ವೈಶ್ವಿಕ ಹಿಂದೂ ರಾಷ್ಟ್ರ ಸಮಾವೇಶದ ಐದನೇ ದಿನ (ಜೂನ್ 28)
ಬೋಧಪ್ರದ ಸತ್ರ – ದೇವಸ್ಥಾನಗಳ ನಿರ್ವಹಣೆ
ವಿದ್ಯಾಧಿರಾಜ ಸಭಾಂಗಣ – ದೇವಾಲಯವು ಉಪಾಸನೆ ಮತ್ತು ಸಾಮಾಜಿಕ ಆಚರಣೆಯ ಕೇಂದ್ರವಾಗಿದೆ, ಜೊತೆಗೆ ಆಧ್ಯಾತ್ಮಿಕ ಮತ್ತು ಆತ್ಮೋನ್ನತಿಯ ಕೇಂದ್ರವಾಗಿದೆ. ದೇವಾಲಯದ ವಾಸ್ತುಶಿಲ್ಪವು ಮಾನವ ಜೀವನದ ಒಂದು ಭಾಗವಾಗಿದೆ. ಪ್ರತಿಯೊಂದು ದೇವಾಲಯದಲ್ಲೂ ದೇವರ ವಾಸ ಇರುತ್ತದೆ. ಅದಕ್ಕಾಗಿಯೇ ಅದಕ್ಕೆ ಜೀವವಿರುತ್ತದೆ. ದೇವಾಲಯದ ವಾಸ್ತುಶಿಲ್ಪವು ಕೇವಲ ವಿನ್ಯಾಸವಲ್ಲ, ಮಾನವ ಜೀವನದಂತೆಯೇ ದೇವಾಲಯದ ಜೀವನ ಇದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ದೇವಾಲಯವನ್ನು ವಾಸ್ತುವಿನ ಪ್ರಕಾರ ನಿರ್ಮಿಸಬೇಕು ಎಂದು ದಕ್ಷಿಣ ಗೋವಾದ ಅಭಿಜಿತ್ ಸಾಧಲೆ ಅವರು ‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದ ಐದನೇ ದಿನದಂದು ಪ್ರತಿಪಾದಿಸಿದರು. ಅವರು ‘ಧರ್ಮಶಾಸ್ತ್ರದ ದೃಷ್ಟಿಕೋನದಿಂದ ದೇವಾಲಯ ನಿರ್ವಹಣೆ’ ವಿಷಯ ಕುರಿತು ಅವರು ಮಾತನಾಡುತ್ತಿದ್ದರು.