬೇಕು ಎಂದು ಗುಜರಾತಿನ ಹಿಂದುತ್ವನಿಷ್ಠ ಶ್ರೀ. ಅಂಕಿತ್ ಶಾ ಹೇಳಿದರು. ಅವರು ‘ದೇವಸ್ಥಾನದ ಅರ್ಥಶಾಸ್ತ್ರ’ ವಿಷಯದ ಕುರಿತು ಮಾತನಾಡುತ್ತಿದ್ದರು.